ಹಕ್ಕಿ ಹಾರುತಿದೆ ನೋಡಿದಿರಾ? - ಬೇಂದ್ರೆ
ದೇವರು ರುಜು ಮಾಡಿದನು - ಕುವೆಂಪು, ಹೀಗೆ ಅನೇಕ ರೀತಿಯಲ್ಲಿ ಕಾವ್ಯದ ವಸ್ತುವಾಗಿ ಹಕ್ಕಿ ಬಳಕೆಯಾಗಿದೆ,
ನಮ್ಮ ಬದುಕು ವಿಕಸನಗೊಂಡಂತೆ ಹಲವು ಸಂತತಿಗಳು ನಶಿಸಿ ಹೋಗಿವೆ!
ಬೆಂಗಳೂರಿನಲ್ಲಿ ಗೂಡು ಕಟ್ಟಲು ಈ ಕಾಂಕ್ರೀಟ್ ಕಾಡಿನಲ್ಲಿ ಒಂದೊಂದು ಹುಲ್ಲು ಕಡ್ಡಿ ಸಂಗ್ರಹಿಸಲು ಹರ ಸಾಹಸ ಪಡಬೇಕಾಗುತ್ತದೆ! ಆದರೆ ಹಕ್ಕಿ ಗೂಡು ಕಟ್ಟುವುದು ಮರೆಯುವಂತಿಲ್ಲ!
ಇಲ್ಲಿಯ ಜನರ ಬದುಕು ಕೂಡ ಸವಾಲುಗಳು ಮಧ್ಯೆಯೇ ಸಾಗುತ್ತದೆ, ಕೆಲವೊಮ್ಮೆ ನಿಲ್ಲುತ್ತದೆ ಆದರೆ ಬದುಕು ಕಟ್ಟಿಕೊಳ್ಳವುದು ಮರೆಯುವಂತಿಲ್ಲ!
ಇಲ್ಲಿ ಹಕ್ಕಿ, ಮನುಷ್ಯ, ಇರುವೆ ಎಲ್ಲದರ ಬದುಕು ಹೋರಾಟದ ಹಾದಿಯಲ್ಲಿದೆ.
ಸಿದ್ಧಣ್ಣ ಪೂಜಾರಿ ಯಕ್ಷಂತಿ - ಲೇಖಕರು
https://t.me/UPSC_Kannada_Lit_Forum