Shri guru raghavendra swamy @shrigururaghavendraswamy Channel on Telegram

Shri guru raghavendra swamy

@shrigururaghavendraswamy


About gururayaru

Instagram @shri_guru_raghavendra_swamy

Feedback @alligatorss

Shri Guru Raghavendra Swamy (English)

Are you seeking spiritual guidance and wisdom in your life? Look no further than the Telegram channel 'Shri Guru Raghavendra Swamy'! This channel is dedicated to spreading the teachings and blessings of Guru Raghavendra Swamy, a revered saint and spiritual leader. Who is Guru Raghavendra Swamy? Guru Raghavendra Swamy, also known as Rayaru, was a 16th-century saint and philosopher who is believed to have performed numerous miracles and helped countless individuals on their spiritual journey. He is considered an incarnation of Bhakta Prahlada and is worshipped by millions of devotees around the world. What is the channel about? The 'Shri Guru Raghavendra Swamy' Telegram channel provides daily quotes, teachings, and blessings of Guru Raghavendra Swamy to inspire and uplift its members. Whether you are looking for spiritual guidance, seeking blessings for your endeavors, or simply want to connect with like-minded individuals, this channel is the perfect place for you. Make sure to follow their Instagram page '@shri_guru_raghavendra_swamy' for more spiritual content and updates. For any feedback or inquiries, you can reach out to the administrators at '@alligatorss'. Join the 'Shri Guru Raghavendra Swamy' Telegram channel today and embark on a journey of spiritual growth and enlightenment with the blessings of Guru Raghavendra Swamy by your side. Let his teachings guide you towards a more fulfilling and meaningful life. May you find peace, happiness, and spiritual fulfillment on this divine path.

Shri guru raghavendra swamy

05 Nov, 16:53


ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ
ನಾಕವಿಲಸಿತಗೀತೆ ಲಾವಣ್ಯಮೂರ್ತೆ |
ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು
ಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ ||

ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದ
ಮುಂದೆ ನ೦ದನ ಕಂದ ನಿನ್ನೆದುರು ಕುಣಿದ
ಒಂದು ಕ್ಷಣ ಬಿಟ್ಟಿರದೆ ಹರಿಯು ನಲಿಯುತಿರೆ
ಇನ್ಯಾರ ಒಲಿಸಲೆಂದು ತಪಗೈಯುತಿರುವೆ ||೧||

ಇಷ್ಟವಿಲ್ಲದ ರಾಜ್ಯವಾಳಿ ಬಹು ವರ್ಷಗಳು
ಶ್ರೇಷ್ಠ ನೀ ಬಹು ಆಯಾಸಗೊಂಡೆಯಾ
ದುಷ್ಟವಾದಿಗಳ ವಾಗ್ಯುದ್ಧದಲಿ ಜಯಿಸುತಲಿ
ಶ್ರೇಷ್ಠ ಗ್ರಂಥವ ಬರೆದು ಬರೆದು ಸಾಕಾಯ್ತೆ ||೨||

ಪರಿ ಪರಿ ಅಭಿಷ್ಟಗಳ ನೀಡೆಂದು ಜನ ಕಾಡೆ
ವರವಿತ್ತು ಸಾಕಾಯ್ತೆ ಕಮಲೇಶ ದಾಸ
ಧರೆಗೆ ಮರೆಯಾಗಿ ಬೃಂದಾವನ ಸೇರಿದೊಡೆ
ಚರಣ ದಾಸರು ನಿನ್ನ ಬಿಡುವರೇನಯ್ಯಾ ||೩||

ಗಾಯನ :- ಸಂಜೀವ್ ಪುರಾಣಿಕ್

Shri guru raghavendra swamy

21 Oct, 03:07


ರಾಘವೇಂದ್ರ ಸ್ವಾಮಿಗಳು ಭಕ್ತರು ಏನೇ ಕೇಳಿದರೂ ಕೊಟ್ಟೇ ಕೊಡುತ್ತಾರೆ.ನೀವು ಸೇವೆ ಮಾಡಿದ್ದರೂ ಅವರು ಫಲ ಕೊಟ್ಟಿಲ್ಲ ಅಂದರೆ ನೀವು ಬಯಸಿದ ಫಲ ದೊಡ್ಡದಿರುತ್ತೆ ಅದಕ್ಕೆ ತಕ್ಕಷ್ಟು ಸೇವೆ ನೀವು ಮಾಡಿರುವುದಿಲ್ಲ, 12 ದಿನ ಇಲ್ಲ 3 ದಿನ ಸೇವೆ ಮಾಡಿರುತ್ತಿರಿ ಅದು ಸಾಕಾಗಿರುವುದಿಲ್ಲ,ಇನ್ನೊಂದು, ನೀವು ಬಯಸಿದಂತ ಫಲ ನಿಮಗೆ ಗೊತ್ತಿಲ್ಲದಂತೆ ಮುಂದೆ ಎಂದಾದರೂ ತೊಂದರೆ ಆಗಬಹುದು ಅದು ರಾಯರಿಗೆ ಗೊತ್ತಿರುತ್ತದೆ ನಿಮಗೆ ಒಳ್ಳೆಯದಾಗುವುದೇ ಆದರೆ ಮಾತ್ರ ನಿಮಗೆ ಕೊಡುವರು ನೋಡಿ,ನಮ್ಮ ರಾಘವೇಂದ್ರಸ್ವಾಮಿ ಗಳು ಎಂಥಹ ಕೃಪಾಸಾಗರರು ಭಕ್ತರು ಕೇಳಿದ್ದಾರೆ ಕೊಟ್ಟುಬಿಡೋಣ ಅನ್ನೋದಿಲ್ಲ ಅದರಿಂದ ಅವರಿಗೆ ಮುಂದೆ ಒಳ್ಳೆಯದಾಗುತ್ತಾ ಅಂತ ತಿಳಿದು ಕೊಡುವರು ಇಲ್ಲವೇ ಕೊಡುವುದಿಲ್ಲ ಅವರು ತಿಳಿಯದೆ ಎಷ್ಟೇ ಬೇಡಿದರೂ ರಾಯರು ಏಕೆ ನಮಗೆ ಅನುಗ್ರಹ ಮಾಡುತ್ತಿಲ್ಲ ಅಂತ ದೂಷಣೆ ಮಾಡಿದರೂ ಸರಿಯೇ ರಾಯರು ಬೇಸರಿಸದೆ ಅವರಿಗೆ ಒಳ್ಳೆಯದನ್ನೇ ಮಾಡುವರು ಇಂತಹ ಗುರುಗಳನ್ನು ಪಡೆದ ನಾವೇ ಧನ್ಯರು ತ್ರಿ ಲೋಕಜ್ಞಾನಿಗಳಾದ ರಾಯರಿಗೆ,ಒಬ್ಬ ಭಕ್ತನ ಈ ಜನ್ಮದ್ದು ಅಷ್ಟೆ ಅಲ್ಲ ಅವನ ಎಲ್ಲಾ ಜನ್ಮದ ವೃತ್ತಾಂತವನ್ನೆಲ್ಲ ಬಲ್ಲರು ಅಂಥಹ ಜ್ಞಾನವುಳ್ಳವರು.
ಇದಕ್ಕೇ ಉದಾಹರಣೆ ರಾಯರ ಮಹಿಮೆ ನಡೆದ ಒಂದು ಕಥೆ. ಇಪ್ಪತ್ತು ವರ್ಷದ ಯುವಕ ಅವನು ನಾನು ರಾಜನಾಗಬೇಕು ಅಂತ ಆಸೆ ಪಟ್ಟು ರಾಯರ ಸೇವೆ ಮಾಡ್ತಾನೆ ಒಂದಲ್ಲಾ ಎರಡಲ್ಲ 12 ವರ್ಷಗಳ ಕಾಲ ಸೇವೆ ಮಾಡ್ತಾನೆ ಅಷ್ಟು ವರ್ಷ ಸೇವೆ ಮಾಡಿದರು ಏನು ಫಲ ಕಾಣೋದಿಲ್ಲ ಸಾಮಾನ್ಯವಾಗಿ ಸೇವೆಗೆ ಯಾವುದೇ ಫಲ ಸಿಗಲಿಲ್ಲವೆಂದರೆ ಶ್ರೀನಿವಾಸನಿಗೆ ಪತ್ರ ಬರೆಯುವ ಕ್ರಮವುಂಟು.ಶ್ರೀನಿವಾಸನಿಗೆ ಪತ್ರದಲ್ಲಿ ಅಖಿಲಂಡ ಕೋಟಿ ಬ್ರಹ್ಮಾಂಡ ನಾಯಕನಾದಂತಹ ಶ್ರೀನಿವಾಸನಿಗೆ ಈ ಭಕ್ತ ನಾನು ಮನವಿಯನ್ನು ಸಲ್ಲಿಸುತಿರು ವoಥದ್ದು ನಾನು ರಾಘವೇಂದ್ರ ಸ್ವಾಮಿಗಳ ಸೇವೆಯನ್ನು 12 ವರ್ಷಗಳ ಕಾಲ ಮಾಡಿದ್ದೇನೆ ಆದರೂ ಇವರು ಫಲವನ್ನು ಕೊಟ್ಟಿಲ್ಲ.ಹೀಗೆ ಪತ್ರವನ್ನು ಬರೆದು ತಿರುಪತಿಗೆ ಹೋಗಿ ಹುಂಡಿಯಲ್ಲಿಈ ಯುವಕ ಪತ್ರವನ್ನು ಹಾಕುತ್ತಾನೆ.ಮರುದಿನ ಆತನಿಗೆ ಸ್ವಪ್ನವಾಗುತ್ತದೆ ಸ್ವಪ್ನದಲ್ಲಿ ಒಂದು ಕೋರ್ಟ್ ನ್ಯಾಯಾಧೀಶರಾಗಿ ಶ್ರೀನಿವಾಸ ದೇವರು ಕುಳಿತ್ತಿದ್ದಾರೆ ಈ ಕಡೆ ರಾಘವೇಂದ್ರ ಸ್ವಾಮಿಗಳು ಆ ಕಡೆ ಯುವಕ ಯುವಕ ಹೇಳ್ತಾನೆ ನನಗೆ ಕೊಟ್ಟಿಲ್ಲ ಅಂತ ಅಗ ಶ್ರೀನಿವಾಸದೇವರು ಕೇಳ್ತಾರೆ ಯಾಕೆ ರಾಯರೇ ಇವನಿಗೆ ಫಲ ಕೊಟ್ಟಿಲ್ಲ ಅಂತ ಅಗ ರಾಯರು,ಇಲ್ಲ ಸ್ವಾಮಿ ಇವನ ಫಲ ದೊಡ್ಡದಾಗಿದೆ ಅದಕ್ಕೆ ಸಾಕಾಗೋವಷ್ಟು ಸೇವೆ ಮಾಡಲಿಲ್ಲ ಅಂತ ಹೇಳುತ್ತಾರೆ.
ಯಥಾಪ್ರಕಾರ ಮತ್ತೆ 12 ವರುಷ ಸೇವೆ ಮಾಡ್ತಾನೆ ಒಟ್ಟು 24 ವರ್ಷಗಳ ಕಾಲ ಸೇವೆ ಆಯ್ತು ಅಷ್ಟಾದರೂ ಫಲ ಸಿಗಲಿಲ್ಲ ಮತ್ತೆ ಸ್ವಪ್ನದಲ್ಲಿ ಬರುತ್ತಾನೆ ಆಗಲೂ ಫಲಕ್ಕೆ ತಕ್ಕ ಹಾಗೆ ಸೇವೆ ಆಗಿಲ್ಲ ಅನ್ನುತ್ತಾರೆ ಮತ್ತೆ 2 ಮೂರು ಬಾರಿ ಹೀಗೆ ಆಗಿ 48 ವರ್ಷಗಳ ಕಾಲ ಸೇವೆಮಾಡುತ್ತಾನೆ. ಆದರೂ ಆ ಯುವಕನಿಗೆ ಅನುಮಾನ ಇಷ್ಟು ಬಾರಿ ಮಾಡಿದ್ದರು ಆಗುವುದೋ ಇಲ್ಲವೋ ಎಂದು ಶ್ರೀನಿವಾಸ ದೇವರಿಗೆ ಮತ್ತೊಂದು ಪತ್ರವನ್ನು ಬರೆಯುತ್ತಾನೆ ಮನವಿಯನ್ನು ಸಲ್ಲಿಸುತ್ತಾನೆ ಅ ದಿನ ಸ್ವಪ್ನ ಯಥಾಪ್ರಕಾರ ಶ್ರೀ ನಿವಾಸದೇವರು ನ್ಯಾಯಾಧೀಶರಾಗಿ ಕುಳಿತ್ತಿದ್ದಾರೆ ಕಟಕಟೆಯಲ್ಲಿ ರಾಘವೇಂದ್ರ ಸ್ವಾಮಿಗಳು ಆ ಕಡೆ ಯುವಕ ರಾಯರು ಹೇಳುತ್ತಾರೆ.ಸ್ವಾಮಿ ಈತ ಬಹಳಷ್ಟು ಸೇವೆ ಮಾಡಿದ್ದಾನೆ ಆದರೂ ಇವನನ್ನು ರಾಜನಾಗಿ ಮಾಡಲು ಆಗುವುದಿಲ್ಲ ದೇವರು ಯಾಕೇ ಎಂದು ಕೇಳಿದರು ಅ ಬ್ರಾಹ್ಮಣನಿಗೆ ಕಳವಳ ರಾಯರು ಹೇಳಿದರು ಈತ ಇಪ್ಪತ್ತನೇ ವರ್ಷದಿಂದ ಸೇವೆ ಮಾಡಿದ್ದಾನೆ ಈಗ ಇವನ ವಯಸ್ಸು 68 ವರ್ಷ ಈಗ ಇವನನ್ನು ರಾಜನಾಗಿ ಮಾಡಿದ್ರೆ ಇನ್ನೂ 5 ವರ್ಷ ಬದುಕಿರುತ್ತಾನೆ ಅಷ್ಟೇ ಈಗ ಮಾಡಿದರೆ ಅದನ್ನು ಅನುಭವಿಸಲು ಆಗದು ಅ ಸಾಮರ್ಥ್ಯವು ಇಲ್ಲ ಆದ್ದರಿಂದ ನಾನು ಈ ಜನ್ಮದಲ್ಲಿ ಇವನನ್ನು ರಾಜನಾಗಿ ಮಾಡುವುದಿಲ್ಲ. ಮುಂದಿನ ಜನ್ಮದಲ್ಲಿ ರಾಜನನ್ನಾಗಿ ಮಾಡುತ್ತೇನೆ ಎಂದು ಹೇಳುತ್ತಾರೆ . ನೋಡಿ ಅವನು ಕೇಳಿದ ಫಲಕ್ಕೆ ಸೇವೆ ಸಾಕಾಗದೇ ಇದ್ದದ್ದನ್ನು ಹೇಳಿದರು ಆಮೇಲೆ ಮುಂದೆ ಆಗುವುದನ್ನು ಹೇಳಿದರು ಅದನ್ನು ಕೊಡದೇ ಮುಂದಿನ ಜನ್ಮಕ್ಕೆ ಇಟ್ಟರು ಎಂಥಹ ಮಹಾಮಹಿಮರು ಎಂಥಹ ಕರುಣಾಳುಗಳು ನಿಮಗೆ ಮುಂದೆ ಆಗುವ ತೊಂದರೆಯನ್ನು ಪರಿಹಾರ ಮಾಡಿ ನೀವು ಕೇಳಿರುವ ಫಲವನ್ನೂ ಕೊಡುವಂತಹ ಸಾಮರ್ಥ್ಯ ರಾಯರಿಗಿದೆ ಆದ್ದರಿಂದ ರಾಯರ ಸೇವೆ ಮಾಡಿದ್ವಿ ಫಲ ಸಿಗಲಿಲ್ಲ ಎಂದು ಎಂದಿಗೂ ಸಿಟ್ಟಾಗಬೇಡಿ.ಅವರಿಗೆ ಗೊತ್ತು ಮುಂದೆ ಏನು ಮಾಡಬೇಕು ಇವರಿಗೆ ಯಾವಾಗ ಏನು ಕೊಡಬೇಕು ಇವರ ಸಮಸ್ಯೆ ಹೇಗೆ ಪರಿಹರಿಸಬೇಕು ಶಾಶ್ವತವಾಗಿ ಎಂಬುದು ರಾಯರಿಗೆ ತಿಳಿದಿದೆ.ನಮಗೆ ಏನು ತಿಳಿದಿರುವುದಿಲ್ಲ ನಾವು ಅಂದುಕೊಂಡಿದ್ದು ರಾಯರು ಮಾಡಿಲ್ಲ ಬೇಗ ಮಾಡಬಾರದಾ ಇನ್ನೂ ಯಾಕೆ ಕಷ್ಟ ನೋವು ಅನುಭವಿಸುತ್ತಿದ್ದೇವೆ ಅಂತ ಗೋಳಾಡುತ್ತೇವೆ ರಾಯರಿಗೆ ಗೊತ್ತು ಎಲ್ಲವೂ ಯಾವಾಗ ಏನು ಮಾಡಬೇಕು ಯಾವಾಗ ನಿವಾರಣೆ ಮಾಡಬೇಕು ಅಂತ ಆದರೆ ರಾಯರ ನಂಬಿದವರಿಗೆ ರಾಯರು ಕೈಬಿಡುವುದಿಲ್ಲ ಅವರು ದಡ ಸೇರಿಸಿಯೇ ಸೇರಿಸುತ್ತಾರೆ ನಮ್ಮ ಕಷ್ಟಗಳು ಸಮುದ್ರದ ಅಲೆಯಂತೆ ನಾವು ಆ ಅಲೆಯಲ್ಲಿ ಸಿಕ್ಕಿಕೊಂಡರೆ ರಾಯರು ತಮ್ಮ ಭಕ್ತರನ್ನು ಬೀಡುವರೇ ದಡಕ್ಕೆ ಸೇರಿಸುತ್ತಾರೆ ಅನುಮಾನವೇ ಬೇಡ ನಮಗೆ ತಾಳ್ಮೆ ಇರಬೇಕು ಅಷ್ಟೇ ಸಹಿಸುವ ಶಕ್ತಿ ನಮ್ಮಲ್ಲಿರಬೇಕು ಅದಕ್ಕೆ ಸಮಾಧಾನವೂ ರಾಯರೇ ಕೊಡುವರು ..
ನಿಮ್ಮ ಮಹಿಮೆಯ ಎಷ್ಟು ಕೊಂಡಾಡಿದರು ಸಾಲದಯ್ಯ... ಒಂದೊದು ನಿಮ್ಮ ಮಹಿಮೆಯ ಬರೆದಾಗಲೂ ಕಣ್ತುಂಬ ನೀರು, ಭಕ್ತಿ ದಿನದಿನಕ್ಕೂ ಹೆಚ್ಚಾಗುವುದು ನನ್ನ ದೊರೆಯೇ.😭. ... ನಿಮ್ಮ ಮಹಿಮೆ ಅಗೆದಷ್ಟು ಬಂಗಾರ ಮುತ್ತು ರತ್ನ ವಜ್ರ ವೈಢೂರ್ಯವೇ....🙏🙏🙏🙏

Shri guru raghavendra swamy

20 Aug, 16:36


ಶುಭ ಸಂಧ್ಯಾದ ಶುಭಹಾರೈಕೆಗಳು.

ಶ್ರಾವಣ ಮಾಸದ ಬಹುಳ ದ್ವಿತೀಯಾ ದ ಶುಭದಿನದಂದು
ವಿಶ್ವದ ಮಾನವ ಕುಲಕ್ಕೇ ಅತ್ಯಂತ ಪವಿತ್ರವಾದ ಪುಣ್ಯಪ್ರದವಾದ ದಿನ.

ನಾಳೆಗೆ ೩೫೩ ವರ್ಷಗಳ ಹಿಂದೆ ಆಗಮ್ಯ ಮಹಿಮರಾದ ,ಕಾಮಧೇನು ,ಕಲ್ಪವೃಕ್ಷ ಎಂದು ಪ್ರಖ್ಯಾತರಾದ
ರಾಘವೇಂದ್ರ ಗುರು ಸಾರ್ವಭೌಮರು ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿ ಅಲ್ಲಿಂದಲೇ ಭಕ್ತರ ಮನೋಭಿಷ್ಟಗಳನ್ನು ಪೂರೈಸುತ್ತಿರುವರು.

ಭಗವತ್ಸಂಕಲ್ಪದಂತೆ ತಮ್ಮ ಅವತಾರಕಾರ್ಯವನ್ನು ಪರಿಸಮಾಪ್ತಿಗೊಳಿಸಿ ಏಳುನೂರು ವರ್ಷಗಳ ಕಾಲ ಬೃಂದಾವನದಲ್ಲಿದ್ದು ಜಗತ್ಕಲ್ಯಾಣ ಮಾಡಲು ಸಂಕಲ್ಪಿಸಿ
ತುಂಗಾಭದ್ರಾ ನದಿ ತೀರದಲ್ಲಿ ಇರುವ ಮಂತ್ರಾಲಯದಲ್ಲಿ

೧೫೯೩ ನ ವಿರೋಧಿಕೃತ್ ಸಂವತ್ಸರದ ಶ್ರಾವಣ ಬಹುಳ ಬಿದಿಗೆ (ಕ್ರಿ ಶ .1671) ಶುಭದಿನದಂದು ಸಹಸ್ರಾರು ಜನರು
ನೋಡುತ್ತಿರುವಾಗ,ಶ್ರೀ ಯೋಗೀಂದ್ರ ತೀರ್ಥರು ಹಸ್ತಲಾಘವ ಕೊಡುತ್ತಿರಲು ,ದಿವಾನ ವೆಂಕಣ್ಣ ನವರು ರಾಜ ಮರ್ಯಾದೆ

ಸಲ್ಲಿಸುತ್ತಿರುವಾಗ ಮಂಗಳ ವಾದ್ಯಗಳು ಮೊಳಗುತ್ತಿರುವಾಗ
ಪಂಡಿತರ ವೇದಘೋಷಗಳನ್ನು ಮಾಡುತ್ತಿರುವಾಗ ,ಭಕ್ತಜನರೆಲ್ಲರೂ ಕಣ್ಣೀರು ಹಾಕುತ್ತಿರುವಾಗ ,ಸುಮಂಗಲಿಯರು ಆರತಿಯೆತ್ತುತ್ತಾ,ಇರುವಾಗ

ಕಾಷಾಯಾಂಬರ ದಂಡ ಕಮಂಡಲು ಧಾರಿಗಳಾದ ಮಂದಹಾಸ ಬೀರುತ್ತಾ ಸರ್ವರನ್ನು
ಆಶೀರ್ವದಿಸುತ್ತಾ ತಮ್ಮ ಉತ್ತರಾಧಿಕಾರಿಗಳಾದ “ಶ್ರೀ ಯೋಗೀಂದ್ರ ತೀರ್ಥರಿಗೆ ತಾವು ಧರಿಸಿದ್ದ ಪಾದುಕೆಗಳನ್ನು
ಅನುಗ್ರಹಿಸಿ

ಅದನ್ನು ಪೀಠ ಪರಂಪರೆಯಿಂದ ಪೂಜಿಸುತ್ತಾ
ಲೋಕ ಕಲ್ಯಾಣ ಮಾಡುತ್ತಾ ಬರಬೇಕೆಂದು ಆಜ್ಞಾಪಿಸಿ ಬೃಂದಾವನವನ್ನು ಪ್ರವೇಶಿಸಿ ಯೋಗಾಸನ ರೂಢರಾಗಿ ಕುಳಿತು ಶ್ರೀ ಮನ್ನಾರಾಯಣಧ್ಯಾನ ನಿರತರಾದರು.

ಶ್ರೀ ಗುರುರಾಜರ ಆದೇಶದಂತೆ ಪ್ರಣವಧ್ವನಿಯನ್ನಾಲಿಸಿ
ಶ್ರೀ ಗುರುಗಳ ಶಿರದ ಮೇಲೆ ಬೃಂದಾವನದ ಮೇಲ್ಭಾಗವನ್ನು ಮುಚ್ಚಿ ಅನೇಕ ಶಾಲಗ್ರಾಮಗಳನ್ನಿಟ್ಟು ಶ್ರೀ ಯೋಗೀಂದ್ರತೀರ್ಥರು ಬೃಂದಾವನ ಪ್ರತಿಷ್ಟಾ ಕಾರ್ಯವನ್ನುನೇರವೇರಿಸಿದರು.

ಶ್ರೀ ರಾಘವೇಂದ್ರ ಗುರು ಸಾರ್ವಭೌಮರು ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿ ಮೂರು ನೂರಐವತ್ತು ನಾಲ್ಕು
೩೫೪) ವರ್ಷಗಳಾದವು.

ದೇಶ ವಿದೇಶಗಳಲ್ಲಿಯೂ ಭಕ್ತ ಜನರು ತಮ್ಮ ವಿವಿಧ ಅಭೀಷ್ಟಗಳನ್ನುಪೂರೈಸಿಕೊಳ್ಳಲು ಶ್ರೀ ರಾಘವೇಂದ್ರ ಸ್ವಾಮಿಗಳ ಅಡಿದಾವರೆಗಳಲ್ಲಿ ಭಕ್ತಿಪೂರ್ವಕವಾಗಿ ಸೇವಿಸಿ
ತಮ್ಮ ಇಷ್ಟಾರ್ಥಗಳನ್ನು ಪಡೆಯುತ್ತಿರುವುದು ಜಗತ್ಪಸಿದ್ಧ ವಾಗಿದೆ..

ಇಂದಿನ ಶುಭ ಸಂದರ್ಭದಲ್ಲಿ ಶ್ರೀ ಗುರುರಾಯರು ಸಕಲರಿಗೂ
ಸನ್ಮಂಗಲವನ್ನುಂಟು ಮಾಡಿ ನೂರಾರು ವರ್ಷಕಾಲ ನಮ್ಮೆಲ್ಲನ್ನೂ ಸಲಹುವಂತೆ ಅನುಗ್ರಹಿಸಲೆಂದು ಪ್ರಾರ್ಥಿಸೋಣ.

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ।
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ॥

॥ಶ್ರೀ ಕೃಷ್ಣಾರ್ಪಣ ಮಸ್ತು॥

ಕೃತಜ್ಞತೆಗಳು —

ಈ ಲೇಖನವನ್ನು “ಪರಿಮಳ”ಸಾಂಸ್ಕೃತಿಕ ಮಾಸ ಪತ್ರಿಕೆ”
ಯಿಂದ ಸಂಗ್ರಹಿಸಲಾಗಿದೆ.

ಮೂಲ ಲೇಖಕರು—
ಶ್ರೀರಾಘವೇಂದ್ರಗುರುವಂಶಭೂಷಣಂ ದಿ॥ರಾಜಾ ಶ್ರೀ ಗುರುರಾಜಾಚಾರ್ಯ॥

Shri guru raghavendra swamy

20 Aug, 16:35


ರಾಘವೇಂದ್ರ ಸ್ವಾಮಿಗಳು ಕಲ್ಪವೃಕ್ಷರು.ಮಂತ್ರಾಲಯದಲ್ಲಿ ಪ್ರದಕ್ಷಿಣೆ ಹಾಕಿ ಯಾರ್ಯಾರು ಏನೇನು ಬೇಡ್ಕೊತ್ತಾರೋ ಅವ್ರು ಧರ್ಮಯುಕ್ತವಾಗಿ ನಡೆದುಕೊಂಡಿದ್ದರೆ, ಯೋಗ್ಯತೆ ಪ್ರಾಪ್ತಿಯಾಗಿದ್ದರೆ, ಗುರುಗಳು ಅವರಿಗೆ ಅನುಗ್ರಹ ಮಾಡುತ್ತಾರೆ.
ಯಾವಾಗಲೂ ರಾಘವೇಂದ್ರ ಸ್ವಾಮಿಗಳು ನಮಗೆ ಅನುಗ್ರಹ ಮಾಡಬೇಕಾದರೆ ಒಂದು ನಿಯಮವಿದೆ.ನಮ್ಮದು ಪುಣ್ಯ ಸಂಚಯನ ಆಗಿರಬೇಕು.ಅದಕ್ಕೆ ಅರ್ಹತೆಯನ್ನ ಪಡೆದಿದ್ದರೆ,ನಾವು ಸದಾಚಾರಿಗಳಾಗಿದ್ದರೆ,ಆದರೂ.. ಸಂಕಟಗಳನ್ನು ಅನುಭವಿಸ್ತಾ ಇದ್ದರೆ ರಾಯರು ಅನುಗ್ರಹಿಸುತ್ತಾರೆ. ನಾವೇ ದುರಾಚಾರಿಗಳಾಗಿದ್ದು, ಕಿಂಚಿತ್ ಪುಣ್ಯವನ್ನು ಗಳಿಸದೇ ಮಾಡಬಾರದನ್ನು ಮಾಡಿ ಪ್ರಾರ್ಥನೆ ಮಾಡಿಕೊಂಡರೆ ಅಷ್ಟು ಸುಲಭವಾಗಿ ರಾಯರ ಅನುಗ್ರಹವಾಗುವುದಿಲ್ಲ.
ಮಂತ್ರಾಲಯಕ್ಕೆ ಹೋಗಿ ಏನೆಲ್ಲಾ ಸೇವೆ ಮಾಡಿ ಫಲ ಪಡೆಯುವರೋ ಹಾಗೆಯೇ ಎಲ್ಲಾ ಕಡೆ ಶಾಖಾಮಠಗಳು ಕಾಮದೇನು ಇದ್ದ ಹಾಗೆ ಮೂಲ ಮಠಡಾಲ್ಲಿ ಏನು ಶಕ್ತಿ ಇರುವುದೋ ಅಷ್ಟೆ ರಾಯರ ಶಕ್ತಿ ಎಲ್ಲಾ ಮಠಗೆಳಲ್ಲಿ ಇರುವುದು.
ರಾಯರ ಅನೇಕ ಶಿಷ್ಯರಲ್ಲಿ ಬಿಚ್ಚಾಲೆ ಅಪ್ಪಣ್ಣಾಚಾರ್ಯರು ಒಬ್ಬರು .ರಾಯರ ಮೇಲೆ ಅಪಾರವಾದ ಭಕ್ತಿ ಅವರಿಗೆ.ಬಹಳ ಮೇಧಾವಿಗಳು ಕೂಡ,12 ವರ್ಷ ರಾಘವೇಂದ್ರ ಸ್ವಾಮಿಗಳಲ್ಲಿ ವೇದಾಂತ ಶಾಸ್ತ್ರ ದಲ್ಲಿ ಅಧ್ಯಯನ ಮಾಡಿದವರು ಅಖಂಡ ಪಂಡಿತರು ಅಪ್ಪಣ್ಣಾಚಾರ್ಯರು.
ಒಮ್ಮೆ ಇವರು ರಾಯರ ಅಪ್ಪಣೆಯನ್ನ ಪಡೆದುಕೊಂಡು ತೀರ್ಥಯಾತ್ರೆಗೆ ಪತ್ನಿ ಜೊತೆಗೆ ಹೋಗಿದ್ದರು ಅವತ್ತಿನ ಕಾಲದಲ್ಲಿ ಯಾರಾದರೂ ತೀರ್ಥಯಾತ್ರೆಗೆ ಹೋದರೆ ವರ್ಷಾನೂ ಗಟ್ಟಲೇ ಹೋಗುತ್ತಿದ್ದರು.ಅಪ್ಪಣ್ಣಚಾರ್ಯರು ಯಾತ್ರೆ ಮುಗಿಸಿ ಬಂದಾಗ ಯಾರೋ ಹೇಳ್ತಾರೆ ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾಗಿ 3 ದಿನಗಳು ಆಗಿವೆ ಎಂದಾಗ ಅವರಿಗೆ ಎದೆ ಹೊಡೆದ ಹಾಗೆ ಆಗುತ್ತದೆ. ಕುಸಿದು ಹೋಗ್ತಾರೆ ದುಃಖಿಸುತ್ತಾರೆ. ಏಕೆಂದರೆ ರಾಯರನ್ನು ಅಷ್ಟು ಇಷ್ಟ ಪಡ್ತಾ ಇದ್ದರು. ಬಿಚ್ಚಾಲೆಯಲ್ಲಿ ರಾಯರನ್ನು ಕರೆದುಕೊಂಡು ಬಂದು ಬಹಳ ಸೇವೆ ಮಾಡಿದ್ದರು. ಹಾಗಾಗಿ ಅವರ ಬಿಟ್ಟು 1 ದಿನ ಕಳೆಯುವುದು ಸಾಧ್ಯವೇ ಎಂದು ಕಣ್ಣೀರಾಕುತ್ತಾರೆ ತಕ್ಷಣವೇ ಸಂಕಲ್ಪ ಮಾಡುತ್ತಾರೆ ಒಂದು ತೊಟ್ಟು ನೀರು ಕೂಡ ಸ್ವೀಕಾರ ಮಾಡುವುದಿಲ್ಲ ಈಗಲೇ ಬೃಂದಾವನವಾ ನೋಡಬೇಕು ಎಂದು ತಕ್ಷಣವೇ ಹೊರಟು ಬಿಡುತ್ತಾರೆ ಅಗ ವರ್ಷಕಾಲ ತುಂಬಾ ಮಳೆ ತುಂಗಾಭದ್ರಾ ವಿಪರೀತ ಪ್ರವಾಹ ಹರಿಯುತ್ತಿರುತ್ತದೆ ಮಂತ್ರಾಲಯಕ್ಕೆ ಹೋಗೋಕ್ಕೆ ಯಾವ ವ್ಯವಸ್ಥೆ ಯು ಇಲ್ಲ ಆಗ ತುಂಗಭದ್ರೆಯ ಲ್ಲಿ ಪ್ರಾರ್ಥನೆ ಮಾಡ್ತಾರೆ "ಅಮ್ಮಾ ನಾನು ಈಜಿಕೊಂಡು ಬರುತ್ತೇನೆ ನೀನೇ ನನ್ನ ರಕ್ಷಣೆ ಮಾಡಬೇಕು ಎಂದು ಸ್ತುತಿ ಮಾಡಿ ನೀರಿಗೆ ಹಾರುತ್ತಾರೆ ಅವರಿಗೆ ಈಜು ಬರುತ್ತಿರಲಿಲ್ಲ ಕೈ ಕಾಲು ಬಡಿಯುತ್ತಾರೆ ರಾಘವೇಂದ್ರ ಸ್ವಾಮಿಗಳ ಸ್ತೋತ್ರ ಪಠಿಸುತ್ತಾರೆ ಯಾವುದೋ ಒಂದು ಶಕ್ತಿ ಅವರನ್ನು ದಡ ಸೇರಿಸುತ್ತೆ ಅಳುತ್ತಾ ನನಗ್ಯಾಕೆ ಈಗೈತು ಎಂದು ದುಃಖಿಸುತ್ತಾ ದಡಕ್ಕೆ ಬರ್ತಾರೆ ಅಷ್ಟರಲ್ಲಿ ಪರಿಚಯದರು ಬಂದು ಅವರ ಕಾಲಿಗೆ ನಮಸ್ಕರಿಸಿ ರಾಯರು ನಮ್ಮನ್ನೆಲ್ಲ ಬಿಟ್ಟು ಬೃಂದಾವನ ಸ್ಥರಾದರು ಎಂದು ನೋವಿನಿಂದ ಹೇಳುತ್ತಾರೆ ಇದನ್ನ ಕೇಳಿ ಅಪ್ಪಣ್ಣ ಚಾರ್ಯಾರಿಗೆ ಇನ್ನಷ್ಟು ದುಃಖಬರುತ್ತದೆ ಕೂಗ್ತಾರೆ ರಾಘವೇಂದ್ರ ರಾಘವೇಂದ್ರ ಅಂತ ಸ್ತೋತ್ರ ಹೇಳ್ಕೊಂಡೆ ಹೋಗ್ತಾರೆ ಬೃಂದಾವನದತ್ತಿರ ಬರುತ್ತಾರೆ ನೋಡಿದ ಕೂಡಲೇ ದುಃಖ ಉಮ್ಮಳಿಸಿ ಬರುತ್ತದೆ😭ಇದನ್ನ ಬರೆಯುತ್ತಾ ಇದ್ರೇನೆ ನಮಗೆ ಸಂಕಟ ವಗುತ್ತೆ ಕಣ್ಣೀರು ಬರುತ್ತೆ ಇನ್ನೂ ಅಂತ ದೊಡ್ಡ ಪಂಡಿತರು ಅಪ್ಪಣ್ಣ ಚಾರ್ಯರು ರಾಯರ ಪಕ್ಕ ಕುಳಿತು ಸೇವೆ ಮಾಡಿದವರು ಜೊತೆಯಲ್ಲೇ ಇದ್ದವರು ಅವರಿಗೆ ಹೇಗಾಗಬೇಡ......
ಬೃಂದಾವನವ ನೋಡಿ ದೀರ್ಘ ದಂಡ ನಮಸ್ಕಾರ ಮಾಡುತ್ತಾರೆ ಯಾವ ಸ್ತೋತ್ರ ಹೇಳುತ್ತಿದ್ದಾರೋ "ಪೂರ್ಣಾಭೋದ ಗುರುತೀರ್ಥ......ಇನ್ನೂ ಪೂರ್ತಿ ಆಗಿರುವುದಿಲ್ಲ "ಕೀರ್ತಿಗ್ವೀದಿತ ವಿಭೂತಿರತುಲಾ " ಎಂದು ಸ್ತೋತ್ರ ಹೇಳಲಾಗದೆ ಹಾಗೇ ದುಃಖದಿಂದ ನಿಂತುಕೊಂಡು ನನಗ್ಯಾಕೆ ಇಗೈತು ತಮ್ಮ ದರ್ಶನ ನನಗೆ ಸಿಗಲೀ ಲ್ಲವಲ್ಲ ನನಗೆ ತಮ್ಮನ್ನ ನೋಡೋ ಅಂತ ಯೋಗ್ಯತೆ ನನಗೆ ಪ್ರಾಪ್ತಿ ಅಗಲಿಲ್ಲವಾ ...ರಾಯರಿಗೆ ಬೇಕಾದಶ್ಟು ಸೇವೆ ಮಾಡಿರುವರು ರಾಯರು ಕೂಡ ಇವರಿಗೆ ಉಪದೇಶ ಮಾಡಿರುವರು ಸನ್ಯಾಸಿ ಆಗಬಾರದು ನೀನು ನಿನ್ನ ತಂದೆ ತಾಯಿಯನ್ನು ನೋಡಿಕೊಳ್ಳಬೇಕು ಜೀವನದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ಹೇಳುತ್ತಿದ್ದರು.ಇದೆಲ್ಲ ನೆನಪಿಸಿಕೊಳ್ಳುತ್ತಾರೆ ನನ್ನ ಬಿಟ್ಟೋದರಲ್ಲ ಎಂದು ದುಖಿಸುತ್ತಾರೆ ಈ ಸ್ತೋತ್ರ ಭಕ್ತರಿಗೆ ವಿಶಿಷ್ಟ ವಾದ ರಾಘವೇಂದ್ರ ಸ್ತೋತ್ರ ಇದನ್ನ ಪೂರ್ತಿ ಮಾಡಲಾಗದೆ ಅಳ್ತಾರೆ ಅಗ ಬೃಂದಾವನ ಒಳಗಿಂದ ಧ್ವನಿ ಕೇಳುತ್ತೆ "ಸಾಕ್ಷಿ ಹಯಸ್ಥೋತ್ರಹಿ "ಎಂದು ರಾಯರು ಪೂರ್ಣಮಾಡುತ್ತಾರೆ ಇದಕ್ಕೆ ಸಾಕ್ಷಿ ಯಾರೆಂದರೆ ಹಯಗ್ರೀವ ದೇವರೇ ಸಾಕ್ಷಿ ಎಂದು ರಾಯರ ಧ್ವನಿ ಅಲ್ಲಿದ್ದ ಎಲ್ಲರಿಗೂ ಕೇಳಿಸುತ್ತೇ ಈ ಸಮಯದಲ್ಲಿ ಈ ಕ್ಷಣದಲ್ಲಿ ಹಯಗ್ರೀವ ಮಂತ್ರವನ್ನು ಬೃಂದಾವನದೊಳಗೆ ಜಪಿಸುತ್ತಿರುತ್ತಾರೆ ಅನ್ನೋ ಉಲೇಕವಿದೆ.ನೋಡಿ ಬೃಂದವನಸ್ಥರಾಗಿ 3 ದಿನವಾಗಿದೆ ರಾಯರ ಅದ್ಭುತ ಮಹಿಮೆ ಇದು. ರಾಘವೇಂದ್ರ ಸ್ವಾಮಿಗಳು ನೆಲಮಾಳಿಗೆಯ ಅಂತರ್ಗುಹೆಯಲ್ಲಿ ಕುಳಿತು ಘೋಷಣೆ ಮಾಡಿ ಹೇಳ್ತಾರೆ 700 ವರ್ಷ ಈ ಗುಹೆಯಲ್ಲಿ ತಪಸ್ಸು ಮಾಡ್ತಿನಿ ನನಗಾಗಿ ಯಾವ ಕೀರ್ತಿ ಬೇಡ ,ಮುಕ್ತಿಯು ಬೇಡ ನನಗೆ ಲೌಕಿಕ ಆಸಕ್ತಿ ಇಲ್ಲ ನಾನು ಮಾಡೋ ತಪ್ಪಸ್ಸಿನಿಂದ ಭಗವಂತ ಸುಪ್ರಿತನಾಗಿ ಯಾರು ಆರ್ತರೂ ಬರುತ್ತಾರೋ ರಾಘವೇಂದ್ರ ಅಂತ, ಅವರ ಕಣ್ಣೀರನ್ನು ಭಗವಂತಾ ಒರಿಸಲಿ ಎನ್ನುತ್ತಾರೆ.
ಯಾರಿಗೇ ಪರೋಪಕಾರ ಬುದ್ಧಿ ಇದೆಯೋ ಯಾರು ಸಮಾಜಕ್ಕಾಗಿ ಬದುಕುತ್ತಾರೋ ಅವರನ್ನು ಭಗವಂತ ಪ್ರೀತಿಸುತ್ತಾನೆ . ಅದಕ್ಕೆ ರಾಯರನ್ನು ಕಂಡರೆ ಭಗವಂತನಿಗೆ ಅತೀ ಪ್ರಿಯ.
ಇವತ್ತಿಗೂ ಬಿಚ್ಚಲೆಯಲ್ಲಿ ಪ್ರಥಮ ಬೃಂದಾವನ ಮೂಲ ಅದ ಮೇಲೆ ಇಲ್ಲೇ ಆಗಿರುವುದು .ರಾಯರ ಅನುಗ್ರಹ ಎಲ್ಲಾ ಭಕ್ತರಿಗೂ ಆಗಲೀ

🙏🙏🙏🙏🙏

Shri guru raghavendra swamy

20 Aug, 16:35


*ಐದು ಲಕ್ಷ ಶ್ಲೋಕಗಳನ್ನು ಒಳಗೊಂಡಿರುವ ಮಹಾಭಾರತದ ಸಾರವನ್ನು ಕೇವಲ ಒಂಬತ್ತು ಸಾಲುಗಳಲ್ಲಿ ಅರ್ಥಮಾಡಿಕೊಳ್ಳಿ* .

ನೀವು ಹಿಂದೂ ಆಗಿರಲಿ ಅಥವಾ ಬೇರೆ ಯಾವುದೇ ಧರ್ಮದವರಾಗಿರಲಿ. ನೀವು ಮಹಿಳೆಯಾಗಿರಲಿ ಅಥವಾ ಪುರುಷರಾಗಿರಲಿ, ನೀವು ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ನೀವು ನಿಮ್ಮ ದೇಶದಲ್ಲಿರಲಿ ಅಥವಾ ವಿದೇಶದಲ್ಲಿರಲಿ, ಸಂಕ್ಷಿಪ್ತವಾಗಿ, ನೀವು ಮನುಷ್ಯರಾಗಿದ್ದರೆ, ಕೆಳಗಿನ ಮಹಾಭಾರತದಿಂದ ಅಮೂಲ್ಯವಾದ *"9 ಮುತ್ತುಗಳನ್ನು"* ಓದಿ ಮತ್ತು ಅರ್ಥಮಾಡಿಕೊಳ್ಳಿ:

1. ನಿಮ್ಮ ಮಕ್ಕಳ ವಿವೇಚನಾರಹಿತ ಬೇಡಿಕೆಗಳು ಮತ್ತು ಆಸೆಗಳನ್ನು ನೀವು ಸಮಯಕ್ಕೆ ನಿಯಂತ್ರಿಸದಿದ್ದರೆ, ನೀವು ಜೀವನದಲ್ಲಿ ಅಸಹಾಯಕರಾಗುತ್ತೀರಿ..!
*"ಕೌರವರು"*

2. ನೀವು ಎಷ್ಟೇ ಬಲಶಾಲಿಯಾಗಿದ್ದರೂ, ನೀವು ಅಧರ್ಮವನ್ನು ಬೆಂಬಲಿಸಿದರೆ, ನಿಮ್ಮ ಶಕ್ತಿ, ಆಯುಧಗಳು, ಕೌಶಲ್ಯಗಳು ಮತ್ತು ಆಶೀರ್ವಾದಗಳು ಎಲ್ಲವೂ ನಿಷ್ಪ್ರಯೋಜಕವಾಗುತ್ತವೆ..!
*"ಕರ್ಣ"*

3. ನಿಮ್ಮ ಮಕ್ಕಳು ಮಹತ್ವಾಕಾಂಕ್ಷೆಯಿಂದ ತಮ್ಮ ಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವಂತೆ ಮಾಡಬೇಡಿ ಮತ್ತು ಸಂಪೂರ್ಣ ವಿನಾಶವನ್ನು ಉಂಟುಮಾಡಬೇಡಿ..
*"ಅಶ್ವತ್ಥಾಮ"*

4. ಅಧರ್ಮಿಗಳಿಗೆ ಶರಣಾಗುವಂಥ ಭರವಸೆಗಳನ್ನು ಎಂದಿಗೂ ನೀಡಬೇಡಿ..!
*"ಭೀಷ್ಮ ಪಿತಾಮಹ"*

5. ಸಂಪತ್ತು, ಅಧಿಕಾರ, ಆಡಳಿತ ಮತ್ತು ತಪ್ಪು ಮಾಡುವವರ ಬೆಂಬಲದ ದುರುಪಯೋಗವು ಅಂತಿಮವಾಗಿ ಸಂಪೂರ್ಣ ವಿನಾಶಕ್ಕೆ ಕಾರಣವಾಗುತ್ತದೆ..!
*" ದುರ್ಯೋಧನ"*

6. ಕುರುಡನಿಗೆ ಅಧಿಕಾರವನ್ನು ಎಂದಿಗೂ ಹಸ್ತಾಂತರಿಸಬೇಡಿ, ಅಂದರೆ ಸ್ವಾರ್ಥ, ಸಂಪತ್ತು, ಹೆಮ್ಮೆ, ಜ್ಞಾನ, ಮೋಹ ಅಥವಾ ಕಾಮದಿಂದ ಕುರುಡನಾದವನು, ಅದು ವಿನಾಶಕ್ಕೆ ಕಾರಣವಾಗುತ್ತದೆ ..!
*"ಧೃತರಾಷ್ಟ್ರ"*

7. ಜ್ಞಾನದ ಜೊತೆಯಲ್ಲಿ ಬುದ್ಧಿವಂತಿಕೆ ಇದ್ದರೆ, ನೀವು ಖಂಡಿತವಾಗಿಯೂ ವಿಜಯಶಾಲಿಯಾಗುತ್ತೀರಿ..!
*"ಅರ್ಜುನ"*

8. ಮೋಸವು ನಿಮ್ಮನ್ನು ಎಲ್ಲಾ ಸಮಯದಲ್ಲೂ ಎಲ್ಲಾ ವಿಷಯಗಳಲ್ಲಿ ಯಶಸ್ಸಿನತ್ತ ಕೊಂಡೊಯ್ಯುವುದಿಲ್ಲ..! *"ಶಕುನಿ"*

9. ನೀವು ನೈತಿಕತೆ, ಸದಾಚಾರ ಮತ್ತು ಕರ್ತವ್ಯವನ್ನು ಯಶಸ್ವಿಯಾಗಿ ಎತ್ತಿ ಹಿಡಿದರೆ, ಜಗತ್ತಿನ ಯಾವ ಶಕ್ತಿಯೂ ನಿಮಗೆ ಹಾನಿ ಮಾಡಲಾರದು..!
*ಯುಧಿಷ್ಠಿರ"***

*ಸರ್ವೇ ಜನಾ ಸುಖಿನೋ ಭವಂತು.🙏🙏🙏*

Shri guru raghavendra swamy

20 Aug, 16:33


ಶ್ರೀ ಗುರುಸ್ತುತಿಯನ್ನು ಶ್ರೀಮದಪ್ಪಣಾಚಾರ್ಯರು ರಚಿಸಿದರು, ಗುರುಸ್ತುತಿಯಲ್ಲಿ ಹೇಳಿದುದೆಲ್ಲವೂ ಸತ್ಯವೆಂಬುದಾಗಿ ಶ್ರೀ ಗುರುರಾಜರ ಬೃಂದಾವನದಿಂದ "ಸಾಕ್ಷೀ ಹಯಾಸ್ತೋತ್ರಹಿ" ಎಂಬ ಅನುಗ್ರಹ ವಚನವು ಬಂದಿತು! ಅಂದರೆ ಸ್ತೋತ್ರದಲ್ಲಿ ಹೇಳಿರುವುದೆಲ್ಲವೂ ಸತ್ಯವೆಂತಲೂ ಅದಕ್ಕೆ ನಮ್ಮ ಉಪಾಸ್ಯಮೂರ್ತಿಯಾದ ಶ್ರೀ ಹಯಗ್ರೀವ ದೇವರೇ ಸಾಕ್ಷಿ ಎಂಬುದಾಗಿ ಪ್ರಾಜ್ಞ ಜನರ ಅಭಿಪ್ರಾಯವಾಗಿದೆ!.

ಇತಿಃ

ಶ್ರೀ-ರಾಘವೇಂದ್ರಾರ್ಯ-ಗುರು-ರಾಜ-ಪ್ರಸಾದತಃ |
ಕೃತಂ ಸ್ತೋತ್ರಮಿದಂ ದಿವ್ಯಂ ಶ್ರೀಮದ್ಭಿರ್ಹ್ಯಪ್ಪಣಾಭಿಧೈಃ ೩೨

ಶ್ರೀ ರಾಘವೇಂದ್ರ ಸ್ತೋತ್ರವು ಕೇವಲ ಗುರ್ವನುಗ್ರಹಬಲದಿಂದ, ಶ್ರೀ ಮದಪ್ಪಣಾಚಾರ್ಯರಿಂದ ರಚಿಸಲ್ಪಟ್ಟಿದೆ!

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ೩೩

ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ |
ಶ್ರೀರಾಘವೇಂದ್ರಗುರವೇ ನಮೋಽತ್ಯಂತದಯಾಲವೇ ೩೪

ಇತಿ ಶ್ರೀಮದಪ್ಪಣಾಚಾರ್ಯವಿರಚಿತಂ ಶ್ರೀರಾಘವೇಂದ್ರಸ್ತೋತ್ರಂ ಸಂಪೂರ್ಣಂ

ಪರಮಪೂಜ್ಯ ಗುರುಗಳಾದ ಶ್ರೀ ರಾಘವೇಂದ್ರರು ಸತ್ಯ, ಧರ್ಮಗಳಲ್ಲಿ ರತರು.
ಭಜಿಪ ಜನರ ಪಾಲಿಗೆ ಕಲ್ಪವೃಕ್ಷವಾಗಿಯೂ, ನಮಿಪ ಭಕ್ತರಿಗೆ ಕಾಮಧೇನುವಾಗಿಯು, ಅಭೀಷ್ಟಗಳನ್ನು ಪೂರ್ಣಮಾಡುವರು.

ಕರುಣಾಸಮುದ್ರರಾದ ಶ್ರೀ ರಾಘವೇಂದ್ರ ಗುರುಗಳು , ಅಜ್ಞಾನಾಂದಕಾರವನ್ನು ಕಳೆಯಲು ಪ್ರಕಾಶಮಾನವಾದ ಸೂರ್ಯರಾಗಿರುವರು ವಿಷ್ಣುಭಕ್ತರೆಂಬ ಕಮಲಗಳ ಪಾಲಿಗೆ ಚಂದ್ರಮರಾಗಿರುವರು.

ಶ್ರೀ ಕೃಷ್ಣಾರ್ಪಣಾಮಸ್ತು

ಓಂ ನಮೋಃ ಶ್ರೀ ರಾಘವೇಂದ್ರಾಯ ನಮಃ
ಓಂ ನಮೋಃ ಶ್ರೀ ಮಂತ್ರಾಲಯ ನಿವಾಸಿನೇ ನಮಃ
ಓಂ ನಮೋಃ ಶ್ರೀ ರಾಮಮಾನಸಾಯ ನಮಃ
ಓಂ ನಮೋಃ ಶ್ರೀ ದೇವಕೀನಂದನಾಯ ನಮಃ ..

ಸಂಗ್ರಹ

ಶಿವಾಪ೯ಪಣಮಸ್ತು......

✍️ಸತೀಶ್ ಬಿಲ್ಲವ

Shri guru raghavendra swamy

20 Aug, 16:33


ಸಂಸಾರೇಽಕ್ಷಯ-ಸಾಗರೇ ಪ್ರಕೃತಿತೋಽಗಾಧೇ ಸದಾ ದುಸ್ತರೇ
ಸರ್ವಾವದ್ಯ-ಜಲಗ್ರಹೈರನುಪಮೇ ಕಾಮಾದಿ-ಭಂಗಾಕುಲೇ |
ನಾನಾ-ವಿಭ್ರಮ-ದುರ್ಭ್ರಮೇಽಮಿತ-ಭಯ-ಸ್ತೋಮಾದಿ-ಫೇನೋತ್ಕಟೇ
ದುಃಖೋತ್ಕೃಷ್ಟ-ವಿಷೇ ಸಮುದ್ಧರ ಗುರೋ ಮಾಂ ಮಗ್ನ-ರೂಪಂ ಸದಾ ೨೨

ಶ್ಲೋಕ-22 ಸ್ವಾಭಾವಿಕವಾಗಿ ತಿಳಿಯಲು ಆಗದ ಆಳ, ಅಗಲಗಳಿಂದ ಕೂಡಿದ ಸಮುದ್ರದಂತೆ, ಸಂಸಾರವೆಂಬ ಸಮುದ್ರವು ಜನನ-ಮರಣಗಳೆಂಬ ಆಳ-ಅಗಲಗಳಿಂದ ಕೂಡಿದೆ. ಈ ಸಾಗರದಲ್ಲಿ ಸರ್ವರೀತಿಯ ಪಾಪಗಳೆಂಬ ಕ್ರೂರ ಜಲಚರ ಪ್ರಾಣಿಗಳು, ಕಾಮ, ಕ್ರೋಧಾದಿಗಳೆಂಬ ಅತ್ಯಂತ ರಭಸವಾದ ಅಲೆಗಳು, ನಾನಾ ವಿಧವಾದ ಸಂಸಾರಿಕವಾದ ವಿಲಾಸ ಹಾಗೂ ಭ್ರಾಂತಿಗಳೆಂಬ ಭಯಂಕರವಾದ ಸುಳಿಗಳು ಮತ್ತು ಎಣಿಸಲು ಆಗದ ನೊರೆಗಳು ಇದ್ದು ಮಹಾದುಃಖಗಳೆಂಬ ವಿಷದ ನೀರಿರುವುದು. ಇಂತಹ ಸಂಸಾರಸಾಗರದಲ್ಲಿ ಸರ್ವದಾ ಮುಳುಗಿಯೇ ಇರುವ ನನ್ನನ್ನು ಕರುಣಾಮೂರ್ತಿಗಳಾದ ಹೇ ರಾಘವೇಂದ್ರಗುರುಗಳೇ ಉದ್ಧರಿಸಿ.|

ರಾಘವೇಂದ್ರ-ಗುರು-ಸ್ತೋತ್ರಂ ಯಃ ಪಠೇದ್ ಭಕ್ತಿ-ಪೂರ್ವಕಮ್ |
ತಸ್ಯ ಕುಷ್ಠಾದಿ-ರೋಗಾಣಾಂ ನಿವೃತ್ತಿಸ್ತ್ವರಯಾ ಭವೇದ್ ೨೩

ಶ್ಲೋಕ--23
ತಾತ್ಪರ್ಯ--ಯಾರು ಗುರುರಾಘವೇಂದ್ರರ ಉತ್ತಮವಾದ ಮಹಾತ್ಮ್ಯವನ್ನು ವರ್ಣಿಸುವ ಈ ಸ್ತೋತ್ರವನ್ನು ಭಕ್ತಿಪೂರ್ವಕವಾಗಿ ಪಾರಾಯಣವೇ ಮೊದಲಾದವುಗಳನ್ನು ನಡೆಸುವರೋ, ಅಂತವರ ಕುಷ್ಠವೇ ಅತೀ ಶೀಘ್ರದಲ್ಲಿ ಪರಿಹೃತವಾಗುವುದು.

ಅಂಧೋಽಪಿ ದಿವ್ಯ-ದೃಷ್ಟಿಃ ಸ್ಯಾದೇಡ-ಮೂಕೋಽಪಿ ವಾಕ್-ಪತಿಃ |
ಪೂರ್ಣಾಯುಃ ಪೂರ್ಣ-ಸಂಪತ್ತಿಃ ಸ್ತೋತ್ರಸ್ಯಾಸ್ಯ ಜಪಾದ್ ಭವೇತ್ ೨೪

ಶ್ಲೋಕ--24
ತಾತ್ಪರ್ಯ--ಅದ್ಭುತವಾದ ಈ ಸ್ತೋತ್ರವನ್ನು ಜಪಿಸುವುದರಿಂದ ಜನ್ಮತಃ ಕುರುಡನಾದವನು ಉತ್ತಮದೃಷ್ಠಿಯನ್ನು ಪಡೆಯುವನು,ಹುಟ್ಟಿದಂದಿನಿಂದ ಕಿವುಡನೂ ಮೂಕನೂ ಆಗಿರುವ ವ್ಯಕ್ತಿಯು ಇದರ ಮಹಿಮೆಯಿಂದ ಚತುರ ಮಾತುಗಾರನಾಗುವನು, ಆರೋಗ್ಯದಿಂದ ಕೂಡಿದ ಪೂರ್ಣಾಯುಷ್ಯವೂ ಸಕಲವ ಸಂಪತ್ತು ಸಮೃದ್ಧಿಯೂ ಈ ಸ್ತೋತ್ರದ ಪಾರಾಯಣಗಳಿಂದ ಆಗುವುದು.

ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿ-ಮಂತ್ರಿತಮ್ |
ತಸ್ಯ ಕುಕ್ಷಿ-ಗತಾ ದೋಷಾಃ ಸರ್ವೇ ನಶ್ಯಂತಿ ತತ್-ಕ್ಷಣಾತ್ ೨೫

ಶ್ಲೋಕ--25
ತಾತ್ಪರ್ಯ-- ಯಾರು , ಉತ್ತಮವಾದ ಈ ಗುರು ಸ್ತೋತ್ರದಿಂದಅಭಿಮಂತ್ರಿತವಾದ ಜಲವನ್ನು ಭಕ್ತಿಯಿಂದ ಕುಡಿಯುವರೋ ಅಂತವರ ಉದರದಲ್ಲಿರುವ ಸರ್ವದೋಷಗಳೂ ತತ್ಕ್ಷಣದಲ್ಲಿಯೇ ನಾಶವನ್ನು ಹೊಂದುವುವು.

ಯದ್-ವೃಂದಾವನಮಾಸಾದ್ಯ ಪಂಗುಃ ಖಂಜೋಽಪಿ ವಾ ಜನಃ |
ಸ್ತೋತ್ರೇಣಾನೇನ ಯಃ ಕುರ್ಯಾತ್ ಪ್ರದಕ್ಷಿಣ-ನಮಸ್ಕೃತೀ |
ಸ ಜಂಘಾಲೋ ಭವೇದೇವ ಗುರುರಾಜ-ಪ್ರಸಾದತಃ ೨೬

ಶ್ಲೋಕ --26
ತಾತ್ಪರ್ಯ--ತನ್ನ ಎರಡು ಕಾಲುಗಳನ್ನು ಕಳೆದುಕೊಂಡು ಹೇಳದವ ಎನಿಸಿರುವ ಮತ್ತು ಕಾಲಿಲ್ಲದ ಕುಂಟನೂ ಆದ ವ್ಯಕ್ತಿಯು ಯಾವ ರಾಯರ ಈ ದಿವ್ಯಸ್ತೋತ್ರವನ್ನು ಪಠಿಸುತ್ತ ಗುರುಗಳ ವೃಂದಾವನದ ಸಮೀಪ ಬಂದವರಾಗಿ ಪ್ರದಕ್ಷಿಣೆ ನಮಸ್ಕಾರಾದಿಗಳನ್ನು ಮಾಡುವರೋ ಅಂತವರು ಗುರುರಾಜರ ಪ್ರಸಾದದಿಂದ ಬಹುಬೇಗನೆ ನಡೆದಾಡುವ ಸಾಮರ್ಥ್ಯವನ್ನು ಪಡೆಯುವರು.

ಸೋಮ-ಸೂರ್ಯಪರಾಗೇ ಚ ಪುಷ್ಯಾರ್ಕಾದಿ-ಸಮಾಗಮೇ |
ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ |
ಭೂತ-ಪ್ರೇತ-ಪಿಶಾಚಾದಿ-ಪೀಡಾ ತಸ್ಯ ನ ಜಾಯತೇ ೨೭

ಶ್ಲೋಕ --27
ತಾತ್ಪರ್ಯ--ಯಾರು ಚಂದ್ರ ಸೂರ್ಯರ ಗ್ರಹಣಕಾಲಗಳಲ್ಲಿ, ಪುಷ್ಯನಕ್ಷತ್ರದೊಡನೆ ರವಿವಾರ ಸೇರಿದಾಗ, ವ್ಯತೀಪಾತ, ವೈಧೃತಿ , ಪದ್ಯಕ, ಅರ್ಧೋದಯ, ಮಹೋದಯ ಯೋಗಗಳಲ್ಲಿ ,ಪೂರ್ಣಿಮಾ, ಅಮಾವಾಸ್ಯೆ ಮೊದಲಾದ ಪರ್ವಕಾಲಗಳಲ್ಲಿ , ಜನ್ಮನಕ್ಷತ್ರವೇ ಮೊದಲಾದ ದಿನಗಳಲ್ಲಿ ಈ ಗುರುಸ್ತೋತ್ರವನ್ನು ನೂರಾಎಂಟುಬಾರಿ ಪಠಿಸುವರೋ ಅಂತವರಿಗೆ ಎಂದಿಗೂ ಭೂತ, ಪ್ರೇತ ಪಿಶಾಚಿಗಳೇ ಮುಂತಾದ ಯಾವ ದುಷ್ಟಪೀಡೆಗಳೂ ಇರುವುದಿಲ್ಲ.

ಏತತ್ ಸ್ತೋತ್ರಂ ಸಮುಚ್ಚಾರ್ಯ ಗುರು-ವೃಂದಾವನಾಂತಿಕೇ |
ದೀಪ-ಸಂಯೋಜನಾಜ್ಜ್ಞಾನಂ ಪುತ್ರ-ಲಾಭೋ ಭವೇದ್ ದ್ರುವಮ್ ೨೮

ಶ್ಲೋಕ--28
ತಾತ್ಪರ್ಯ--ಶ್ರೀ ರಾಘವೇಂದ್ರ ಸ್ತೋತ್ರವನ್ನು ಪಠಿಸುತ್ತಾ ಗುರುರಾಜರ ಬೃಂದಾವನ ಸನ್ನಿಧಿಯಲ್ಲಿ ದೀಪವನ್ನು ಹಚ್ಚಿಟ್ಟವರಿಗೆ ,ಶಾಸ್ತ್ರದ ಯತಾರ್ಥಜ್ಞಾನವು ಲಭಿಸುವುದು, ಪುತ್ರ ಸಂತಾನವಾಗುವುದು,ಈ ಬಗ್ಗೆ ಸಂಶಯಬೇಡ!ತಪ್ಪದೇ ಫಲವು ದೊರೆಯುವುದು.

ಪರ-ವಾದಿ-ಜಯೋ ದಿವ್ಯ-ಜ್ಞಾನ-ಭಕ್ತ್ಯಾದಿ-ವರ್ಧನಮ್ |
ಸರ್ವಾಭೀಷ್ಟಾರ್ಥ-ಸಿದ್ಧಿಃ ಸ್ಯಾನ್ನಾತ್ರ ಕಾರ್ಯಾ ವಿಚಾರಣಾ ೨೯

ಶ್ಲೋಕ--29
ತಾತ್ಪರ್ಯ--ಶ್ರೀ ಗುರುಸ್ತೋತ್ರವನ್ನು ಸದಾಪಾರಾಯಣ ಮಾಡುವುದರಿಂದ ವಾದದಲ್ಲಿ ಜಯವು ಲಭಿಸುವುದು, ಜ್ಞಾನಾವೃದ್ಧಿಯಾಗುವುದು, ಪರಮಾತ್ಮನಲ್ಲಿ ಭಕ್ತಿ ಹೆಚ್ಚುವುದು, ಸಕಲ ಅಭೀಷ್ಟಗಳು ಪೂರ್ಣವಾಗುವುವು. ಈ ವಿಷಯದಲ್ಲಿ ಸಂದೇಹವಿಲ್ಲ.

ರಾಜ-ಚೋರ-ಮಹಾವ್ಯಾಘ್ರ-ಸರ್ಪ-ನಕ್ರಾದಿ-ಪೀಡನಮ್ |
ನ ಜಾಯತೇಽಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ ೩೦

ಶ್ಲೋಕ--30
ತಾತ್ಪರ್ಯ-- ಶ್ರೀ ಗುರುಸ್ತೋತ್ರವನ್ನು ಭಕ್ತಿ ಪೂರ್ವಕವಾಗಿ ಪಠನೆ ಮಾಡುವುದರಿಂದ ರಾಜದಂಡನೆ ತಪ್ಪುವುದು, ಚೋರಭಯ ನಿವಾರಣೆಯಾಗುವುದು, ಸರ್ಪನಕ್ರಾದಿ ಕ್ರೂರಪ್ರಾಣಿಗಳ ಬಾಧೆಗಳು ತೊಲಗುವುವು. ಈ ವಿಷಯದಲ್ಲಿ ಸಂಶಯವೇ ಬೇಡ!

ಯೋ ಭಕ್ತ್ಯಾ ಗುರು-ರಾಘವೇಂದ್ರ-ಚರಣ-ದ್ವಂದ್ವ ಸ್ಮರನ್ ಯಃ ಪಠೇತ್
ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ ತಸ್ಯಾಶುಭಂ ಕಿಂಚನ |
ಕಿಂತ್ವಿಷ್ಟಾರ್ಥ-ಸಮೃದ್ಧಿರೇವ ಕಮಲಾ-ನಾಥ-ಪ್ರಸಾದೋದಯಾತ್
ಕೀರ್ತಿರ್ದಿಗ್-ವಿದಿತಾ ವಿಭೂತಿರತುಲಾ “ಸಾಕ್ಷೀ ಹಯಾಸ್ಯೂಽತ್ರ ಹಿ” ೩೧

ಶ್ಲೋಕ--31
ತಾತ್ಪರ್ಯ--ಯಾರು ಶ್ರೀ ರಾಘವೇಂದ್ರ ಗುರುಸಾರ್ವಬೌಮನ ಚರಣ ದ್ವಯೆವನ್ನು ಭಕಿಪೂರ್ವಕ ಸ್ಮರಿಸಿ , ಶ್ರೀ ಗುರುಸ್ತೋತ್ರವನ್ನು ಭಕ್ತಿಯಿಂದ ಸದಾ ಪಠಣ ಮಾಡುವರೋ ಅವರಿಗೆ, ದುಃಖಗಳು ದೂರಾಗುವುವು, ಶ್ರೀ ಗುರುರಾಜರು ಸಂತುಷ್ಟರಾಗುವರು, ಶ್ರೀ ಗುರುರಾಜoತರ್ಗತ ಶ್ರೀ ಲಕ್ಶ್ಮೀಪತಿಯ ಪ್ರೀತನಾಗುವನು ಅದರಿಂದಾಗಿ ಅವರ ಕೀರ್ತಿಯ ದಶದಿಶೆಗಳ್ಳಲ್ಲಿ ಹಬ್ಬುವುದು, ಅವರಿಗೆ ಅತುಲೈಶ್ವರ್ಯವು ಪ್ರಾಪ್ತಿಯಾಗುವುದು.

Shri guru raghavendra swamy

20 Aug, 16:33


ಶ್ಲೋಕ--11
ತಾತ್ಪರ್ಯ-- ಅಂತಹ ಯತಿರಾಜರಾದ ಗುರುಗಳು ನಮಗೆ ಭಗವಂತನ ಅರಿವು ಹರಿಗುರುಗಳಲ್ಲಿ ಭಕುತಿ, ಒಳ್ಳೆಯಸಂತಾನ, ಆಯುಷ್ಯ, ಆಯಸ್ಸು,ಕಾಂತಿ ಮುಂತಾದವುಗಳನ್ನು ಕರುಣಿಸಿ, ಜೀವನದಲ್ಲಿ ಬರುವ ಎಲ್ಲ ವಿಧವಾದ ಭಯಗಳನ್ನು ಪರಿಹರಿಸಿ ನಮ್ಮನ್ನು ರಕ್ಷಿಸಲಿ.

ಪ್ರತಿವಾದಿ ಜಯಸ್ವಾಂತ ಭೇದಚಿಹ್ನಾದರೋ ಗುರುಃ |
ಸರ್ವವಿದ್ಯಾ ಪ್ರವೀಣಾನ್ಯೋ ರಾಘವೇಂದ್ರಾನ್ನವಿದ್ಯತೇ ೧೨

ಶ್ಲೋಕ --12
ತಾತ್ಪರ್ಯ--ತತ್ವವಾದಕ್ಕೆ ವಿರುದ್ಧವಾಗಿ ವಾದಿಸುವ ವಾದಮಲ್ಲರನ್ನು ಪರಾಜಿತರನ್ನಾಗಿ ಮಾಡಿ,ಅವರ ಮನವನ್ನು ಭೇದಿಸುವಲ್ಲಿ ಆದರವುಳ್ಳವರು,ಶಿಷ್ಯರ ಮನದ ಅಂದಕಾರವನ್ನು ನೀಗಿಸುವರಾಗಿ ನಿಜವಾದ ಗುರುಗಳೆನಿಸಿ, ಸಕಲ ಶಾಸ್ತ್ರಗಳಲ್ಲೂ ಅನುಪಮವಾದ ಪ್ರಾವೀಣ್ಯವನ್ನು ಹೊಂದಿರುವರು ಇವರು. ಇಂತಹ ಗುರುರಾಜರನ್ನುಳಿದು ಜ್ಞಾನಿಗಳಾದ ಬೇರಾವ ಗುರುಗಳೂ[ಉತ್ತಮರನ್ನು ಬಿಟ್ಟು] ಜಗತ್ತಿನಲ್ಲಿ ಇಲ್ಲ.

ಅಪರೋಕ್ಷೀಕೃತ ಶ್ರೀಶಃ ಸಮುಪೇಕ್ಷಿತಭಾವಜಃ |
ಅಪೇಕ್ಷಿತ ಪ್ರದಾತಾನ್ಯೋ ರಾಘವೇಂದ್ರಾನ್ನ ವಿದ್ಯತೇ ೧೩

ಶ್ಲೋಕ --13
ತಾತ್ಪರ್ಯ--ತಮ್ಮ ಅಸದೃಶವಾದ ಉಪಾಸನೆಯಿಂದ ಸಿರಿಯರಸನನ್ನು ಪ್ರತ್ಯಕ್ಷೀಕರಿಸಿಕೊಂಡವರು, ಮನದ ಭಾವನೆಗಳೆನಿಸಿರುವ ಕಾಮ, ಕ್ರೋಧಾದಿಗಳನ್ನು ಉಪೇಕ್ಷಿಸಿದವರು, ಅಂತೆಯೇ ಭಕ್ತರ ಮನಸ್ಸಿನ ಕಾಮನೆಗಳನ್ನು ಪೂರೈಸುವವರೂ ಆದ ಶ್ರೀರಾಘವೇಂದ್ರರನ್ನು ಉಳಿದು ಬಯಸಿದ್ದನ್ನು ಕೊಡುವವರು[ಉತ್ತಮರನ್ನು ಬಿಟ್ಟು] ಲೋಕದಲ್ಲಿ ಅನ್ಯರಾರು ಇಲ್ಲ.

ದಯಾದಾಕ್ಷಿಣ್ಯ ವೈರಾಗ್ಯ ವಾಕ್ಪಾಟವ ಮುಖಾಂಕಿತಃ |
ಶಾಪಾನುಗ್ರಹಶಕ್ತೋಽನ್ಯೋ ರಾಘವೇಂದ್ರಾನ್ನ ವಿದ್ಯತೇ ೧೪

ಶ್ಲೋಕ --14
ತಾತ್ಪರ್ಯ-- ಆರ್ತರಾಗಿ ಬಂದ ಭಕ್ತರ ದುಃಖಗಳನ್ನು ಪರಿಹರಿಸುವ ದಯೆಯುಳ್ಳ, ಸುಜನರ ಮನದಿಂಗಿತವನ್ನು ಅರಿತು ಅದರಂತೆ ನಡೆಯಿಸುವ, ವಿಷಯಗಳಲ್ಲಿ ವಿರಕ್ತರಾದ, ಅತ್ಯುತ್ತಮವಾದ ಮಾತುಗಾರಿಕೆಯೇ ಮೊದಲಾದ ಸುಗುಣಗಳಿಂದ ಕೊಡಿದವರಾಗಿ, ದುಷ್ಟಜನರನ್ನು ಶಿಕ್ಷಿಸುವಲ್ಲಿ ಹಾಗೂ ಸುಜನರನ್ನು ರಕ್ಷಿಸುವಲ್ಲಿ ಸಮರ್ಥರಾದವರು ಶ್ರೀ ರಾಘವೇಂದ್ರರನ್ನು ಹೊರತು【ಉತ್ತಮರನ್ನು ಬಿಟ್ಟು】 ಮತ್ತಾರು ಇಲ್ಲ.

ಅಜ್ಞಾನ ವಿಸ್ಮೃತಿ ಭ್ರಾಂತಿ ಸಂಶಯಾಪಸ್ಮೃತಿಕ್ಷಯಾಃ |
ತಂದ್ರಾಕಂಪವಚಃ ಕೌಂಠ್ಯಮುಖಾಯೇ ಚೇಂದ್ರಿಯೋದ್ಭವಾಃ |
ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ ಪ್ರಸಾದತಃ ೧೫

ಶ್ಲೋಕ --15
ತಾತ್ಪರ್ಯ--ಉತ್ತಮ ಜೀವನಿಗೆ ಕರ್ಮಾನುಸಾರ ಒದಗಬಹುದಾದ ಜ್ಞಾನದ ಅಭಾವರೂಪವಾದ ಅಜ್ಞಾನ ಮರೆವು,ತಪ್ಪಾದ ತಿಳುವಳಿಕೆ, ಡೋಲಾಯಮಾನ ಜ್ಞಾನವಾದ ಸಂಶಯ, ಅಪಸ್ಮಾರ,ಭಯಂಕರವಾದ ಕ್ಷಯರೋಗ,ಆಕಳಿಕೆ ಮತ್ತು ತೂಕಡಿಕೆ, ದೇಹದ ನಡುಗುವಿಕೆ, ತೊದಲುಮಾತು ಇವೇ ಮೊದಲಾದ ಇಂದ್ರಿಯಗಳಿಂದ ಉಂಟಾಗುವ ಆ ಎಲ್ಲಾ ದೋಷಗಳೂ ಗುರುರಾಘವೇಂದ್ರರ ಪ್ರಸಾದದಿಂದಾಗಿ ಸಮೂಲ ನಾಶಹೊಂದುವವು.

ಓಂ ಶ್ರೀರಾಘವೇಂದ್ರಾಯ ನಮಃ
ಇತ್ಯಷ್ಟಾಕ್ಷರಮಂತ್ರತಃ |
ಜಪಿತಾದ್ಭಾವಿತಾನ್ನಿತ್ಯಂ ಇಷ್ಟಾರ್ಥಾಃ
ಸ್ಯುರ್ನಸಂಶಯಃ ೧೬

ಶ್ಲೋಕ--16
ತಾತ್ಪರ್ಯ--ಶ್ರೀ ರಾಘವೇಂದ್ರ ನಮಃ ಎಂಬ ಅಷ್ಟಾಕ್ಷರ ಮಂತ್ರವನ್ನು ಸರ್ವದಾ ಜಪಿಸುವುದರಿಂದ ಮತ್ತು ಈ ಮಂತ್ರದ ಮೂಲಕ ಗುರುಗಳ ಅಂತರ್ಯಾಮಿಯಾದ ಶ್ರೀಹರಿಯನ್ನು ಧ್ಯಾನಿಸುವುದರಿಂದ ಸದುದ್ದೇಶದಿಂದ ಕೂಡಿದ ಸಕಲ ಇಷ್ಟಾರ್ಥಗಳೂ ಸಿದ್ಧಿಸುವುದರಲ್ಲಿ ಯಾವ ಸಂಶಯವೂ ಇಲ್ಲ.

ಹಂತು ನಃ ಕಾಯಜಾನ್ ದೋಷಾನಾತ್ಮಾತ್ಮೀಯ ಸಮುದ್ಭವಾನ್ |
ಸರ್ವಾನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮವಿತ್ ೧೭

ಶ್ಲೋಕ--17
ತಾತ್ಪರ್ಯ-- ನಮ್ಮ ದೇಹದಿಂದ ಉಂಟಾಗುವ ದೂಷಗಳನ್ನೂ , ಮಾನಸಿಕವಾಗಿ ನಾವು ಮಾಡುವ ಅಪಚಾರವನ್ನೂ ಎಣಿಸದೆ ಆ ಎಲ್ಲ ಪಾಪಗಳನ್ನೂ ಗುರುರಾಜರು ಕಳೆಯಲಿ ಮತ್ತು ಭಗವಂತನನ್ನು ಸರ್ವದಾ ಕಾಣುವ ಅವರು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನಿತ್ತು ನಮ್ಮನ್ನು ಸಲಹಲಿ.

ಇತಿ ಕಾಲ-ತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ |
ಇಹಾಮುತ್ರಾಪ್ತ-ಸರ್ವೇಷ್ಟೋ ಮೋದತೇ ನಾತ್ರ ಸಂಶಯಃ ೧೮

ಶ್ಲೋಕ--18
ತಾತ್ಪರ್ಯ-- ಈ ರೀತಿ ಹಿಂದೆ ತಿಳಿಸಿದಂತೆ, ಯಾರು ಪ್ರತಿದಿನವೂ ಮೂರುಹೊತ್ತು ಗುರುಗಳನ್ನು ಈ ಸ್ತೋತ್ರಪರಾಯಣದ ಮೂಲಕ ಪ್ರಾರ್ಥಿಸುವರೋ ಅಂತಹವರು ಇಹಪರಗಳಲ್ಲಿ ಸಕಲ ಇಷ್ಟಗಳನ್ನು ಹೊಂದಿ ಆನಂದದಿಂದ ಇರುವರು. ಇದರಲ್ಲಿ ಯಾವ ಸಂಶಯವೂ ಇಲ್ಲ.

ಅಗಮ್ಯ-ಮಹಿಮಾ-ಲೋಕೇ ರಾಘವೇಂದ್ರೋ ಮಹಾ-ಯಶಾಃ |
ಶ್ರೀ-ಮಧ್ವ-ಮತ-ದುಗ್ಧಾಬ್ಧಿ-ಚಂದ್ರೋಽವತು ಸದಾಽನಘಃ ೧೯

ಶ್ಲೋಕ--19
ತಾತ್ಪರ್ಯ--ಈ ಜಗತ್ತಿನಲ್ಲಿ ಯಾರಿಂದಲೂ ಸಂಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲದ ಮಹಿಮೆಯುಳ್ಳವರು, ಅಸದೃಶವಾದ ಕೀರ್ತಿಸಂಪನ್ನರು, ಇವೆಲ್ಲಕ್ಕೂ ಕಲಶಪ್ರಾಯವಾಗಿ ಶ್ರೀಮದಾನಂದತೀರ್ಥರ ಸಿದ್ಧಾಂತವೆಂಬ ಪಾಲ್ಗಡಲಿಗೆ ಹುಣ್ಣಿಮೆಯ ಚಂದ್ರನಂತೆ ಪೊಳೆವ , ದೂಷವಿದೂರರಾದ ಶ್ರೀ ರಾಘವೇಂದ್ರರರು ಸರ್ವದಾ ನಮ್ಮನ್ನು ರಕ್ಷಿಸಲಿ.

ಸರ್ವ-ಯಾತ್ರಾ-ಫಲಾವಾಪ್ತೈ ಯಥಾ-ಶಕ್ತಿ ಪ್ರ-ದಕ್ಷಿಣಮ್ |
ಕರೋಮಿ ತವ ಸಿದ್ಧಸ್ಯ ವೃಂದಾವನ-ಗತಂ-ಜಲಮ್ |
ಶಿರಸಾ ಧಾರಯಾಮ್ಯದ್ಯ ಸರ್ವ-ತೀರ್ಥ-ಫಲಾಪ್ತಯೇ ೨೦

ಶ್ಲೋಕ --20
ತಾತ್ಪರ್ಯ--ಭರತಭೂಮಿಯ ದೇವನಿರ್ಮಿತಗಳಾದ ಸಮಸ್ತ ಪುಣ್ಯಕ್ಷೇತ್ರಗಳ ಸಂಚಾರದಿಂದ ಒದಗುವ ಪುಣ್ಯದ ಪ್ರಾಪ್ತಿಗಾಗಿ ನಿಮ್ಮ ಪ್ರದಕ್ಷಿಣೆಯನ್ನು ಶಕ್ತಿಗನುಸಾರವಾಗಿ ಮಾಡುತ್ತೇನೆ ಮತ್ತು ಎಲ್ಲಾ ಪಾವನ ತೀರ್ಥಗಳ ದರ್ಶನ,ಸ್ಪರ್ಶನ, ಸ್ನಾನ, ಪಾನಾದಿಗಳಿಂದ ಉಂಟಾಗುವ ಅತಿಶಯ ಪುಣ್ಯಫಲವನ್ನು ಬಯಸಿ ನಿಮ್ಮಯ ವೃಂದಾವನಕ್ಕೆ ಅಭಿಷೇಕ ಮಾಡಿದ ಜಲವನ್ನು ಭಕ್ತಿ ಶ್ರದ್ಧೆಗಳಿಂದ ತಲೆಯಲ್ಲಿ ಧರಿಸುತ್ತೇನೆ.

ಸರ್ವಾಭೀಷ್ಟಾರ್ಥ-ಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ |
ತವ ಸಂಕೀರ್ತನಂ ವೇದ-ಶಾಸ್ತ್ರಾರ್ಥ-ಜ್ಞಾನ-ಸಿದ್ಧಯೇ ೨೧

ಶ್ಲೋಕ--21
ತಾತ್ಪರ್ಯ--ಬೇಡಿದವರ ಬಗೆಬಗೆಯ ಕಾಮನೆಗಳನ್ನು ಪೂರೈಸುವ ನಿಮಗೆ, ನನ್ನ ಎಲ್ಲ ತೆರನಾದ ಬಯಕೆಗಳನ್ನು ಹೊಂದುವುದಕ್ಕಾಗಿ ಭಕ್ತಿಯಿಂದ ನಮಿಸುತ್ತೇನೆ ಮತ್ತು ವೇದ, ಇತಿಹಾಸ, ಪುರಾಣಗಳೇ ಮೊದಲಾದ ಸಚ್ಚಾಸ್ತ್ರಗಳ ಯಥಾರ್ಥವಾದ ತಿಳುವಳಿಕೆಗಾಗಿ ಉತ್ತಮವಾದ ನಿಮ್ಮ ಚರಿತೆಯನ್ನು ಸರ್ವದಾ ಪಾಡುತ್ತಿರುತ್ತೇನೆ.

Shri guru raghavendra swamy

20 Aug, 16:33


ಶ್ರೀರಾಘವೇಂದ್ರಸ್ಸಕಲಪ್ರದಾತಾ ಸ್ವಪಾದಕಂಜದ್ವಯ ಭಕ್ತಿಮದ್ಭ್ಯಃ |
ಅಘಾದ್ರಿಸಂಭೇದನ ದೃಷ್ಟಿವಜ್ರಃ ಕ್ಷಮಾಸುರೇಂದ್ರೋಽವತು ಮಾಂ ಸದಾಯಂ

ತಾತ್ಪರ್ಯ-- ತಮ್ಮ ಪದಕಮಲಗಳಲ್ಲಿ ಭಕ್ತಿಮಾಡುವ ಸುಜನರಿಗೆ ಅವರವರ ಯೋಗ್ಯತೆಗನುಸಾರವಾಗಿ ಅವರ ಸಾಧನೆಗೆ ಪೂರಕವಾಗುವಂತೆ ಸಕಲ ಮನೋರಥಗಳನ್ನು ಕೊಡುವವರು, ತಿಳಿಯದೇ ಭಕ್ತರು ಮಾಡಿದ ಪರ್ವತಪ್ರಾಯವಾದ ಪಾಪಗಳನ್ನೂ ಅಂತೆಯೇ ಆಯಾ ಪಾಪಗಳಿಗೆ ಫಲರೂಪವಾಗಿ ಪ್ರಾಪ್ತವಾದ ಸಹಿಸಲಸಾಧ್ಯವಾದ ದುಃಖಗಳನ್ನೂ ಪರಿಹರಿಸುವ ವಜ್ರಾಯುಧಕ್ಕೆ ಸಮನಾದ ಕೃಪಾದೃಷ್ಠಿಯನ್ನು ಹೊಂದಿದವವರಾಗಿ ಎಲ್ಲಾ ಸುಜನರಿಗೂ ಗುರುಗಳೆನಿಸಿರುವ ಶ್ರೀ ರಾಘವೇಂದ್ರರು ನಮ್ಮನ್ನು ಸದಾಕಾಲವೂ ಎಡಬಿಡದೇ ರಕ್ಷಿಸಲಿ.

ಶ್ರೀ ರಾಘವೇಂದ್ರೋ ಹರಿಪಾದಕಂಜ ನೀಷೇವಣಾಲ್ಲಬ್ಧ ಸಮಸ್ತ ಸಂಪತ್ |
ದೇವಸ್ವಭಾವೋ ದಿವಿಜದ್ರುಮೋಽಯ ಮಿಷ್ಟಪ್ರದೋಮೇ ಸತತಂ ಸ ಭೂಯಾತ್

ಶ್ಲೋಕ 4
ತಾತ್ಪರ್ಯ:-- ನಿರಂತರವಾಗಿ ತಾವು ನಡೆಸಿದ ಭಗವಂತನ ಉಪಾಸನೆಯ ಫಲವಾಗಿ ಪರಿಶುದ್ಧವಾದ ಜ್ಞಾನವನ್ನು ಅಂತೆಯೇ ಸಕಲಸಂಪತ್ತುಗಳನ್ನೂ ಪಡೆದವರು ಶ್ರೀ ರಾಘವೇಂದ್ರರು ಭಗವಂತನಲ್ಲಿ ದೇವತೆಗಳಂತೆ ಭಕ್ತಿಮಾಡುವ ಸ್ವಭಾವವುಳ್ಳವರು ಹಾಗೂ ಶಾಂತಿ, ಪ್ರಸನ್ನತೆ ಮೊದಲಾದ ದೇವತಾ ಸ್ವಭಾವದಿಂದ ಕಂಗೊಳಿಸುವವರು, ದೇವತರುವಾದ ಕಲ್ಪವೃಕ್ಷದಂತೆ ಸೇವಿಸುವವರಿಗೆ ಸೇವೆಗೆ ಅನುರೂಪವಾದ ಫಲಗಳನ್ನು ಕೊಡುವ ಗುರುರಾಜರು ಎಲ್ಲರ ಬಯಕೆಗಳನ್ನು ಈಡೇರಿಸಲಿ.

ಭವ್ಯ-ಸ್ವರೂಪೋ ಭವ-ದುಃಖ-ತೂಲ-
ಸಂಘಾಗ್ನಿ-ಚರ್ಯಃ ಸುಖ-ಧೈರ್ಯ-ಶಾಲೀ |
ಸಮಸ್ತ-ದುಷ್ಟ-ಗ್ರಹ-ನಿಗ್ರಹೇಶೋ
ದುರತ್ಯಯೋಪಪ್ಲವ-ಸಿಂಧು-ಸೇತುಃ

ಶ್ಲೋಕ --5
ತಾತ್ಪರ್ಯ-- ನಯನಗಳಿಗೆ ಆಹ್ಲಾದವನ್ನುಂಟುಮಾಡುವ ಮನೋಹರವಾದ ಆಕೃತಿಯುಳ್ಳವರು ರಾಯರು. ಸಂಸಾರದಲ್ಲಿ ಜೀವರು ಅನುಭವಿಸುವ ಮಹಾದುಃಖಗಳೆಂಬ ಹತ್ತಿಗೆ ಅಗ್ನಿಪ್ರಾಯರು.ಸರ್ವದಾ ಭಗವಂತನ ಧ್ಯಾನದಿಂದ ಉಂಟಾದ ಸುಖ ಹಾಗೂ ಧೈರ್ಯಗಳಿಂದ ಕೂಡಿದವರಾಗಿ ಭಕ್ತರಿಗೆ ಒದಗುವ ಭೂತ ಪಿಶಾಚಿಗಳೇ ಮೊದಲಾದ ದುಷ್ಟಗ್ರಹಗಳ ಪೀಡೆಯನ್ನು ಪರಿಹರಿಸುವಲ್ಲಿ ಸಮರ್ಥರು .ದಾಟಲು ಆಸಾಧ್ಯವೆನಿಸಿರುವ ಸಂಸಾರಸಾಗರವನ್ನು ದಾಟುವಲ್ಲಿ ಸೇತುವೆಯಂತೆ ಇರುವ ಇಂತಹ ಗುರುಗಳು ನಮ್ಮನ್ನು ಕಾಪಾಡಲಿ.

ನಿರಸ್ತದೋಷೋ ನಿರವದ್ಯವೇಷಃ
ಪ್ರತ್ಯರ್ಥಿಮೂಕತ್ತ್ವನಿದಾನಭಾಷಃ
ವಿದ್ವತ್ಪರಿಜ್ಞೇಯ ಮಹಾವಿಶೇಷೋ
ವಾಗ್ವೈಖರೀನಿರ್ಜಿತಭವ್ಯಶೇಷಃ

ಶ್ಲೋಕ --6
ತಾತ್ಪರ್ಯ-- ಕಾಮ ಕ್ರೋಧಾದಿಗಳೇ ಮೊದಲಾದ ದೋಷಗಳಿಂದ ದೂರಾದವರು ,ಯಾವುದೇ ವಿಧವಾದ ದುರ್ಲಕ್ಷಣಗಳಿಂದ ಕೂಡಿದವರಾಗದೇ ಲಕ್ಷಣೋಪೇತವಾದ ರೂಪಿನವರು ರಾಯರು.ಪರವಾದಿಗಳನ್ನೂ ಮೂಕರನ್ನಾಗಿಸುವಂತ ಮಾತುಗಾರರು , ಕೇವಲ ವಿದ್ವಜನರಿಂದಲೇ ತಿಳಿಯಲು ಯೋಗ್ಯವಾದ ಗುಣವಿಶೇಷವುಳ್ಳವರು. ತಮ್ಮ ವಾಕ್ಚಾತುರ್ಯದಿಂದ ಶೇಷ ಎಂಬ ವಾದಮಲ್ಲನನ್ನು ಗೆಲ್ಲಿದ ಗುರುರಾಜರು ನಮಗೆ ಜಯವಿತ್ತು ಸಲಹಲಿ.

ಸಂತಾನ ಸಂಪತ್ಪರಿಶುದ್ಧ ಭಕ್ತಿ ವಿಜ್ಞಾನವಾಗ್ದೇ ಹಸುಪಾಟವಾದೀನ್ |
ದತ್ವಾಶರೀರೋಽತ್ಥ ಸಮಸ್ತದೋಷಾನ್ ಹತ್ವಾ ಸ ನೋಽವ್ಯಾದ್ಗುರು ರಾಘವೇಂದ್ರಃ

ಶ್ಲೋಕ 7
ತಾತ್ಪರ್ಯ--ಭಜಕರಿಗೆ, ಒಳ್ಳೆಯ ಸಂತಾನ, ಮದವೇರಿಸದ ಸಂಪತ್ತು, ಭಗವಂತನಲ್ಲಿ ದೃಢವಾದ ಮತ್ತು ನಿರ್ಮಲವಾದ ಭಕ್ತಿ, ಮೋಕ್ಷಪಯೋಗಿಯಾದ ತಿಳುವಳಿಕೆ , ಮಾತಿನಲ್ಲಿ ಚಾತುರ್ಯ ,ದೇಹದಲ್ಲಿ ನಿರೋಗಿತ್ವ ಮುಂತಾದುವನ್ನು ಅನುಗ್ರಹಿಸುವ ಗುರುರಾಜರು ದೇಹ ಹಾಗೂ ಇಂದ್ರೀಯಗಳಲ್ಲಿ ಇರುವ ಸಮಸ್ತ ದೋಷಗಳನ್ನು ಪರಿಹರಿಸಿ ನಿರಂತರವಾಗಿ ನಮ್ಮನ್ನು ರಕ್ಷಿಸಲಿ.

ಯತ್ಪಾದೋದಕಸಂಚಯಃ ಸುರನದೀ ಮುಖ್ಯಾಪಗಾಸಾಧಿತಾಽ
ಸಂಖ್ಯಾನುತ್ತಮ ಪುಣ್ಯಸಂಘ ವಿಲಸತ್ಪ್ರಖ್ಯಾತ ಪುಣ್ಯಾವಹಃ |
ದುಸ್ತಾಪತ್ರಯ ನಾಶನೋಭುವಿ ಮಹಾವಂದ್ಯಾ ಸುಪುತ್ರಪ್ರದೋ
ವ್ಯಂಗಸ್ವಂಗ ಸಮೃದ್ಧಿದೋ ಗ್ರಹಮಹಾಪಾಪಾಪಹಸ್ತಂಶ್ರಯೇ

ಶ್ಲೋಕ -8
ತಾತ್ಪರ್ಯ--ಯಾವ ಪಾದೋದಕ ಸೇವನೆಯು, ದೇವನದಿಯಾದ ಗಂಗೆಯಲ್ಲಿ ಶಾಸ್ತ್ರೋಕ್ತವಾಗಿ ಮಿಂದ ಮಾತ್ರದಿ ಲಭಿಸುವ ಅಗಣಿತವಾದ ಪುಣ್ಯರಾಶಿಯಂತೆ ಪುಣ್ಯವನ್ನು ಕೊಡುವ ಸಾಮರ್ಥ್ಯವುಳ್ಳದಾಗಿದೆಯೋ, ಯಾವ ಪಾದೋದಕವು ಭಜಕರ ತಾಪತ್ರಯವನ್ನು ದೂರ ಗೊಳಿಸುವುದೋ, ಲೋಕದಲ್ಲಿ ಬಂಜೆ ಎನಿಸಿರುವ ಸ್ತ್ರೀಗೂ ಸಂತಾನವನ್ನು ಕೊಡುವಲ್ಲಿ, ವಿಕಲಾಂಗರಿಗೆ ಉತ್ತಮವಾದ ಅಂಗಸಂಪತ್ತನೀಯುವಲ್ಲಿ, ದುಷ್ಟಗ್ರಹಗಳನ್ನು, ರೋಗಾದಿಗಳನ್ನು ಹಾಗೂ ಮಹಾಪಾಪಗಳನ್ನು ಪರಿಹರಿಸುವಲ್ಲಿ ಯಾವ ಪಾದೋದಕವು ಸಮರ್ಥವಾಗಿದೆಯೋ ಅಂತಹ ಪಾದೋದಕ ಮಹಿಮೆಯುಳ್ಳ ಗುರುರಾಜರ ಪದಕಮಲಗಳನ್ನು ಸರ್ವದಾ ಸೇವಿಸುತ್ತೇನೆ.

ಯತ್ಪಾದಕಂಜರಜಸಾ ಪರಿಭೂಷಿತಾಂಗಾ
ಯತ್ಪಾದಪದ್ಮ ಮಧುಪಾಯಿತ ಮಾನಸಾ ಯೇ |
ಯತ್ಪಾದಪದ್ಮ ಪರಿಕೀರ್ತನ ಜೀರ್ಣವಾಚಃ
ತದ್ದರ್ಶನಂ ದುರಿತಕಾನನ ದಾವಭೂತಂ

ಶ್ಲೋಕ --9
ತಾತ್ಪರ್ಯ-- ಯಾರು ಗುರುರಾಯರ ಪದಕಮಲಗಳ ಧೂಳಿಯಿಂದ ತಮ್ಮೆಲ್ಲಾ ಅಂಗಾಂಗಗಳನ್ನು ಅಲಂಕರಿಸಿಕೊಂಡಿರುವರೋ, ಯಾರು ಗುರುಗಳ ಪದಕಂಜದಲ್ಲಿಯೇ ದುಂಬಿಯಂತೆ ಸರ್ವದಾ ಆಸಕ್ತರಾಗಿರುವರೋ, ಹರಿಪ್ರಸಾದದಿಂದ ಲಭಿಸಿದ ಗುರುರಾಜರ ಉತ್ತಮವಾದ ಮಹತ್ಯದ ಕೀರ್ತನೆಯಿಂದ ತಮ್ಮ ಮಾತುಗಳನ್ನು ಯಾರು ಪಕ್ವಗೊಳಿಸಿಕೊಂಡಿರುವರೋ ಅಂತಹ ಭಕ್ತರ ಸಂದರ್ಶನವೇ ಅರಣ್ಯಕ್ಕೆ ಕಾಳ್ಗಿಚ್ಚಿನಂತೆ, ಪಾಪಗಳೆಂಬ ಮರಗಳನ್ನು ಭಸ್ಮೀಕರಿಸಬಲ್ಲದು. ಅಂದಮೇಲೆ ಗುರುಗಳ ದರ್ಶನ, ಸೇವನ ಮುಂತಾದವುಗಳಿಂದ ಉಂಟಾಗುವ ಫಲಗಳ ಕುರಿತು ಹೇಳುವುದೇನಿದೆ.?

ಸರ್ವತಂತ್ರ ಸ್ವತಂತ್ರೋಸೌ ಶ್ರೀಮಧ್ವಮತವರ್ಧನಃ |
ವಿಜಯೀಂದ್ರ ಕರಾಬ್ಜೋತ್ಥ ಸುಧೀಂದ್ರ ವರಪುತ್ರಕಃ ೧೦

ಶ್ಲೋಕ -- 10
ತಾತ್ಪರ್ಯ-- ಸಕಲ ಶಾಸ್ತ್ರಗಳಲ್ಲಿಯೂ ತಲಸ್ಪರ್ಶಿಯಾದ ಪಾಂಡಿತ್ಯವನ್ನು ಹೊಂದಿದವರಾದ ಗುರುಗಳು, ಆಚಾರ್ಯಮಧ್ವರ ತತ್ವವಾದವನ್ನು ಅಭಿವೃದ್ಧಿಪಡಿಸಿದಂಥವರು. ಶ್ರೀ ವಿಜಯೀoದ್ರತೀರ್ಥರ ಕರಕಮಲ ಸಂಜಾತರಾದ ಶ್ರೀಸುಧೀಂದ್ರತೀರ್ಥರ ವರಕುಮಾರರಾಗಿ ಶ್ರೀರಾಘವೇಂದ್ರತೀರ್ಥ ರೆಂದು ಪ್ರಸಿದ್ಧರಾಗಿರುವರು.

ಶ್ರೀ ರಾಘವೇಂದ್ರೋ ಯತಿರಾಟ್ ಗುರುರ್ಮೇ ಸ್ಯಾದ್ಭಯಾಪಃ |
ಜ್ಞಾನಭಕ್ತಿ ಸುಪುತ್ರಾಯುರ್ಯಶಃ ಶ್ರೀ ಪುಣ್ಯವರ್ಧನಃ ೧೧

Shri guru raghavendra swamy

20 Aug, 16:33


*ದಿವ್ಯಾಂಗರಿಗೆ ನಡೆಯುವ ಶಕ್ತಿ ಬರುತ್ತದೆ:*

ಯದ್-ವೃಂದಾವನಮಾಸಾದ್ಯ ಪಂಗುಃ ಖಂಜೋಽಪಿ ವಾ ಜನಃ |
ಸ್ತೋತ್ರೇಣಾನೇನ ಯಃ ಕುರ್ಯಾತ್ ಪ್ರದಕ್ಷಿಣ-ನಮಸ್ಕೃತೀ |
ಸ ಜಂಘಾಲೋ ಭವೇದೇವ ಗುರುರಾಜ-ಪ್ರಸಾದತಃ ೨೬

*ಭೂತ, ಪ್ರೇತ, ಪಿಶಾಚಾದಿ ಪೀಡಾ ಪರಿಹಾರ:*

ಸೋಮ-ಸೂರ್ಯಪರಾಗೇ ಚ ಪುಷ್ಯಾರ್ಕಾದಿ-ಸಮಾಗಮೇ |
ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ |
ಭೂತ-ಪ್ರೇತ-ಪಿಶಾಚಾದಿ-ಪೀಡಾ ತಸ್ಯ ನ ಜಾಯತೇ ೨೭

*ದೀಪ ಬೆಳಗುವುದರಿಂದ ತತ್ವಜ್ಞಾನ ,ಪುತ್ರ ಸಂತತಿ

ಏತತ್ ಸ್ತೋತ್ರಂ ಸಮುಚ್ಚಾರ್ಯ ಗುರು-ವೃಂದಾವನಾಂತಿಕೇ |
ದೀಪ-ಸಂಯೋಜನಾಜ್ಜ್ಞಾನಂ ಪುತ್ರ-ಲಾಭೋ ಭವೇದ್ ದ್ರುವಮ್ ೨೮

*ಸರ್ವಾಭಿಷ್ಟಗಳ ಸಿದ್ದಿ:*

ಪರ-ವಾದಿ-ಜಯೋ ದಿವ್ಯ-ಜ್ಞಾನ-ಭಕ್ತ್ಯಾದಿ-ವರ್ಧನಮ್ |
ಸರ್ವಾಭೀಷ್ಟಾರ್ಥ-ಸಿದ್ಧಿಃ ಸ್ಯಾನ್ನಾತ್ರ ಕಾರ್ಯಾ ವಿಚಾರಣಾ ೨೯

*ಕಳ್ಳ ಕಾಕರ ಭಯ ಪರಿಹಾರಕ್ಕಾಗಿ *

ರಾಜ-ಚೋರ-ಮಹಾವ್ಯಾಘ್ರ-ಸರ್ಪ-ನಕ್ರಾದಿ-ಪೀಡನಮ್ |
ನ ಜಾಯತೇಽಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ ೩೦

*ಗುರುಸ್ತೋತ್ರದಿಂದ ಲಭಿಸುವ ಫಲಗಳಿಗೆ ಹಯಗ್ರೀವರೇ ಸಾಕ್ಷಿ:*

ಯೋ ಭಕ್ತ್ಯಾ ಗುರು-ರಾಘವೇಂದ್ರ-ಚರಣ-ದ್ವಂದ್ವ ಸ್ಮರನ್ ಯಃ ಪಠೇತ್
ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ ತಸ್ಯಾಶುಭಂ ಕಿಂಚನ |
ಕಿಂತ್ವಿಷ್ಟಾರ್ಥ-ಸಮೃದ್ಧಿರೇವ ಕಮಲಾ-ನಾಥ-ಪ್ರಸಾದೋದಯಾತ್
ಕೀರ್ತಿರ್ದಿಗ್-ವಿದಿತಾ ವಿಭೂತಿರತುಲಾ “ಸಾಕ್ಷೀ ಹಯಾಸ್ಯೂಽತ್ರ ಹಿ” ೩೧

*ಇದು ಗುರುರಾಜರ ಅನುಗ್ರಹದಿಂದ ಶ್ರೀ ಅಪ್ಪಣ್ಣಾಚಾರ್ಯರಿಂದ ರಚಿಸಲ್ಪಟ್ಟಿದೆ:*

ಇತಿ ಶ್ರೀ-ರಾಘವೇಂದ್ರಾರ್ಯ-ಗುರು-ರಾಜ-ಪ್ರಸಾದತಃ |
ಕೃತಂ ಸ್ತೋತ್ರಮಿದಂ ದಿವ್ಯಂ ಶ್ರೀಮದ್ಭಿರ್ಹ್ಯಪ್ಪಣಾಭಿಧೈಃ ೩೨

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ೩೩

ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ |
ಶ್ರೀರಾಘವೇಂದ್ರಗುರವೇ ನಮೋಽತ್ಯಂತದಯಾಲವೇ ೩೪

* ಇತಿ ಶ್ರೀಮದಪ್ಪಣಾಚಾರ್ಯವಿರಚಿತಂ ಶ್ರೀರಾಘವೇಂದ್ರಸ್ತೋತ್ರಮ್ ಸಂಪೂರ್ಣಮ್ *

ಸಂಪೂರ್ಣ ಅಥ೯ಸಹಿತ

ಶ್ರೀ ರಾಘವೇಂದ್ರ ಗುರು ಸ್ತೋತ್ರ.
ಸ್ತೋತ್ರ ಸಾಹಿತ್ಯದಲ್ಲಿ ಅತ್ಯಂತ ಪ್ರಸಿದ್ಧವಾದ ಸ್ತೋತ್ರವೆಂದರೆ
ಅದು ಶ್ರೀ ರಾಯರ ಸ್ತೋತ್ರ.

ಇದರ ರಚನೆಯ ಹಿನ್ನೆಲೆ ತಿಳಿಸುವ ಸಣ್ಣ ಪ್ರಯತ್ನ.
ಹಾಗೂ ಅರ್ಥ ಸಹಿತ ಕನ್ನಡದಲ್ಲಿ.

ಶ್ರೀ ಮಂತ್ರಾಲಯ ಮಹಾ ಪ್ರಭುಗಳ ಶಿಷ್ಯರಾದ ಶ್ರೀ ಬಿಚ್ಚಾಲಿ ಅಪ್ಪಣ್ಣ ಆಚಾರ್ಯರು ಇದನ್ನು ರಚನೆಯನ್ನು ಮಾಡಿದ್ದು.
ಶ್ರೀ ರಾಯರು ವೃಂದಾವನ ಪ್ರವೇಶ ಸಮಯದಲ್ಲಿ ಅವರು ಅಲ್ಲಿ ಇರುವುದಿಲ್ಲ. ಅನೀರಿಕ್ಷಿತವಾಗಿ ತಿಳಿದು ಬಂದ ವಾರ್ತೆ ಇಂದ ಆಘಾತಗೊಂಡ ಶ್ರೀ ಅಪ್ಪಣ್ಣ ಆಚಾರ್ಯರು ತತ್‌ಕ್ಷಣವೇ ಮಂಚಾಲೆಗೆ ಧಾವಿಸುತ್ತಾರೆ.
*ಶ್ರೀ ರಾಯರ ರೂಪ ವನ್ನು ಮನದಲ್ಲಿ ಚಿಂತಿಸುತ್ತಾ ತದೇಕಚಿತ್ತರಾಗಿ ಮಂಚಾಲೆ ಕಡೆ ಧಾವಿಸುತ್ತಿರುವಾಗ
ಶ್ರೀ ಪೂರ್ಣಭೋದ ಎಂದು ಪ್ರಾರಂಭವಾದ ಸ್ತೋತ್ರ ಮಂಚಾಲೆಗೆ ಬಂದಾಗ
ಯೋ ಭಕ್ತ್ಯಾ ಗುರು ರಾಘವೇಂದ್ರ.....
ವಿಭೂತಿರತುಲಾ.. ಎಂಬ ಶ್ಲೋಕದವರೆಗೆ ಬಂದಿತ್ತಂತೆ.
ಗುರುಗಳ ಭವ್ಯವಾದ ವೃಂದಾವನ ವನ್ನು ನೋಡಿ ಅವರ ಹೃದಯ ಮತ್ತು ಕಣ್ಣು ತುಂಬಿ ಅವರ ಮಾತು ನಿಲ್ಲುತ್ತದೆ.
ಆದರೆ ಆ ಸ್ತೋತ್ರ ಅಲ್ಲಿಗೆ ಅಪೂರ್ಣ ವಾಗಲಿಲ್ಲ.
ತಮ್ಮ ಶಿಷ್ಯನ ವಾಣಿಗೆ ಶ್ರೀ ಮಂತ್ರಾಲಯ ಮಹಾಪ್ರಭುಗಳು ತಮ್ಮ ವಾಣಿಯನ್ನು ಜೋಡಿಸಿ
"ಸಾಕ್ಷೀ ಹಯಾಸ್ಯೋತ್ರಹಿ" ಎಂದು ಹೇಳುತ್ತಾರೆ.
ಬೃಂದಾವನ ದಿಂದ ರಾಯರ ಧ್ವನಿ ಬಂದಿದ್ದು ಎಲ್ಲರಿಗೂ ಗೋಚರ ಮತ್ತು ಶ್ರವಣವಾಗಿದೆ.
ಶ್ರೀ ಗುರುರಾಜರಿಂದ ಮುದ್ರೆ ಬಿದ್ದ ಸ್ತೋತ್ರ ವೆಂದು ಅಂದಿನಿಂದ ಇಂದಿನವರೆಗೂ ಮತ್ತು ಈ ಕ್ಷಣದವರೆಗೆ ಸಹ ಅಬಾಲ ವೃದ್ದರಾದಿ ಎಲ್ಲಾ ರಾಯರ ಭಕ್ತರು ಪಠಣೆ ಮಾಡುವುದು ರೂಢಿಯಲ್ಲಿದೆ.
ಶ್ರೀ ಅಪ್ಪಣ್ಣ ಆಚಾರ್ಯರು ಈ ಸ್ತೋತ್ರವನ್ನು ಮುಗಿಸಿದಾಗ ಶ್ರೀ ಗುರುರಾಜರು ವೃಂದಾವನ ಒಳಗಿದ್ದು ಶ್ರೀ ಹರಿಯ ಇನ್ನೊಂದು ರೂಪವಾದ ಶ್ರೀ ಹಯಗ್ರೀವ ದೇವರ ಸ್ತೋತ್ರವನ್ನು ಮಾಡುತ್ತಾ ಇದ್ದರಂತೆ. ಆದ್ದರಿಂದ ಕೊನೆಯಲ್ಲಿ ಹಯಗ್ರೀವನೇ ಸಾಕ್ಷಿ ಎಂದು ಹೇಳಿದ್ದಾರೆ.
ಈ ಸ್ತೋತ್ರ ಮಹಿಮೆ.

ಇದನ್ನು ಭಕ್ತಿ ಶ್ರದ್ಧೆ ಮತ್ತು ವಿಶ್ವಾಸ ದಿಂದ ಪಠಣೆ ಮಾಡಿದವರಿಗೆ ಶ್ರೀ ಹರಿಯ ಕರುಣೆ ಎಂಬ ಪ್ರಸಾದ ಸಿಗುತ್ತದೆ ಮತ್ತು ಅವರ ಇಷ್ಟಾರ್ಥ ಸಿದ್ದಿಯಾಗುವುದು ಎಂಬುವದು ಬರಿ ಶ್ರೀ ಅಪ್ಪಣ್ಣ ಆಚಾರ್ಯರು ಮಾತಲ್ಲ. ನನಗು ಸಹ ಸಮ್ಮತ ಎನ್ನುವದು ಶ್ರೀ ಹಯಗ್ರೀವ ದೇವರು ರಾಯರ ಅಂತರಂಗ ದಲ್ಲಿದ್ದು ನುಡಿದಿದ್ದಾರೆ.
ಇದನ್ನು ಅರಿತ ಶ್ರೀ ರಾಯರು "ಸಾಕ್ಷೀ ಹಯಾಸ್ಯೋತ್ರಹಿ" ಎಂದು ವೃಂದಾವನ ಒಳಗಿದ್ದುಕೊಂಡು ಘೋಷಿಸಿದ್ದಾರೆಂದು ಇದರ ಹಿನ್ನೆಲೆ ಆಗಿದೆ.

ಶ್ರೀ ಮದಪ್ಪಣಾಚಾರ್ಯವಿರಚಿತಂ
ಶ್ರೀ ರಾಘವೇಂದ್ರ ಸ್ತೋತ್ರಂ

ಶ್ರೀ ಪೂರ್ಣಬೋಧ ಗುರುತೀರ್ಥ ಪಯೋಬ್ಧಿಪಾರಾ
ಕಾಮಾರಿಮಾಕ್ಷ ವಿಷಮಾಕ್ಷ ಶಿರಸ್ಪೃಶಂತೀ |
ಪೂರ್ವೋತ್ತರಾಽಮಿತ ತರಂಗ ಚರತ್ಸುಹಂಸಾ
ದೇವಾಲಿ ಸೇವಿತ ಪರಾಂಘ್ರಿಪಯೋಜಲಗ್ನಾ

ಆನಂದ ಲೋಕಗಳನ್ನು ಕರುಣಿಸುವ ಆನಂದತೀರ್ಥರ ಶಾಸ್ತ್ರವೆಂಬ ಕ್ಷೀರಸಾಗರವೇ ಪರಿಧಿಯಾಗಿ ಉಳ್ಳ, ಕಾಮಕ್ರೋಧಾದಿಗಳಿಗೆ ಶತ್ರುವೆನಿಸಿರುವ ನಿಜವಾದ ತಿಳುವಳಿಕೆಎಂಬ ಒಳಗಣ್ಣುಳ್ಳ ಜ್ಞಾನಿಗಳಿಂದ ತಲೆಯಲ್ಲಿ ಧರಿಸಲ್ಪಡುವ, ಪೂರ್ವಪಕ್ಷ ಮತ್ತು ಸಿದ್ಧಾಂತಗಳನ್ನು ಅರಿತ ಪರಮಹಂಸರಿಂದಲೂ ಸೇವಿಸಲ್ಪಡುವ, ಚತುರ್ಮುಖನೇ ಮೊದಲಾದ ದೇವತಾವೃಂದದಿಂದ ಸೇವಿತನಾದ ಶ್ರೀಹರಿಯ ಪದಕಮಲಗಳಲ್ಲಿ ಅನುರಕ್ತವಾದ, ಕುರ್ವಾದಿಗಳ ಗರ್ವವನ್ನಡಿರಿಸುವ.

ಜೀವೇಶ ಭೇದ ಗುಣಪೂರ್ತಿ ಜಗತ್ಸುಸತ್ವ
ನೀಚೋಚ್ಚಭಾವ ಮುಖನಕ್ರ ಗಣೈಸ್ಸಮೇತಾ |
ದುರ್ವಾದ್ಯಜಾಪತಿಗಿಲೈರ್ಗುರು ರಾಘವೇಂದ್ರ
ವಾಗ್ದೇವತಾಸರಿದಮುಂ ವಿಮಲೀಕರೋತು

ಜೀವ ಜೀವರ ಭೇದ ಭಗವಂತನ ಗುಣಪೂರ್ಣತೆ, ಜಗತ್ತಿನ ಪಾರಮಾರ್ಥಿಕ ಸತ್ಯತೆ, ಜೀವ, ಈಶ, ಹಾಗೂ ಜಡಗಳಲ್ಲಿರುವ ಭೇದಪಂಚಕ, ಮತ್ತು ಅವರಲ್ಲಿರುವ ತಾರತಮ್ಯಭಾವವೇ ಮೊದಲಾದ ತತ್ವಗಳೆಂಬ ಮೊಸಳೆಗಳಿಂದ ಕೂಡಿದ, ದೇವಗಂಗೆಯಂತೆ ಪರಮಪವಿತ್ರವಾದ, ಗುರುರಾಘವೇಂದ್ರರ ವಾಗ್ಗಂಗಾ ರೂಪದಲ್ಲಿರುವ ಅವರ ಗ್ರಂಥಗಳು ಆದರಿಸುವ ಭಕ್ತವರ್ಗವನ್ನು ಪರಿಶುದ್ಧರನ್ನಾಗಿಸಲಿ.

Shri guru raghavendra swamy

20 Aug, 16:33


🌹ಶ್ರೀ ಗುರುಭ್ಯೋಃ ನಮಃ🌹

🚩ॐ ಆಧ್ಯಾತ್ಮ ವಿಚಾರ ॐ🚩

*ಶ್ರೀ ರಾಘವೇಂದ್ರ ಗುರುಸ್ತೋತ್ರದ ಪಠಣೆಯ ಫಲ ಸಂಪೂರ್ಣ ಕನ್ನಡದಲ್ಲಿ ಅಥ೯ ಸಹಿತ *

ಶ್ರೀ ರಾಘವೇಂದ್ರ ಸ್ತೋತ್ರ

✍️🎙️ (ಅಪ್ಪಣಾಚಾರ್ಯ ವಿರಚಿತ)

*ವಾಕ್ಸಿದ್ದಿ ಗಾಗಿ ರಾಯರ ಸ್ತೊತ್ರದ ಪಠಣೆ;*

ಶ್ರೀಪೂರ್ಣಬೋಧ-ಗುರು-ತೀರ್ಥ-ಪಯೋಽಬ್ಧಿ-ಪಾರಾ
ಕಾಮಾರಿ-ಮಾಽಕ್ಷ-ವಿಷಮಾಕ್ಷ-ಶಿರಃ ಸ್ಪೃಶಂತೀ |
ಪೂರ್ವೋತ್ತರಾಮಿತ-ತರಂಗ-ಚರತ್-ಸು-ಹಂಸಾ
ದೇವಾಲಿ-ಸೇವಿತ-ಪರಾಂಘ್ರಿ-ಪಯೋಜ-ಲಗ್ನಾ

*ದುರ್ವಾದಿ ನಿಗ್ರಹ ಕ್ಕಾಗಿ ರಾಯರ ಸ್ತೋತ್ರದ ಪಠಣೆ

ಜೀವೇಶ-ಭೇದ-ಗುಣ-ಪೂರ್ತಿ-ಜಗತ್-ಸು-ಸತ್ತ್ವ-
ನೀಚೋಚ್ಚ-ಭಾವ-ಮುಖ-ನಕ್ರ-ಗಣೈಃ ಸಮೇತಾ |
ದುರ್ವಾದ್ಯಜಾ-ಪತಿ-ಗಿಲೈರ್ಗುರು-ರಾಘವೇಂದ್ರ-
ವಾಗ್-ದೇವತಾ-ಸರಿದಮುಂ ವಿಮಲೀಕರೋತು

*ಪಾಪ ಪರಿಹಾರಕ್ಕಾಗಿ ಪ್ರಾರ್ಥನೆ

ಶ್ರೀ-ರಾಘವೇಂದ್ರಃ ಸಕಲ-ಪ್ರದಾತಾ
ಸ್ವ-ಪಾದ-ಕಂಜ-ದ್ವಯ-ಭಕ್ತಿಮದ್ಭ್ಯಃ |
ಅಘಾದ್ರಿ-ಸಂಭೇದನ-ದೃಷ್ಟಿ-ವಜ್ರಃ
ಕ್ಷಮಾ-ಸುರೇಂದ್ರೋಽವತು ಮಾಂ ಸದಾಽಯಮ್

*ಇಷ್ಟಸಿದ್ದಿಗಾಗಿ ಪ್ರಾರ್ಥನೆ:*

ಶ್ರೀ-ರಾಘವೇಂದ್ರೋ ಹರಿ-ಪಾದ-ಕಂಜ-
ನಿಷೇವಣಾಲ್ಲಬ್ಧ-ಸಮಸ್ತ-ಸಂಪತ್ |
ದೇವ-ಸ್ವಭಾವೋ ದಿವಿಜ-ದ್ರುಮೋಽಯ-
ಮಿಷ್ಟಪ್ರದೋ ಮೇ ಸತತಂ ಸ ಭೂಯಾತ್

*ದು:ಖ ನಿವಾರಣೆಗಾಗಿ ಪ್ರಾರ್ಥನೆ:*

ಭವ್ಯ-ಸ್ವರೂಪೋ ಭವ-ದುಃಖ-ತೂಲ-
ಸಂಘಾಗ್ನಿ-ಚರ್ಯಃ ಸುಖ-ಧೈರ್ಯ-ಶಾಲೀ |
ಸಮಸ್ತ-ದುಷ್ಟ-ಗ್ರಹ-ನಿಗ್ರಹೇಶೋ
ದುರತ್ಯಯೋಪಪ್ಲವ-ಸಿಂಧು-ಸೇತುಃ

*ನಮ್ಮ ಶತ್ರುಗಳ ವಾಕ್ ಬಂಧನ:*

ನಿರಸ್ತ-ದೋಷೋ ನಿರವದ್ಯ-ವೇಷಃ
ಪ್ರತ್ಯರ್ಥಿ-ಮೂಕತ್ವ-ನಿದಾನ-ಭಾಷಃ |
ವಿದ್ವತ್-ಪರಿಜ್ಞೇಯ-ಮಹಾ-ವಿಶೇಷೋ
ವಾಗ್-ವೈಖರೀ-ನಿರ್ಜಿತ-ಭವ್ಯ-ಶೇಷಃ

*ಸಕಲ ರೋಗಗಳ ಪರಿಹಾರ:*

ಸಂತಾನ-ಸಂಪತ್-ಪರಿಶುದ್ಧ-ಭಕ್ತಿ-
ವಿಜ್ಞಾನ-ವಾಗ್-ದೇಹ-ಸು-ಪಾಟವಾದೀನ್ |
ದತ್ವಾ ಶರೀರೋತ್ಥ-ಸಮಸ್ತ-ದೋಷಾನ್
ಹತ್ವಾ ಸ ನೋಽವ್ಯಾದ್ ಗುರು-ರಾಘವೇಂದ್ರಃ

*ಪುತ್ರ ಪ್ರಾಪ್ತಿ ಹಾಗೂತಾಪತ್ರಯ ಪರಿಹಾರ:*

ಯತ್-ಪಾದೋದಕ-ಸಂಚಯಃ ಸುರ-ನದಿ-ಮುಖ್ಯಾಪಗಾಽಽಸಾದಿತಾ-
ಸಂಖ್ಯಾನುತ್ತಮ-ಪುಣ್ಯ-ಸಂಘ-ವಿಲಸತ್-ಪ್ರಖ್ಯಾತ-ಪುಣ್ಯಾವಹಃ |
ದುಸ್ತಾಪತ್ರಯ-ನಾಶನೋ ಭುವಿ ಮಹಾ-ವಂಧ್ಯಾ-ಸು-ಪುತ್ರ-ಪ್ರದೋ
ವ್ಯ್ಂಗ-ಸ್ವಂಗ-ಸಮೃದ್ಧಿ-ದೋ ಗ್ರಹ-ಮಹಾಪಾಪಾಪಹಸ್ತಂ ಶ್ರಯೇ

*ರಾಯರ ಭಕ್ತರ ದರ್ಶನ ದಿಂದ ದುರಿತ/ಪಾಪ ನಿವಾರಣೆ:*

ಯತ-ಪಾದ-ಕಂಜ-ರಜಸಾ ಪರಿಭೂಷಿತಾಂಗಾ
ಯತ್-ಪಾದ-ಪದ್ಮ-ಮಧುಪಾಯಿತ-ಮಾನಸಾ ಯೇ |
ಯತ-ಪಾದ-ಪದ್ಮ-ಪರಿಕೀರ್ತನ-ಜೀರ್ಣ-ವಾಚಃ
ತದ್-ದರ್ಶನಂ ದುರಿತ-ಕಾನನ-ದಾವ-ಭೂತಮ್

*ಸರ್ವ ಶಾಸ್ತ್ರಗಳ ಸಿದ್ದಿ:*

ಸರ್ವ-ತಂತ್ರ-ಸ್ವತಂತ್ರೋಽಸೌ ಶ್ರೀ-ಮಧ್ವ-ಮತ-ವರ್ಧನಃ |
ವಿಜಯೀಂದ್ರ-ಕರಾಬ್ಜೋತ್ಥ-ಸುಧೀಂದ್ರ-ವರ-ಪುತ್ರಕಃ ೧೦

*ಸಂಪತ್ತು ಹಾಗೂ ಆಯುಷ್ಯ ಅಭಿವೃದ್ಧಿ:*

ಶ್ರೀರಾಘವೇಂದ್ರೋ ಯತಿ-ರಾಡ್ ಗುರುರ್ಮೇ ಸ್ಯಾದ್ ಭಯಾಪಹಃ |
ಜ್ಞಾನ-ಭಕ್ತಿ-ಸು-ಪುತ್ರಾಯುರ್ಯಶಃ-ಶ್ರೀ-ಪುಣ್ಯ-ವರ್ಧನಃ ೧೧

*ಪ್ರತಿವಾದಿಗಳ ಮೇಲೆ ಜಯ ಸಿದ್ದಿ:*

ಪ್ರತಿ-ವಾದಿ-ಜಯ-ಸ್ವಾಂತ-ಭೇದ-ಚಿಹ್ನಾದರೋ ಗುರುಃ |
ಸರ್ವ-ವಿದ್ಯಾ-ಪ್ರವೀಣೋಽನ್ಯೋ ರಾಘವೇಂದ್ರಾನ್ನ ವಿದ್ಯತೇ ೧೨

*ಅಪರೋಕ್ಷ ಜ್ಞಾನ ಸಿದ್ದಿ:*

ಅಪರೋಕ್ಷೀಕೃತ-ಶ್ರೀಶಃ ಸಮುಪೇಕ್ಷಿತ-ಭಾವಜಃ |
ಅಪೇಕ್ಷಿತ-ಪ್ರದಾತಾಽನ್ಯೋ ರಾಘವೇಂದ್ರಾನ್ನ ವಿದ್ಯತೇ ೧೩

*ವೈರಾಗ್ಯ, ವಾಕ್ಪಟುತ್ವ ಸಿದ್ದಿ:*

ದಯಾ-ದಾಕ್ಷಿಣ್ಯ-ವೈರಾಗ್ಯ-ವಾಕ್-ಪಾಟವ-ಮುಖಾಂಕಿತಃ |
ಶಾಪಾನುಗ್ರಹ-ಶಕ್ತೋಽನ್ಯೋ ರಾಘವೇಂದ್ರಾನ್ನ ವಿದ್ಯತೇ ೧೪

*ಸರ್ವರೋಗ ರುಜಿನಗಳ ನಾಶ:*

ಅಜ್ಞಾನ-ವಿಸ್ಮೃತಿ-ಭ್ರಾಂತಿ-ಸಂಶಯಾಪಸ್ಮೃತಿ-ಕ್ಷಯಾಃ |
ತಂದ್ರಾ-ಕಂಪ-ವಚಃ-ಕೌಂಠ್ಯ-ಮುಖಾ ಯೇ ಚೇಂದ್ರಿಯೋದ್ಭವಾಃ |
ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ-ಪ್ರಸಾದತಃ ೧೫

*ಸರ್ವ ಸಿದ್ದಿಗೆ ರಾಯರ ಅಷ್ಟಾಕ್ಷರ ಮಂತ್ರ ಜಪ:*

“(ಓಂ)ಶ್ರೀ ರಾಘವೇಂದ್ರಾಯ ನಮಃ” ಇತ್ಯಷ್ಟಾಕ್ಷರ-ಮಂತ್ರತಃ |
ಜಪಿತಾದ್ ಭಾವಿತಾನ್ನಿತ್ಯಮಿಷ್ಟಾರ್ಥಾಃ ಸ್ಯುರ್ನ ಸಂಶಯಃ ೧೬

*ರಾಯರಲ್ಲಿ ಚತುರ್ವಿಧ ಪುರುಷಾರ್ಥಗಳ ಪ್ರಾಪ್ತಿಗೆ ಪ್ರಾರ್ಥನೆ:*

ಹಂತು ನಃ ಕಾಯಜಾನ್ ದೋಷಾನಾತ್ಮಾತ್ಮೀಯ-ಸಮುದ್ಭವಾನ್ |
ಸರ್ವಾನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮ-ವಿತ್ ೧೭

*ಇಹ ಪರಲೋಕಗಳಲ್ಲಿ ಸುಖ ಸಮೃದ್ದಿ:*

ಇತಿ ಕಾಲ-ತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ |
ಇಹಾಮುತ್ರಾಪ್ತ-ಸರ್ವೇಷ್ಟೋ ಮೋದತೇ ನಾತ್ರ ಸಂಶಯಃ ೧೮

*ಆತ್ಮ ಸಂರಕ್ಷಣೆ:*

ಅಗಮ್ಯ-ಮಹಿಮಾ-ಲೋಕೇ ರಾಘವೇಂದ್ರೋ ಮಹಾ-ಯಶಾಃ |
ಶ್ರೀ-ಮಧ್ವ-ಮತ-ದುಗ್ಧಾಬ್ಧಿ-ಚಂದ್ರೋಽವತು ಸದಾಽನಘಃ ೧೯

*ರಾಯರ ಬೃಂದಾವನ ಪ್ರದಕ್ಷಿಣೆ, ಪಾದೋದಕದ ಮಹಿಮೆ:*

ಸರ್ವ-ಯಾತ್ರಾ-ಫಲಾವಾಪ್ತೈ ಯಥಾ-ಶಕ್ತಿ ಪ್ರ-ದಕ್ಷಿಣಮ್ |
ಕರೋಮಿ ತವ ಸಿದ್ಧಸ್ಯ ವೃಂದಾವನ-ಗತಂ-ಜಲಮ್ |
ಶಿರಸಾ ಧಾರಯಾಮ್ಯದ್ಯ ಸರ್ವ-ತೀರ್ಥ-ಫಲಾಪ್ತಯೇ ೨೦

*ನಮಸ್ಕಾರ ಹಾಗೂ ಸಂಕೀರ್ತನೆ ಮಹಿಮೆ:*

ಸರ್ವಾಭೀಷ್ಟಾರ್ಥ-ಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ |
ತವ ಸಂಕೀರ್ತನಂ ವೇದ-ಶಾಸ್ತ್ರಾರ್ಥ-ಜ್ಞಾನ-ಸಿದ್ಧಯೇ ೨೧

*ಗುರುರಾಜರಲ್ಲಿ ಘೋರ ಸಂಸಾರ ದು:ಖ ಪರಿಹಾರಕ್ಕಾಗೆ ಪ್ರಾರ್ಥನೆ:*

ಸಂಸಾರೇಽಕ್ಷಯ-ಸಾಗರೇ ಪ್ರಕೃತಿತೋಽಗಾಧೇ ಸದಾ ದುಸ್ತರೇ
ಸರ್ವಾವದ್ಯ-ಜಲಗ್ರಹೈರನುಪಮೇ ಕಾಮಾದಿ-ಭಂಗಾಕುಲೇ |
ನಾನಾ-ವಿಭ್ರಮ-ದುರ್ಭ್ರಮೇಽಮಿತ-ಭಯ-ಸ್ತೋಮಾದಿ-ಫೇನೋತ್ಕಟೇ
ದುಃಖೋತ್ಕೃಷ್ಟ-ವಿಷೇ ಸಮುದ್ಧರ ಗುರೋ ಮಾಂ ಮಗ್ನ-ರೂಪಂ ಸದಾ ೨೨

*ಭಕ್ತಿಯಿಂದ ಪಠಿಸಿದರೆ ಯಾವುದೇ ರೋಗದ ಪರಿಹಾರ

ರಾಘವೇಂದ್ರ-ಗುರು-ಸ್ತೋತ್ರಂ ಯಃ ಪಠೇದ್ ಭಕ್ತಿ-ಪೂರ್ವಕಮ್ |
ತಸ್ಯ ಕುಷ್ಠಾದಿ-ರೋಗಾಣಾಂ ನಿವೃತ್ತಿಸ್ತ್ವರಯಾ ಭವೇದ್ ೨೩

*ಅಂಧತ್ವ ಮೂಕತ್ವ ಪೂರ್ಣಾಯುಷ್ಯ ಕ್ಕಾಗಿ ಪ್ರಾರ್ಥನೆ:*

ಅಂಧೋಽಪಿ ದಿವ್ಯ-ದೃಷ್ಟಿಃ ಸ್ಯಾದೇಡ-ಮೂಕೋಽಪಿ ವಾಕ್-ಪತಿಃ |
ಪೂರ್ಣಾಯುಃ ಪೂರ್ಣ-ಸಂಪತ್ತಿಃ ಸ್ತೋತ್ರಸ್ಯಾಸ್ಯ ಜಪಾದ್ ಭವೇತ್ ೨೪

*ಉದರ ದೋಷ ನಾಶ:*

ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿ-ಮಂತ್ರಿತಮ್ |
ತಸ್ಯ ಕುಕ್ಷಿ-ಗತಾ ದೋಷಾಃ ಸರ್ವೇ ನಶ್ಯಂತಿ ತತ್-ಕ್ಷಣಾತ್ ೨೫

1,418

subscribers

892

photos

221

videos