Samarth study circle @samarthstudycircle Channel on Telegram

Samarth study circle

@samarthstudycircle


Samarth study circle
KAS K-TET C-TET GPSTR HSTR FDA SDA PDO PSI PC
WhatsApp:- 7676605706
YouTube channel:-
https://www.youtube.com/@Samarthstudycircle1

Instagram:- https://instagram.com/santoshkumar__sp?igshid=ZDdkNTZiNTM=

Samarth Study Circle (English)

Are you a student preparing for competitive exams like KAS, K-TET, C-TET, GPSTR, HSTR, FDA, SDA, PDO, PSI, or PC? Look no further because Samarth Study Circle is here to help you ace your exams! This Telegram channel, with the username @samarthstudycircle, is dedicated to providing valuable study materials, tips, and tricks to help you succeed in your exams. Whether you are looking for exam syllabus, previous year question papers, or guidance on exam preparation strategies, Samarth Study Circle has got you covered. You can also connect with them on WhatsApp at 7676605706 for any queries or assistance. Additionally, they have a YouTube channel where you can watch informative videos to enhance your knowledge and an Instagram page for updates and announcements. Join Samarth Study Circle today and boost your exam preparation to achieve your goals!

Samarth study circle

20 Nov, 13:15


ಮಂಡ್ಯದಲ್ಲಿ ಡಿಸೆಂಬರ್ 20, 21 ಮತ್ತು 22ರಂದು ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಗೊ.ರು. ಚನ್ನಬಸಪ್ಪ ಅವರು ಆಯ್ಕೆಯಾಗಿದ್ದಾರೆ.💐

Samarth study circle

14 Nov, 14:15


KSET syllabus.pdf

Samarth study circle

14 Nov, 13:25


ಕೆ-ಸೆಟ್ ಪ್ರವೇಶ ಪತ್ರ ಪ್ರಕಟಗೊಂಡಿದೆ ಡೌನ್‌ಲೋಡ್ ಮಾಡಿಕೊಳ್ಳಿ.‌!!

KEA K-SET Hall Ticket Download Now 💐🙏

https://cetonline.karnataka.gov.in/admissionticket_kset/forms/hallticket.aspx

🌸🌸🌸🌸🌸🌸🌸🌸🌸🌸🌸🌸

Samarth study circle

08 Nov, 01:51


ಗುಲ್ಬರ್ಗಾ ವಿಶ್ವವಿದ್ಯಾಲಯವು 2018/19 ರಿಂದ 2024ರವರೆಗಿನ ಹಲವು ಬಿ.ಇಡಿ. ಕಾಲೇಜುಗಳ ಕೆಲವು ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು (IA Mark's ) ತಡೆಹಿಡಿದಿರುತ್ತಾರೆ. ಆದರೆ ಕನಸು ಸೇವಾ ಸಂಸ್ಥೆಯ ನಿರಂತರ ಹೋರಾಟದಿಂದ ತೊಂದರೆಗೊಳಗಾದ ಎಲ್ಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಪ್ರಕಟಿಸಿರುತ್ತಾರೆ. ಹಾಗಾಗಿ ಎಲ್ಲರೂ ನಿಮ್ಮ ನಿಮ್ಮ ಫಲಿತಾಂಶವನ್ನು ನೋಡಿಕೊಳ್ಳಿ. ಅನಾವಶ್ಯಕವಾಗಿ ಯಾರಿಗೂ ದುಡ್ಡು ಕೊಡಬೇಡಿ.
ಧನ್ಯವಾದಗಳು
ಕನಸು ಸೇವಾ ಸಂಸ್ಥೆ (ರಿ), ಕಲಬುರಗಿ
ಸಮರ್ಥ್ ಸ್ಟಡಿ ಸರ್ಕಲ್, ಕಲಬುರಗಿ

Samarth study circle

31 Oct, 02:26


"ದೀಪ ಬೆಳಗುವ ಬೆಳಕಿನ ಹಿಂದೆ
ಯಾರೋ ಪುಣ್ಯಾತ್ಮ (ಕುಂಬಾರ) ತಯಾರಿಸಿದ ಪಣತೆ,
ಕಾಣದ ಅಣ್ಣ (ಗಾಣಿಗ) ತಯಾರಿಸಿದ ಎಣ್ಣೆ,
ಮತ್ಯಾರೋ (ರೈತ) ಬೆಳೆದ ಹತ್ತಿ ಇರುತ್ತದೆ
ಅದಕ್ಕಿಂತಲೂ ಹೆಚ್ಚಿಗೆ ನಮಗಾಗಿ ತನ್ನನ್ನೇ ತಾನು ಸುಟ್ಟುಕೊಂಡು ಸಮರ್ಪಿಸಿಕೊಳ್ಳುವ ಬತ್ತಿ ಇರುತ್ತದೆ.!!

ಅಂತೆಯೇ ನಮ್ಮ ಜೀವನ ಬೆಳಗಲು ಕೂಡಾ
ಹಲವರ ಹಂಬಲ, ಕೆಲವರ ಬೆಂಬಲ,
ಹಿರಿಯರ ಹಾರೈಕೆ, ಪೋಷಕರ ಪ್ರೋತ್ಸಾಹ ನಮ್ಮ ಹಿಂದೆ ಇರಲೇಬೇಕು, ಇದಕ್ಕಿಂತಲೂ ಹೆಚ್ಚಾಗಿ ಈ ನಾಡು ನುಡಿಗಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು.!!"

ತಮಗೂ & ತಮ್ಮ ಕುಟುಂಬದವರಿಗೂ ದೀಪಾವಳಿಯ ಹಾರ್ಧಿಕ ಶುಭಾಶಯಗಳು.!!
Samarth Study Circle kalaburagi

Samarth study circle

28 Oct, 08:56


ಇಂದು ಡಾ. ಆಕಾಶ್ ಎಸ್‌. (ಭಾ.ಆ.ಸೇ) ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗ ಮತ್ತು DDPI ಅಧಿಕಾರಿಗಳಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (GPSTR ) ಹಾಗೂ ಪ್ರೌಢಶಾಲಾ ಶಿಕ್ಷಕರ (HSTR) ಹುದ್ದೆಗಳನ್ನು ಹೆಚ್ಚಿಸುವ ಕುರಿತು ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಕನಸು ಸೇವಾ ಸಂಸ್ಥೆ (ರಿ) ಮತ್ತು SFI ಸಮ್ಮುಖದಲ್ಲಿ ಮನವಿ ಪತ್ರ ನೀಡಲಾಯಿತು.

Samarth study circle

27 Oct, 08:17


ನಾಳೆ ಅಂದರೆ ದಿನಾಂಕ 28/10/2024 ಸೋಮವಾರ ಮುಂಜಾನೆ 10:00 ಗಂಟೆಗೆ ಡಾ. ಆಕಾಶ್ ಎಸ್‌. (ಭಾ.ಆ.ಸೇ) ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗ ಮತ್ತು ಸೂರ್ಯಕಾಂತ ಮದಾನೆ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ (DDPI) ಇವರಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (GPSTR ) ಹಾಗೂ ಪ್ರೌಢಶಾಲಾ ಶಿಕ್ಷಕರ (HSTR) ಹುದ್ದೆಗಳನ್ನು ಹೆಚ್ಚಿಸುವ ಕುರಿತು ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಕನಸು ಸೇವಾ ಸಂಸ್ಥೆ (ರಿ) ಮತ್ತು SFI ಸಮ್ಮುಖದಲ್ಲಿ ಮನವಿ ಪತ್ರ ನೀಡೋಣ.
ಧನ್ಯವಾದಗಳು
ಭಾಗವಹಿಸುವರು ಈ ನಂಬರ್ ಗೆ ಸಂಪರ್ಕಿಸಿ 7676605706

Samarth study circle

21 Oct, 07:23


ಇಂದು ಮುಂಜಾನೆ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಶಶೀಲ ಜಿ. ನಮೋಶಿ ಅವರಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (GPSTR ) ಹಾಗೂ ಪ್ರೌಢಶಾಲಾ ಶಿಕ್ಷಕರ (HSTR) ಹುದ್ದೆಗಳನ್ನು ಹೆಚ್ಚಿಸುವ ಕುರಿತು ಮನವಿ ಪತ್ರ ನೀಡಲಾಯಿತು. ಶ್ರೀಯುತರು ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ.

Samarth study circle

20 Oct, 02:27


https://youtu.be/UtJfcXJriKQ

Samarth study circle

20 Oct, 02:26


https://www.instagram.com/reel/DBT0s6uP-9P/?igsh=d3Azd2h4emN1OHdi

Samarth study circle

18 Oct, 07:05


ರಾಜ್ಯದ ಖಾಸಗಿ ಬಿ.ಇಡಿ ಕಾಲೇಜುಗಳಲ್ಲಿ ಎರಡು ವರ್ಷದ ಬಿ.ಇಡಿ ಕೋರ್ಸಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳ ಹತ್ತಿರ ಅವೈಜ್ಞಾನಿಕವಾಗಿ ಶುಲ್ಕ ತೆಗೆದುಕೊಳ್ಳುತ್ತಿರುವ ಕುರಿತು. ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಕರಾಗಬೇಕೆಂಬ ಕನಸನ್ನು ಕಟ್ಟಿಕೊಂಡು ಬಿ.ಇಡಿ ಮಾಡುತ್ತಾರೆ ಆದರೆ ಖಾಸಗಿ ಬಿ.ಇಡಿ ಕಾಲೇಜುಗಳು ಎರಡು ವರ್ಷದ ಬಿ.ಇಡಿ ಕೋರ್ಸಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳ ಹತ್ತಿರ ಅವೈಜ್ಞಾನಿಕವಾಗಿ ಪ್ರತಿ ಸೆಮಿಸ್ಟರ್ ಗೆ 35 ರಿಂದ 50 ಸಾವಿರ ಹಣವನ್ನು ಶುಲ್ಕದ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಅಂದರೆ ಎರಡು ವರ್ಷದ ಬಿ.ಇಡಿ ಕೋರ್ಸಿಗೆ ಸುಮಾರು ಎರಡೂವರೆಯಿಂದ ಮೂರು ಲಕ್ಷ ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿ ಶಿಕ್ಷಣ ಸಂಸ್ಥೆಗಳು ತಮ್ಮದೇ ಮಾನದಂಡ ಇಟ್ಟುಕೊಂಡು ಮನಬಂದಂತೆ ಶುಲ್ಕವನ್ನು ನಿಗದಿ ಮಾಡುವ ಮೂಲಕ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುತ್ತಿದ್ದಾರೆ ಮತ್ತು ಶಿಕ್ಷಣವನ್ನು ಲಾಭದಾಯಕ ಉದ್ದಿಮೆಯನ್ನಾಗಿ ಪರಿಗಣಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆತಂಕವನ್ನು ಉಂಟುಮಾಡಿದೆ. ಆದ್ದರಿಂದ ಸರ್ಕಾರ ಇದರ ಬಗ್ಗೆ ಗಮನಹರಿಸಿ ಖಾಸಗಿ ಬಿ.ಇಡಿ ಕಾಲೇಜುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಅವುಗಳಿಗೆ ಮೂಗುದಾರ ಹಾಕಬೇಕು ಇಲ್ಲವಾದರೆ ಸಾಮಾನ್ಯ ಬಡ ವಿದ್ಯಾರ್ಥಿಗಳು ಬಿ.ಇಡಿ ಶಿಕ್ಷಣದಿಂದ ವಂಚಿತರಾಗುತ್ತಾರೆ‌ ಎಂಬುದರಲ್ಲಿ ಸಂಶಯವಿಲ್ಲ. ಬಿ.ಇಡಿ ಕಾಲೇಜುಗಳು ತಮಗೆ ಇಷ್ಟ ಬಂದಂತೆ ಶುಲ್ಕವನ್ನು ನಿಗದಿಪಡಿಸುತ್ತಿರುವುದನ್ನು ನೋಡಿದರೆ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯ ಹಿನ್ನಡೆ ಮತ್ತು ಖಾಸಗೀಕರಣದ ಸರ್ವಾಧಿಕಾರಿ ವ್ಯವಸ್ಥೆಯ ಬೆಳವಣಿಗೆಯನ್ನು ಪ್ರತಿಫಲಿಸುತ್ತದೆ. ಮಾನವೀಯತೆ, ಪ್ರೀತಿ, ಗೌರವ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಒಂದು ನಾಗರಿಕ ಸಮಾಜವನ್ನು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೇಲೆ ಕಟ್ಟಿಕೊಳ್ಳಬೇಕೆಂಬ ನಮ್ಮ ಸಂವಿಧಾನದ ಮೂಲ ಆಸೆಗೆ ಕೊಡಲಿ ಪೆಟ್ಟು ಬೀಳುತ್ತಿರುವುದು ನೋವಿನ ಸಂಗತಿಯಾಗಿದೆ.

ನಗರದ ಅನೇಕ ಬಿ.ಇಡಿ ಕಾಲೇಜುಗಳಲ್ಲಿ ಪಾಠ ಮಾಡುವ ಶಿಕ್ಷಕರೇ ಇಲ್ಲ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳೇ ಇಲ್ಲದಿದ್ದರೂ ಕೂಡ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಕೆಲವು ಕಾಲೇಜುಗಳಲ್ಲಿ ಬೆರಳೆಣಿಕೆಯಷ್ಟು ಶಿಕ್ಷಕರಿದ್ದರೂ ಕೇವಲ ನಾಲ್ಕರಿಂದ ಐದು ಸಾವಿರ ವೇತನ ನೀಡುವ ಮೂಲಕ ಅವರಿಗೆ ಭದ್ರತೆ ಇಲ್ಲದಂತಾಗಿದೆ ಹಾಗಾಗಿ ಅವರಿಂದ ಉತ್ತಮವಾದ ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸಲು ಸಾಧ್ಯವೇ?
ತಮಗೆಲ್ಲ ತಿಳಿದಿರುವಂತೆ ಬಿ.ಇಡಿ ಕೋರ್ಸ್ ಒಂದು ವೃತ್ತಿಪರ ಕೋರ್ಸ್ ಆಗಿದೆ ಹಾಗಾಗಿ ದೂರಶಿಕ್ಷಣದ ಮೂಲಕ ಬಿ.ಇಡಿ ಕೋರ್ಸ್ ಮಾಡಲು ಅವಕಾಶವಿಲ್ಲ ಆದರೆ ರಾಜ್ಯದ ಕೆಲವು ಬಿ.ಇಡಿ ಕಾಲೇಜುಗಳಲ್ಲಿ ನೀವು ಲಕ್ಷ ಲಕ್ಷ ಹಣ ನೀಡಿದರೆ ನಿಮ್ಮನ್ನು ನೇರವಾಗಿ ಪರೀಕ್ಷೆಗೆ ಹಾಜರಾಗಲು ಅನುಮತಿ ಮಾಡಿಕೊಡುತ್ತಾರೆ. ಹೀಗೆ ನೇರವಾಗಿ ಪರೀಕ್ಷೆಗೆ ಹಾಜರಾಗುವ ಬಿ.ಇಡಿ ವಿದ್ಯಾರ್ಥಿಗಳು ಮುಂದೆ ಶಿಕ್ಷಕರಾಗಿ ಆಯ್ಕೆಯಾದರೆ ಯಾವ ರೀತಿ ಪಾಠ ಮಾಡುತ್ತಾರೆ ಇವರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗಲು ಸಾಧ್ಯವೇ?
-- ಕನಸು ಸೇವಾ ಸಂಸ್ಥೆ (ರಿ)

Samarth study circle

16 Oct, 17:36


https://youtube.com/shorts/rD-Hm9R-fgg?si=YV5yfVsnO3EY-ULh

What Questions

Samarth study circle

15 Oct, 03:00


https://youtube.com/shorts/dTTHEyFz2xc?si=RGgZEFC4mC9LynlP

Pronouns in Kannada

Samarth study circle

13 Oct, 13:39


*ಆತ್ಮೀಯ ಸ್ನೇಹಿತರೇ,*

ನಾನು ನನ್ನ ಯೂಟ್ಯೂಬ್ ಚಾನೆಲ್ ಮುಖಾಂತರ *ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಭಂದಿಸಿದ ಗ್ರಾಮರ್* (ಸೇಪೇರೇಟ್ ಪ್ಲೇ ಲಿಸ್ಟ್) ಮತ್ತು *ಸ್ಪೋಕನ್ ಬೇಸ್ ವಿಡಿಯೋ* (ಸೇಪೇರೇಟ್ ಪ್ಲೇ ಲಿಸ್ಟ್) ವಿಡಿಯೋ ಅಪ್ಲೋಡ್ ಮಾಡ್ತೀನಿ ಮತ್ತು *ಫ್ರೀ ಪಿಡಿಎಫ್ ನೋಟ್ಸ್* ಸಹ ಅಪ್ಲೋಡ್ ಮಾಡ್ತೀನಿ. ದಯವಿಟ್ಟು ನನ್ನ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ಮತ್ತು ಲೇಟೆಸ್ಟ್ ವಿಡಿಯೋ ಗಳಿಗೆ ಪಕ್ಕದ ಬೆಲ್ ಬಟನ್ ಟ್ಯಾಪ್ ಮಾಡಿ.

*ಯೂಟ್ಯೂಬ್ ಚಾನೆಲ್ ಲಿಂಕ್*
https://www.youtube.com/@englishlearners.official

*ಟೆಲಿಗ್ರಾಂ ಚಾನೆಲ್ ಲಿಂಕ್*
https://t.me/englishlearners_official

ಧನ್ಯವಾದಗಳು

ಇಂತಿ ನಿಮ್ಮ
ಮೊಹಮ್ಮದ್ ಅಸಮ್ ಪಾಷ