ಇಸ್ರೊಗೆ 100ನೇ ಉಡ್ಡಯನ ಸಾಧನೆ ಗರಿಶ್ರೀಹರಿಕೋಟ: ‘ಎನ್‌ವಿಎಸ್–02’ ಉಪಗ್ರಹ ಉಡ್ಡಯನ ಯಶಸ್ವಿ:-
‘ಎನ್‌ವಿಎಸ್–02’ ಉಡ್ಡಯನ ಯಶಸ್ವಿಗೊಂಡಿದ್ದರಿಂದ ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಸಹೋದ್ಯೋಗಿಗಳೊಂದಿಗೆ ಸಂಭ್ರಮಿಸಿದರು –
🧿ಶ್ರೀಹರಿಕೋಟ (ಆಂಧ್ರಪ್ರದೇಶ)(ಪಿಟಿಐ): ಇಲ್ಲಿನ ‘ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡ್ಡಯನ ನೆಲೆಯಿಂದ ಬೆಳಿಗ್ಗೆ 6.23ಕ್ಕೆ ‘ಎನ್‌ವಿಎಸ್–02’ ಉಪಗ್ರಹ ಹೊತ್ತ ರಾಕೆಟ್ ಜಿಎಸ್‌ಎಲ್‌ವಿ–ಎಫ್15 ಆಗಸಕ್ಕೆ ಚಿಮ್ಮಿ, ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿತು’ ಎಂದು ಇಸ್ರೊ ಮುಖ್ಯಸ್ಥ ವಿ.ನಾರಾಯಣನ್ ಬುಧವಾರ ಪ್ರಕಟಿಸಿದರು.
🧿ವಿ. ನಾರಾಯಣನ್ ಅವರು ಇಸ್ರೊ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಉಡ್ಡಯನ ಹಾಗೂ ಈ ವರ್ಷ, ಇಸ್ರೊ ಯಶಸ್ವಿಯಾಗಿ ನಿಭಾಯಿಸಿದ ಮೊದಲ ಬಾಹ್ಯಾಕಾಶ ಯೋಜನೆಯೂ ಇದಾಗಿದೆ.
‘ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡ್ಡಯನ ನೆಲೆಯಿಂದ ಬೆಳಿಗ್ಗೆ 6.23ಕ್ಕೆ ‘ಎನ್‌ವಿಎಸ್–02’ ಉಪಗ್ರಹ ಹೊತ್ತ ರಾಕೆಟ್ ಜಿಎಸ್‌ಎಲ್‌ವಿ–ಎಫ್15 ಆಗಸಕ್ಕೆ ಚಿಮ್ಮಿ, ಉಪಗ್ರಹ ವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿತು’ ಎಂದು ವಿ.ನಾರಾಯಣನ್ ಪ್ರಕಟಿಸಿದರು.
🧿ಮಿಷನ್ ಕಂಟ್ರೋಲ್ ರೂಮ್‌ನಿಂದ ಮಾತನಾಡಿದ ಅವರು, ‘ನಮ್ಮ ಉಡ್ಡಯನ ನೆಲೆಯಿಂದ ಕೈಗೊಂಡ 100ನೇ ಉಡ್ಡಯನ ಇದಾಗಿದ್ದು, ಭಾರತದ ಪಾಲಿಗೆ ಇದು ಮಹತ್ವದ ಮೈಲುಗಲ್ಲು’ ಎಂದರು.
🧿‘ಈ ಬಾಹ್ಯಾಕಾಶ ಕಾರ್ಯಕ್ರಮವು ದೂರದೃಷ್ಟಿಯುಳ್ಳ ನಮ್ಮ ನಾಯಕ ಪ್ರೊ.ವಿಕ್ರಮ್ ಸಾರಾಭಾಯಿ ಅವರ ಪರಿಕಲ್ಪನೆ. ಅವರು ಆರಂಭಿಸಿದ ಈ ಕಾರ್ಯವನ್ನು ನಂತರ ಪೀಳಿಗೆಯ ನಾಯಕರು ಮುಂದುವರಿಸಿಕೊಂಡು ಬಂದಿದ್ದಾರೆ’ ಎಂದು ಹೇಳಿದ ಅವರು, ವಿಐಪಿ ಗ್ಯಾಲರಿಯಲ್ಲಿ ಕುಳಿತಿದ್ದ ಇಸ್ರೊ ಮಾಜಿ ಮುಖ್ಯಸ್ಥರಾದ ಎಸ್. ಸೋಮನಾಥ್ ಹಾಗೂ ಎ.ಎಸ್.ಕಿರಣ್ ಕುಮಾರ್ ಅವರತ್ತ ಕೈತೋರಿದರು.
🧿ದೇಶೀಯವಾಗಿಯೇ ಅಭಿವೃದ್ಧಿಪಡಿಸಿರುವ ‘ಪರಮಾಣು ಗಡಿಯಾರ’ ಅಳವಡಿಸಿರುವ 2ನೇ ಉಪಗ್ರಹ ಇದಾಗಿದೆ ಎಂದು ಅವರು ಹೇಳಿದರು.
🧿‘ಮುಂದಿನ 5 ವರ್ಷದಲ್ಲಿ 100 ಉಡ್ಡಯನಗಳು ಸಾಧ್ಯ’
‘ಇಸ್ರೊ ಮುಂದಿನ 5 ವರ್ಷಗಳಲ್ಲಿ 100 ಉಡ್ಡಯನಗಳನ್ನು ಪೂರೈಸಲು ಸಾಧ್ಯವಿದೆ’ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಹೇಳಿದರು.
🧿‘100 ಉಡ್ಡಯನಗಳ ಮೈಲುಗಲ್ಲು ಸಾಧಿಸುವುದಕ್ಕೆ ಇಸ್ರೊ 46 ವರ್ಷ ತೆಗೆದುಕೊಂಡಿತು. ಮುಂದಿನ 5 ವರ್ಷಗಳಲ್ಲಿ ಇಷ್ಟೇ ಸಂಖ್ಯೆಯ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಇಸ್ರೊ ಕಾರ್ಯಗತಗೊಳಿಸಬಲ್ಲದೇ’ ಎಂಬ ಪ್ರಶ್ನೆ ಸುದ್ದಿಗಾರರಿಂದ ತೂರಿಬಂತು.
ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣನ್, ‘ನೀವು ಸರಿಯಾದ ಪ್ರಶ್ನೆಯನ್ನೇ ಕೇಳುತ್ತಿದ್ದೀರಿ. ಮುಂದಿನ 5 ವರ್ಷಗಳಲ್ಲಿ ಈ ಸಾಧನೆ ಮಾಡಲು ಸಾಧ್ಯವಿದೆ’ ಎಂದು ಉತ್ತರಿಸಿದರು.
🧿‘ನಾಸಾ ಸಹಯೋಗದೊಂದಿಗೆ ಕೈಗೊಂಡಿರುವ ‘ಎನ್‌ಐಎಸ್‌ಎಆರ್’ (ನಾಸಾ–ಇಸ್ರೊ ಸಿಂಥೆಟಿಕ್ ಅಪರ್ಚರ್ ರಾಡಾರ್) ಯೋಜನೆಯ ಒಂದು ರಾಡಾರ್ ಅನ್ನು ಇಸ್ರೊ ಹಾಗೂ ಮತ್ತೊಂದು ರಾಡಾರ್ ಅನ್ನು ನಾಸಾ ಅಭಿವೃದ್ಧಿಪಡಿಸಿದೆ.
🧿 ಇವುಗಳನ್ನು ಒಳಗೊಂಡ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿರುವ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ ಜೋಡಣೆ ಮಾಡಿ, ಪರೀಕ್ಷಿಸಲಾಗಿದೆ. ಇದು, ಶ್ರೀಹರಿಕೋಟಕ್ಕೆ ಸಾಗಿಸಲು ಸಿದ್ಧಗೊಂಡಿದೆ’ ಎಂದರು.
‘ಎನ್‌ಜಿಎಲ್‌ವಿ (ನೆಕ್ಸ್‌ಟ್ ಜನರೇಷನ್ ಲಾಂಚ್ ವೆಹಿಕಲ್) ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
🧿ಈ ರಾಕೆಟ್‌ಗಳನ್ನು ಚಂದ್ರಯಾನ–4 ಮತ್ತು ಚಂದ್ರಯಾನ–5ರಲ್ಲಿ ಬಳಸಬಹುದಾಗಿದೆ’ ಎಂದು ಹೇಳಿದರು.
Share notes to all 👍🙏
Join telegram - Nutana Academy@MP sir ..
Click here to join :-
https://t.me/nutanaacademy