Digitalquizteamgroupkannada @digitalquizteamgroupkannada Channel on Telegram

Digitalquizteamgroupkannada

@digitalquizteamgroupkannada


🙏🙏ತಂದೆ ತಾಯಿ ಆಶೀರ್ವಾದ 🙏🙏

ಡಿಜಿಟಲ್ ಕ್ವಿಜ್ ಟೀಮ್

ಹೊಸ ನಡಿಗೆ

.....💐 ಜ್ಞಾನಾರ್ಜನೆಯೇ ಜೀವನದ
ಮೂಲ ಗುರಿ 💐.....


🏅ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವವರು ನನ್ನ ಜೊತೆ ಕೈ ಜೋಡಿಸಿ. 🏅
ಸಾಧನೆ ಅಲ್ಲಾ ಇಡಿ ವೆವಸ್ಥೆ ಯನ್ನೆ ಬದಲಾವಣೆ ಮಾಡುಬಹುದು.💻🧗

Digitalquizteamgroupkannada (Kannada)

ಡಿಜಿಟಲ್ ಕ್ವಿಜ್ ಟೀಮ್ ಗ್ರೂಪ್ ಕನ್ನಡ ಟೆಲಿಗ್ರಾಮ್ ಚಾನೆಲ್ ಹೊಸ ನಡಿಗೆಗೆ ಸ್ವಾಗತ! ಈ ಚಾನೆಲ್ ನಲ್ಲಿ ಜ್ಞಾನಾರ್ಜನೆಯ ಮೂಲ ಮತ್ತು ಗುರಿ ಹೇಗಿದೆ ಎಂದು ತಿಳಿಯಲು ಸಾಧ್ಯವಾಗುತ್ತದೆ. ಇಲ್ಲಿ ಜೀವನದಲ್ಲಿ ಸಾಧನೆ ಮಾಡಬೇಕೆನ್ನುವ ಸ್ಪರ್ಧಿಗಳು ಒಟ್ಟಾಗಿ ಜೊತೆ ಕೈ ಜೋಡಿಸಿ. ಜೀವನದಲ್ಲಿ ಮಹತ್ತಾದ ಗುರಿಗಳನ್ನು ಸಾಧಿಸಲು ಇಡಿ ವೆವಸ್ಥೆಯನ್ನೂ ಬದಲಾವಣೆಯನ್ನೂ ಮಾಡಲು ಈ ಚಾನೆಲ್ ಸಹಾಯ ಮಾಡುವುದು. ಆಸೀರ್ವಾದ ಸಹಿತ ಡಿಜಿಟಲ್ ಕ್ವಿಜ್ ಟೀಮ್ ಗ್ರೂಪ್ ಕನ್ನಡ ಟೆಲಿಗ್ರಾಮ್ ಚಾನೆಲ್ ನಮ್ಮನ್ನು ಸ್ವಾಗತಿಸುತ್ತದೆ.

Digitalquizteamgroupkannada

11 Nov, 04:13


ಬಜೆಟ್ ನ ಮಾಹಿತಿ:

✍️ಬಜೆಟ್‌ನಲ್ಲಿ 3 ವಿಧ: ಸಮತೋಲನ, ಉಳಿತಾಯ, ಕೊರತೆ.

🌖ಚುನಾವಣಾ ವರ್ಷದಲ್ಲಿ ಬಜೆಟ್ ಅನ್ನು ಎರಡು ಬಾರಿ ಮಂಡಿಸಬಹುದು.

🌖ಸ್ವಾತಂತ್ರ ಭಾರತದ ಮೊದಲ ಬಜೆಟ್‌ ಮಂಡಿಸಿದವರು:
"ಆರ್.ಕೆ. ಷಣ್ಮುಖಂ ಚೆಟ್ಟಿ"

🌖 ಸ್ವಾತಂತ್ರ ಭಾರತದಲ್ಲಿ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದವರು:
"ಮೊರಾರ್ಜಿ ದೇಸಾಯಿ"

🌖ಸಂಸತ್‌ನಲ್ಲಿ ಮೊದಲ ಬಾರಿಗೆ ಬಜೆಟ್ ಮಂಡಿಸಿದ ಮಹಿಳೆ:
"ಇಂದಿರಾ ಗಾಂಧಿ"

Digitalquizteamgroupkannada

16 Oct, 10:22


🍀ವಿಜ್ಞಾನ ಸಾಮಾನ್ಯ ಜ್ಞಾನ
~~~~
>ವಿಜ್ಞಾನ ಜನಕ ಯಾರು?- ರೋಜರ್ ಬೇಕನ್.

>ಗಾಳಿಯ ವೇಗವನ್ನು ಅಳೆಯುವ
ಮಾಪಕ ಯಾವುದು?-ಅನಿಮೋಮೀಟರ್.

>ಅಣುಬಾಂಬ್ ಅನ್ನು ಕಂಡು ಹಿಡಿದವರು ಯಾರು?- ಒಟ್ಟೊಹಾನ್

>ವಾತಾವರಣದಲ್ಲಿ ಎಷ್ಟು ಭಾಗ ಆಮ್ಲಜನಕವಿದೆ -ಶೇಕಡ 21%

>ಭೂಮಿಗೆ ಅತಿ ಹತ್ತಿರದ ಗ್ರಹ ಯಾವುದು? -ಶುಕ್ರ ಗ್ರಹ

>ಸೌರಮಂಡಲದ ಅತಿ ದೊಡ್ಡ ಗ್ರಹ ಯಾವುದು?-ಗುರುಗ್ರಹ

>ಇಸ್ರೋದ ಕೇಂದ್ರ ಕಚೇರಿ ಎಲ್ಲಿದೆ -ಬೆಂಗಳೂರು

>ಆಮ್ಲಜನಕದ ಪರಮಾಣು ತೂಕ ಎಷ್ಟು? -16.

Digitalquizteamgroupkannada

15 Oct, 04:21


💐 ಭಾರತದಲ್ಲಿನ ಗವನ೯ರ್ ಆಡಳಿತ ಕಾಲದ ಪ್ರಮುಖ ಅಂಶಗಳು

1) ದ್ವೀಮುಖ ಸಕಾ೯ರ ರಚನೆ -->
  ರಾಬಟ೯ ಕ್ಲೈವ್ ( 1765 )

2) ದ್ವೀಮುಖ ಸಕಾ೯ರ ರದ್ದು  -->
  ವಾರನ್ ಹೇಸ್ಟಿಂಗ್ಸ್ (1773)

3) ಖಾಯಂ ಜಮಿನ್ದಾರಿ ಪದ್ಧತಿ -->
  ಕಾನ್೯ ವಾಲೀಸ್ (1793)
Civil PC-2020)

4) ಸಹಾಯಕ ಸೈನ್ಯ ಪದ್ಧತಿ -->
ಲಾಡ೯ ವೆಲ್ಲಸ್ಲೀ (1798)

5) ರೈತವಾರಿ ಪದ್ಧತಿ  -->
ಥಾಮಸ್ ಮನ್ರೋ  (1820)

6) ಸತಿ ಪದ್ಧತಿ  ನಿಷೇಧ -->
ಲಾಡ೯ ವಿಲಿಯಂ ಬೆಂಟಿಕ್ (1829 )

7) ಮಹಲ್ವಾರಿ  ಪದ್ಧತಿ -->
ಜೇಮ್ಸ ಥಾಮ್ಸನ್ ಮತ್ತು ಆರ್ ಎಂ ಬಡ್೯ (1833)

8) ದತ್ತು ಮಕ್ಕಳಿಗೆ  ಹಕ್ಕಿಲ್ಲ ಪದ್ಧತಿ  --> ಲಾಡ೯ ಡಾಲ್ ಹೌಸಿ (1848)

9) ಚಾಲ್ಸ್೯ ವುಡ್ ಕಾಯ್ದೆ -->
ಚಾಲ್ಸ್೯ ವುಡ್  (1854)

10)  ಸಾವ೯ಜನಿಕ ಲೋಕೋಪಯೋಗಿ ಇಲಾಖೆ ( ಪಿ ಡಬ್ಲ್ಯೂ ಡಿ )  -->
ಲಾಡ೯ ಡಾಲ್ಹೌಸಿ (1854)

11) ಇಂಡಿಯನ್  ಫೀನಲ್ ಕೋಡ್ -->
  ಲಾಡ೯ ಕ್ಯಾನಿಂಗ್ ( 1862)

12) ದೇಶೀಯ ಪತ್ರಿಕಾ ನಿಯಂತ್ರಣ ಕಾಯ್ದೆ  -->
ಲಾಟ೯ ಲಿಟ್ಟನ್  (1878)
🌸🌸🌸🌸🌸🌸🌸🌸🌸🌸

Digitalquizteamgroupkannada

13 Oct, 14:46


ರೈತವಾರಿ ಪದ್ಧತಿಯನ್ನು ಮೊದಲಿಗೆ ಬಾರಮಾರ್ ಪ್ರಾಂತ್ಯದಲ್ಲಿ ಪ್ರಯೋಗವಾಗಿ ಜಾರಿಗೊಳಿಸಲಾಯಿತು

Digitalquizteamgroupkannada

13 Oct, 11:55


ಕರ್ನಾಟಕದಲ್ಲಿನ ಆಡಳಿತ ವಿಭಾಗಗಳು.
ಬೆಂಗಳೂರು ವಿಭಾಗ 9 ಜಿಲ್ಲೆ ಮೈಸೂರು ವಿಭಾಗ ಎಂಟು ಜಿಲ್ಲೆ ಬೆಳಗಾವಿ ವಿಭಾಗ 7 ಜಿಲ್ಲೆ ಕಲ್ಬುರ್ಗಿ ವಿಭಾಗ 7 ಜಿಲ್ಲೆ

Digitalquizteamgroupkannada

13 Oct, 11:18


ಚಾರ್ಲ್ಸ್ ವುಡ್ ನ ವರದಿ 1854 ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ 1857ರಲ್ಲಿ ಕಲ್ಕತ್ತಾ ಬಾಂಬೆ ಮತ್ತು ಮಧು ರಾಶಿಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದವರು ಲಾರ್ಡ್ ಡಾಲ್ ಹೌಸಿ.

Digitalquizteamgroupkannada

11 Oct, 14:49


💚 ಸ್ವಾತಂತ್ರ್ಯ ಚಳುವಳಿಗೆ ಸಂಬಂಧಿಸಿದ ಚಳುವಳಿಗಳು ಮತ್ತು ವರ್ಷಗಳು

1. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ

ಉತ್ತರ-1885 ಕ್ರಿ.ಶ

2. ಬಂಗಾಳ ವಿಭಜನೆ ಚಳುವಳಿ (ಸ್ವದೇಶಿ ಚಳುವಳಿ)

ಉತ್ತರ-1905 ಕ್ರಿ.ಶ

3. ಮುಸ್ಲಿಂ ಲೀಗ್ ಸ್ಥಾಪನೆ

ಉತ್ತರ-1906 ಕ್ರಿ.ಶ

4. ಕಾಂಗ್ರೆಸ್ ವಿಭಜನೆ

ಉತ್ತರ-1907 ಕ್ರಿ.ಶ

5. ಹೋಮ್ ರೂಲ್ ಚಳುವಳಿ

ಉತ್ತರ 1916 ಕ್ರಿ.ಶ

6. ಲಕ್ನೋ ಒಪ್ಪಂದ
ಉತ್ತರ-ಡಿಸೆಂಬರ್ 1916 ಕ್ರಿ.ಶ

7. ಮೊಂಟಾಗು ಘೋಷಣೆ
ಉತ್ತರ-20 ಆಗಸ್ಟ್ 1917 ಕ್ರಿ.ಶ

8. ರೌಲಟ್ ಕಾಯಿದೆ
ಉತ್ತರ-19 ಮಾರ್ಚ್ 1919 ಕ್ರಿ.ಶ

9. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ
ಉತ್ತರ-13 ಏಪ್ರಿಲ್ 1919 ಕ್ರಿ.ಶ

10. ಖಿಲಾಫತ್ ಚಳವಳಿ
ಉತ್ತರ-1919 ಕ್ರಿ.ಶ

11. ಬೇಟೆಗಾರ ಸಮಿತಿ ವರದಿ ಪ್ರಕಟವಾಗಿದೆ

ಉತ್ತರ-18 ಮೇ 1920

12. ಕಾಂಗ್ರೆಸ್ ನ ನಾಗ್ಪುರ ಅಧಿವೇಶನ

ಉತ್ತರ-ಡಿಸೆಂಬರ್ 1920

13. ಅಸಹಕಾರ ಚಳವಳಿಯ ಆರಂಭ

ಉತ್ತರ-1 ಆಗಸ್ಟ್ 1920

14. ಚೌರಿ-ಚೌರಾ ಘಟನೆ

ಉತ್ತರ-5 ಫೆಬ್ರವರಿ 1922

15. ಸ್ವರಾಜ್ ಪಕ್ಷದ ಸ್ಥಾಪನೆ

ಉತ್ತರ-1 ಜನವರಿ 1923

16. ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್

ಉತ್ತರ-ಅಕ್ಟೋಬರ್ 1924

17. ಸೈಮನ್ ಆಯೋಗದ ನೇಮಕಾತಿ

ಉತ್ತರ-8 ನವೆಂಬರ್ 1927

18. ಭಾರತದಲ್ಲಿ ಸೈಮನ್ ಆಯೋಗದ ಆಗಮನ

ಉತ್ತರ-3 ಫೆಬ್ರವರಿ 1928

19. ನೆಹರೂ ವರದಿ

ಉತ್ತರ-ಆಗಸ್ಟ್ 1928

20. ಬರ್ದೌಲಿ ಸತ್ಯಾಗ್ರಹ

ಉತ್ತರ-ಅಕ್ಟೋಬರ್ 1928

21. ಲಾಹೋರ್ ಪಿತೂರಿ ಪ್ರಕರಣ

ಉತ್ತರ-8 ಏಪ್ರಿಲ್ 1929

22. ಲಾಹೋರ್ ಕಾಂಗ್ರೆಸ್ ಅಧಿವೇಶನ

ಉತ್ತರ-ಡಿಸೆಂಬರ್ 1929

23. ಸ್ವಾತಂತ್ರ್ಯ ದಿನದ ಘೋಷಣೆ

ಉತ್ತರ-2 ಜನವರಿ 1930

24. ಉಪ್ಪಿನ ಸತ್ಯಾಗ್ರಹ

ಉತ್ತರ-12 ಮಾರ್ಚ್ 1930 ರಿಂದ 5 ಏಪ್ರಿಲ್ 1930

25. ನಾಗರಿಕ ಅಸಹಕಾರ ಚಳುವಳಿ

ಉತ್ತರ-6 ಏಪ್ರಿಲ್ 1930

26. ಮೊದಲ ರೌಂಡ್ ಟೇಬಲ್ ಚಳುವಳಿ

ಉತ್ತರ-12 ನವೆಂಬರ್ 1930

27. ಗಾಂಧಿ-ಇರ್ವಿನ್ ಒಪ್ಪಂದ

ಉತ್ತರ-8 ಮಾರ್ಚ್ 1931

28. ಎರಡನೇ ದುಂಡುಮೇಜಿನ ಸಮ್ಮೇಳನ

ಉತ್ತರ-7 ಸೆಪ್ಟೆಂಬರ್ 1931

29. ಕೋಮು ಪ್ರಶಸ್ತಿ
ಉತ್ತರ-16 ಆಗಸ್ಟ್ 1932 ಕ್ರಿ.ಶ

30. ಪೂನಾ ಒಪ್ಪಂದ
ಉತ್ತರ-ಸೆಪ್ಟೆಂಬರ್ 1932 ಕ್ರಿ.ಶ

31. ಮೂರನೇ ದುಂಡುಮೇಜಿನ ಸಮ್ಮೇಳನ
ಉತ್ತರ-17 ನವೆಂಬರ್ 1932 ಕ್ರಿ.ಶ

32. ಕಾಂಗ್ರೆಸ್ ಸಮಾಜವಾದಿ ಪಕ್ಷದ ರಚನೆ
ಉತ್ತರ-ಮೇ 1934 ಕ್ರಿ.ಶ

33. ಫಾರ್ವರ್ಡ್ ಬ್ಲಾಕ್ ರಚನೆ
ಉತ್ತರ-1 ಮೇ 1939 ಕ್ರಿ.ಶ

34. ವಿಮೋಚನಾ ದಿನ
ಉತ್ತರ-22 ಡಿಸೆಂಬರ್ 1939 ಕ್ರಿ.ಶ

35. ಪಾಕಿಸ್ತಾನಕ್ಕೆ ಬೇಡಿಕೆ
ಉತ್ತರ-24 ಮಾರ್ಚ್ 1940 ಕ್ರಿ.ಶ

36. ಆಗಸ್ಟ್ ಪ್ರಸ್ತಾವನೆ
ಉತ್ತರ-8 ಆಗಸ್ಟ್ 1940 ಕ್ರಿ.ಶ

37. ಕ್ರಿಪ್ಸ್ ಮಿಷನ್ ಪ್ರಸ್ತಾವನೆ
ಉತ್ತರ-ಮಾರ್ಚ್ 1942 ಕ್ರಿ.ಶ

38. ಭಾರತ ಬಿಟ್ಟು ತೊಲಗಿ ಪ್ರಸ್ತಾವನೆ
ಉತ್ತರ-8 ಆಗಸ್ಟ್ 1942 ಕ್ರಿ.ಶ

39. ಶಿಮ್ಲಾ ಸಮ್ಮೇಳನ

ಉತ್ತರ-25 ಜೂನ್ 1945 ಕ್ರಿ.ಶ

40. ನೌಕಾ ದಂಗೆ

ಉತ್ತರ-19 ಫೆಬ್ರವರಿ 1946 ಕ್ರಿ.ಶ

41. ಪ್ರಧಾನಿ ಅಟ್ಲೀ ಘೋಷಣೆ

ಉತ್ತರ-15 ಮಾರ್ಚ್ 1946 ಕ್ರಿ.ಶ

42. ಕ್ಯಾಬಿನೆಟ್ ಮಿಷನ್ ಆಗಮನ

ಉತ್ತರ-24 ಮಾರ್ಚ್ 1946 ಕ್ರಿ.ಶ

43. ನೇರ ಕ್ರಿಯೆಯ ದಿನ

ಉತ್ತರ-16 ಆಗಸ್ಟ್ 1946 ಕ್ರಿ.ಶ

44. ಮಧ್ಯಂತರ ಸರ್ಕಾರದ ಸ್ಥಾಪನೆ

ಉತ್ತರ-2 ಸೆಪ್ಟೆಂಬರ್ 1946 ಕ್ರಿ.ಶ

45. ಮೌಂಟ್‌ಬ್ಯಾಟನ್ ಯೋಜನೆ

ಉತ್ತರ-3 ಜೂನ್ 1947 ಕ್ರಿ.ಶ

46. ಸ್ವಾತಂತ್ರ್ಯವನ್ನು ಸಾಧಿಸಲಾಯಿತು

ಉತ್ತರ-15 ಆಗಸ್ಟ್ 1947 ಕ್ರಿ.ಶ

ಪ್ರಶ್ನೆ:- ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಯಾರು?

ಉತ್ತರ:- ಲಾರ್ಡ್ ಮೌಂಟ್ ಬ್ಯಾಟನ್.

ಪ್ರಶ್ನೆ:- ಭಾರತದ ಮೊದಲ ವೈಸರಾಯ್ ಯಾರು?

ಉತ್ತರ:- ಲಾರ್ಡ್ ಕ್ಯಾನಿಂಗ್.

ಪ್ರಶ್ನೆ:- ಭಾರತದ ಮೊದಲ ಮಹಿಳಾ ರಾಯಭಾರಿ ಯಾರು?
ಉತ್ತರ:- ವಿಜಯಲಕ್ಷ್ಮಿ ಪಂಡಿತ್.

ಪ್ರಶ್ನೆ:- ಭಾರತದ ಮೊದಲ ಪರಮಾಣು ರಿಯಾಕ್ಟರ್‌ನ ಹೆಸರೇನು?
ಉತ್ತರ:- ಅಪ್ಸರಾ.

ಪ್ರಶ್ನೆ:- ಭಾರತದ ಮೊದಲ ಮಹಿಳಾ ಪೈಲಟ್ ಯಾರು?
ಉತ್ತರ:- ಪ್ರೇಮಾ ಮಾಥೂರ್.

ಪ್ರಶ್ನೆ:- ಭಾರತೀಯ ವಾಯುಪಡೆಯ ಮೊದಲ ಮಹಿಳಾ ಪೈಲಟ್?
ಉತ್ತರ:- ಹರಿತಾ ಕೌರ್ ಡಿಯೋಲ್.

ಪ್ರಶ್ನೆ:- ಪರಮವೀರ ಚಕ್ರ ಪಡೆದ ಭಾರತೀಯ ವಾಯುಪಡೆಯ ಮೊದಲ ಅಧಿಕಾರಿ?
ಉತ್ತರ:- ನಿರ್ಮಲಜಿತ್ ಸೆಖೋನ್.

ಪ್ರಶ್ನೆ:- ಭಾರತದ ಮೊದಲ ಮಹಿಳಾ ಲೋಕಸಭಾ ಸ್ಪೀಕರ್?
ಉತ್ತರ:- ಮೀರಾ ಕುಮಾರ್.

ಪ್ರಶ್ನೆ:- ಭಾರತದ ಮೊದಲ ಕಮ್ಯುನಿಸ್ಟ್ ಲೋಕಸಭಾ ಸ್ಪೀಕರ್ ಯಾರು?
ಉತ್ತರ:- ಸೋಮನಾಥ ಚಟರ್ಜಿ.

ಪ್ರಶ್ನೆ:- ಭಾರತದ ಮೊದಲ ಮುಖ್ಯ ಚುನಾವಣಾ ಆಯುಕ್ತರು ಯಾರು?
ಉತ್ತರ:- ಸುಕುಮಾರ್ ಸೇನ್.

ಪ್ರಶ್ನೆ:- ಭಾರತದ ಮೊದಲ ಗೃಹ ಮಂತ್ರಿ ಯಾರು?
ಉತ್ತರ:- ಸರ್ದಾರ್ ವಲ್ಲಭಭಾಯಿ ಪಟೇಲ್.

ಪ್ರಶ್ನೆ:- ಭಾರತದ ಮೊದಲ ರಕ್ಷಣಾ ಮಂತ್ರಿ ಯಾರು?
ಉತ್ತರ:- ಸರ್ದಾರ್ ಬಲದೇವ್ ಸಿಂಗ್.

ಪ್ರಶ್ನೆ:- ಭಾರತದ ಮೊದಲ ಹಣಕಾಸು ಮಂತ್ರಿ ಯಾರು?

ಉತ್ತರ:- ಆರ್.ಕೆ. ಷಣ್ಮುಖಂ ಚೆಟ್ಟಿ.

ಪ್ರಶ್ನೆ:- ಭಾರತದ ಮೊದಲ ಕೇಂದ್ರ ಶಿಕ್ಷಣ ಸಚಿವರು ಯಾರು?

ಉತ್ತರ:- ಮೌಲಾನಾ ಅಬುಲ್ ಕಲಾಂ ಆಜಾದ್.

Digitalquizteamgroupkannada

09 Oct, 18:53


ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳು -
1.ತಮಿಳು
2.ಸಂಸ್ಕೃತ
3.ತೆಲುಗು
4.ಕನ್ನಡ
5.ಮಲಯಾಳಂ
6.ಓಡಿಯ

ಇತ್ತೀಚೆಗೆ ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳು:
7.ಮರಾಠಿ
8. ಪಾಳಿ
9. ಪ್ರಾಕೃತ
10. ಅಸ್ಸಾಮಿ
11. ಬಂಗಾಳಿ

ಒಟ್ಟು ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳ ಸಂಖ್ಯೆ 11

Digitalquizteamgroupkannada

09 Oct, 12:19


🌷 ಗಾದೆ ಮಾತುಗಳ ಅರ್ಥ
==================
'ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ'
- ಅನ್ನ ಜೀವನಕ್ಕೆ ಅತ್ಯಾವಶ್ಯಕ

'ಅಲ್ಪರಸಂಗ ಅಭಿಮಾನ ಭಂಗ'
- ಕೀಳರೊಡನೆ ಒಡನಾಟ ದುಃಖಕರ

'ಊರಿಗೆ ಹಂದಿಬೇಕು ನೆರೆಗೆ ನಿಂದಕ ಬೇಕು'
- ಊರ ಹೊಲಸು ನಿವಾರಣೆಗೆ ಹಂದಿಯಂತೆ ನಮ್ಮ ದೋಷ ನಿವಾರಣೆಗೆ ನೆರೆಯ ನಿಂದಕರು.

'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು'
- ಅಸಂಬದ್ಧತೆ

'ಒಲಿದರೆ ನಾರಿ ಮುನಿದರೆ ಮಾರಿ'
- ಹೆಣ್ಣಿನ ಎರಡು ಮುಖಗಳು

'ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ'
- ಅಜ್ಞಾನಿಗೆ ಜ್ಞಾನಬೋಧನೆ ನಿರರ್ಥಕ

'ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ'
- ಸೋತರು ಕೂಡ ಸೋಲನ್ನು ಒಪ್ಪಿಕೊಳ್ಳದಿರುವುದು

'ನೀರಿನಲ್ಲಿ ಹೋಮ ಮಾಡಿದ ಹಾಗೆ'
- ವ್ಯರ್ಥ ಪರಿಶ್ರಮ

'ಬಂದ ದಾರಿಗೆ ಸುಂಕವಿಲ್ಲ'
- ಉದ್ದೇಶ ನೆರವೇರದಿರುವುದು

'ಬಡವನ ಸಿಟ್ಟು ದವಡೆಗೆ ಮೂಲ'
- ಬಡವನ ಸಿಟ್ಟು ವ್ಯರ್ಥ

'ಗಾಳಿಗೆ ಗುದ್ದಿ ಮೈ ನೋಯಿಸಿಕೊಂಡ ಹಾಗೆ'
- ಅಸಾಧ್ಯವಾದ ಕೆಲಸಕ್ಕೆ ಕೈ ಹಾಕಿ ಹೈರಾಣಾಗುವುದು.

Digitalquizteamgroupkannada

01 Oct, 00:22


🌹ಮಹಾತ್ಮಾ ಗಾಂಧೀಜಿ 🌹
🌷🌷🌷🌷🌷🌷🌷🌷🌷

🔹ಜನನ - ಅಕ್ಟೋಬರ 2 , 1869

🔸ಜನನ ಸ್ಥಳ =
ಗುಜರಾತಿನ ಪೂರಬಂದರ

🔸ಪೂರ್ಣ ಹೆಸರು - ಮೋಹನದಾಸ ಕರಮ ಚಂದ್ರ ಗಾಂಧಿ

🔹ತಂದೆ - ಕರಮಚಂದ ಗಾಂಧಿ

🔸ತಾಯಿ - ಪುತಳಿಬಾಯಿ

🔹ಹೆಂಡತಿ = ಕಸ್ತೂರಿ ಬಾ ಗಾಂಧಿ

🛫 ಕಾನೂನು ಪದವಿ ಅಭ್ಯಾಸಕಾಗಿ 1888 ರಲ್ಲಿ ಲಂಡನ್ನಿಗೆ ಪಯಣ ( 1891 ಕ್ಕೆ ಬ್ಯಾರಿಸ್ಟರ್ ಆಗಿ ಭಾರತಕ್ಕೆ ಆಗಮನ )

🏛 1893 ರಲ್ಲಿ ದಾದ ಅಬ್ದುಲ್ಲಾ ಕಂಪನಿಯ ಕೇಸನ್ನು ವಾದಿಸಲು ದಕ್ಷಿಣ ಆಫ್ರಿಕಾಗೆ ಹೋದರು .
(TET-2020)

💠 ಆಫ್ರಿಕಾದಲ್ಲಿ ನೀಟಾಲ್ ಇಂಡಿಯನ್ ಕಾಂಗ್ರೇಸ ಎಂಬ ಸಂಸ್ಥೆ ಹಾಗೂ ಫೀನಿಕ್ಸ್ ಫಾರಸ್ಟಮ್ & ಟಾಲ್ಸ್ ಟಾಯ್ ಎಂಬ ಎರಡು ಆಶ್ರಮ ಸ್ಥಾಪನೆ .

🌷 1915 ಕ್ಕೆ ಭಾರತಕ್ಕೆ ಆಗಮನ

( ಗಾಂಧೀಜಿಯವರ ರಾಜಕೀಯ ಗುರು - ಗೋಪಾಲ ಕೃಷ್ಣ ಗೋಖಲೆ )

🌸 1917 ಚಂಪಾರಣ್ಯ ಸತ್ಯಾಗ್ರಹ ( ಭಾರತದಲ್ಲಿ ಗಾಂಧೀಜೀ ನಾಯಕತ್ವ ವಹಿಸಿದ ಮೊದಲ ಸತ್ಯಾಗ್ರಹ )

💠 1918 ಅಹಮದಾಬಾದ ಗಿರಣಿ ಕಾಮಿಕರ ಮುಷ್ಕರ
( ಗಾಂಧಿಯ ಮೊದಲ ಉಪವಾಸ ಸತ್ಯಾಗ್ರಹ )

💮 1918 ಗುಜರಾತಿನ ಬೇಡ ಸತ್ಯಾಗ್ರಹ

🌷1919 ಖಿಲಾಫಫ ಚಳುವಳಿ

🌼1929 – 22 ಅಸಹಕಾರ ಚಳುವಳಿ ( 1922 ಚೌರಿಚೌರಾ ಘಟನೆಯಿಂದ ಅಸಹಕಾರ ಚಳುವಳಿ ಸ್ಥಗಿತ )

🌷 1924 ಕರ್ನಾಟಕದಲ್ಲಿ (ಬೆಳಗಾವಿ )ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ .

🌸 1931 ಗಾಂಧಿ - ಇರ್ವಿನ ಒಪ್ಪಂದ ( 1931 ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗಿ )

💮1932 ಪೂನಾ ಒಪ್ಪಂದ
( ಗಾಂಧಿ ಮತ್ತು ಅಂಬೇಡ್ಕರ ಮಧ್ಯೆ )

🌸 1930 ಕಾನೂನು ಭಂಗ ಚಳುವಳಿ

🌷 1930 ಮಾರ್ಚ 12 ರಂದು ದಂಡಿ ಉಪ್ಪಿನ ಸತ್ಯಾಗ್ರಹ ಸಬರಮತಿ ಆಶ್ರಮದಿಂದ ಪ್ರಾರಂಭ

💠 1942 ಕ್ವಿಟ್ ಇಂಡಿಯಾ ಚಳುವಳಿ

🌷 1945 ಸಿಮ್ಲಾ ಒಪ್ಪಂದ

🇮🇳 1947 ಕ್ಕೆ ಭಾರತಕ್ಕೆ ಸ್ವತ್ಯಂತ್ರ

🌹30,ಜನೆವರಿ 1948 ರಲ್ಲಿ ಗಾಂಧಿಜೀಯ ಹತ್ಯೆ
( ನಾತುರಾಮ್ ಗೋಡ್ಸೆ ಅವರಿಂದ)

📘ಗಾಂಧೀಜಿಯ ಪ್ರಮುಖ ಕೃತಿಗಳು

🔹ಹಿಂದ್ ಸ್ವರಾಜ್ ,
🔸ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ ,
🔹ಮೈ ಎಕ್ಸ್‌ಪರಿಮೆಂಟ್ ವಿತ್ ಟೂತ್
🔸ಗೀತಾ ದಿ ಮದರ ಗಾಂಧೀಜಿ

📰ಗಾಂಧೀಜಿ ಪ್ರಾರಂಭಿಸಿದ ಪ್ರಮುಖ ದಿನಪತ್ರಿಕೆಗಳು👇

📰ಯಂಗ್ ಇಂಡಿಯಾ ,
📰 ಹರಿಜನ ,
📰ನವಜೀವನ
🌷🌷🌷🌷

Digitalquizteamgroupkannada

29 Sep, 16:26


♦️FAMOUS INDIAN MARTIAL ARTS PREVIOUS YEAR

Kalaripayattu - Kerala
Silambam - Tamil Nadu
Thoda - Himachal Pradesh
Thang-ta and Sarit Sarak - Manipur
Cheibi Gadga - Manipur
Gatka  - Punjab
Lathi  - Punjab & Bengal
Musti Yuddha - Varanasi
Pari-Khanda - Bihar
Kathi Samu - Andhra Pradesh
Karra Samu - Andhra Pradesh
Mukna - Manipur
Inbuan Wrestling - Mizoram
Mardani Khel - Maharashtra

   

1,926

subscribers

797

photos

44

videos