ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್ @kalyana_karnataka_study_circle Channel on Telegram

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

@kalyana_karnataka_study_circle


👉 Change your destiny with your self study 👈

🌑 ಕತ್ತಲೆಯನ್ನು ಶಪಿಸುವುದಕಿಂತ ದೀಪ ಬೆಳಗಿಸುವುದೇ ಲೇಸು🪔

Join our Teligram Channel
👇🏻👇🏻👇🏻👇🏻👇🏻

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್ (Kannada)

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್ ಟೆಲಿಗ್ರಾಮ್ ಚಾನಲ್ ಒಂದು ಹೊಸ ಶಿಕ್ಷಣ ಸಂಸ್ಥೆಯಾಗಿ ಎಲ್ಲರೂ ತಮ್ಮ ಸ್ವತಂತ್ರ ಅಧ್ಯಯನದಿಂದ ತಮ್ಮ ಭವಿತವನ್ನು ಬದಲಿಸಲು ಸಾಧ್ಯವಾಗುತ್ತದೆ. ಕತ್ತಲೆಯನ್ನು ಶಪಿಸುವ ಸ್ಥಳದಲ್ಲಿ ದೀಪವನ್ನು ಬೆಳಗಿಸುವುದೇ ಲೇಸು. ನೀವು ನಿಮ್ಮ ಅಧ್ಯಯನವನ್ನು ನಡೆಸಿ ನಿಮ್ಮ ಅದೃಷ್ಟವನ್ನು ಬದಲಿಸಬಹುದು. ಸ್ವತಂತ್ರ ಅಧ್ಯಯನದಿಂದ ಉತ್ತಮ ನಿಯೋಜನೆಗಳನ್ನು ಒಳಗೊಂಡ ಈ ಸರ್ಕಲ್ ಚಾನಲ್ ಸಂಘಟಿತ ಅಧ್ಯಯನ ಕಾರ್ಯಕ್ರಮಗಳನ್ನು ನಿಮಗೆ ಒದಗಿಸುತ್ತದೆ. ಅಂತರರಾಷ್ಟ್ರೀಯ ಮೆಚ್ಚುಗೆಗಳ ಹೇಗೆ ಬಾಧಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಸಾಕ್ಷಾತ್ಕಾರ ಸಂಬಂಧಿತ ವಿಷಯಗಳ ಮೂಲಕ ಮಾದರಿಯಿಂದ ಹೊರಡಿಸಲಾಗುತ್ತದೆ. ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್ ಚಾನಲ್ ನಲ್ಲಿ ಸೇರಿಸಿಕೊಳ್ಳಿ ಮತ್ತು ನಿಮ್ಮ ಭವಿತ ಅನುಭವಿಸಿ.

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

24 Nov, 12:23


ರಾಷ್ಟ್ರ ರಾಜಧಾನಿಗೆ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್‌) ನಂದಿನಿ ಹಾಲು ಲಗ್ಗೆಯಿಟ್ಟಿದ್ದು, ದೆಹಲಿಯಲ್ಲಿ ಮುಂದಿನ ಆರು ತಿಂಗಳೊಳಗೆ ಪ್ರತಿನಿತ್ಯ 5 ಲಕ್ಷ ಲೀ.ಗೆ ಹಾಲು ಮಾರಾಟ ಮಾಡಲು ಕೆಎಂಎಫ್‌ ನಿರ್ಧರಿಸಿದೆ.

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

24 Nov, 10:52


K-SET GS Paper 24-11-2024

ಇಂದು (2024 ನವೆಂಬರ್-24 ರಂದು) KEA ನಡೆಸಿದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ ಪ್ರಶ್ನೆ ಪತ್ರಿಕೆ.

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

24 Nov, 00:58


ಕೆಸೆಟ್ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ ಶುಭವಾಗಲಿ ಎಂದು ಹಾರೈಸುವ

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

23 Nov, 16:44


ನಾಳೆಯ ಕೆ ಸೆಟ್ ಪರೀಕ್ಷೆಗೆ ವಸ್ತ್ರ ಸಂಹಿತೆ

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

23 Nov, 14:03


* 21, 22.11.2024 * ಜ್ಞಾನಗಂಗೋತ್ರಿ * ಪ್ರಚಲಿತ ಘಟನೆಗಳು *

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

23 Nov, 10:51


ಕಾಪರ್ ಏಜ್' ಸಂಸ್ಥೆಯ ಶರತ್ ಜಿ.ಎನ್. ಆತ್ಮಹತ್ಯೆ

ದಾವಣಗೆರೆ: ನಗರದ ಎಸ್.ಎಸ್. ಬಡಾವಣೆಯ ನಿವಾಸಿ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ 'ಕಾಪರ್ ಏಜ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್'ನ ಮಾಲೀಕ ಶರತ್‌ ಜಿ.ಎನ್‌. (35) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶರತ್‌ ಅವರು ಹಲವು ಬಾರಿ ಐಎಎಸ್, ಕೆಎಎಸ್ ಪರೀಕ್ಷೆ ಬರೆದಿದ್ದರು. ಆ ಬಳಿಕ ಸ್ವಂತ ತರಬೇತಿ ಕೇಂದ್ರ ಆರಂಭಿಸಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಹೆಸರು ಗಳಿಸಿದ್ದರು. ವಿವಿಧ ಜಿಲ್ಲೆಗಳಲ್ಲಿ ಇವರ ಸಂಸ್ಥೆಯ ಶಾಖೆಗಳಿವೆ.

ಅವಿವಾಹಿತರಾಗಿದ್ದ ಶರತ್‌, ತಂದೆ – ತಾಯಿ ಕಾರ್ಯಕ್ರಮಕ್ಕೆಂದು ಹೊರಗಡೆ ಹೋಗಿದ್ದಾಗ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

`ಐಎಎಸ್‌, ಐಪಿಎಸ್‌ನಲ್ಲಿ ನಿರೀಕ್ಷಿತ ಯಶಸ್ಸು ದೊರೆಯದ ಬಗ್ಗೆ ಕೊರಗಿತ್ತು. ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪಾಲಕರು ತಿಳಿಸಿದ್ದಾರೆ. ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು.

ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.


ಓಂ ಶಾಂತಿ ಸರ್ 🥲

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

23 Nov, 08:18


ಯೋಜನೆಯ ಉದ್ದೇಶ :-
 
ಅ). ಯಾವುದೇ ಇಲಾಖೆಯ ಸರ್ಕಾರಿ/ ಸರ್ಕಾರಿ ಅನುದಾನಿತ ವಿದ್ಯಾರ್ಥಿ ನಿಲಯ/ ವಸತಿ ಕಾಲೇಜುಗಳಲ್ಲಿ ಪ್ರವೇಶ ದೊರೆಯದ ಹಾಗೂ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸಹಾಯವನ್ನು ಒದಗಿಸುವುದು. ಈ ಯೋಜನೆಯ ಉದ್ದೇಶ.
 
ಆ), ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೆ ರೂ. 1,500/- ರಂತೆ ಶೈಕ್ಷಣಿಕ ವರ್ಷದ 10 ತಿಂಗಳಿಗೆ ಒಟ್ಟು ರೂ. 15,000/- ಗಳ ಸಹಾಯಧನವನ್ನು ಇತರೆ ನಿಬಂಧನೆಗೊಳಪಟ್ಟು ಅವರ ಯಾವುದಾದರೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕಿನಲ್ಲಿ ತೆರೆದಿರುವ ಬ್ಯಾಂಕ್ ಖಾತೆಗೆ ಆನ್ ಲೈನ್ ( ಆರ್.ಟಿ.ಜಿ.ಎಸ್. ) ಮೂಲಕ ಜಮಾ ಮಾಡಲಾಗುವುದು.
 
ಇ), ವಿದ್ಯಾರ್ಥಿಗಳು ಕೆಳಕಂಡ ಯಾವುದಾದರೂ ಒಂದು ಸೌಲಭ್ಯವನ್ನು ಮಾತ್ರ ಪಡೆಯಬಹುದು.
ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ
ಊಟ ಮತ್ತು ವಸತಿ ಸಹಾಯ ಯೋಜನೆ
 
ಈ). ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಾದವರು ಆನ್ ಲೈನ್ ( Online ) ಮೂಲಕ ಅರ್ಜಿ ಸಲ್ಲಿಸಬೇಕು.
 
 
 
ಅರ್ಹತೆ
(ಅ). ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
 
(ಆ). ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅಧಿಸೂಚಿಸಿರುವ, ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿರಬೇಕು
 
(ಇ). ಕರ್ನಾಟಕ ಶಾಸನಬದ್ದ ವಿಶ್ವವಿದ್ಯಾಲಯಗಳ ಅಧೀನಕ್ಕೆ ಒಳಪಡುವ, ಸರ್ಕಾರಿ/ ಸ್ಥಳೀಯ ಸಂಸ್ಥೆ/ ಅನುದಾನಿತ ಸಂಸ್ಥೆಗಳು/ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ   ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿರಬೇಕು.
 
(ಈ) ಮೇಲಿನ ಸೌಲಭ್ಯ ಪಡೆಯಲು ವಿದ್ಯಾರ್ಥಿಯ ತಂದೆ- ತಾಯಿ / ಪೋಷಕರ ಕುಟುಂಬದ ಒಟ್ಟು ವಾರ್ಷಿಕ ಆದಾಯ ( Gross Annual Income) ಈ ಕೆಳಗೆ ನಿಗದಿಪಡಿಸಿದ ಮಿತಿಯೊಳಗೆ ಇರಬೇಕು.
 
ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ರೂ 2.50ಲಕ್ಷ
ಪ್ರವರ್ಗ-2ಎ, 3ಎ ಮತ್ತು 3ಬಿ ವಿದ್ಯಾರ್ಥಿಗಳಿಗೆ ರೂ1.00ಲಕ್ಷ
 
ಉ) ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿರಬೇಕು. ಹಾಗೂ ವ್ಯಾಸಂಗ ಮಾಡುವ ಕಾಲೇಜಿನಿಂದ ಕನಿಷ್ಟ 5 ಕಿ.ಮೀ.ದೂರದವರಾಗಿರಬೇಕು. ಆದರೆ, ವಿದ್ಯಾರ್ಥಿಯ ಸ್ವಂತ ಸ್ಥಳ ನಗರ/ಪಟ್ಟಣ ಆಗಿದ್ದು, ಅವರು ಬೇರೆ ನಗರ/ಪಟ್ಟಣದಲ್ಲಿ ಇರುವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ, ಅಂತಹವರು ಈ ಸೌಲಭ್ಯಕ್ಕೆ ಅರ್ಹರಿರುತ್ತಾರೆ.
(ಊ) ಈ ಯೋಜನೆಯಡಿ ಪ್ರಥಮ ಬಾರಿಗೆ ಸೌಲಭ್ಯವನ್ನು ಪಡೆಯಲು, ಈ ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ, ಈ ಕೆಳಗಿನಂತೆ ಕನಿಷ್ಠ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. .
ಪ್ರವರ್ಗ-1 – 55% 
ವರ್ಗ-2ಎ, 3ಎ 3ಬಿ - 65%
 
(ಅ) ಸಮಾನ ಕೋರ್ಸುಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವ್ಯಾಸಂಗ ಮಾಡುತ್ತಿದ್ದಲ್ಲಿ, ಅಂತಹವರು ಅರ್ಹರಿರುವುದಿಲ್ಲ. (ಉದಾ: ಬಿ.ಎ ನಂತರ ಬಿ.ಕಾಂ, ಎಂ.ಎ. (ಕನ್ನಡ) ನಂತರ ಎಂ.ಎ. (ಇಂಗ್ಲೀಷ್), ಬಿ.ಎಡ್ ನಂತರ ಎಲ್.ಎಲ್.ಬಿ. ಇತ್ಯಾದಿಗಳಿಗೆ ಪ್ರವೇಶ ಪಡೆದಿದ್ದಲ್ಲಿ)
 
 (ಆ) ಸ್ನಾತಕೋತ್ತರ/ವೈದ್ಯಕೀಯ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಕೋರ್ಸಿನ ಅವಧಿಯಲ್ಲಿ ಮೆಡಿಕಲ್ ಪ್ರಾಕ್ಟಿಸ್‌ ಮಾಡುತ್ತಿದ್ದಲ್ಲಿ, ಈ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ.
 
(ಇ) ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಕೋರ್ಸುಗಳ ಪದವಿ ಅಥವಾ ಸ್ನಾತಕೋತ್ತರ ಪದವಿಗಳಲ್ಲಿ ಉತ್ತೀರ್ಣ/ಅನುತ್ತೀರ್ಣರಾದವರು ಅಂಗೀಕೃತ ವೃತ್ತಿಪರ ಅಥವಾ ತಾಂತ್ರಿಕ ಸರ್ಟಿಫಿಕೇಟ್, ಡಿಪ್ಲೋಮ, ಪದವಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡಿದ್ದಲ್ಲಿ, ಹಾಗೂ ಇತರೆ ರೀತಿ ಅರ್ಹರಿದ್ದಲ್ಲಿ ಅವರು ಈ ಯೋಜನೆಯ ಅಡಿ ಸೌಲಭ್ಯಗಳಿಗೆ ಅರ್ಹರಿರುತ್ತಾರೆ. ಒಂದಕ್ಕಿಂತ ಹೆಚ್ಚು ಬಾರಿ ಕೋರ್ಸುಗಳ ಬದಲಾವಣೆ ಮಾಡಿಕೊಂಡವರು ಅರ್ಹರಿರುವುದಿಲ್ಲ.
 
(ಈ) ಒಂದೇ ಕುಟುಂಬದ ಇಬ್ಬರು ಗಂಡು ಮಕ್ಕಳು ಮಾತ್ರ. ಈ ಯೋಜನೆಗೆ ಅರ್ಹರು. ಆದರೆ, ಈ ನಿರ್ಬಂಧ ಹೆಣ್ಣು ಮಕ್ಕಳಿಗೆ ಅನ್ವಯಿಸುವುದಿಲ್ಲ.

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

23 Nov, 08:18


ವಿದ್ಯಾಸಿರಿ ಯೋಜನೆಯಡಿ ಒದಗಿಸುವ ವಿದ್ಯಾರ್ಥಿವೇತನ 1,500 ರೂ. ಗಳನ್ನು ಮುಂದಿನ ವರ್ಷದಿಂದ ₹2 ಸಾವಿರಕ್ಕೆ ಏರಿಸಲಾಗುವುದು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

23 Nov, 00:57


Good Morning..🤸‍♂️🧘‍♀️🥗🚴‍♀️🤾‍♂️

"Once you accept someone for what they really are,
they will really surprise you by being better than you ever expected.

ಕಲ್ಯಾಣ ಕರ್ನಾಟಕ ಸ್ಟಡಿ ಸರ್ಕಲ್

22 Nov, 16:56


🍀ವಿಶ್ವದ ಅತಿ ಎತ್ತರದ ಮಹಿಳೆ
- ರುಮೇಸಾ ಗೆಲ್ಗಿ
🍁ವಿಶ್ವದ ಅತ್ಯಂತ ಕುಳ್ಳ ಮಹಿಳೆ
- ಜ್ಯೋತಿ ಅಮ್ಗೆ