ಆದರೂ ಎಷ್ಟೋ ಜನ ಬಿಜೆಪಿ ಬೆಂಬಲಿಗರೇ ಕಾಂಗ್ರೆಸ್ಸಿಗರೂ ಮಾಡದಷ್ಟು ಟ್ರೋಲ್ ಮಾಡುತ್ತಾರೆ. ಒಂದು ಕಡೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸೋತರೂ "ಮೋದಿಯಿಂದಲೇ ಸೋತಿದ್ದು, ನಿರ್ಮಲಾನ ಇಳಿಸದಿದ್ದೇ ಕಾರಣ" ಅಂತ ಶುರು ಹಚ್ಚಿಕೊಂಡಿದ್ದು ನಾನೇ ನೋಡಿದ್ದೇನೆ.
ಹೋದ ವರ್ಷ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಬಂದಿದ್ದಕ್ಕೆ ಮೋದಿ ಕಾರಣ, ನಿರ್ಮಲಾ ಕಾರಣ ಅಂತ ದಿನಕ್ಕೆ ಒಂದು ಪೋಸ್ಟ್ ಆದರೂ ಹಾಕಿ ಟ್ರೋಲ್ ಮಾಡಿದವರನ್ನು ನೋಡಿ ಹತಾಶಳಾಗಿದ್ದೆ. ಬೇರೆ ಪಕ್ಷದವರಾಗಿದ್ದಿದ್ದರೆ ಬೇಸರವಾಗುತ್ತಿರಲಿಲ್ಲ. ಸೋ-ಕಾಲ್ಡ್ ಬಿಜೆಪಿ ಬೆಂಬಲಿಗರೇ ಯದ್ವಾತದ್ವಾ ಟ್ರೋಲ್ ಮಾಡಿದರು. ಆಕೆಯನ್ನು ಇಷ್ಟು ವರ್ಷ ಮುಂದುವರೆಸಿದ್ದಾರೆ ಅಂದರೆ ಖಂಡಿತಾ ಏನೋ ಲೆಕ್ಕಾಚಾರ ಇರಬೇಕಲ್ವಾ? ನಮ್ಮ ನಾಯಕರ ನಡೆಯ ಮೇಲೆ ನಮಗೆ ಕಿಂಚಿತ್ತಾದರೂ ನಂಬಿಕೆ ಇರಬೇಕು ಅಲ್ವಾ!
ಸಧ್ಯಕ್ಕೆ ಇರುವ ಪರಿಸ್ಥಿತಿಯಲ್ಲಿ ಹ್ಯಾಟ್ರಿಕ್ ಬಾರಿಸುವುದು ಸುಲಭವಿರಲಿಲ್ಲ. ದಶದಿಕ್ಕುಗಳಿಂದ ಒಂದೊಂದು ಪಿತೂರಿ ನಡೆಯಿತಾ! ಆದರೆ ಭಾರತದ ಯಾವುದೋ ಶಕ್ತಿ ಕೈಬಿಡಲಿಲ್ಲ. ಯಾಕೆಂದರೆ ಆ ಶಕ್ತಿಗೆ ಗೊತ್ತಿತ್ತು. ಮೋದಿ ಹಿಂದುಪರ ಏನೇನು ಕೆಲಸ ಮಾಡಿದ್ದಾರೆ ಅಂತ. ಮೋದಿ ಬಂದಮೇಲೆ ಏನೇನಾಗಿವೆ ಅಂತ ನಾನು ಗಮನಿಸುತ್ತಾ ಬಂದಿದ್ದೇನೆ. ಅವರು ಮಾಡಿರುವ / ಮಾಡುತ್ತಿರುವ ದೈತ್ಯಾಕಾರದ ಕೆಲಸಗಳ ಮುಂದೆ ಮಾಡದೇ ಉಳಿದಿರುವ ಕೆಲಸಗಳು ನನಗೆ ನಗಣ್ಯ. ಆತನಿಗೆ ಹತ್ತು ಕೈಗಳಿಲ್ಲ.
ಸಬ್ಕಾ ಸಾಥ್ ಸಬ್ಕಾ ವಿಕಾಸ್ ಅಂದಿದ್ದನ್ನು ಪಾಸಿಟಿವ್ ಆಗಿ ತಗೊಳ್ಳದೆ, ಯೋಚಿಸುವ ಗೋಜಿಗೂ ಹೋಗದೆ, ಆತನಿಗೆ ನೋಬಲ್ ಹುಚ್ವಿದೆ ಅಂತ ಟ್ರೋಲ್ ಮಾಡುವವರನ್ನು ನೋಡಿ ನಕ್ಕಿದ್ದೇನೆ, ಕನಿಕರ ಪಟ್ಟಿದ್ದೇನೆ. ಪಕ್ಷದ ಬೆಂಬಲಿಗರನ್ನು ಎದುರು ಹಾಕಿಕೊಂಡು, ಅಧಿಕಾರ ಕಳೆದುಕೊಂಡು, ಆ ತಗಡು ನೋಬಲ್ ತಗೊಂಡು ಉಪ್ಪಿನಕಾಯಿ ಹಾಕಿಕೊಂಡು ತಿನ್ನೊಕಾಗುತ್ತಾ? ಅಷ್ಟು ದಡ್ಡರಾ ಮೋದಿ?
ಅವರು ಬರುವ ಎಷ್ಟೋ ವರ್ಷಗಳ ಮೊದಲಿಂದಲೂ ಇಲ್ಲಿ ಬೇರೆ ಧರ್ಮದವರು ಅಧಿಕೃತವಾಗಿ ಬೇರೂರಿದ್ದಾರೆ. ಅವರನ್ನು ಒದ್ದೋಡಿಸಲಾಗುತ್ತಾ? ಬೆದರಿಕೆ ಹಾಕಲಾಗುತ್ತಾ? ಹಾಗೆ ಮಾಡಿದರೆ ಮುಂದಿನ ಪರಿಣಾಮ ಏನಾಗಬಹುದು ಅಂತ ನಮ್ಮಂಥ ಮೊಡ್ಡು ತಲೆಗಳಿಗೆ ಹೊಳೆಯದಿರಬಹುದು. ಮೋದಿಯ ತಲೆಗೆ ಹೊಳೆಯದಿರೋಕೆ ಅವರೇನು ಪಪ್ಪೂನಾ? ಬೇರೆ ದೇಶಗಳಲ್ಲೂ ನಮ್ಮವರಿದ್ದಾರೆ. ಅವರ ಗತಿ ಏನಾಗಬಹುದು ಅಂತ ಯೋಚಿಸಲೇಬೇಕಾಗುತ್ತಲ್ವಾ? ಸಬ್ ಕಾ ಸಾಥ್ ಅಂದರೇ ಸಾಕು. ಒಂದು ಗಟ್ಟಿ ಮೆಸೇಜ್ ಅದು - "ನೀವೇನೂ ಸ್ಪೆಷಲ್ ಅಲ್ಲ, ನಿಮ್ಮ ತುಷ್ಟೀಕರಣ ಮಾಡುವುದಿಲ್ಲ" ಅಂತ. ಹಾಗೆ ಭಯದ ವಾತಾವರಣ ಸೃಷ್ಟಿಸಲೂ ಬಾರದು. ನಾಳೆ ಯೋಗಿ ಬಂದರೂ ಹಾಗೆ ಮಾಡಲಾರರು. ಮಾಡಬಾರದು ಸಹ.
ಅಕ್ರಮ ವಲಸೆಗಾರರನ್ನು ಒದ್ದೋಡಿಸುತ್ತಿಲ್ಲ ಅಂತಾರೆ. ಇಲ್ಲಿರುವವರು ಕೋಟ್ಯಂತರ. ಸರಿಯಾಗಿ ಗ್ರೌಂಡ್ವರ್ಕ್ ಮಾಡಿಯೇ ತಾನೇ ಇವರನ್ನು ಆಚೆ ತಳ್ಳಲಾಗುವುದು? ಇವರೇನೂ ವೋಟ್ ಹಾಕಲ್ಲ ಅಂತ ಅವರಿಗೆ ಯಾವತ್ತೋ ಗೊತ್ತು. ಸ್ವಲ್ಪ ಸಮಯ ಬೇಕಲ್ವಾ?
ಬಾಂಗ್ಲಾದೇಶ, ಅಫ್ಘಾನಿಸ್ತಾನಕ್ಕೆ ಯಾಕೆ ಬಜೆಟ್ಟಲ್ಲಿ ಒಂದಷ್ಟು ಇಡುತ್ತಾರೆ ಅನ್ನುವುದಕ್ಕೂ ಲಾಜಿಕ್ ಇದೆ. ಅದಕ್ಕೂ ವ್ಯಾವಹಾರಿಕ ಲೆಕ್ಕಾಚಾರಗಳಿರ್ತವೆ. ಅವರಿಗೆ ಬೆಣ್ಣೆ ಹಚ್ಚೋಕೆ, ಭಯಕ್ಕೆ ಅಂತ ಕೆಲವರು ತಿಳಿದಿದ್ದಾರೆ. ಅರೇ, ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದವರಿಗೆ ಭಯವಾ!! ಪಾಕಿಸ್ತಾನವನ್ನು ಯುದ್ಧವಿಲ್ಲದೇ ದಿವಾಳಿ ಮಾಡಲಿಲ್ಲವಾ?
"ಮೋದಿ ಬಿಜೆಪಿನ ಸೋಲಿಸೇ ಕೆಳಗಿಳಿಯೋದು" ಅಂತ ಒಂದು ಕಡೆ ಕಮೆಂಟ್ ನೋಡಿದೆ. "ಈ ಜನಗಳಿಗೆ ಎಷ್ಟು ಕೆಲಸ ಮಾಡಿದರೂ ತೃಪ್ತಿ ಇಲ್ಲವಲ್ಲ" ಅನ್ನಿಸಿತು.
ಮೋದೀಜಿಯಿಂದ ಒಂದು ಪಾಠ ಕಲಿತಿದ್ದೇನೆ. ಟೀಕಿಸೋರಿಗೆ ಕೆಲಸದಿಂದಲೇ ಉತ್ತರಿಸಬೇಕು.
ನನ್ನನ್ನು "ಅಂಧಭಕ್ತೆ" ಅಂದರೂ ಪರವಾಗಿಲ್ಲ. 👍👍
- *Jyothi Umesh* ( ಫೇಸ್ಬುಕ್ )
*PS:* ಮೋದಿ ಮತ್ತು ಯೋಗಿ ಭಗವಂತ ವಿಷ್ಣುವಿನ ಅಂಶವಿರುವ ಆತ್ಮರು ಅವರು 😍 ಈ ಗಂಜಿನೋಣಗಳು ನಮ್ಮನ್ನು. ಅಂಧಭಕ್ತರೆಃದರೂ, ಮಂದ ಭಕ್ತರು ಎಂದರೂ ಸರಿಯೇ... ನಾವು ಈ ದೈವಾಂಶರ ಹಿಃಬಾಲಕರು ಆಗಿರುವುದು ನಮ್ಮ ಪುಣ್ಯವೆ ಅಲ್ವೆನು ಅಕ್ಕ.. 🥰
🏹 *ಕೃಷ್ಣ ಚೇತನ* 🚩