ಇವರು ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಂಚನಹಳ್ಳಿ ಗ್ರಾಮದ ಚಂದ್ರೇಗೌಡ ಮತ್ತು ನಾಗಮ್ಮ ಅವರ ಮಗನಾಗಿದ್ದು ಇಂದು ಈ PSI ಸಾಧಕರಾಗುವ ಮೂಲಕ ಅವರ ತಂದೆ- ತಾಯಿ ಹಾಗೂ ಅವರ ಊರಿಗೆ ಕೀರ್ತಿ ತಂದುಕೊಟ್ಟಿದ್ದಾರೆ...
ಇಂದಿನ ಸ್ಪರ್ಧಾರ್ಥಿಗಳಿಗೆ ಇವರೇ ಸ್ಫೂರ್ತಿ:
ಇತ್ತೀಚೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ಮಾಡಲು ಅಭ್ಯರ್ಥಿಗಳು ಅರ್ಜಿ ಹಾಕಿ ನೋಡೋಣ ಒಂದು ಬಾರಿ ಪ್ರಯತ್ನ ಮಾಡೋಣ ಎಂದು 4 ರಿಂದ 6 ತಿಂಗಳು ಅಥವಾ ಒಂದು ವರ್ಷ ಅಭ್ಯಾಸ ಮಾಡಿ ಪರೀಕ್ಷೆ ಬರೆಯುತ್ತಾರೆ ಆದರೆ ಅದರಲ್ಲಿ ಉತ್ತಮ ಫಲಿತಾಂಶ ಬಾರದೇ ಇದ್ದಾಗ ತಮ್ಮ ಓದುವ ಅಭ್ಯಾಸ ನಿಲ್ಲಿಸಿಯೇ ಬಿಡುತ್ತಾರೆ... ಇಲ್ಲಿಯೇ ಸ್ಪರ್ಧಾರ್ಥಿಗಳು ತಪ್ಪು ಮಾಡುವುದು...ಏಕೆಂದರೆ ನನ್ನ ಪ್ರಕಾರ ಒಂದು ವರ್ಷ ಅಭ್ಯಾಸಮಾಡಿದಾಗಲೇ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೇಗೆ ಪ್ರಶ್ನೆಗಳು ಬರುತ್ತವೆ, ನಾವು ಹೇಗೆ ಓದಬೇಕು, ಎಲ್ಲಿ ತಪ್ಪುಮಾಡುತ್ತಿದ್ದೇವೆ, ಯಾವ ವಿಷಯಗಳನ್ನು ಹೆಚ್ಚು ಅಭ್ಯಾಸ ಮಾಡಬೇಕು ಎಂಬುದು ಆ ಒಂದು ವರ್ಷದ ಅನುಭವದಲ್ಲಿ ಅರಿವಾಗುತ್ತದೆ...ಹೇಳಬೇಕೆಂದರೆ ಈ ಹಂತವೇ ನಿಮ್ಮ ಯಶಸ್ಸಿನ ಮೊದಲ ಮೆಟ್ಟಿಲು...ಇದನ್ನ ಅರಿತು ಯಾರು ಮುಂದೆ ತಾಳ್ಮೆಯಿಂದ ಮತ್ತೆ ತಮ್ಮ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಒಂದು ಪದ,ಒಂದು ಸಾಲಿನ ಜ್ಞಾನಾಧಾರಿತ ಪುಸ್ತಕಗಳನ್ನು ಓದುವುದನ್ನು ಬಿಟ್ಟು ಆಳವಾದ ಸಂಪೂರ್ಣ ಜ್ಞಾನಾಧಾರಿತ ಒದನ್ನು ಮುಂದುವರೆಸುತ್ತಾರೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ....ಇದೇ ರೀತಿಯಲ್ಲಿ ಅಭ್ಯಾಸ ಮಾಡಿ.. ನನ್ನ ವಿದ್ಯಾರ್ಥಿ ಚೆನ್ನಕೇಶವ ಇಂದು ಜ್ಞಾನ ಸಾಧನಾ PSI ಸಾಧಕರಾಗಿರುವುದು...ನನಗೆ ಹೆಮ್ಮೆಯ ವಿಷಯ.
#jnanasadhana #raghunkadur
https://www.instagram.com/p/DBa37z2P-as/?igsh=aXowcDdoMGUweXR5