SDPI Karnataka

@sdpikarnataka


SDPI Karnataka official
Freedom From Hunger- Freedom From Fear
Our politics for Cause, not for career!

SDPI Karnataka

22 Oct, 22:05


ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಯು ಅಕ್ಟೋಬರ್ 21 ಸೋಮವಾರದಂದು ಬೆಂಗಳೂರಿನ ಮುಖ್ಯ ಕಛೇರಿಯಲ್ಲಿ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಭೆಯಲ್ಲಿ ಪ್ರಮುಖವಾಗಿ ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಚರ್ಚೆ ನಡೆಯಿತು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ

#SDPI #SDPIKarnataka #SdpiRealAlternative

SDPI Karnataka

22 Oct, 14:01


ಅಶ್ಫಾಖುಲ್ಲಾ ಖಾನ್‌

(22 ಅಕ್ಟೋಬರ್)

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ 27ನೇ ವಯಸ್ಸಿನಲ್ಲಿ ಬ್ರಿಟಿಶರು ವಿಧಿಸಿದ ನೇಣಿಗೆ ಕೊರಳೊಡ್ಡಿದ ಕ್ರಾಂತಿಕಾರಿ ಅಶ್ಫಾಖುಲ್ಲಾ ಖಾನ್‌ ರವರ ಜನ್ಮದಿನ ಈ ದಿನದಂದು ಅವರ ಹೋರಾಟವನ್ನ ಸ್ಮರಿಸೋಣ.

ಅಬ್ದುಲ್ ಮಜೀದ್
ಅಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ

#SDPI #SDPIKarnataka #SdpiRealAlternative

SDPI Karnataka

20 Oct, 15:57


ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ನೋಡಿ ದಿಗ್ಭ್ರಮೆಯಾಗಿದೆ. “ಜೈ ಶ್ರೀರಾಮ್ ಮಸೀದಿಯಲ್ಲಿ ಕೂಗುವುದು ಧಾರ್ಮಿಕ ಭಾವನೆಗಳಿಗೆ ಘಾಸಿಯನ್ನುಂಟು ಮಾಡಲ್ಲ"ಎಂಬ ತೀರ್ಪು ಸಂವಿಧಾನದ ಆಶಯಕ್ಕೆ ವಿರುಧ್ದವಾಗಿದೆ ಹಾಗೂ ಕೋಮುವಾದಿಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ.

ರಿಯಾಝ್ ಕಡಂಬು
ರಾಜ್ಯ ಸಮಿತಿ ಸದಸ್ಯರು, ಎಸ್‌ಡಿ‌ಪಿಐ ಕರ್ನಾಟಕ
#sdpi #SDPIKarnataka

SDPI Karnataka

20 Oct, 15:14


ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಜಮಪುರ ಗ್ರಾಮದಲ್ಲಿ ದಲಿತರ ಮನೆಯ ಪಕ್ಕದಲ್ಲಿ ಶೌಚಾಲಯ ನಿರ್ಮಾಣವಾಗುತ್ತಿದ್ದನ್ನು ಪ್ರಶ್ನಿಸಿದ ದಲಿತರ ಮೇಲೆ ಸವರ್ಣೀಯರು ಹಲ್ಲೆ ನಡೆಸಿದ್ದಾರೆ. ಇದರಲ್ಲಿ 40ಕ್ಕೂ ಹೆಚ್ಚು ದಲಿತ ಸಮುದಾಯದ ಜನರಿಗೆ ಗಾಯಗಳಾಗಿವೆ ಮತ್ತು ಅದರಲ್ಲಿ 8 ಜನ ಜನರ ಸ್ಥಿತಿ ಗಂಭೀರವಾಗಿದೆ. ಇಷ್ಟಾದರೂ ಅಲ್ಲಿನ ಪೋಲಿಸರು ರಕ್ಷಣೆ ಒದಗಿಸುವುದು ಬಿಡಿ, ದೂರು ಸ್ವೀಕರಿಸಲೂ ಸಿದ್ದರಿಲ್ಲ. ಇದೆಂತಹ ವ್ಯವಸ್ಥೆ? ಇದು ಅತ್ಯಂತ ಖಂಡನೀಯ. ದಲಿತರು ವಾಸಿಸುವ ಸ್ಥಳವೆಂದರೆ ತಿಪ್ಪೆ ಗುಂಡಿಯೇ? ಅವರ ಮನೆಗಳ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಿ ಅವರು ವಾಸಿಸುವ ಪ್ರದೇಶದಲ್ಲಿ ರೋಗ ರುಜಿನಗಳಿಗೆ ಅವಕಾಶ ಮಾಡಿಕೊಡುವ ನೀಚತನ ಏಕೆ?

ಸರ್ಕಾರ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ದಲಿತರ ಮೇಲೆ ಹಲ್ಲೆ ನಡೆಸಿದ ಗೂಂಡಾಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.

#SDPI #SDPIKarnataka

SDPI Karnataka

19 Oct, 14:05


ಗೌರಿ ಲಂಕೇಶ್ ಕುಟುಂಬದವರನ್ನು ಮತ್ತು ಪ್ರಗತಿಪರ ಹೋರಾಟಗಾರರನ್ನು ಬಂಧಿಸುವ ಮೂಲಕ ಸರ್ಕಾರ ಗೌರಿ ಹತ್ಯೆ ಆರೋಪಿಗಳಿಗೆ ಮನುವಾದಿಗಳೊಂದಿಗೆ ಸರ್ಕಾರವೂ ಸನ್ಮಾನ ಮಾಡಿದೆ:
ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ

ಬೆಂಗಳೂರು, 19, ಅಕ್ಟೋಬರ್ 2024: ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶರನ್ನು ಕೊಂದ ಆರೋಪಿಗಳನ್ನು ಜೀವವಿರೋಧಿ ಮನುವಾದಿಗಳು ಸನ್ಮಾನ ಮಾಡಿ ತಾವು ಇಂಥ ನೀಚ ಮನಸ್ಥಿತಿಯವರು ಎಂದು ಜಗತ್ತಿಗೆ ತೋರಿಸಿದ್ದಾರೆ. ಈ ನೀಚತನದ ವಿರುದ್ಧ ಪ್ರತಿಭಟಿಸಿದ ಗೌರಿಯವರ ಕುಟುಂಬ ಸದಸ್ಯರನ್ನು ಮತ್ತು ಪ್ರಗತಿಪರ ಹೋರಾಟಗಾರರನ್ನು ಬಂಧಿಸುವ ಮೂಲಕ ಸರ್ಕಾರವೂ ಸಹ ಆ ಕೊಲೆಗಡುಕ ಆರೋಪಿಗಳಿಗೆ ಪರೋಕ್ಷವಾಗಿ ಸನ್ಮಾನ ಮಾಡಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊಲೆಗಡುಕರಿಗೆ ಬೆಂಬಲಿಸುವ ರೀತಿಯಲ್ಲಿ ಆರೋಪಿಗಳಿಗೆ ಸನ್ಮಾನ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಸಿದ್ದರಾಮಯ್ಯ ಅವರ ಸರ್ಕಾರ ಏನೂ ಮಾಡದೆ ಸುಮ್ಮನಾಗಿತ್ತು. ಆದರೆ ಇಂದು ಆ ಜೀವವಿರೋಧಿ ಕೃತ್ಯದ ವಿರುದ್ಧ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ಗೌರಿ ಲಂಕೇಶ್ ಕುಟುಂಬದವರನ್ನು ಮತ್ತು ಪ್ರಗತಿಪರ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸರ್ಕಾರಕ್ಕೆ ಏನಾಗಿದೆ ಎಂದು ಕಿಡಿ ಕಾರಿದ ಮಜೀದ್ ಅವರು, ಕೋಮುವಾದಿಗಳು ದ್ವೇಷ ಭಾಷಣ ಮಾಡಿದಾಗ, ಹಿಂಸೆಗೆ ಪ್ರಚೋದನೆ ನೀಡಿದಾಗ ಇದೇ ಸರ್ಕಾರಕ್ಕೆ ನೆಪ ಮಾತ್ರಕ್ಕೂ ಕ್ರಮಕ್ಕೆ ಮುಂದಾಗುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ಮೃದು ಹಿಂದುತ್ವ ಧೋರಣೆಗೆ ಹಿಡಿದ ಕನ್ನಡಿ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿರುವ ಮಜೀದ್ ಅವರು ಈ ಡೋಂಗಿ ಸರ್ಕಾರ ತನ್ನ ಈ ನಡವಳಿಕೆಗೆ ರಾಜಕೀಯವಾಗಿ ದೊಡ್ಡ ಬೆಲೆ ತೆರಲಿದೆ ಎಂದು ತಮ್ಮ ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.

#sdpi #SdpiRealAlternative #SDPIKarnataka

SDPI Karnataka

13 Oct, 08:41


ವರದಾ ನದಿ ದಂಡೆಯ ಮೇಲಿರುವ ಶಿಗ್ಗಾಂವ್ ಏತ ನೀರಾವರಿ ಯೋಜನೆಯ ಜಾಕವೇಲ್ ಕಮ್ ಪಂಪ್ ಹೌಸ್ ನ 30 ನೌಕರರಿಗೆ ಕಳೆದ ಆರು ತಿಂಗಳಿಂದ ವೇತನ ಪಾವತಿಯಾಗಿಲ್ಲ. ರಾಜ್ಯದ ಖಜಾನೆ ಖಾಲಿಯಾಗಿದೆಯೆ? ಅಥವಾ ಗುತ್ತಿಗೆ ನೌಕರರು ಎಂದರೆ ನಾವು ಕೊಟ್ಟಷ್ಟು, ಕೊಟ್ಟಾಗ ತೆಗೆದುಕೊಳ್ಳಬೇಕು ಅನ್ನುವ ದುರಹಂಕಾರದ ಮನಸ್ಥಿತಿಯೋ.? ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸ್ಪಷ್ಟ ಪಡಿಸಬೇಕು. ನಾವು ಬಡವರ ಪರ ಎಂದು ಹೇಳುವ ಸಿದ್ದರಾಮಯ್ಯ ನವರು ಹೊಟ್ಟೆಪಾಡಿಗೆ ಗುತ್ತಿಗೆ ಆಧಾರದ ಮೇಲೆ ದುಡಿಯುವ ವರ್ಗವನ್ನು ಹೀಗೆ ಶೋಷಿಸುವುದು ಎಷ್ಟು ಸರಿ? ಆ ಕಾರ್ಮಿಕರ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಉಪಮುಖ್ಯಮಂತ್ರಿಗಳು ಹಾಗು ಜಲಸಂಪನ್ಮೂಲ ಸಚಿವರಾಗಿರುವ ಡಿಕೆ ಶಿವಕುಮಾರ್ ಅವರಲ್ಲಿ ಆಗ್ರಹಿಸುತ್ತೇನೆ.

ಅಫ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿ‌ಪಿಐ ಕರ್ನಾಟಕ

#SDPI #SdpiRealAlternative #SDPIKarnataka

SDPI Karnataka

13 Oct, 07:09


ಸಂತಾಪ

ದೆಹಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಡಾ.G. N.ಸಾಯಿಬಾಬಾ ಅವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಸಂತಾಪ ಸೂಚಿಸುತ್ತಿದ್ದೇನೆ.
ಇವರನ್ನು ಹಲವು ಸುಳ್ಳು ಪ್ರಕರಣ ದ ಆರೋಪ ಹೊರಿಸಿ ಸಾಯಿಬಾಬಾ ಅವರನ್ನು ಬಂಧಿಸಲಾಗಿತ್ತು ಹಾಗೂ ಅವರ ವಿರುದ್ಧ ಕ್ರೂರ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅವರು ಪೊಲೀಯೊದಿಂದ ಶಾಶ್ವತ ಪಕ್ಷವಾತ ಪೀಡಿತರಾಗಿದ್ದರೂ ಕಾರಾಗೃಹದ ಆಡಳಿತ ಅವರಿಗೆ ಔಷಧಗಳನ್ನು ಹಸ್ತಾಂತರಿಸಲು ನಿರಾಕರಿಸಿತ್ತು. ಕಳೆದ 7 ತಿಂಗಳ ಹಿಂದೆ ಇವರು ಜೈಲಿನಿಂದ ಬಿಡುಗಡೆ ಹೊಂದಿದ್ದರು. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಸೃಷ್ಟಿಕರ್ತನು ಅವರ ಕುಟುಂಬಕ್ಕೆ ಮತ್ತು ಹಿತೈಷಿಗಳಿಗೆ ನೀಡಿ ಅನುಗ್ರಹಿಸಲಿ.

ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, SDPI ಕರ್ನಾಟಕ

#SDPI #SDPIKarnataka #SdpiRealAlternative

SDPI Karnataka

12 Oct, 16:28


ಕರ್ನಾಟಕದ ಕಾಂಗ್ರೆಸ್ ಸರ್ಕಾರ, ರೈತರ, ಜನಪರ ಹೋರಾಟಗಾರರ ಮೇಲಿನ ಕೇಸುಗಳನ್ನು ವಾಪಸ್ ಪಡೆದಿರುವುದನ್ನು ಸ್ವಾಗತಿಸುತ್ತೇನೆ,‌ಆದರೆ ಕೇಂದ್ರ ಒಕ್ಕೂಟ ಬಿಜೆಪಿ ಸರ್ಕಾರ, ಮುಸ್ಲಿಂ ದ್ವೇಷದ ಭಾಗವಾಗಿ, ಜಾರಿಗೆ ತರಲು ಹೊರಟಿದ್ದ NRC/CAA ವಿರುದ್ಧವಾಗಿ ಕರ್ನಾಟಕ ರಾಜ್ಯದಲ್ಲಿ ನಡೆದ ಪ್ರತಿಭಟನಾಕಾರರ ಮೇಲೆ, ಆಗಿನ ಬಿಜೆಪಿ ಸರ್ಕಾರ ನೂರಾರು ಕೇಸುಗಳನ್ನು ದಾಖಲಿಸಿದೆ. ಆದರೆ NRC/CAA ವಿರುದ್ಧ, ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲಿನ, ಕೇಸುಗಳನ್ನು ಕಾಂಗ್ರೆಸ್ ರಾಜ್ಯ ಸರ್ಕಾರ ವಾಪಸ್ ಪಡೆಯದೆ, ತಾರತಮ್ಯವೆಸಗಿದೆ ಮಾನ್ಯ ಸಿದ್ದರಾಮಯ್ಯನವರೇ, NRC/CAA ವಿರುದ್ಧದ ಹೋರಾಟಗಾರರ ಕೇಸುಗಳನ್ನು ಈ ಕೂಡಲೇ ವಾಪಸ್ ಪಡೆಯ ಬೇಕೆಂದು ಆಗ್ರಹಿಸುತ್ತೇನೆ.

ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎ‌ಸ್‌‌ಡಿಪಿಐ ಕರ್ನಾಟಕ

#SDPIKarnataka #SdpiRealAlternative #SDPI

SDPI Karnataka

10 Oct, 20:14


ಕಾಲೇಜುಗಳಲ್ಲಿ ಸಂಘಪರಿವಾರ ಸ್ಕಾರ್ಫ್/ಬುರ್ಕಾ ವಿವಾದ ಎಬ್ಬಿಸಿ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣ ಕಸಿದಾಗ "ಮುಖ ಮುಚ್ಚಿಕೊಂಡು ಬರಬೇಡ. ತಿಕ ಮುಚ್ಚಿಕೊಂಡು ಬಾ" ಎಂದಿದ್ದ ಸಂಘಿ ಹಿರೇಮಗಳೂರು ಕಣ್ಣನ್ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ, ಗುರುರಾಜ ಕರ್ಜಗಿ ಎಂಬ ಸಂಘಪರಿವಾರಿದ ವ್ಯಕ್ತಿ 'ಕಲ್ಯಾಣ ಕರ್ನಾಟಕ ಶೈಕ್ಷಣಿಕ ಗುಣಮಟ್ಟದ ಸುಧಾರಣ ಸಮಿತಿ'ಗೆ ಮುಖ್ಯಸ್ಥ. ಇದೇನಾ ನಿಮ್ಮ ಬದ್ಧತೆ ಸಿದ್ದರಾಮಯ್ಯರವರೆ? ಮುಸ್ಲಿಮರ ಹಿತ ಕಾಯುತ್ತೀನಿ ಎಂದು ವಾಗ್ದಾನ ನೀಡಿ ಮುಸ್ಲಿಮರ ಅಷ್ಟೂ ಮತಗಳನ್ನು ಪಡೆದ ನೀವು ಮತ್ತು ಕಾಂಗ್ರೆಸ್ ಪಕ್ಷಕ್ಕೆ ನೀವು ಮಾಡುತ್ತಿರುವುದು ದ್ರೋಹ ಎಂದು ಎನಿಸುತ್ತಿಲ್ಲವೇ ?

ನಮ್ಮ ಸಿಟ್ಟು ಬಿಡಿ, ನಿಮ್ಮದೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನಿಮ್ಮ ಈ ಡಬಲ್ ಸ್ಟ್ಯಾಂಡರ್ಡ್ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಈಗಲಾದರೂ ತಿದ್ದಿಕೊಂಡು ಇಂತಹ ತಪ್ಪುಗಳು ಮುಂದೆ ನಡೆಯದಂತೆ ನೋಡಿಕೊಳ್ಳಿ ಸಿದ್ದರಾಮಯ್ಯ ನವರೆ. ಇಲ್ಲವಾದರೆ ನೀವು ನಿಮ್ಮ ಪಕ್ಷ ಇದಕ್ಕೆ ದೊಡ್ಡ ಬೆಲೆ ತೆರಲಿದೆ.

ಅಫ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿ‌ಪಿಐ ಕರ್ನಾಟಕ

#SDPI #SDPIKarnataka #SdpiRealAlternative

SDPI Karnataka

10 Oct, 20:03


#SaveDemocracy

28 ministers in Modi's 3rd government face criminal cases, with 19 facing serious charges like attempted murder, crimes against women, and hate speech, according to the Association of Democratic Reforms (ADR). BJP Karnataka leaders have no moral ground to demand CM of Karnataka siddaramaiah resignation in the MUDA case. Their own party's record speaks volumes.

Abdul Majeed
State President, SDPI Karnataka

#SDPIKarnataka #SDPI #SdpiRealAlternative

SDPI Karnataka

08 Oct, 15:28


ರಾಜ್ಯಾಧ್ಯಕ್ಷರ ಮನವಿ:

ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎ‌ಸ್‌‌ಡಿಪಿಐ ಕರ್ನಾಟಕ

ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ. ಆದರೆ ಸ್ವಾತಂತ್ರ‍್ಯ ದೊರಕಿ 75 ವರ್ಷಗಳು ಕಳೆದ ನಂತರವೂ ನಮ್ಮಲ್ಲಿ ವ್ಯವಸ್ಥಿತವಾದ ಪ್ರಾತಿನಿಧ್ಯ ವ್ಯವಸ್ಥೆಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಎಲ್ಲರ ಪಾಲ್ಗೊಳ್ಳುವಿಕೆ ಎಂಬುದು ಕೇವಲ ರಾಜಕೀಯ ನಾಯಕರ ಭಾಷಣಗಳಿಗೆ ಸೀಮಿತವಾಗಿದೆ. ವಾಸ್ತವದಲ್ಲಿ ದಲಿತರು, ತುಳಿತಕ್ಕೊಳಗಾದ ವರ್ಗಗಳು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರು ಸೂಕ್ತ ರಾಜಕೀಯ ಪ್ರಾತಿನಿಧ್ಯವಿಲ್ಲದೆ ರಾಜಕೀಯ ಅಧಿಕಾರದಿಂದ ದೂರ ಇದ್ದಾರೆ. ಈ ವರ್ಗಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮೇಲೆ ಬರದಿರಲು ಇದೇ ಮುಖ್ಯ ಕಾರಣವಾಗಿದೆ. ಏಕೆಂದರೆ ಅವರ ಪ್ರತಿನಿಧಿತ್ವ ಇಲ್ಲದ ಕಾರಣ ಅವರಿಗಾಗಿ ಸಮರ್ಥ ಮತ್ತು ರಚನಾತ್ಮಕ ಕಾರ್ಯಕ್ರಮಗಳು ರೂಪುಗೊಳ್ಳಲು ಸಾಧ್ಯವಾಗಿಲ್ಲ. ಇಂದಿಗೂ ಆ ಸಮುದಾಯಗಳು ಸಾಮಾಜಿಕ ಘನತೆ ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ಬದುಕುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಆರಂಭಗೊಂಡ ಪಕ್ಷವೇ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ). ಬ್ರಷ್ಟಾಚಾರ ರಹಿತ ಸ್ವಚ್ಛ ರಾಜಕೀಯ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವವರಿಗೆ ರಾಜಕೀಯ ಪ್ರಾತಿನಿಧ್ಯ ಒದಗಿಸುವ ಧ್ಯೇಯದೊಂದಿಗೆ ಜೊತೆಗೆ ಹಸಿವು ಮುಕ್ತ, ಭಯ ಮುಕ್ತ ರಾಷ್ಟ್ರವನ್ನು ಸ್ಥಾಪಿಸುವುದು ನಮ್ಮ ಪಕ್ಷದ ಕನಸಾಗಿದೆ.

ಕಳೆದ 15 ವರ್ಷಗಳಿಂದ ಅಸ್ಥಿತ್ವದಲ್ಲಿರವ ಎಸ್ಡಿಪಿಐ ಪಕ್ಷ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾ ಬಂದಿದೆ. ಶೋಷಿತ ಮತ್ತು ತುಳಿತಕ್ಕೊಳಗಾದ ಸಮುದಾಯಗಳ ಸಮಸ್ಯೆ, ಸಂಕಷ್ಟ ಮತ್ತು ಅವರ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದೆ. ಜೊತೆಗೆ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದೆ. ಆಂದೋಲನದ ರಾಜಕೀಯ ಮತ್ತು ಚುನಾವಣಾ ರಾಜಕೀಯ ಎರಡರ ಮೂಲಕ ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ಬೆಳವಣಿಗೆಯ ಕುರಿತೂ ತನ್ನ ಪ್ರಬುದ್ಧ ನಿಲುವನ್ನು ಕಾಲಕಾಲಕ್ಕೆ ಪ್ರಕಟಿಸುತ್ತಲೇ ಬರುತ್ತಿದೆ. ಕಳೆದ 15 ವರ್ಷಗಳಿಂದ ನಮ್ಮ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಮತ್ತು ಪರಿಶ್ರಮದಿಂದ ಇಂದು ನಾವು ಕರ್ನಾಟಕದಲ್ಲಿ 4ನೇ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದ್ದೇವೆ. ಅದರ ಪರಿಣಾಮವಾಗಿ ನಮ್ಮ ಪಕ್ಷ ಇಂದು ಕರ್ನಾಟಕ ರಾಜ್ಯದಲ್ಲಿ 350 ಕ್ಕೂ ಹೆಚ್ಚು ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ನಮ್ಮ ಪಕ್ಷ ಸದಾ ಸಂವಿಧಾನದ ತತ್ವಗಳ ಆಧರದ ಮೇಲೆ ಕಾರ್ಯನಿರ್ವಹಿಸಿಕೊಂಡು ಬಂದಿದೆ.

ನಮ್ಮ ಪಕ್ಷದ ಗುರಿ ಮತ್ತು ದ್ವೇಯವನ್ನು ಸಾಧಿಸಲು ಮತ್ತು ನಮ್ಮ ರಾಜಕೀಯ ಹೋರಾಟಗಳನ್ನು ನಿರಂತವಾಗಿ ಹಮ್ಮಿಕೊಳ್ಳಲು ಮಾನವ ಸಂಪನ್ಮೂಲಗಳ ಜೊತೆಜೊತೆಗೆ ಹಣದ ಅಗತ್ಯವೂ ದೊಡ್ಡ ಮಟ್ಟದಲ್ಲೇ ಇರುತ್ತದೆ. ನಮ್ಮ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ನಾವು ಇತರೆ ಪಕ್ಷಗಳಂತೆ ಅಂಬಾನಿ, ಅದಾನಿಯಂತಹ ಬಂಡವಾಳಶಾಹಿಗಳ ಮುಂದೆ ಕೈಕಟ್ಟಿ ನಿಲ್ಲುವುದಿಲ್ಲ. ಬದಲಾಗಿ ನಾವು ಇದಕ್ಕಾಗಿ ಸಾಮಾನ್ಯ ಜನರನ್ನೇ ಅವಲಂಬಿಸಿದ್ದೇವೆ. ಅದಕ್ಕಾಗಿ ನಾವು ಪ್ರತೀ ವರ್ಷ ಒಂದು ತಿಂಗಳ ಅವಧಿಗೆ ನಿಧಿ ಸಂಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ. ಅದೇ ರೀತಿ ಈ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಿಧಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಇದರ ಭಾಗವಾಗಿ ನಮ್ಮ ಪಕ್ಷ ನಿಮ್ಮ ಮುಂದೆ ಬರಲಿದೆ. ನೀವು ಈ ಪಕ್ಷದ ಅಭಿವೃದ್ಧಿ ಮತ್ತು ಜನಸಾಮಾನ್ಯರ ಸಬಲೀಕರಣದ ಈ ಹೋರಾಟಕ್ಕೆ ಉದಾರವಾಗಿ ದೇಣಿಗೆ ನೀಡಿ ಸಹಕರಿಸಬೆಕಾಗಿ ಈ ಮೂಲಕ ನಮ್ರತೆಯಿಂದ ವಿನಂತಿಸುತ್ತೇವೆ.

#SDPI #SDPIKarnataka #SdpiRealAlternative

SDPI Karnataka

08 Oct, 14:38


Press Release

Businessman Mumtaz Ali becomes a victim of honey trap fraud; Abdul Majeed, State President of SDPI, urges the government to curb honey trap scams

Bengaluru, October 7, 2024: Businessman Mumtaz Ali, brother of Legislative Council member B.M. Farooq, has fallen prey to the cruelty of a honey trap gang. Honey trap scams have become a systematic fraud in the state, increasing day by day. Abdul Majeed, State President of the Social Democratic Party of India (SDPI), has demanded that the government take measures to curb these scams in his press release. He urged businesspersons and entrepreneurs to be cautious when dealing with unfamiliar individuals and to avoid falling victim to such fraudulent networks.

Majeed criticized the Siddaramaiah-led Congress government for its significant failure in maintaining law and order, particularly regarding the rise in honey trap cases. The number of such incidents continues to escalate, leaving entrepreneurs in distress. The recent case of Mumtaz Ali serves as a fresh example, as he was recently reported missing and has now been found dead in a river. This indicates that the intelligence department of the state is completely ineffective, Majeed asserted in his statement against the state government.

Preliminary investigations have revealed that six individuals are involved in this case, according to police reports. Majeed emphasized that authorities must delve deeper into the case and impose stringent punishments on the culprits.

#SDPI #SDPIKarnataka #SdpiRealAlternative

SDPI Karnataka

08 Oct, 14:26


ಪತ್ರಿಕಾ ಪ್ರಕಟಣೆ

ರಾಜ್ಯದಲ್ಲಿ ಹನಿ ಟ್ರ್ಯಾಪ್ ವಂಚನಾ ಜಾಲಕ್ಕೆ ಬಲಿಪಶುವಾದ ಉದ್ಯಮಿ ಮುಮ್ತಾಜ್ ಅಲಿ, ಸರ್ಕಾರ ಹನಿಟ್ರ್ಯಾಪ್ ವಂಚನೆಗಳಿಗೆ ಕಡಿವಾಣ ಹಾಕಬೇಕು: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್.ಡಿ.ಪಿ.ಐ

ಬೆಂಗಳೂರು, 07 ಅಕ್ಟೋಬರ್ 2024: ವಿಧಾನ ಪರಿಷತ್ ಸದಸ್ಯ ಬಿ. ಎಮ್ ಫಾರೂಕ್ ಸಹೋದರ ಉದ್ಯಮಿ ಮುಮ್ತಾಜ್ ಅಲಿ ಅವರು ಹನಿಟ್ರ್ಯಾಪ್ ಗುಂಪಿನ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಹನಿಟ್ರ್ಯಾಪ್ ಒಂದು ವ್ಯವಸ್ಥಿತ ವಂಚನಾ ಜಾಲವಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ವ್ಯಾಪಾರಸ್ಥರು, ಉದ್ಯಮಿಗಳು ಅಪರಿಚಿತ ವ್ಯಕ್ತಿಗಳೊಂದಿಗೆ, ವ್ಯವಹರಿಸುವಾಗ ಎಚ್ಚರಿಕೆಯಿಂದ ಇರಬೇಕು ಮತ್ತು ಇಂತಹ ವಂಚನಾ ಜಾಲಕ್ಕೆ ಬಲಿಯಾಗದಿರಿ ಎಂದು ಅಬ್ದುಲ್ ಮಜೀದ್ ಕರೆ ನೀಡಿದ್ದಾರೆ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ದೊಡ್ಡಮಟ್ಟದಲ್ಲಿ ಸೋತಿದೆ. ಅದರಲ್ಲಿ ಮುಖ್ಯವಾದುದೆಂದರೆ ಹನಿಟ್ರ್ಯಾಪ್ ಪ್ರಕರಣಗಳು. ಇವುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಉದ್ಯಮಿಗಳು ಈ ಪಿಡುಗಿನಿಂದ ನಲುಗಿ ಹೋಗಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಮುಮ್ತಾಜ್ ಅಲಿ ಅವರ ಪ್ರಕರಣ. ಮೊನ್ನೆ ನಾಪತ್ತೆಯಾಗಿದ್ದ ಅವರು ಇಂದು ನದಿಯಲ್ಲಿ ಶವವಾಗಿ ದೊರೆತಿದ್ದಾರೆ. ಇಂತಹ ಪ್ರಕರಣಗಳಿಂದ ರಾಜ್ಯದಲ್ಲಿ ಗುಪ್ತಚರ ಇಲಾಖೆ ಸಂಪೂರ್ಣ ನಿದ್ದೆಯಲ್ಲಿದೆ ಎಂದು ಸ್ಪಷ್ಟವಾಗುತ್ತದೆ ಎಂದು ಮಜೀದ್ ಅವರು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ಈ ಪ್ರಕರಣದಲ್ಲಿ 6 ಮಂದಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಆಳಕ್ಕೆ ಹೋಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

#SDPI #SDPIKarnataka #SdpiRealAlternative

SDPI Karnataka

07 Oct, 15:02


President's Message

India is the largest democracy in the world. However, after 75 years of independence, we still face significant challenges related to political representation. Public participation often boils down to speeches from political leaders, leaving marginalized groups—Dalits, minorities, backward classes, and tribals—largely excluded from political power. This absence of representation hinders their social, educational, and economic advancement, perpetuating a cycle of deprivation and diminishing dignity.

In response to these pressing challenges, the Social Democratic Party of India (SDPI) was established to champion clean politics and ensure that socially backward communities are represented. Our vision is to create a hunger-free and fear-free nation.

Over the past 15 years, the SDPI has actively engaged with the struggles of exploited and oppressed communities. We have tirelessly advocated for their rights and raised awareness of their issues. Our commitment has propelled us to become the fourth largest political party in Karnataka, with over 350 locally elected representatives. Currently, we have established 31 district committees and approximately 100 assembly committees in Karnataka, with plans to reach the remaining 124 assembly committees in the next three years.

Our efforts are firmly aligned with the principles enshrined in the Constitution, and we are dedicated to upholding these values.

To further our mission and sustain our political initiatives, we rely on the support of our community rather than the influence of corporate giants like Ambani and Adani. We conduct an annual fundraising campaign to empower our work, and this year, we are reaching out to you during September and October.

We humbly request your generous contributions to help us continue our efforts for the development of our party and the empowerment of the masses. Together, we can build a more equitable and inclusive society. Thank you for your support.

Abdul Majeed
State President, SDPI Karnataka

#SDPI #SDPIKarnataka #SdpiRealAlternative

SDPI Karnataka

05 Oct, 09:58


ಬೆಂಗಳೂರಿನ ಕಬ್ಬನ್ ಪೇಟೆಯಲ್ಲಿರುವ ಹಜರತ್ ಹಮೀದ್ ಷಾ ಕಾಂಪ್ಲೆಕ್ಸ್ ನ ಆವರಣದಲ್ಲಿ, ಸುಮಾರು 6 ಕೋಟಿ ವೆಚ್ಚದಲ್ಲಿ, ಮಲ್ಟಿ ಫ್ಲೋರ್ ಪಾರ್ಕಿಂಗ್ ಕಟ್ಟಡಕ್ಕೆ, ಕರ್ನಾಟಕ ರಾಜ್ಯದ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಖ್ಫ್ ಖಾತೆ ಸಚಿವರಾದ, ಸನ್ಮಾನ್ಯ ಬಿ ಝೆಡ್ ಝಮೀರ್ ಅಹ್ಮದ್ ಖಾನ್ ರವರು ಶಂಕು ಸ್ಥಾಪನೆ ನೆರವೇರಿಸಿದರು. ಸಿಟಿ ಜಾಮಿಯಾ ಮಸೀದಿಯ ಗುರುಗಳಾದ ಇಮಾಮ್ ಹಜರತ್ ಮೌಲಾನ ಮಕ್ಸೂದ್ ಇಮ್ರಾನ್ ಸಾಬ್ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಖ್ಫ್ ಬೋರ್ಡ್ ನ ಚೇರ್ಮನ್ ಅನ್ವರ್ ಭಾಷಾ ರವರು, ಎಸ್‌ಡಿಪಿಐನ ರಾಜ್ಯಾಧ್ಯಕ್ಷರಾದಂತಹ ಅಬ್ದುಲ್ ಮಜಿದ್ ರವರು, ಮಾಜಿ ವಖ್ಫ್ ಬೋರ್ಡ್ ಚೇರ್ಮನ್ ಮೌಲಾನಾ ಶಾಫಿ ಸಅದಿ ಅವರು, ಹಜರತ್ ಹಮೀದ್ ಷಾ ಕಾಂಪ್ಲೆಕ್ಸ್ ನ ಆಡಳಿತ ಅಧಿಕಾರಿ ಜೆಎ ಬಾವಾ, ಎಸ್‌ಡಿಪಿಐನ ರಾಜ್ಯ ಕಾರ್ಯದರ್ಶಿ ಮುಜಾಹಿದ್ ಪಾಶ, ಬೋರ್ಟ್ನ ಸದಸ್ಯರುಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಜರಿದ್ದರು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಕರ್ನಾಟಕ

#sdpi #SDPIKarnataka #SdpiRealAlternative

1,695

subscribers

3,150

photos

436

videos