ಒಂದನೇ ಸಭೆ : ಸಾ.ಶ.ಪೂ 300
ಸ್ಥಳ: ಪಾಟಲಿಪುತ್ರ
ಅಧ್ಯಕ್ಷ : ಸ್ಥೂಲ ಭದ್ರ
ವಿಶೇಷತೆ : ಜೈನ ಧರ್ಮದ ಗ್ರಂಥಗಳನ್ನು ಸಂಗ್ರಹಿಸಿ ಜ್ಞಾನವನ್ನು ಪುನರುಜ್ಜೀವನಗೊಳಿಸುವುದು ಇದರ ಉದ್ದೇಶ.
ಎರಡನೇ ಸಭೆ: ಸಾ.ಶ.512
ಸ್ಥಳ: ಗುಜರಾತಿನ ವಲ್ಲಭಿ
ಅಧ್ಯಕ್ಷ : ದೇವೇಂದ್ರ ಕ್ಷೇಮ ಕರ್ಣ
ವಿಶೇಷತೆ : ಇಲ್ಲಿ ಜೈನ ಧರ್ಮದ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಿ ಅವುಗಳನ್ನು ಕ್ರಮಬದ್ಧವಾಗಿ ಬರೆಯಲಾಯಿತು.
ಬೌದ್ಧ ಧರ್ಮದ ಶೃಂಗಸಭೆಗಳು
ಒಂದನೇ ಸಭೆ : ಸಾ.ಶ.ಪು 483
ಸ್ಥಳ : ರಾಜಗೃಹ
ಅಧ್ಯಕ್ಷ : ಮಹಾ ಕಶ್ಯಪ
ಅರಸ : ಅಜಾತಶತ್ರು
ವಿಶೇಷತೆ : ಇದು ಬುದ್ಧನ ಹೇಳಿಕೆಗಳನ್ನು ಸಂಗ್ರಹಿಸಿತು.
ಎರಡನೇ ಸಭೆ : ಸಾ. ಶ. ಪೂ.383
ಸ್ಥಳ : ವೈಶಾಲಿ
ಅಧ್ಯಕ್ಷ : ಸಬಕಾಮಿ
ಅರಸ : ಕಾಲಶೋಕ
ವಿಶೇಷತೆ: ಇದು ಬೌದ್ಧ ಸನ್ಯಾಸಿಗಳ ನಡುವಿನ ಭಿನ್ನಾಭಿಪ್ರಾಯ ತೊಡೆದು ಹಾಕಲು ಪ್ರಯತ್ನಿಸಿತು.
ಮೂರನೇ ಸಭೆ : ಸಾ. ಶ. ಪೂ 250
ಸ್ಥಳ: ಪಾಟಲಿಪುತ್ರ
ಅಧ್ಯಕ್ಷ : ಮಗ್ಗಲಿಪುತ್ರ ತಿಸ್ಸಾ
ಅರಸ : ಅಶೋಕ
ನಾಲ್ಕನೇ ಬೌದ್ಧ ಸಮ್ಮೇಳನ
ಸ್ಥಳ : ಕುಂಡಲವನ ( ಕಾಶ್ಮೀರ್)
ಅಧ್ಯಕ್ಷ : ವಸುಮಿತ್ರ
ಉಪಾಧ್ಯಕ್ಷ : ಅಶ್ವಘೋಷ
ಅರಸ : ಹರ್ಷವರ್ಧನ
ವಿಶೇಷತೆ : ಇಲ್ಲಿ ಬೌದ್ಧ ಸನ್ಯಾಸಿಗಳ ನಡುವಿನ ಭಿನ್ನಾಭಿಪ್ರಾಯವನ್ನು ತೊಡೆದು ಹಾಕಲು ಪ್ರಯತ್ನಿಸಿತು. ಆದರೆ ಬೌದ್ಧ ಧರ್ಮ ಮತ್ತು ಮಹಾಯಾನ ಗಳಿಂದ ಎರಡು ಪಂಗಡಗಳಾಗಿ ವಿಭಜನೆ ಆಯಿತು.
ಜೈನ ಧರ್ಮದ ಪ್ರಮುಖ ಗುಹಾಲಯಗಳು :
ಉದಯಗಿರಿಯ ಹುಲಿಯ ಗುಹೆ
ಎಲ್ಲೋರದ ಇಂದ್ರ ಸಭಾ ಗುಹೆ
ಒರಿಸ್ಸಾದ ಹಥಿಗುಂಪಾ ಗುಹೆ ಮುಂತಾದವು
ಜೈನ ಧರ್ಮದ ಸ್ಮಾರಕಗಳು: ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿಗ್ರಹ ಮತ್ತು ಮೂಡುಬಿದ್ರೆಯ ಸಹಸ್ರ ಕಂಬಗಳ ಬಸದಿ.
ಬೌದ್ಧ ಧರ್ಮದ ವಿಗ್ರಹಗಳು : ಅಮರಾವತಿ, ನಾಗಾರ್ಜುನ ಕೊಂಡ,ಮತ್ತು ಅಜಂತ.
ಬೌದ್ಧ ಧರ್ಮದ ಸ್ತೂಪಗಳು: ಅಮರಾವತಿ, ಸಾಂಚಿ ನಾಗಾರ್ಜುನ ಕೊಂಡ ಮುಂತಾದವು.
ಬೌದ್ಧ ಧರ್ಮದ ವಿಹಾರಗಳು ಮತ್ತು ಚೈತ್ಯಾಲಯಗಳನ್ನು ಕನ್ನೆರಿ ಕಾರ್ಲೆ ಮತ್ತು ನಾಸಿಕ್ಗಳಲ್ಲಿ ಕಾಣಬಹುದು.