ಇಡೀ ಜಗತ್ತು ಉಪ್ರಗಹ ಆಧಾರಿತ ಸಂವಹನ ವ್ಯವಸ್ಥೆಯ ಮೇಲೆ ಅವಂಬಿತವಾಗುತ್ತಿದೆ. ಭಾರತವೂ ಇದರಿಂದ ಹೊರ ಉಳಿದಿಲ್ಲ. ಇದೀಗ ಭಾರತವೂ ಗುಜರಾತ್ ಹಾಗೂ ತಮಿಳುನಾಡಿನಲ್ಲಿ ಕಡಿಮೆ ಎತ್ತರದ ಭೂಕಕ್ಷೆ (ಲಿಯೋ- ಲೋ ಅರ್ಥ್ ಆರ್ಬಿಟ್)ಯಲ್ಲಿ ಸ್ಯಾಟಲೈಟ್ ನೆಟ್‌ವರ್ಕ್ ಕೇಂದ್ರಗಳ ಸ್ಥಾಪನೆಗೆ ಮುಂದಾಗಿದೆ.
ಇದರಂತೆ ಗುಜರಾತ್‌ನಲ್ಲಿ ದೇಶದ ಮೊದಲ ಸ್ಯಾಟಲೈಟ್ ನೆಟ್‌ವರ್ಕ್ ಪೋರ್ಟ್‌ಲ್ ಸೈಟ್ ನಿರ್ಮಾಣದ ಒಪ್ಪಂದ ಮಾಡಿಕೊಳ್ಳಲಾಗಿದೆ. ಏನಿದು ಯೋಜನೆ ? ಎಂಬುದರ ಮಾಹಿತಿ ಇಲ್ಲಿದೆ.
📚ಏನು ಪ್ರಯೋಜನ ?
- ಕಡಿಮೆ ದರದಲ್ಲಿ ಸುರಕ್ಷಿತ ಹಾಗೂ ನಿರಂತರ ಇಂಟರ್‌ನೆಟ್ ಲಭ್ಯ.
- ಸರಕಾರ, ಶಾಲಾ-ಕಾಲೇಜುಗಳು, ಕಂಪೆನಿಗಳಿಗೆ ಅತೀ ವೇಗದ ಹಾಗೂ ಕಡಿಮೆ ದರದಲ್ಲಿ ಇಂಟರ್‌ನೆಟ್ ಸೇವೆ ಲಭ್ಯ.
- ಡಿಜಿಟಲ್ ಇಂಡಿಯಾ ಯೋಜನೆಯಡಿ ಭಾರತದಾದ್ಯಂತ ಹಳ್ಳಿಗಳು, ಜಿಲ್ಲಾ ಪಂಚಾಯತ್‌ಗಳು, ಸ್ಥಳೀಯಾಡಳಿತಗಳಿಗೆ, ಸರಕಾರದ ವಿವಿಧ ಇಲಾಖೆಗಳಿಗೆ ಕೈಗೆಟಕುವ ದರದಲ್ಲಿ ನಿರಂತರ ಇಂಟರ್‌ನೆಟ್ ಸೇವೆ ಒದಗಿಸಲು ಸಹಾಯವಾಗಲಿದೆ.
- ಈ ಯೋಜನೆಯಿಂದ ಅಂದಾಜು 500 ವಿವಿಧ ಉದ್ಯೋಗಾವಕಾಶಗಳು ದೊರೆಯಲಿದೆ.
🌳ಯಾರು ?
ಗುಜರಾತ್ ಸರಕಾರ, ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಲಂಡನ್ ಮೂಲದ ಒನ್‌ವೆಬ್ ಇಂಡಿಯಾ ಟೆಲಿ ಕಮ್ಯುನಿಕೇಶನ್‌ನ ಕಂಪೆನಿಯೊಂದಿಗೆ ಈ ನೆಟ್‌ವರ್ಕ್ ಪೋರ್ಟಲ್ ಅನ್ನು ನಿರ್ಮಾಣ ಮಾಡಲು ಒಪ್ಪಂದ
ಮಾಡಿಕೊಂಡಿದೆ.
*ಎಲ್ಲಿ ?*
ಗುಜರಾತ್‌ನ ಮೆಹಸಾಣಾ ಜಿಲ್ಲೆಯ ಓಟಾನಾದಲ್ಲಿ
– ವಿಸ್ತಾರವಾದ ಜಾಗದಲ್ಲಿ 20 ದೊಡ್ಡ ಆಯಂಟೆನಾಗಳನ್ನು ಅಳವಡಿಸಲಾಗುವುದು.
- ಮೊದಲ ಹಂತದ ನಿರ್ಮಾಣಕ್ಕೆ 100 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
- 20ರಿಂದ 25 ಎಕ್ರೆ: ಅಂದಾಜಿಸಲಾಗಿರುವ ಜಾಗ
ಲೋ ಅರ್ಥ್ ಆರ್ಬಿಟ್ (ಲಿಯೋ) ಸಿಗ್ನಲ್ ಮತ್ತು ಡಾಟಾ ಡೌನ್‌ಲಿಂಕ್, ಅಪ್‌ಲಿಂಕ್‌ಗಳ ಬೇಸ್ ಸ್ಟೇಶನ್ ಆಗಿ ಈ ಲಿಯೋ ಕಾರ್ಯನಿರ್ವಹಿಸಲಿದೆ. ಸ್ಯಾಟಲೈಟ್ ಟ್ರ್ಯಾಕಿಂಗ್ ಆಯಂಟೆನಾ ವ್ಯವಸ್ಥೆಯ ಮೂಲಕ ಡಾಟಾವನ್ನು ಪ್ರಸರಣ ಮಾಡಲಿದೆ.
*ಒನ್‌ವೆಬ್*
ಲಂಡನ್ ಮೂಲದ ಕಂಪೆನಿಯಾದ ಒನ್‌ವೆಬ್ ಭೂಮಿಯ ಮೇಲೆ ಕಡಿಮೆ ಎತ್ತರದ ವ್ಯವಸ್ಥೆಯಲ್ಲಿ ಸ್ಯಾಟಲೈಟ್ ಆಧಾರಿತ ಜಾಗತಿಕ ಸಂವಹನ ವ್ಯವಸ್ಥೆಯನ್ನು ಸ್ಥಾಪಿಸಲು ಕಾರ್ಯ ನಿರ್ವಹಿಸುತ್ತಿರುವ ಕಂಪೆನಿ. ಇದು ಈಗಾಗಲೇ 648 ಸ್ಯಾಟಲೈಟ್‌ಗಳನ್ನು ಹೊಂದಿದೆ. ಯುರೋಪ್ ಹಾಗೂ ಕೆನಡಾದಲ್ಲಿ ಈ ವ್ಯವಸ್ಥೆಯು ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಒನ್‌ವೆಬ್ 27 ದೇಶಗಳೊಂದಿಗೆ 38 ಸ್ಯಾಟಲೈಟ್ ನೆಟ್‌ವರ್ಕ್ ಪೋರ್ಟ್‌ಲ್‌ಗಳನ್ನು ಸ್ಥಾಪಿಸಲು ಮಾತುಕತೆ ನಡೆಸಿದೆ.