World Kannada News🇮🇳 @kannada_world_news Channel on Telegram

World Kannada News🇮🇳

@kannada_world_news


Kannada news paper

World Kannada News (Kannada)

ವಿಶ್ವ ಕನ್ನಡ ನ್ಯೂಸ್ ಚಾನೆಲ್ ಸ್ವಾಗತ! ಈ ಚಾನೆಲ್ ಕನ್ನಡ ನ್ಯೂಸ್ ಪೇಪರ್ ಗಳಿಗೆ ಸಂಬಂಧಿಸಿದ ಸುದ್ದಿ ಮತ್ತು ಅಪ್‌ಟೋ ವಿಷಯಗಳನ್ನು ನೀಡುತ್ತದೆ. ಈ ಚಾನೆಲ್ ನಿಮ್ಮ ಕನ್ನಡ ನ್ಯೂಸ್ ಪ್ರಾಮುಖ್ಯತೆಯ ಅನುಯಾಯಿಗಳು, ಕೊರಬು ಯುವ ಜನತೆಗಳಿಗೆ ಸಮಾಚಾರ ಮತ್ತು ಮಾಹಿತಿಯನ್ನು ಒದಗಿಸುವುದು ಉತ್ತಮವೆಂದು ಮೆಲುಬುಳ್ಳುತ್ತದೆ. ಚಾನೆಲ್ ಲಭ್ಯವಿರುವ ದಸ್ತರಾಸ್ತು ಮಂತ್ರಿಯಾದ ಫೀಡ್ ಮೂಲಕ ಸೂಚಿತ ಮತ್ತು ಅಪ್‌ಟೋ ವಿಷಯಗಳನ್ನು ಚಲನಚಿತ್ರ ಮತ್ತು ಬಹುಮುಖಿ ರೀತಿಯಲ್ಲಿ ನೀಡುತ್ತದೆ. ಆದ್ದರಿಂದ, ಕನ್ನಡ ನ್ಯೂಸ್ ಪೇಪರ್‌ಗಳು ಮತ್ತು ಸಾಮಾನ್ಯವಾದ ಹಿತ್ಯಾತ್ಮಕ ಪ್ರಕಟಣೆಗಳನ್ನು ಹೊಂದಿರುವ ನೀತಿಯನ್ನು ಕೈಗೆತ್ತಲು ಈ ಚಾನೆಲ್ ಸುಲಭವಾಗಿ ಅನುಸರಿಸಬಹುದು.

World Kannada News🇮🇳

02 Oct, 17:30


https://t.me/BhagavadGita18

World Kannada News🇮🇳

12 Jun, 11:15


ನಿಮ್ಮಲ್ಲಿ ❤️ ಭಗವದ್ಗೀತೆ ಕೇಳಲು ಆಸಕ್ತಿ ಇದ್ದರೆ.. press👇👇👇
🔰Link👇👇👇
--- @BhagavadGita18🇮🇳 ---

World Kannada News🇮🇳

12 Jun, 11:08


ಭಾರತದಲ್ಲಿ ವಿಪರೀತ ಹೆಚ್ಚಾಗುತ್ತಿರುವ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳನ್ನ ಶೇರ್ ಮಾಡಿದ್ದಾರೆ. ಇಡೀ ವಿಶ್ವದ ಒಟ್ಟು ಅಪಘಾತಗಳಲ್ಲಿ ೧೧ ಪರ್ಸೆಂಟ್ ಭಾರತದಲ್ಲೇ ಆಗುತ್ತೆ. ಇದೊಂದು ಸೈಲೆಂಟ್ ಪ್ಯಾಂಡೆಮಿಕ್ ಅಂತ ಹೇಳಿದ್ದಾರೆ. ಆಶ್ಚರ್ಯದ ವಿಚಾರ ಎನಂದ್ರೆ ಇಡೀ ವಿಶ್ವದ ಒಟ್ಟು ವಾಹನಗಳ ಪೈಕಿ ಭಾರತದ ಪಾಲು ಕೇವಲ ೩ ಪರ್ಸೆಂಟ್, ಆದ್ರೆ ಅಪಘಾತಗಳ ಪಾಲು ೧೧ ಪರ್ಸೆಂಟ್.

ಈ ದೇಶದಲ್ಲಿ ಪ್ರತೀ ವರ್ಷ ಸುಮಾರು ೫ ಲಕ್ಷ ಅಪಘಾತಗಳು ನಡೀತಿವೆ, ಒಂದೂವರೆ ಲಕ್ಷ ಜನ ಇದರಲ್ಲಿ ಪ್ರಾಣ ಕಳ್ಕೊತಿದಾರೆ ಅಂತ ರಾಜನಾಥ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಅವೈಜ್ಞಾನಿಕ ರಸ್ತೆಗಳು, ಭಾರತೀಯರ ಕ್ರೇಝಿ ಡ್ರೈವಿಂಗು, ರಸ್ತೆ ನಿಯಮಗಳ ಉಲ್ಲಂಘನೆ, ಕಳಪೆ ರಸ್ತೆಗಳು, ಸೇಫ್ಟಿ ಫೀಚರ್ಸ್ ಕಮ್ಮಿ ಇರೋ ಲಡಕಾಸಿ ಕಾರುಗಳು ಈ ದೇಶದಲ್ಲಿ ವಾಹನಗಳು ಕಮ್ಮಿ ಇದ್ರೂ, ಅಪಘಾತ ಹೆಚ್ಚಾಗಲು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣಗಳು.
@kannada_world_news🇮🇳

World Kannada News🇮🇳

12 Jun, 11:06


ಬೆಂಗಳೂರು: ಅನ್‌ಲಾಕ್‌ ಗೈಡ್‌ಲೈನ್ಸ್‌ನಲ್ಲಿ ಸಿವಿಲ್ ಕೆಲಸಗಳಿಗೆ ಮಾತ್ರ ದುರಸ್ತಿಗೆ ಅನುಮತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಉಳಿದ ಯಾವುದೇ ದುರಸ್ತಿ ಕೆಲಸಗಳಿಗೆ ಅವಕಾಶ ಇಲ್ಲ. ಅಂಗಡಿಗಳ ಪೈಕಿ ಸಿಮೆಂಟ್ ಮತ್ತು ಸ್ಟೀಲ್ ಅಂಗಡಿಗಳು ಮಾತ್ರ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯಬಹುದು ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಈ ಮೂಲಕ ಮೊನ್ನೆ ( ಜೂನ್ 10) ಘೋಷಿಸಿದ್ದ ಮೊದಲ ಹಂತದ ಅನ್​ಲಾಕ್ ನಿಯಮಗಳಲ್ಲಿ ಗೊಂದಲಕ್ಕೆ ಸರ್ಕಾರ ತೆರೆ ಎಳೆದಿದೆ.

ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಿರುವ ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್​ಡೌನ್ ಮುಂದುವರೆಯಲಿದೆ. ಈ ಜಿಲ್ಲೆಗಳಲ್ಲಿ ಈಗ ಅನುಷ್ಠಾನದಲ್ಲಿರುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಉಳಿದ ಎಲ್ಲ ಜಿಲ್ಲೆಗಳಲ್ಲಿ ಜೂನ್ 14ರಿಂದ ನಿರ್ಬಂಧ ಸಡಿಲಿಕೆ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಪ್ರತಿದಿನ ರಾತ್ರಿ 7ರಿಂದ ಬೆಳಿಗ್ಗೆ 5ರವರೆಗೆ ಕೊವಿಡ್ ಕರ್ಪ್ಯೂ ಜಾರಿಯಲ್ಲಿರುತ್ತದೆ ಎಂದು ಅವರು ಮೊನ್ನೆ (ಜೂನ್ 10) ತಿಳಿಸಿದ್ದಾರೆ.
@kannada_world_news🇮🇳

World Kannada News🇮🇳

12 Jun, 11:02


Karnataka Monsoon Rain: ಬೆಂಗಳೂರು(ಜೂ.12): ಈಗಾಗಲೇ ರಾಜ್ಯಕ್ಕೆ ನೈರುತ್ಯ ಮಾನ್ಸೂನ್​​ ಕಾಲಿಟ್ಟಿದ್ದು, ವರುಣ ತನ್ನ ಆರ್ಭಟ ತೋರಿಸುತ್ತಿದ್ದಾನೆ. ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಭಾರತದ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಇಂದಿನಿಂದ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಲ್ಲಿಯೂ ಮಳೆಯ ಆರ್ಭಟ ಜೋರಾಗಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆ ತೀವ್ರಗೊಳ್ಳಲಿದೆ.

ಕರ್ನಾಟಕದ ಉಡುಪಿ, ಒಡಿಶಾ, ಕೇರಳದ ಕೊಜಿಕೊಡೆ, ವಯನಾಡಿನಲ್ಲಿ ಇಂದಿನಿಂದ ಅಂದರೆ ಜೂನ್​ 12ರಿಂದ 15ರವರೆಗೆ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
@kannada_world_news🇮🇳

World Kannada News🇮🇳

12 Jun, 11:00


ನವದೆಹಲಿ: ಮಾನ್ಯತೆ ಪಡೆದ ಚಾಲಕರ ತರಬೇತಿ ಕೇಂದ್ರಗಳಿಗೆ ಕಡ್ಡಾಯ ನಿಯಮಗಳನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ಎಂಒಆರ್ ಟಿಎಚ್) ಸೂಚಿಸಿದೆ. ಈ ನಿಯಮಗಳು 01 ಜುಲೈ 2021 ರಿಂದ ಜಾರಿಗೆ ಬರಲಿವೆ. ಇಂತಹ ಕೇಂದ್ರಗಳಲ್ಲಿ ದಾಖಲಾಗುವ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ಮತ್ತು ಜ್ಞಾನವನ್ನು ನೀಡಲು ಇದು ಸಹಾಯ ಮಾಡುತ್ತದೆ.

ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರಗಳ ಪ್ರಮುಖ ಲಕ್ಷಣಗಳು:

ಅಭ್ಯರ್ಥಿಗಳಿಗೆ ಉತ್ತಮ ಗುಣಮಟ್ಟದ ತರಬೇತಿಯನ್ನು ಒದಗಿಸಲು ಕೇಂದ್ರವು ಸಿಮ್ಯುಲೇಟರ್ ಗಳು ಮತ್ತು ಮೀಸಲಾದ ಚಾಲನಾ ಪರೀಕ್ಷಾ ಟ್ರ್ಯಾಕ್ ಅನ್ನು ಹೊಂದಿರುತ್ತದೆ.

ಮೋಟಾರು ವಾಹನ ಕಾಯ್ದೆ, 1988 ರ ಅಡಿಯಲ್ಲಿ ಅಗತ್ಯಗಳಿಗೆ ಅನುಗುಣವಾಗಿ ಪರಿಹಾರ ಮತ್ತು ಪುನಶ್ಚೇತನ ಕೋರ್ಸ್ ಗಳನ್ನು ಈ ಕೇಂದ್ರಗಳಲ್ಲಿ ಪಡೆಯಬಹುದು.
@kannada_world_news🇮🇳

World Kannada News🇮🇳

12 Jun, 10:58


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್'ನಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿ ಇಬ್ಬರು ನಾಗರೀಕರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಉತ್ತರ ಕಾಶ್ಮೀರದ ಸೊಪೋರ್'ನ ಅರಂಪೋರಾ ಎಂಬ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಸ್ಥಳಕ್ಕೆ ಬಂದಿರುವ ಉಗ್ರರು ಏಕಾಏಕಿ ಗುಂತಿನ ದಾಳಿ ನಡೆಸಿದ್ದು, ಈ ವೇಳೆ ಸ್ಥಳದಲ್ಲಿದ್ದ ಇಬ್ಬರು ಪೊಲೀಸರು ಹಾಗೂ ಇಬ್ಬರು ನಾಗರೀಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಪೊಲೀಸರೂ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
@kannada_world_news🇮🇳

World Kannada News🇮🇳

12 Jun, 10:57


ವಾಹನ ಸವಾರರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಡೀಸೆಲ್ ಬೆಲೆ ಲೀಟರ್ ಗೆ 100 ₹ ಗಡಿ ದಾಟಿದೆ.
@kannada_world_news🇮🇳

World Kannada News🇮🇳

11 Jun, 02:53


ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ,
ಶುಕ್ಲ ಪಕ್ಷ, ಪ್ರಥಮ,
ಶುಕ್ರವಾರ, ಮೃಗಶಿರಾ ನಕ್ಷತ್ರ / ಆರಿದ್ರ ನಕ್ಷತ್ರ.

ರಾಹುಕಾಲ 10: 47 ರಿಂದ 12 23
ಗುಳಿಕಕಾಲ 7 :35ರಿಂದ 9:11
ಯಮಗಂಡಕಾಲ 3: 35ರಿಂದ 5.11

ಮೇಷ: ಸ್ವಂತ ಉದ್ಯಮ ವ್ಯವಹಾರಸ್ಥರಿಗೆ ಅನುಕೂಲ, ಭೂ ವ್ಯವಹಾರದಲ್ಲಿ ಗೊಂದಲ, ವಾಹನ ಅಪಘಾತ ಎಚ್ಚರಿಕೆ.

ವೃಷಭ: ದಾಂಪತ್ಯ ಕಲಹ, ಆಕಸ್ಮಿಕ ನಷ್ಟ, ಮಾನಸಿಕ ನೆಮ್ಮದಿಗೆ ಭಂಗ, ಉದ್ಯೋಗ ಬದಲಾವಣೆ ಆಲೋಚನೆ.

ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನಿಂದ ಸಮಸ್ಯೆ, ಪಾಲುದಾರಿಕೆಯಲ್ಲಿ ಅನುಕೂಲ, ಅಧಿಕ ನಷ್ಟ.

ಕಟಕ: ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಉದ್ಯೋಗ ಕಳೆದುಕೊಳ್ಳುವ ಭೀತಿ, ಅಧಿಕ ಖರ್ಚು.

ಸಿಂಹ: ಆಸೆಗಳು ಈಡೇರುವುದು, ಮಾತಿನ ಮೋಡಿಗೆ ಬಲಿಯಾಗುವಿರಿ, ತಂದೆಯಿಂದ ಅನುಕೂಲ.

ಕನ್ಯಾ: ಸ್ಥಿರಾಸ್ತಿ ಮತ್ತು ಭೂ ವ್ಯವಹಾರಗಳಿಂದ ಸಮಸ್ಯೆ, ವಿಕೃತ ಮನಸ್ಥಿತಿ, ಕ್ರಿಮಿ ಕೀಟಗಳಿಂದ ವಿದ್ಯುತ್ ಉಪಕರಣಗಳಿಂದ ಸಮಸ್ಯೆ.

ತುಲಾ: ಮಕ್ಕಳ ವಿಚಾರವಾಗಿ ದಾಂಪತ್ಯದಲ್ಲಿ ಸಮಸ್ಯೆ, ಮಾಟ ಮಂತ್ರ ತಂತ್ರದ ಮಾತು, ಪಿತ್ರಾರ್ಜಿತ ಭೂ ವ್ಯವಹಾರಗಳಲ್ಲಿ ತೊಡಗುವಿರಿ.

ವೃಶ್ಚಿಕ: ಆಕಸ್ಮಿಕ ಪ್ರಯಾಣ ಮಾಡುವ ಸನ್ನಿವೇಶ, ಸಾಲದ ಸಹಾಯ ಲಭಿಸುವುದು, ಆರೋಗ್ಯದಲ್ಲಿ ಏರುಪೇರು.

ಧನಸ್ಸು: ಮಕ್ಕಳ ನಡವಳಿಕೆಯಿಂದ ಬೇಸರ, ದುಶ್ಚಟಗಳಿಗೆ ಮನಸ್ಸು ವಾಲುವುದು, ಆಕಸ್ಮಿಕ ಅಧಿಕ ಖರ್ಚು.

ಮಕರ: ಆರ್ಥಿಕ ಸಂಕಷ್ಟ, ಲಾಭದ ಪ್ರಮಾಣ ಕುಂಠಿತ, ಪಾಲುದಾರಿಕೆಯಲ್ಲಿ ನಷ್ಟ, ಆರೋಗ್ಯ ಸಮಸ್ಯೆ ಕಾಡುವುದು.

ಕುಂಭ: ಅನಾರೋಗ್ಯ ಸಮಸ್ಯೆಯಿಂದ ಆತಂಕ, ಪತ್ರ ವ್ಯವಹಾರಗಳಲ್ಲಿ ಜಯ, ಸಹೋದರನಿಂದ ಲಾಭ.

ಮೀನ: ಆರ್ಥಿಕ ಪರಿಸ್ಥಿತಿ ಉತ್ತಮ, ಕೆಲಸ ಕಾರ್ಯಗಳ ನಿಮಿತ್ತ ಪ್ರಯಾಣ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.
@kannada_world_news🇮🇳

World Kannada News🇮🇳

11 Jun, 02:52


🔰ದಿನ ಭವಿಷ್ಯ🔰
11-06-2021
👇👇👇

World Kannada News🇮🇳

11 Jun, 02:51


'Vijay Karnataka_Bengluru_2021-06-11.pdf'

World Kannada News🇮🇳

08 Jun, 08:05


ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಕಾರಣದಿಂದಾಗಿ ರಾಜ್ಯದಲ್ಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ, ಪ್ರಥಮ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸುವಂತ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಇದರ ಬೆನ್ನಲ್ಲೇ, ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಮುಹೂರ್ತ ಫಿಕ್ಸ್ ಮಾಡಿದೆ. ಆಗಸ್ಟ್ 28, 29ರಂದು ನಡೆಸಲು ನಿರ್ಧರಿಸಿದೆ.
@kannada_world_news🇮🇳

World Kannada News🇮🇳

08 Jun, 04:48


ಪ್ಯಾರಿಸ್: ತಂತ್ರಜ್ಞಾನ ದೈತ್ಯ ಗೂಗಲ್, ಆನ್ಲೈನ್ನಲ್ಲಿ ತನ್ನ ಜಾಹೀರಾತುಗಳನ್ನು ಪ್ರಕಟಿಸುವುದಕ್ಕಾಗಿ ತನ್ನ ಪ್ರಬಲ ಮಾರುಕಟ್ಟೆ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಫ್ರೆಂಚ್ ಅಧಿಕಾರಿಗಳು € 220 ಮಿಲಿಯನ್ (ಸುಮಾರು 1948 ಕೋಟಿ) ದಂಡ ವಿಧಿಸಿದೆ.

ಪ್ರತಿಸ್ಪರ್ಧಿಗಳಿಗೆ ಹಾನಿಯಾಗುವಂತೆ ಗೂಗಲ್ ತನ್ನದೇ ಆದ ಆನ್‌ಲೈನ್ ಜಾಹೀರಾತು ಸೇವೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂಬುವುದನ್ನು ಫ್ರಾನ್ಸ್‌ನ ಸ್ಪರ್ಧಾ ನಿಯಂತ್ರಕವು ತಿಳಿಸಿದೆ. ಈ ಮೂಲಕ ಅಮೆರಿಕಾ ಮೂಲದ ಟೆಕ್ ದೈತ ಸಂಸ್ಥೆ ಗೂಗಲ್ ವಿರುದ್ಧ ಯೂರೋಪ್ ಒಕ್ಕೂಟವು ಕಠಿಣ ನಿಲುವು ಪಡೆದಿದೆ.
@kannada_world_news🇮🇳

World Kannada News🇮🇳

08 Jun, 04:35


ಪುಣೆ: ಕೆಮಿಕಲ್​ ಕಾರ್ಖಾನೆಯ ಸ್ಯಾನಿಟೈಸರ್​ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 18 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಘಟನೆಯ ಬೆನ್ನಲ್ಲೇ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಕಾರ್ಖಾನೆ ಕಾರ್ಮಿಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಪುಣೆ ಕಾರ್ಖಾನೆಯಲ್ಲಿ ಬೆಂಕಿ ಅವಘಡದಿಂದ ಅನೇಕರು ಪ್ರಾಣ ಕಳೆದುಕೊಂಡಿರುವುದು ನೋವಿನ ಸಂಗತಿಯಾಗಿದೆ. ಮೃತರ ಕುಟುಂಬಗಳಿಗೆ ಸಾಂತ್ವಾನ ತಿಳಿಸುತ್ತೇನೆ ಎಂದಿದ್ದಾರೆ.
@kannada_world_news🇮🇳