🇮🇳 ಮುಕ್ತ - ಸಂವಾದ 🇮🇳 @indianawareness24x7 Channel on Telegram

🇮🇳 ಮುಕ್ತ - ಸಂವಾದ 🇮🇳

@indianawareness24x7


'ಪ್ರಸ್ತುತ ಭಾರತ' ಜನ ಜಾಗೃತಿ Telegram Online ನೇರ ನೇರ ಮುಕ್ತ - ಸಂವಾದ ಕಾರ್ಯಕ್ರಮ ಪ್ರತಿ ದಿನ ರಾತ್ರಿ 08:00 ರಿಂದ 10:00 ರವರೆಗೆ.
ಪ್ರಾರಂಭಿಸಿದ ದಿನಾಂಕ : 16 - 06 - 2021 ಬುಧವಾರ.

ವೇದಿಕೆಯ ಗುರಿ ಮತ್ತು ಉದ್ದೇಶ :
ಬಾಬಾ ಸಾಹೇಬರ ದೃಷ್ಟಿಕೋನದಲ್ಲಿ ಪ್ರಬುದ್ಧ ಭಾರತ ನಿರ್ಮಾಣ.

🇮🇳 ಮುಕ್ತ - ಸಂವಾದ 🇮🇳 (Kannada)

ಪ್ರಸ್ತುತ ಭಾರತ ಜನ ಜಾಗೃತಿ ಟೆಲಿಗ್ರಾಮ್ ಆನ್‌ಲೈನ್ ನೀರವ ಮುಕ್ತ - ಸಂವಾದ ಕಾರ್ಯಕ್ರಮವನ್ನು ಪ್ರತಿ ದಿನ ರಾತ್ರಿ 08:00 ರಿಂದ 10:00 ರವರೆಗೆ ನಡೆಸುತ್ತದೆ. ಈ ಕಾರ್ಯಕ್ರಮವು 2021 ಜೂನ್ 16 ರಂದು ಶುರುವಾಗಿದೆ. ವೇದಿಕೆಯ ಗುರಿ ಮತ್ತು ಉದ್ದೇಶ ಬಾಬಾ ಸಾಹೇಬರ ದೃಷ್ಟಿಕೋನದಲ್ಲಿ ಪ್ರಬುದ್ಧ ಭಾರತ ನಿರ್ಮಾಣವಾಗಿದೆ. ಈ ಟೆಲಿಗ್ರಾಮ್ ಚಾನೆಲ್ ಭಾರತದ ಸಾಮಾಜಿಕ ಸಮಸ್ಯೆಗಳ, ರಾಜಕೀಯ ವಿಷಯಗಳ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಚರ್ಚೆ ನಡೆಸುತ್ತದೆ. ಆರೋಗ್ಯ, ವೇಶ್ಯೆತನ, ಪ್ರಯಾಣ, ವ್ಯಾಪಾರ ಮೊದಲಾದ ವಿಷಯಗಳು ಕೂಡ ಆಲಿಕೆಯಿಂದ ಚರ್ಚಿಸಲ್ಪಡುತ್ತವೆ. 'ಇಂಡಿಯನ್ ಆವೇರ್‌ನೆಸ್ 24x7' ಎಂದು ಈ ಚಾನೆಲ್ ಗೆಹೊಂದಿರುವ ಮೊದಲ ಅಂಗತ್ವದವರಿಗೆ ಎಲ್ಲಾ ಪ್ರಮುಖ ವಿಚಾರಗಳನ್ನು ನಿರೀಕ್ಷಿಸಬಹುದು. ಈ ಚಾನೆಲ್ ನಿರ್ದಿಷ್ಟ ಸಮಯದಲ್ಲಿ ಮುಕ್ತ ಸಂವಾದಗಳನ್ನು ಬೆಳಕಿಗೆ ತರುತ್ತದೆ. ಭಾರತದ ಜನರಿಗೆ ಸುದೃಢ ವಿಸ್ತಾರ ಮತ್ತು ಪ್ರಕಾರ ರಾಜಕೀಯ, ಸಾಹಿತ್ಯ, ಚಿಂತನೆ ಮತ್ತು ಸಾಂಸ್ಕೃತಿಯ ವಿವಿಧ ಲಕ್ಷಣಗಳ ಬಗ್ಗೆ ತಿಳಿಯಬೇಕು ಎಂಬ ಅಭಿಯೋಗವು ಈ ಚಾನೆಲ್ ಮೂಲಕ ನೆರವೇರುವುದು ಉಚಿತವಾಗಿದೆ. ಚಾನೆಲ್ ಸ್ಥಿರ ನಿಲುವಂಗಳನ್ನು ಮುತ್ತಿಕೊಂಡಿದ್ದು ಸಭ್ಯ ವಾರ್ತೆಗಳನ್ನು ನಿರೀಕ್ಷಿಸಬಹುದು. ಆದ್ದರಿಂದ, ಭಾರತೀಯ ಸಮಾಜಕ್ಕೆ ಇದು ಅತ್ಯಂತ ಉಪಯುಕ್ತ ಚಾನೆಲ್ ಆಗಿದೆ.

🇮🇳 ಮುಕ್ತ - ಸಂವಾದ 🇮🇳

19 Dec, 07:37


👉🏻 *ಇದೆಲ್ಲದರ ಜೊತೆಗೆ ಮಹಾನ್ ದೇಶ ಭಕ್ತರ ಪರಿಶ್ರಮದ ಫಲವಾಗಿ ಬ್ರಿಟಿಷರಿಂದ ನಮಗೆ ಸಿಕ್ಕ ಭಾರತವನ್ನ ಬಲಿಷ್ಠ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಿ ನಮ್ಮ ಈ ದೇಶವು ವಿದೇಶಿ ಆರ್ಯರ, ಪುರೋಹಿತಶಾಹಿ ಬ್ರಾಹ್ಮಣ್ಯ ಹಿಂಧುತ್ವವಾದಿಗಳ ಮತ್ತು ಕೆಲವೇ ಕೆಲವು ಬಂಡವಾಳ ಶಾಹಿಗಳ ವಶವಾಗದಂತೆ ತಡೆಗಟ್ಟುವುದೇ ಆಗಿದೆ.*

*ಸಾಹಿತ್ಯ ಪರಿಷತ್ತಿನ ಮುಂದೆ ಬಾಡೂಟಕ್ಕಾಗಿ ಬೇಡಿಕೆ ಇಟ್ಟಿರುವ ಮಹಾನಾಯಕರೆ ಇಲ್ಲಿಕೇಳಿ...*
*ಜಾತಿಯನ್ನ ಒಪ್ಪಿ ಅದಕ್ಕೆ ಅನುಗುಣವಾಗಿ ನೆಡೆದುಕೊಳ್ಳುತ್ತಿರುವ, ದೇವರನ್ನ ಒಪ್ಪಿ ದೇವರ ಅವತಾರಗಳಿಗೆ ತಲೆ ಬಾಗುತ್ತಿರುವ ಮತ್ತು ನಿಮ್ಮ ಅರಿವೆ ಇಲ್ಲದೆ ಪರೋಕ್ಷವಾಗಿ ಬ್ರಾಹ್ಮಣ್ಯದ ಸೊಂಕುಗಳನ್ನ ನಿಮ್ಮ ಮೈ ಮನಸುಗಳಲ್ಲಿ ತುಂಬಿ ಕೊಂಡಿರುವ ನೀವುಗಳು ಹೇಗೆ ತಾನೆ ಸಮಾನತೆ ಯಿಂದ ಕೂಡಿದ ಬಲಿಷ್ಠ ಮತ್ತು ವೈಜ್ಞಾನಿಕ ನವ ಭಾರತವನ್ನ ಕಟ್ಟಲು ಸಾಧ್ಯ.?*

*ನೀವೆ ನಂಬಿ ನೀವೆ ಬಿತ್ತಿ ಬೆಳೆಸುತ್ತಿರುವ ಜಾತಿ ದೇವರು ಎನ್ನುವ ಸೊಂಕಿನ ಪ್ರತಿಫಲವಾಗಿಯೆ ಇಂದು ಈ ದಿನಗಳಲ್ಲಿ ಕೇವಲ-ಕೇವಲ ಆಹಾರದ ಸಮಾನತೆಗಾಗಿ ಹೋರಾಟ ಮಾಡುವಂತಹ ಹಿನಾಯ ಸ್ಥಿತಿಗೆ ಬಂದು ತಲುಪಿದ್ದೀರಿ.*

*ಏಕೆಂದರೆ ನೀವು ನಂಬಿರುವ ಜಾತಿ ಮತ್ತು ದೇವರು ಎನ್ನುವ ನಿಮ್ಮೆಲ್ಲರ ಅಜ್ಞಾನವೆಂಬ ಮಹಾಕೂಟದ ಸೊಂಕೆ ನಿಮ್ಮನ್ನ ರಾಜಕೀಯವಾಗಿ ಛಿದ್ರ ಛಿದ್ರ ಮಾಡಿ ನಿಮ್ಮೆಲ್ಲರ ಜುಟ್ಟು ವಿದೇಶಿ ಆರ್ಯರ ಕೈಗೆ ಸಿಕ್ಕುವಂತೆ ಮಾಡಿಬಿಟ್ಟಿದೆ.*

👉🏻 *ಕೇವಲ ನೀವು ದೇವರ ಭಕ್ತರಾದರಷ್ಟೆ ಸಾಕು ಈ ಬ್ರಾಹ್ಮಣ್ಯ ಎನ್ನುವ ಸೊಂಕು ನಿಮ್ಮ ಮೆದುಳಿಗೆ ನಿಮ್ಮ ಮನಸ್ಸಿಗೆ ಹಾಗೂ ನಿಮ್ಮ ಮನೆಮನೆಗಳಿಗೆಲ್ಲ ಬಂದು ಒಕ್ಕರಿಸಿಬಿಡುತ್ತದೆ.*
*ಇದು ಈ ದೇಶದಲ್ಲಿ ಉಂಟಾಗಿರುವ ಮಹಾದುರಂತ ಅಲ್ಲವೆ.?*

*ನಿಮಗೆ ಗೊತ್ತ? ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಇತ್ಯಾದಿ ಮುಂಚೂಣಿಯಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಎಲ್ಲಾ ರಾಜಕೀಯ ಪುಢಾರಿಗಳು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಮತ್ತು ಅಧಿಕಾರದ ವ್ಯಸನಕ್ಕಾಗಿ ವಿದೇಶಿ ಬ್ರಾಹ್ಮಣ್ಯದ ವ್ಯವಸ್ಥೆಗೆ ತಲೆಬಾಗಿದ್ದಾರೆ ಮತ್ತು ಅದಕ್ಕೆ ಅನುಕೂಲಕರವಾಗುವಂತೆ ತಮ್ಮ ತಮ್ಮ ರಾಜಕೀಯ ಪಕ್ಷಗಳನ್ನ ರಚಿಸಿಕೊಂಡಿದ್ದಾರೆ ಜೊತೆಗೆ ನಮ್ಮ ದೇಶವನ್ನ, ನಮ್ಮ ದೇಶದ ಬಹುಸಂಸ್ಕೃತಿಯನ್ನ ಮತ್ತು ರಾಷ್ಟದ ಒಕ್ಕೂಟ ವ್ಯವಸ್ಥೆಯನ್ನೆ ಹಿನಾಯ ಮಟ್ಟಕ್ಕೆ ತಂದು ನಿಲ್ಲಿಸಿಬಿಟ್ಟಿದ್ದಾರೆ.*

*ತಲೆಯಲ್ಲಿ ವೈಜ್ಞಾನಿಕ ಮನೋಭಾವವಿಲ್ಲದ, ಜಾತಿ ದೇವರು ಎನ್ನುವ ಸೊಂಕನ್ನ ಮೈಗೂಡಿಸಿಕೊಂಡಿರುವ, ಮತದಾನ ಮಾಡಿ ತನ್ನ ಗೆಲುವಿಗೆ ಕಾರಣರಾದ ಪ್ರಜೆಗಳನ್ನ ಪೂಜ್ಯನೀಯ ಸ್ಥಾನದಲ್ಲಿ ನೋಡದಿರುವ, ಪ್ರಜೆಗಳ ಗೋಳನ್ನ ಕೇಳಿ ತಮ್ಮ ಮೈ ಮನಸ್ಸುಗಳು ಕರಗಿ ಕಂಬನಿ ತುಂಬಿಕೊಳ್ಳದ, ಅಧಿಕಾರಕ್ಕಾಗಿ* *ಮನುಷ್ಯತ್ವವನ್ನೆ ಮರೆತಿರುವ ರಾಜಕೀಯ ಪುಂಡ ಪುಢಾರಿಗಳನ್ನ ಭೇಟಿ ಮಾಡಿ...*

*ಬಹುಜನರ ಆಹಾರ ಸಂಸ್ಕೃತಿಯಲ್ಲಿ ಒಂದಾದ ಮಾಂಸಹಾರವನ್ನ ಮಲೀನವೆಂದು ಭಾವಿಸಿ ಸಾಹಿತ್ಯ ಸಮ್ಮೇಳನದಲ್ಲಿ ನಿಷೇಧಿಸಲಾಗಿದೆ ಇದರಿಂದ ನಮಗೆ ನಮ್ಮ ಸಂಸ್ಕೃತಿಗೆ ದಕ್ಕೆಯಾಗಿದೆ ಆದ್ದರಿಂದ ತಾವು ದಯಮಾಡಿ ೮೭ನೇ ಸಾಹಿತ್ಯ ಸಮ್ಮೇಳನದಲ್ಲಿ ನಮಗೆ ಆಹಾರ ಸಮಾನತೆಯನ್ನ ಜಾರಿಮಾಡಲೆ ಬೇಕು ಅಥವಾ ಒಂದೆರಡು ಚೂರು ಕೋಳಿ ಬಾಡು ಜೊತೆಗೆ ಒಂದೆರಡು ಮೊಟ್ಟೆ ಕೊಟ್ಟು ನಮ್ಮ ಹಕ್ಕನ್ನ ರಕ್ಷಿಸಿ ಎಂದು ಅವರ ಒಳಮರ್ಮಗಳನ್ನೆ ಅರಿಯದೆ ಪುರೋಹಿತಶಾಹಿ ಬ್ರಾಹ್ಮಣ್ಯಕ್ಕೆ ತಲೆಬಾಗಿರುವ ರಾಜಕೀಯ ವ್ಯಕ್ತಿಗಳನ್ನ ಮತ್ತು ಅಧಿಕಾರಿಗಳನ್ನ ಕೇಳಲು ಹೂಗಿದ್ದೀರಲ್ಲ ನಿಮ್ಮನ್ನ ನಿಮ್ಮನ್ನ ನೀವೂ ಕೂಡ ಇಂಥದ್ದೆ ಮತ್ತೊಂದು ವರ್ಗ ಎಂದು ಏಕೆ ನಾನು ಕರೆಯಬಾರದು.?*

*ಈ ವ್ಯವಸ್ಥೆ ಹೇಗಿದೆ ಅಂದರೆ ಈಗಾಗಲೆ ಮಲಿನಗೊಂಡಿರುವ ಮಾಂಸಹಾರಿಗಳಾದ ನೀವುಗಳು, ಸಸ್ಯಹಾರಿಗಳಾದ ನಾವುಗಳು ಒಟ್ಟುಗೂಡಿ ಅಚ್ಚುಕಟ್ಟಾಗಿ* *ಮಡಿವಂತಿಕೆಯಲ್ಲಿ ಆಚರಿಸಿತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಥವಾ ಸಾಂಸ್ಕೃತಿಕ ರಾಷ್ಟ್ರೀಯ ರಾಜಕಾರಣ ವೆಂಬ ದೇವಸ್ಥಾನದ ಒಳಗಡೆ ನೀವುಗಳೆಲ್ಲರೂ ಪ್ರವೇಶ ಮಾಡಲೆ ಬಾರದು ಎಂದು ಬ್ರಾಹ್ಮಣ್ಯವನ್ನ ತಮ್ಮ ಮೈ ಮನಸುಗಳಲ್ಲಿ ತುಂಬಿಕೊಂಡಿರುವ ವಿದೇಶಿ ಆರ್ಯರು, ಅಧಿಕಾರಿಗಳು ಮತ್ತು ರಾಜಕೀಯ ವ್ಯಕ್ತಿಗಳೆಲ್ಲರೂ ಸೇರಿ ಒಟ್ಟಾಗಿ ತೀರ್ಮಾನಿಸಿ ಈ ದೇಶದ ಬಹುಜನರನ್ನ ಹೊರಗೆ ನಿಲ್ಲಿಸಿದಂತಿದೆ.*

👉🏻 *“ಕಡೆಗಣಿಸುವವರ ಎದುರು ವಾದ ಮಾಡುವುದೇ ಬೇಡ ಮೌನ ವಹಿಸು ಸಾಧಿಸುವುದು ಬಹಳಷ್ಟಿದೆ ನಿನ್ನ ಗಮನ ಆ ಧಿಕ್ಕಿನಲ್ಲಿ ಹರಿಸು”*
- ಗೌತಮ ಬುದ್ಧ.

*ವ್ಯವಸ್ಥೆ ಇಷ್ಟೊಂದು ಘೋರ ಅಸಮಾನತೆಯಿಂದ ಕೂಡಿರುವಾಗ ಸಮಾನತೆಯನ್ನು ಕೇಳುವ ಸಮಾನತೆಯನ್ನ ಪಡದೇ ತಿರಬೇಕೆಂದು ದೃಢವಾಗಿ ನಿಂತಿರುವ ನಮ್ಮಂಥ ನಿಮ್ಮಂಥ ಸಮಾನ ಮನಸ್ಕರರಿಗೆ, ಪ್ರಗತಿಪರ ಸಂಘಟನಾಕಾರರಿಗೆ ಸಮಾನತೆಯ ಪ್ರತಿಷ್ಟಾಪನೆಗಾಗಿ ಈ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು ಸವಾಲುಗಳನ್ನ ಎದುರಿಸಿ ನಮ್ಮ ಬಹುಜನ ಸಂಸ್ಕೃತಿಯ ಘನತೆ ಗೌರವವನ್ನ ಮತ್ತು ಅದರ ಮಹತ್ವವನ್ನು ಸಮಾಜಕ್ಕೆ ತೋರಿಸುವುದರ ಮೂಲಕ ಮಂಡ್ಯವನ್ನ ಇಂಡಿಯಾಕ್ಕೆ ಮಾದರಿಯಾಗುವಂತೆ ರುಜುವತ್ತು ಮಾಡಿತೋರಿಸುವ ಮಹತ್ವ ಪೂರ್ಣ ಜವಬ್ದಾರಿಗಳು ನಮ್ಮ ಮುಂದೆ ಇರುವಂತೆ ಕಾಣುತ್ತಿದೆ..*

*ಸ್ವಾಮಿ ವಿವೇಕಾನಂದರ ಈ ಮಾತನ್ನ ನೆನಪಿಸಿಕೊಳ್ಳುತ್ತಾ...*

👉🏻 *"ನಿಮಗೆ ಆಶ್ಚರ್ಯವಾಗಬಹುದು* *ಪ್ರಾಚೀನ ಹಿಂದೂ ವಿಧಿ ಮತ್ತು ಆಚರಣೆಗಳ ಪ್ರಕಾರ, ದನದ ಮಾಂಸ ತಿನ್ನದಿದ್ದರೆ ಆತ ಒಳ್ಳೆಯ ಹಿಂದೂ ಆಗಲು ಸಾಧ್ಯವಿರಲಿಲ್ಲ"...*
*"ಈ ಭಾರದಲ್ಲೇ ಒಂದು ಕಾಲವಿತ್ತು.* *ದನವನ್ನ ತಿನ್ನದೇ ಯಾವ ಬ್ರಾಹ್ಮಣನೂ ಬ್ರಾಹ್ಮಣನಾಗಿ ಇರಲು ಸಾಧ್ಯವಿರಲಿಲ್ಲ.*
*ಸನ್ಯಾಸಿಗಳು ಅಥವಾ ರಾಜರು ಅಥವಾ ಯಾರಾದರೂ ಮಹಾಪುರುಷರು ಮನೆಗೆ ಬಂದಾಗ ಅತ್ಯುತ್ತಮವಾದ ಎತ್ತನ್ನು ಕಡಿಯಲಾಗುತ್ತಿತ್ತು ಎಂಬುವುದನ್ನು ವೇದಗಳಲ್ಲಿ ನೀವು ಓದಬಹುದು"*

*- ಸ್ವಾಮಿ ವಿವೇಕಾನಂದ.*
(ಸಮಗ್ರ ಕೃತಿಗಳು ಸಂಪುಟ-03, ಪುಟ 536)

🇮🇳 ಮುಕ್ತ - ಸಂವಾದ 🇮🇳

19 Dec, 07:37


👉🏻 *ಮಂಡ್ಯದಲ್ಲಿ ಇದೆ ಡಿಸೆಂಬರ್ ತಿಂಗಳ ದಿನಾಂಕ 20.21.22 - 12 - 2024 ರಂದು ನಡೆಯಲಿರುವ ಅಖಿಲ ಭಾರತ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ* *ಪಾಲ್ಗೊಳ್ಳುವಂತಹ ಎಲ್ಲಾ ಸಾರ್ವಜನಿಕರಿಗೆ, ಹೊರ ರಾಜ್ಯ ಹೊರ ಜಿಲ್ಲೆ ಮತ್ತು ವಿದೇಶಗಳಿಂದ ಬರುವಂತಹ ಅತಿಥಿಗಳಿಗೆ ನಾವು ಮತ್ತು ನೀವು ಖುದ್ದಾಗಿ ನಿಂತು ಅವರನ್ನ ಪ್ರೀತಿ ಯಿಂದ ಆಹ್ವಾನಿಸಿ, ಅವರಿಗೆ ನಮ್ಮ ಸಕ್ಕರೆ ಮತ್ತು ಅಕ್ಕರೆಯ ಪ್ರೀತಿಯನ್ನು ಕೊಟ್ಟು ಅವರು ಇಷ್ಟ ಪಟ್ಟಂತಹ* *ಮಾಂಸಹಾರದ ರಸಔತಣದ ಊಟವನ್ನ ಉಣಬಡಿಸಬೇಕು..*
*ನಾವು ನಮ್ಮ ಅತಿಥಿಗಳಿಗೆ ಊಟಕೊಡುವ ಸ್ಥಳ ಅದು ಸಾಹಿತ್ಯ ಪರಿಷತ್ತು* *ಸಸ್ಯಹಾರಿಗಳಿಗೆ ಎಲ್ಲಿ ಯಾವ ಸ್ಥಳದಲ್ಲಿ ಊಟಕೊಡುವ ವ್ಯವಸ್ಥೆ ಮಾಡಿದಿಯೋ ಅದೆ ಸ್ಥಳದಲ್ಲಿ ಆ ಸಸ್ಯಹಾರಿಗಳ ಮುಂದೆ ಅಕ್ಕ ಪಕ್ಕದಲ್ಲೆ ನಾವುಗಳು ನಿಂತು ನಾವು ನಮ್ಮ ಅತಿಥಿಗಳಿಗೆ ಸಾಮೋಹಿಕವಾಗಿ ಮಾಂಸಹಾರದ ಊಟ ಕೊಡುವುದರ ಮುಖಾಂತರ..*

*ಸಸ್ಯಹಾರಕ್ಕಿಂತ ಮಾಂಸಹಾರವೇ ಶ್ರೇಷ್ಠ*
*ಮಾಂಸಹಾರವನ್ನ ಕೀಳಾಗಿ ಕಾಣುವ ನೀವುಗಳೇ ಅನಿಷ್ಟ*

*ಸಸ್ಯಹಾರಕ್ಕಿಂತ ಮಾಂಸಹಾರವೇ ಶ್ರೇಷ್ಠ*
*ಮಾಂಸಹಾರವನ್ನ ವ್ಯಸನಕ್ಕೆ ಹೋಲಿಸಿದ ನೀವುಗಳೇ ಖನಿಷ್ಟ*

*ಸಸ್ಯಹಾರಕ್ಕಿಂತ ಮಾಂಸಹಾರವೇ ಸರ್ವಶ್ರೇಷ್ಠ*
*ಮಾಂಸವನ್ನ, ಮಾಂಸಹಾರಿಗಳನ್ನ ಮುಟ್ಟದ ನೀವುಗಳೇ ಭ್ರಷ್ಟ*

*ಎಂಬ ಇತ್ಯಾದಿ ಘೋಷ ವಾಕ್ಯಗಳೊಂದಿಗೆ ಸಮಾನತೆಯನ್ನ ಎತ್ತಿ ಇಡಿಯುತ್ತ*
*ನಮ್ಮ ಮಂಡ್ಯ ಜಿಲ್ಲೆಯ ನಮ್ಮ ಬಹುಜನರ ಆಹಾರ ಸಂಸ್ಕೃತಿ, ಆಹಾರ ಪದ್ಧತಿಯನ್ನ ಮೆರೆದು ಆರಾಧಿಸಬೇಕು ಮತ್ತು ನಮ್ಮ ನೆಲದಲ್ಲಿ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಇನ್ನು ಗಟ್ಟಿಗೊಳಿಸುತ್ತೇವೆ, ಸಮಾನತೆಯನ್ನ ಸಾಧಿಸಿ, ಪುರೋಹಿತಶಾಹಿ ಬ್ರಾಹ್ಮಣ್ಯ ವ್ಯವಸ್ಥೆಯನ್ನ ಮೆಟ್ಟಿ ನಿಂತೇ ನಿಲ್ಲುತ್ತೇವೆ ಎಂದು ರುಜುವತ್ತು ಪಡಿಸಿ, ಮಂಡ್ಯ ಎಂದರೆ ಇಂಡಿಯಾ ಎಂಬ ಹೆಸರು ಬರುವಂತಹ ಇತಿಹಾಸವನ್ನೆ ಸೃಷ್ಟಿಮಾಡಬೇಕಾಗಿದೆ.*

*ಎಷ್ಟು ಅದ್ಬುತ ಮತ್ತು ಎಷ್ಟು ಕಟು ಸತ್ಯವಾದ ಸಾಲುಗಳು ಓದಿ...*

👉🏻 *"ಯಾರಾದರೂ ನಿಮ್ಮನ್ನು ಅರಮನೆಗೆ ಆಹ್ವಾನಿಸಿದರೆ ಖಂಡಿತಾ ಹೋಗಿ, ಆದರೆ ಅದಕ್ಕಾಗಿ ನಿಮ್ಮ ಗುಡಿಸಲಿಗೆ ಬೆಂಕಿ ಹಚ್ಚಿ ಹೋಗಬೇಡಿ, ಒಂದು ವೇಳೆ ಆ ದೊರೆಯು ನಿಮ್ಮೊಡನೆ ಜಗಳ ಮಾಡಿ ಬೈದು ಅವನ ಅರಮನೆಯ ಜಗುಲಿಯಿಂದ ನಿಮ್ಮನ್ನ ಹೊರ ಹಾಕಿದರೆ ನೀವು ಎಲ್ಲಿಗೆ ಹೋಗುವಿರಿ? ನೀವು ನಿಮ್ಮನ್ನ ಮಾರಾಟ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಿ. ಆದರೆ ಅದಕ್ಕಾಗಿ ನಿಮ್ಮ ಮನೆಯನ್ನ, ನಿಮ್ಮ ಸಮುದಾಯವನ್ನ, ನಿಮ್ಮ ಸಂಘಟನೆಯನ್ನ, ಜೊತೆಗೆ ನಿಮ್ಮ ದೇಶವನ್ನ ನಾಶಮಾಡಿ ಹೋಗಬೇಡಿ.*
*ನನಗೆ ಹೊರಗಿನವರಿಂದ ಆಗುವ ಅಪಾಯ ಕಾಣುತ್ತಿಲ್ಲ ಬದಲಿಗೆ ನಮ್ಮದೇ ಜನರಿಂದ ಆಗುವ ಅಪಾಯ ಎದ್ದು ಕಾಣುತಿದೆ."*

- ಬೋಧಿಸತ್ವ ಡಾ.ಬಿ.ಆರ್. ಅಂಬೇಡ್ಕರ್.

*ನನ್ನ ಪ್ರೀತಿಯ ಮೂಲನಿವಾಸಿ ಬಹುಜನ ಬಂಧುಗಳೆ ದಯಮಾಡಿ ಅರ್ಥಮಾಡಿಕೊಳ್ಳಿ..*
*ನಮ್ಮನ್ನ ಆಳ್ವಿಕೆ ಮಾಡುತ್ತಿರುವ ಸರ್ಕಾರಗಳೆಲ್ಲವೂ* *ಬ್ರಾಹ್ಮೀಣಿಕರಣವೇ ಆಗಿರುವಾಗ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಗಟ್ಟಿಗೊಳಿಸುವುದು,* *ಸಮಾನತೆಯನ್ನ ಗಳಿಸುವುದು ಮತ್ತು ಪುರೋಹಿತಶಾಹಿ ಬ್ರಾಹ್ಮಣ್ಯವನ್ನ ಮೆಟ್ಟಿನಿಲ್ಲುವುದು ಎಂದರೆ ಕೇವಲ ಮೂರು ದಿನಗಳು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇವಲ-ಕೇವಲ* *ಮಾಂಸಹಾರದಂತಹ ಅತಿ ಸಣ್ಣ ಬೇಡಿಕೆಗಳನ್ನ ಈಡೇರಿಸಿಕೊಂಡು ತೃಪ್ತಿಪಟ್ಟು ಸಮ್ಮೇಳನ ಮುಗಿದಾದ ಮೇಲೆ ತೆಪ್ಪನಾಗಿ ಬಿಡುವುದಲ್ಲ.*

👉🏻 *ಇದರ ಬದಲಿಗೆ ನಾವುಗಳೆಲ್ಲರೂ ಜಾತಿ, ದೇವರು, ಮೌಢ್ಯಗಳನ್ನ ಬಿಟ್ಟು, ಬ್ರಾಹ್ಮಣ್ಯದಂತಹ ವಿಷ ಜಂತುಗಳನ್ನ ಸುಟ್ಟು, ವೈಜ್ಞಾನಿಕ ದೃಷ್ಟಿಕೋನಗಳನ್ನ ಮೈಗೂಡಿಸಿಕೊಂಡು, ಅಸಮಾನತೆಯ ಕೇಂದ್ರ ಬಿಂದುವಾಗಿ ಮಂಡ್ಯದಲ್ಲಿ ನೆಡೆಯಲಿರುವ 87ನೇ ಸಾಹಿತ್ಯ ಸಮ್ಮೇಳನದ ದಿನದಂದೆ ಆ ಸಮ್ಮೇಳನದಲ್ಲೇ ನಾವುಗಳು ಎಲ್ಲರೂ ಒಟ್ಟುಗೂಡಿ ಭಾರತೀಯ ಸಂವಿಧಾನವನ್ನ ಓದುತ್ತಾ, ನಮ್ಮ ಜೊತೆಗೆ ಎಲ್ಲರಿಂದಲೂ ಓದಿಸುತ್ತ ಮಂಡ್ಯದಿಂದಲೇ ಇಂಡಿಯಾವನ್ನ ವಿಶ್ವಕ್ಕೆ ಮಾದರಿ ಆಗುವಂತೆ ರೂಪಿಸೆ ತೀರುತ್ತೇವೆ ಎಂದು ನಮ್ಮ ಬಹು ಸಂಸ್ಕೃತಿಯ ಮಂಡ್ಯದ ನೆಲದ ಮಣ್ಣನ್ನ ಮುಟ್ಟಿ ಶಪಥ ಮಾಡೊಣ..!!*

👉🏻 *ದೇವಸ್ಥಾನವೊಂದು*
*ಸ್ವಾತಂತ್ರ್ಯದ ಸಮಾಧಿ!*
*ಭಕ್ತಿ ಎಂಬುದು ವಂಚನೆಯ ಜಾಲ.*
*ಪೂಜೆಯೆಂಬುದು ಮಂಗನ ಚೇಷ್ಟೇ.*
*ಶಾಸ್ತ್ರದ ಆಚಾರವೇ ಮಾನವನ ಆತ್ಮದ ಗೋಣಿಗೆ ನೇಣು.*
*ಇವುಗಳ ಲಾಭ ಪೂಜಾರಿಗೆ ಮಾತ್ರ.*

- ಕುವೆಂಪು.

*ನೆನಪಿಡಿ..*
*ಇದೊಂದು ಸಾಹಿತ್ಯ ಸಮ್ಮೇಳನದಲ್ಲಿ ಕೇವಲ ಕೇವಲ ಬಾಡೂಟಕ್ಕಾಗಿ ನೆಡೆಯುತ್ತಿರುವ ಯುದ್ಧ ಅಲ್ಲ...*
👉🏻 *ಈ ಯುದ್ಧ ಮನುಸ್ಮೃತಿಗೂ-ಸಂವಿಧಾನಕ್ಕು ನಡೆಯುತ್ತಿರುವ ಯುದ್ಧ.*
👉🏻 *ಈ ಯುದ್ಧ ಪುರೋಹಿತಶಾಹಿ ಬ್ರಾಹ್ಮಣ್ಯಕ್ಕೂ-ಬಹುಜನರ ಮೂಲ ಸಂಸ್ಕೃತಿಗೂ ನಡೆಯುತ್ತಿರುವ ಯುದ್ಧ.*
👉🏻 *ಈ ಯುದ್ಧ ವಿದೇಶಿ ಆರ್ಯರಿಗೂ - ಈ ದೇಶದ ಮೂಲನಿವಾಸಿಗಳಿಗೂ ನಡೆಯುತ್ತಿರುವ ಯುದ್ಧ.*
👉🏻 *ಈ ಯುದ್ಧ ಅಸಮಾನತೆಗೂ - ಸಮಾನತೆಗೂ ನಡೆಯುತ್ತಿರುವ ಯುದ್ಧ.*
👉🏻 *ಈ ಯುದ್ಧ ಹಸಿವು ಬಡತನ ನಿರುದ್ಯೋಗದಿಂದ ಬಳಲುತ್ತಿರುವ ಬಹುಜನರಿಗೂ - ದೇಶದ ಸಂಪತ್ತೆಲ್ಲವನ್ನು ಒಟ್ಟೋಟ್ಟಿಗೆ ಆಕ್ರಮಿಸಿಕೊಂಡಿರುವ ಬಂಡವಾಳ ಶಾಹಿಗಳಿಗೂ ನಡೆಯುತ್ತಿರುವ ಯುದ್ಧ.*
👉🏻 *ಈ ಯುದ್ಧ ಖಾಸಗೀಕರಣಕ್ಕೂ - ರಾಷ್ಟ್ರೀಕರಣಕ್ಕೂ ನಡೆಯುತ್ತಿರುವ ಯುದ್ಧ.*
👉🏻 *ಈ ಯುದ್ಧ ಪ್ರಜಾಪ್ರಭುತ್ವಕ್ಕೂ - ಸರ್ವಾಧಿಕಾರಕ್ಕೂ ನೆಡೆಯುತ್ತಿರುವ ಯುದ್ಧ.*

*ಈ ಬ್ರಾಹ್ಮಣ್ಯ ವ್ಯವಸ್ಥೆ ನಮ್ಮ ದೇಶವನ್ನ, ನಮ್ಮ ಬಹುಸಂಸ್ಕೃತಿಯನ್ನ ನಮ್ಮ ಸಂವಿಧಾನವನ್ನ ನಮ್ಮೆಲ್ಲರ ಬದುಕನ್ನ ಎಷ್ಟರ ಮಟ್ಟಿಗೆ ತಿಂದುಹಾಕಿ ನಾಶಮಾಡುತ್ತ ಬರುತ್ತಿದೆ ಎಂಬ ನೋವುಗಳನ್ನ ಬರೆಯುತ್ತ ಹೇಳುತ್ತಾ ಹೋದರೆ ಪುಟಗಳು ಪದಗಳೇ ಸಾಲುವುದಿಲ್ಲ...*

*ಈ ಹಿಂದೆ ವಿದೇಶಿ ಆರ್ಯರು ನಮ್ಮ ದೇಶಕ್ಕೆ ಬಂದಾಗಿನಿಂದ ನಡೆದಿರುವ ಇನ್ನೂ ಮುಂದೆ ಎದುರಾಗಲಿರುವ ಎಲ್ಲಾ ಕಲುಷಿತ ವ್ಯವಸ್ಥೆಗಳನ್ನ ಸರಿಪಡಿಸಲು ನಾವು ಮತ್ತು ನೀವುಗಳು ಇನ್ನೂ ಉತ್ತಮ ಮತ್ತು ಅತ್ಯುತ್ತಮ ಪ್ರಜೆಗಳಾಗಿ, ಆದರ್ಶ ತ್ಯಾಗಮಯ ವ್ಯಕ್ತಿಗಳಾಗಿ, ದೇಶಭಕ್ತರಾಗಿ ನಮ್ಮ ಹೆಮ್ಮೆಯ ಪ್ರಬುದ್ಧ ಭಾರವನ್ನ ಇಡೀ ವಿಶ್ವಕ್ಕೆ ಮಾದರಿಯಾಗುವಂತೆ ನಿರ್ಮಾಣ ಮಾಡಲು ಎಲ್ಲರೂ ಒಟ್ಟುಗೂಡಿ

🇮🇳 ಮುಕ್ತ - ಸಂವಾದ 🇮🇳

19 Dec, 07:37


ನಿಶ್ವಾರ್ಥ ಮನೋಭಾವದಿಂದ ಶ್ರಮಿಸೋಣ ಕೈ ಜೋಡಿಸಿ.*
Follow this link to join my WhatsApp group:
https://chat.whatsapp.com/IPp3i9dEpgoJ72tiCf08yD
+919632655013

👉🏻 *“ದೇಶಕ್ಕಾಗಿ ನೀನೇನೂ ಮಾಡುತ್ತಿಲ್ಲವೆ? ಮಾಡಬೇಡಿ ಪರವಾಗಿಲ್ಲ, ಹಾಯಾಗಿ ಜೀವನ ನಡೆಸಿ ಕಂಬಳಿ ಹೊದ್ದು ಮಲಗಿ , ಬಾಬಾಸಾಹೇಬರು ಉಚಿತವಾಗಿ ನಿಮ್ಮ ಚೀಲವನ್ನು ತುಂಬಿಸಿದ್ದರಿಂದ ನೀವು ಅದೃಷ್ಟವಂತರು, ಆದರೆ ಇದು ಬ್ರಾಹ್ಮಣ ಧರ್ಮದ ಸಂಕ್ರಮಣ ಕಾಲ. ನಿಮ್ಮ ಮುಂದಿನ ಪೀಳಿಗೆಗೆ ದನದ ಸಗಣಿ ಸಂಗ್ರಹಿಸುವುದು ಮತ್ತು ಗುಂಡಿ ತೋಡುವುದು ಬಿಟ್ಟರೆ ಇನ್ನೇನೂ ಸಿಗದಂತೆ ನೋಡಿಕೊಳ್ಳಲು ಬ್ರಾಹ್ಮಣವಾದಿಗಳು ಪೂರ್ಣಪ್ರಮಾಣದಲ್ಲಿ ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ, ಸಾಧ್ಯವಾದರೆ, ಸಮಾಜದ ಮುನ್ನೆಲೆಗೆ ಬನ್ನಿ, ಮೊದಲು ನೀವು ಎಚ್ಚೆತ್ತುಕೊಳ್ಳಿ, ಎಚ್ಚರಗೊಳ್ಳಿ ಮತ್ತು ನಿಮ್ಮ ಬಹುಜನರ ಜೀವನವನ್ನು ಮೇಲಕ್ಕೆತ್ತಿ ಉತ್ತಮಪಡಿಸಿ."*

- ಮಾನ್ಯವರ್ ಕಾನ್ಸಿರಾಮ್.


👉🏻 *ಈ ಭೂಮಿ ಮೇಲೆ ಬುದ್ಧ ಹುಟ್ಟಿದ ನಮ್ಮ ಹೆಮ್ಮೆಯ ಈ ಭರತ ಖಂಡದಲ್ಲಿ ನಮ್ಮನಿಮ್ಮೆಲ್ಲರ ಅಸ್ತಿತ್ವ ಇರುವುದು ಬೆರಳೆಣಿಕೆಯ ಇನ್ನೂ ಕೆಲವೇ ಕೆಲವು ದಿನಗಳು ಮಾತ್ರ..!*
👉🏻 *ನಮ್ಮ ಉಸಿರು ನಿಲ್ಲುವ ಮೊದಲು ನಮ್ಮ ಹೆಮ್ಮೆಯ ರಾಷ್ಟ್ರಕ್ಕಾಗಿ, ನಮ್ಮ ಈ ನೆಲ, ನಮ್ಮ ಈ ವಿಭಿನ್ನ ಸಂಸ್ಕೃತಿಗಳ ಉಳಿವಿಗಾಗಿ, ಮುಂದಿನ ಭವಿಷ್ಯದ ಪೀಳಿಗೆಯ ಉತ್ತಮ್ಮ ಮತ್ತು ಅತ್ಯುತ್ತಮ ಜೀವನಕ್ಕಾಗಿ, ವಿಶ್ವದ ಮುಂದೆ ತಲೆ ಎತ್ತಿ ಎದೆತಟ್ಟಿ ಮಾತನಾಡುವದಕ್ಕಾಗಿ ನಾವುಗೆಳೆಲ್ಲರೂ ಒಟ್ಟುಗೂಡಿ ನವ ಯುಗದ ನವ ವೈಜ್ಞಾನಿಕ ಪ್ರಬುದ್ಧ ಭಾರವನ್ನ ನಿರ್ಮಾಣ ಮಾಡೋಣ..!!*

*ಬಾಡು ತಿನ್ನುವ ಬುದ್ಧಿವಂತರೆ*
*ಬಾಡು ತಿಂದಾದ ಮೇಲೆ*
*ಬಾಡಿ ಬೆಂಡಾಗಿ ಹೋಗಬೇಡಿ,*
*ಬಾಡೂಟದ ಬೆನ್ನಲ್ಲೆ ಭಾರತದಲ್ಲಿರುವ ಬ್ರಾಹ್ಮಣ್ಯವನ್ನ ಬುಡಮೇಲಾಗಿ ಕಿತ್ತೆಸೆಯಲು,* *ಬಾಡೂಟವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು, ಬಹುಜನರ ಬಲಿಷ್ಠ ಭಾರತವನ್ನ ನಿರ್ಮಾಣ ಮಾಡಿಕೊಳ್ಳಿ..!*

Note : ಈ ಲೇಖನದ ಮೂಲ ಪ್ರತಿಯನ್ನ ಲೇಖಕರ ಬಳಿ ಸಂಗ್ರಹಿಸಲಾಗಿದೆ, ತಿದ್ದಿ ತಿರುಚಿ ಇತರರಿಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ..!


✍🏻 ಚೌಡೇಶ್ ಮಂಡ್ಯ.
ಮುಕ್ತ-ಸಂವಾದ ರಾಜ್ಯ ಸಂಚಾಲಕರು.
🇮🇳
+919632655013 🇮🇳

🇮🇳 ಮುಕ್ತ - ಸಂವಾದ 🇮🇳

19 Dec, 07:37


😳 *ಮಂಡ್ಯ ಜಿಲ್ಲೆಯಲ್ಲೊಂದು ಅಖಿಲ ಭಾರತ 87ನೇ ಪುರೋಹಿತಶಾಹಿ ಬ್ರಾಹ್ಮಣ್ಯ ಸಾಹಿತ್ಯ ಸಮ್ಮೇಳನ..!*

- ಚೌಡೇಶ್ ಮಂಡ್ಯ.

*ಜೀರ್ಣಸಿಕೊಳ್ಳಲಾಗದ ಒಂದು ಕಹಿ ಸತ್ಯ ಏನೆಂದರೆ ಭಾರತದಾದ್ಯಂತ ಪ್ರತಿಯೊಂದು ಮನೆ ಮನೆ ಹಾಗೂ ಪ್ರತಿಯೊಬ್ಬರ ಮನಸಿನಲ್ಲಿಯೂ ಈ ಪುರೋಹಿತಶಾಹಿ ಬ್ರಾಹ್ಮಣ್ಯ ಎನ್ನೋವ ಸೊಂಕು ಈಗಾಗಲೆ ಆಕ್ರಮಿಸಿಕೊಂಡುಬಿಟ್ಟಿದೆ ಅದರ ಪ್ರತಿಫಲವಾಗಿಯೆ ಮಂಡ್ಯ ಜಿಲ್ಲೆಯಲ್ಲಿ ಬಾಡೂಟಕ್ಕೂ ಮತ್ತು ಬ್ರಾಹ್ಮಣ್ಯ ವ್ಯವಸ್ಥೆಗು ಯುದ್ಧ ನಡೆಯುತ್ತಿದೆ ಇದನ್ನ ಯುದ್ಧ ಅನ್ನಬೇಕೊ ಅಥವಾ ಬಹುಜನರ ವಿನಾಶಕಾರಿ ಬೆಳವಣಿಗೆಯ ಮುನ್ನುಡಿ ಅನ್ನಬೇಕೊ ನೀವೆ ಅರ್ಥಮಾಡಿಕೊಳ್ಳಿ.*

*ನಮ್ಮ ಮಂಡ್ಯ ಜಿಲ್ಲೆಯಲ್ಲಿ ನೆಡೆಯಲಿರುವ ಅಖಿಲ ಭಾರತ ೮೭ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟವನ್ನು ಅರ್ಥಾತ್ ಮಾಂಸಹಾರವನ್ನ ನಿಷೇಧಿಸಲಾಗಿದೆ ಕೇವಲ ನಿಷೇಧಿಸುವುದು ಮಾತ್ರವಲ್ಲ ಮಾಂಸಹಾರ ಅದೊಂದು ಮಲೀನಗೊಂಡಿರುವ ವ್ಯಸನ ಎಂದು ಅಪಪ್ರಚಾರ ಮಾಡಿದ್ದರ* *ಪ್ರತಿಫಲವಾಗಿ ಆದರೂ ಬಾಡು ತಿನ್ನುವ, ಬಾಡು ತಿನ್ನಲೋಲ್ಲದ ಬಹುಜನರೆಲ್ಲರೂ ಒಟ್ಟುಗೂಡಿ ನಮಗೆ ಬಾಡು ಬೇಕೆ ಬೇಕು ಇದು ನಮ್ಮ ಹಕ್ಕು, ನಮ್ಮ ಪದ್ಧತಿ, ನಮ್ಮ ಸಂಸ್ಕೃತಿ, ನಮ್ಮ ಆಹಾರದ ಸ್ವತಂತ್ರವನ್ನ ಯಾರಿಂದಲೂ ಪ್ರಶ್ನಿಸಲು ಸಾಧ್ಯವಿಲ್ಲ ಹಾಗೇನೆ ಯಾರಿಂದಲೂ ವಿರೋಧಿಸಲು ಸಾಧ್ಯವಿಲ್ಲವೆಂದು ಮಂಡ್ಯ ಜಿಲ್ಲೆ ಮತ್ತು ರಾಜ್ಯದ ಇತರೆ ಭಾಗಗಳಲ್ಲಿ ಹೋರಾಟವನ್ನ, ಪ್ರತಿಭಟನೆಗಳನ್ನ, ಚಳುವಳಿಗಳನ್ನ, ಆಂದೋಲನಗಳನ್ನ ಮಾಡುತ್ತಿದ್ದಾರೆ..!*

*ಮೇಲ್ನೋಟಕ್ಕೆ ಕೇವಲ ಬಾಡೂಟಕ್ಕೆ ಮಾತ್ರ ನೆಡೆಯುತ್ತಿರುವ ಇಂಥ ಚಳುವಳಿ ಆಂದೋಲನ ಪ್ರತಿಭಟನೆ ಹೋರಾಟಗಳನ್ನ ಒಪ್ಪಿಕೊಳ್ಳಬಾರದು ಎಂದು ಅನಿಸಿದರೂ ಅದರ ಮೂಲವನ್ನ ಸೂಕ್ಷ್ಮವಾಗಿ ಶೋಧಿಸಿದಾಗ ಅನಿವಾರ್ಯವಾಗಿ ಧ್ವನಿಗೂಡಿಸಲೆ ಬೇಕು ಎಂದೆನಿಸಿತು.*

*ಭಾರತದಲ್ಲಿ ಈಗಾಗಲೆ ಬ್ರಂಹ್ಮಾಂಡವಾಗಿ ಬೆಳೆದು ನಿಂತಿರುವ ವಿದೇಶಿ ಆರ್ಯನ್ ಹಿಂಧುತ್ವ ಬ್ರಾಹ್ಮಣ್ಯ ವ್ಯವಸ್ಥೆ ಈ ದೇಶದ ಮೂಲನಿವಾಸಿಗಳನ್ನ, ಬಹುಜನರನ್ನ, ಅಲ್ಪಸಂಖ್ಯಾತರನ್ನ, ಆದಿವಾಸಿಗಳನ್ನ ಮತ್ತು ಇತರೆ ಬುಡಕಟ್ಟು ಸಮುದಾಯಗಳನ್ನ ಹಂತ ಹಂತವಾಗಿ ಮಟ್ಟಹಾಕಲು ಹೇಗೆ ಹೊಂಚುಹಾಕಿ ಸಂಚನ್ನ ರೂಪಿಸಿದೆ ಎಂದರೆ ಅದರ ಕಲ್ಪಿನೆಯನ್ನೂ ಕೂಡ ನಾವು ನೀವು ಊಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಸಾಧ್ಯವಾಗುತ್ತಿಲ್ಲ ಸಾಧ್ಯವಾಗುವುದೂ ಇಲ್ಲ.*

👉🏻 *ನಮ್ಮ ದೇಶದಲ್ಲಿ ಈಗ ಸತ್ಯವಾಗಿಯೂ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲ ಅಥವ ಈ ಕ್ಷಣದಲ್ಲಿ ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯುವುದನ್ನ ಒಪ್ಪಲು ಸಾಧ್ಯವೇ ಇಲ್ಲ, ಏಕೆಂದರೆ ಸ್ವೀಡನ್ ನ " V-DEM " ಎನ್ನುವ INSTITUTE 2024 ರ ಕಳೆದ ತಿಂಗಳಲ್ಲಷ್ಟೆ " ಪ್ರಜಾಪ್ರಭುತ್ವದ ವರದಿ" ಯೊಂದನ್ನು ತನ್ನ ಅಧ್ಯಯನದ ಮುಖಾಂತರ ಹೋರ ತಂದಿದೆ ಅದರ ಪ್ರಕಾರ ಆಘಾತಕಾರಿ ವಿಷಯ ಏನೆಂದರೆ ಭಾರತ ಸರ್ವಾಧಿಕಾರಿಗಳ ರಾಷ್ಟ್ರ ಆಗಲು ಇನ್ನೂ ಕೇವಲ ಎರಡೇ ಎರಡು ಹಂತಗಳು ಮಾತ್ರ ಬಾಕಿ ಉಳಿದಿವೆ.*
*ಜೊತೆಗೆ ಭಾರತವನ್ನ ಸರ್ವಾಧಿಕಾರಿ ರಾಷ್ಟ್ರವನ್ನಾಗಿ ಮಾಡಲು ಅಡ್ಡಿಯಾಗಿರುವ ನಮ್ಮ ಭಾರತೀಯ ಸಂವಿಧಾನವನ್ನ ಸಂಪೂರ್ಣವಾಗಿ ನಿಸ್ಕ್ರೀಯ ಮಾಡಲು ಮನುವಾದಿ ತಜ್ಞರುಗಳನ್ನೆ ದೇಶವ್ಯಾಪಿ ವಿವಿಧ ಪ್ರಾಧಿಕಾರಗಳಿಗೆ ನೇಮಿಸಿಕೊಳ್ಳಲಾಗಿದೆ ಮತ್ತು ಭಾರತವೆಂಬ ಹಲವು ಸಂಸ್ಕೃತಿಗಳ ಒಕ್ಕೂಟ ರಾಷ್ಟ್ರ ವ್ಯವಸ್ಥೆಯನ್ನ ಛಿದ್ರ ಛಿಧ್ರ ಮಾಡಲು ಈ ನೆಲದ ಕಾನೂನು ಮತ್ತು ಅಧಿಕಾರಿಗಳನ್ನೆ ತಮಗೆ ಇಷ್ಟಬಂದಹಾಗೆ ಯಾರ ಅಥವಾ ಯಾವ ವ್ಯವಸ್ಥೆಯ ಭಯವು ಇಲ್ಲದೆ ಬಳಸಿಕೊಳ್ಳಲಾಗುತ್ತಿದೆ.*

*ಬಹುಜನರು ಅರ್ಥಾತ್ ಈ ದೇಶದ ಮೂಲನಿವಾಸಿಗಳು ಮಂಡ್ಯದಲ್ಲಿ ನೆಡೆಯುವ ಸಾಹಿತ್ಯ ಸಮ್ಮೇಳದಲ್ಲಿ ನಮಗೆ ನಮ್ಮ ಮೂಲ ಸಂಸ್ಕೃತಿಯ ಒಂದು ಭಾಗವಾದ ಮಾಂಸಹಾರದ ವ್ಯವಸ್ಥೆಯನ್ನ ಕಲ್ಪಿಸಿಕೊಡಿ ಎಂದು ಬ್ರಾಹ್ಮಣ್ಯ ಅಧಿಕಾರಶಾಹಿ ವ್ಯವಸ್ಥೆಯನ್ನ ಕೇವಲ-ಕೇವಲ ಆಹಾರದ ವ್ಯವಸ್ಥೆಗಾಗಿ ಬೇಡಿ ಅಂಗಲಾಚುವ ಅಥವಾ ಹೋರಾಟ ಚಳುವಳಿ ಮಾಡುವ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ ಎಂದರೆ ಊಹೆ ಮಾಡಿಕೊಳ್ಳಿ ಈ ದೇಶದಲ್ಲಿ ಪುರೋಹಿತಸಾಹಿ ಬ್ರಾಹ್ಮಣ್ಯ ಎಷ್ಟರ ಮಟ್ಟಿಗೆ ಬೇರು ಬಿಟ್ಟಿ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು.!*

*ಮಾಂಸಹಾರಕ್ಕಾಗಿ ನೆಡೆಯುತ್ತಿರುವ ಹೋರಾಟ ಹಾರಾಟ ಚಿರಾಟಗಳನ್ನ ಕಂಡು ವಿದೇಶಿ ಆರ್ಯರು ಇನ್ನೂ ಕೆಲವೇ ಕೆಲವು ದಿನಗಳಲ್ಲಿ ನಿಮ್ಮ ಮತದಾನದ, ನಿಮ್ಮ ಹೋರಾಟದ ನಿಮ್ಮ ಎಲ್ಲಾ ಹಕ್ಕುಗಳನ್ನ ಕಿತ್ತುಕೊಂಡು ಈ ದೇಶದಲ್ಲಿ ನಿಮ್ಮನ್ನ ಸಂಪೂರ್ಣವಾಗಿ ನಿಸ್ಕ್ರೀಯ ಪ್ರಜೆಗಳನ್ನಾಗಿ ಮಾಡಿಯೇ ತಿರುತ್ತೇವೆ ಎಂದು ಅವರು ಒಳಗೊಳಗೆ ನಗುತ್ತಿರುವಂತೆ ಕಾಣುತ್ತಿದೆ..!!*

ಉತ್ತರಿಸಿ...
👉🏻 *ನಮ್ಮ ಸಂಸ್ಕೃತಿ, ನಮ್ಮ ನೆಲದ ಪದ್ಧತಿ, ನಮ್ಮ ಹಕ್ಕು ಎನ್ನುವ ಕಾರಣಕ್ಕಾಗಿ ಬಾಡೂಟಕ್ಕಾಗಿ ಅಂಗಲಾಚುತ್ತಿರುವ ಮಹಾನಾಯಕರೆ ನಿಮಗೆ ಬೇಕಿರುವುದು ಬಾಡೂಟವೊ ಅಥವಾ ಬಲಿಷ್ಠ ಭಾರತವೊ.?*

*ಬಾಡೂಟವೆ ಬೇಕು ಎಂದರೆ ಯಾವ ದೊಣ್ಣೆ ನಾಯಕನನ್ನ ನಮಗೆ ಬಾಡೂಟದ ವ್ಯವಸ್ಯೆಯನ್ನ ಕಲ್ಪಿಸಿಕೊಡಿ ಎಂದು ಕೇಳುವ ಅನಿವಾರ್ಯತೆಯಾಗಲಿ ಅಥವಾ ಅವಶ್ಯಕತೆಯಾಗಲಿ ನಮಗೆ ಇಲ್ಲವೆ ಇಲ್ಲ, ಕೇವಲ ಮೊಟ್ಟೆ ಕೋಳಿಯಲ್ಲ ದನದ ಮಾಂಸದ ಊಟವನ್ನೆ ತಂದು ವೇದಿಕೆಯ ಮುಂಭಾಗದಲ್ಲೆ ಎಲ್ಲರಿಗೂ ಮಾಂಸಹಾರದ ಊಟ ಬಡಿಸಿ ಅವರ ಜೊತೆಗೆ ನಾವು ಕುಳಿತು ಊಟ ಮಾಡೋಣ ಇದನ್ನ ತಡೆಯುವ ಅಥವಾ ನಿಲ್ಲಿಸುವ ಧೀರತನ ಎದೆಗಾರಿಕೆ ಈ ಕುಂತಂತ್ರಿ ಬ್ರಾಹ್ಮಣ್ಯ ವ್ಯವಸ್ಥೆಯಲ್ಲಿ ಇಲ್ಲವೇ ಇಲ್ಲ ಎಂಬುವುದನ್ನ ನೆನಪಿಡಿ.*

*ಇದರ ಜೊತೆಗೆ ನಮಗೆ ಅತಿ ತುರ್ತು ಮತ್ತು ಅತಿ ಜರೂರಾಗಿ ಆಗಲೇ ಬೇಕಾಗಿರುವುದು...*
👉🏻 *ನಿಸ್ಕ್ರೀಯವಾಗುತ್ತಿರುವ ಭಾರತೀಯ ಸಂವಿಧಾನವನ್ನ ಅದರ ಎಲ್ಲಾ ಅನುಚ್ಚೇದಗಳನ್ನ ಮತ್ತೆ ಸಕ್ರಿಯಗೊಳಿಸುವುದು.*
👉🏻 *ಛಿದ್ರ-ಛಿದ್ರವಾಗುತ್ತಿರುವ ಭಾರತದ ಬಹುಸಂಸ್ಕೃತಿಯ ರಾಷ್ಟ್ರೀಯ ಒಕ್ಕೂಟ ವ್ಯವಸ್ಥೆಯನ್ನ ಒಟ್ಟಾಗಿ ಕಟ್ಟುವುದು.*

🇮🇳 ಮುಕ್ತ - ಸಂವಾದ 🇮🇳

14 Dec, 07:30


Document from 🇮🇳

🇮🇳 ಮುಕ್ತ - ಸಂವಾದ 🇮🇳

12 Nov, 02:32


*ಅಂಬೇಡ್ಕರ್ ಮತ್ತು ಕಾಶ್ಮೀರ ಹಾಗೂ ಸಂಘಿ ಅಪಪ್ರಚಾರ*

ಕಾಶ್ಮೀರ ಸಮಸ್ಯೆಯ ಬಗ್ಗೆ ಅಂಬೇಡ್ಕರ್ ಅವರು ಸಂಸತ್ತಿನಲ್ಲಿ ರಕ್ಷಣೆ ಮತ್ತು ವಿದೇಶಾಂಗ ನೀತಿಗಳ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ, ತಾವು ಸಂಪುಟಕ್ಕೆ ಕೊಟ್ಟ ರಾಜೀನಾಮೆ ಪತ್ರದಲ್ಲಿ, 1952ರ ಎಸ್.ಸಿ.ಎಫ್. ನ ಚುನಾವಣಾ ಪ್ರಣಾಳಿಕೆಯಲ್ಲಿ ಮತ್ತು ಜಲಂಧರ್‌ನಲ್ಲಿ ಪತ್ರಿಕಾ ಸಂಪಾದಕರಿಗೆ ಕೊಟ್ಟ ಸಂದರ್ಶನದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸುತ್ತಾರೆ.

-1951ರಲ್ಲಿ ತಮ್ಮ ಸಂಪುಟ ಸಚಿವರ ಸ್ಥಾನಕ್ಕೆ ಅಂಬೇಡ್ಕರ್ ರಾಜೀನಾಮೆ ನೀಡುತ್ತಾರೆ. ತಾವು ರಾಜೀನಾಮೆ ನೀಡಲು ಸರ್ಕಾರವು ಹಿಂದೂ ಕೋಡ್ ಬಿಲ್, ಒಬಿಸಿ ಮತ್ತು ದಲಿತರ ಹಕ್ಕುಗಳ ರಕ್ಷಣೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯಗಳ ಜೊತೆಗೆ ಭಾರತದ ತಪ್ಪು ವಿದೇಶಾಂಗ ನೀತಿಯಿಂದ ಭಾರತದ ರಕ್ಷಣಾ ವೆಚ್ಚ ಹೆಚ್ಚುತ್ತಿರುವುದನ್ನು ಪ್ರಸ್ತಾಪಿಸುತ್ತಾ ಹೇಗೆ ಭಾರತ ಸರ್ಕಾರದ ತಪ್ಪು ಕಾಶ್ಮೀರ ನೀತಿಯೂ ಕಳವಳಕಾರಿಯಾಗಿದೆ ಎಂದು ವಿವರಿಸುತ್ತಾರೆ. ಅದರ ಭಾಗವಾಗಿಯೇ ಕಾಶ್ಮೀರ ವಿವಾದವನ್ನು ಹೇಗೆ ಪರಿಹರಿಸಬೇಕು ಎಂಬ ಬಗ್ಗೆ ತಮ್ಮ ನಿಲುವನ್ನೂ ಪ್ರತಿಪಾದಿಸುತ್ತಾರೆ:

"ಪಾಕಿಸ್ತಾನದ ಜೊತೆಗೆ ನಮ್ಮ ಜಗಳವು ನಮ್ಮ ತಪ್ಪು ವಿದೇಶಾಂಗ ನೀತಿಯ ಭಾಗವಾಗಿದ್ದು ನನಗೆ ಅದರ ಬಗ್ಗೆ ತೀವ್ರ ಅಸಮಾಧಾನವಿದೆ. ಎರಡು ಕಾರಣಗಳಿಂದ ಪಾಕಿಸ್ತಾನದ ಜೊತೆ ನಮ್ಮ ಸಂಬಂಧ ಹದಗೆಟ್ಟಿದೆ- ಒಂದು ಕಾಶ್ಮೀರ ಮತ್ತೊಂದು ಪೂರ್ವ ಬಂಗಾಳದಲ್ಲಿ ನಮ್ಮ ಜನರ ಪರಿಸ್ಥಿತಿ. ಪತ್ರಿಕಾ ವರದಿಗಳನ್ನು ಗಮನಿಸಿದಾಗ ಕಾಶ್ಮೀರಕ್ಕಿಂತ ಪೂರ್ವ ಬಂಗಾಳದಲ್ಲಿ ನಮ್ಮ ಜನರ ಪರಿಸ್ಥಿತಿ ಅಸಹನೀಯವಾಗಿದೆ ಎಂದು ತಿಳಿಯುತ್ತದೆ. ಆದ್ದರಿಂದ ನಾವು ಪೂರ್ವ ಬಂಗಾಳದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು. ಆದರೂ ನಾವು ನಮ್ಮೆಲ್ಲಾ ಗಮನವನ್ನು ಕಾಶ್ಮೀರದ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ಹಾಗಿದ್ದರೂ ನಾವು ಒಂದು ವಿಷಯವಲ್ಲದ ವಿಷಯದ ಮೇಲೆ ಹೊಡೆದಾಡುತ್ತಿದ್ದೇವೆ ಎಂದು ನನಗೆ ಭಾಸವಾಗುತ್ತದೆ. ಬಹಳಷ್ಟು ಸಮಯ ನಾವು ಯಾರು ಸರಿ ಮತ್ತು ಯಾರು ತಪ್ಪು ಎಂದು ಕಾದಾಡುತ್ತಿದ್ದೇವೆ. ಆದರೆ ನಿಜವಾದ ವಿಷಯ ಯಾರು ಸರಿ ಅಥವಾ ತಪ್ಪು ಎಂಬುದಲ್ಲ ಬದಲಿಗೆ ಯಾವುದು ಸರಿ ಎಂಬುದೇ ಆಗಿದೆ. ನಮ್ಮ ಮುಂದಿರುವ ಪ್ರಧಾನ ಪ್ರಶ್ನೆ ಅದಾಗಿದ್ದಲ್ಲಿ ಕಾಶ್ಮೀರವನ್ನು ವಿಭಜೀಕರಿಸುವುದೇ ಅದಕ್ಕೆ ಸರಿಯಾದ ಪರಿಹಾರ ಎಂದು ನಾನು ಪ್ರತಿಪಾದಿಸಿಕೊಂಡು ಬಂದಿದ್ದೇನೆ. ನಾವು ಭಾರತ ವಿಭಜನೆಯ ಸಂದರ್ಭದಲ್ಲಿ ಮಾಡಿದಂತೆ ಕಾಶ್ಮೀರದ ಮುಸ್ಲಿಂ ಭಾಗಗಳನ್ನು ಪಾಕಿಸ್ತಾನಕ್ಕೆ ಕೊಟ್ಟು ಹಿಂದೂ ಮತ್ತು ಬೌದ್ಧ ಭಾಗಗಳನ್ನು ಭಾರತಕ್ಕೆ ಪಡೆದುಕೊಳ್ಳಬೇಕು. ಕಾಶ್ಮೀರದ ಮುಸ್ಲೀಮ್ ಪ್ರಾಂತ್ಯದ ಬಗ್ಗೆ ನಮಗೆ ನಿಜಕ್ಕೂ ಕಾಳಜಿಯಿಲ್ಲ. ಅದು ಕಾಶ್ಮೀರದ ಮುಸ್ಲಿಮರು ಮತ್ತು ಪಾಕಿಸ್ತಾನದ ನಡುವಿನ ವಿಷಯ. ಅವರಿಗೆ ತೋರಿದಂತೆ ಅವರು ಅದನ್ನು ಬಗೆಹರಿಸಿಕೊಳ್ಳಬಹುದು. ಅಥವಾ ನೀವು ಬಯಸುವುದಾದಲ್ಲಿ, ಕಾಶ್ಮೀರವನ್ನು ಯುದ್ಧ ವಿರಾಮ ವಲಯ, ಕಾಶ್ಮೀರ ಕಣಿವೆ ಹಾಗೂ ಜಮ್ಮು ಮತ್ತು ಲಡಾಖ್ ಪ್ರಾಂತ್ಯಗಳಾಗಿ ತ್ರಿಭಜೀಕರಿಸಿ ಕಾಶ್ಮೀರ ಕಣಿವೆಯಲ್ಲಿ ಮಾತ್ರ ಜನಮತಗಣನೆ ನಡೆಸಿ. ಅದರ ಬದಲಿಗೆ ಇಡೀ ಪ್ರಾಂತ್ರದಲ್ಲಿ ಜನಮತಗಣನೆಯನ್ನು ನಡೆಸಿದರೆ ಕಾಶ್ಮೀರದ ಹಿಂದೂ ಮತ್ತು ಬೌದ್ಧರನ್ನೂ ಸಹ ಅವರ ಬಯಕೆಗೆ ವಿರುದ್ಧವಾಗಿ ಪಾಕಿಸ್ತಾನದೆಡೆಗೆ ದೂಡಿದಂತಾಗುತ್ತದೆ. ಮತ್ತು ಆಗ ಪೂರ್ವ ಬಂಗಾಳದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಯನ್ನೇ ಇಲ್ಲಿಯೂ ಎದುರಿಸಬೇಕಾಗಿ ಬರಬಹುದು"*

(DR. BABASAHEB AMBEDKAR : WRITINGS AND SPEECHES VOL. 14-2, p. 1322)

-1951ರ ಅಕ್ಟೋಬರ್‌ನಲ್ಲಿ ಜಲಂಧರ್ ನಲ್ಲಿ ಪತ್ರಿಕಾ ಸಂಪಾದಕರು ಈ ವಿಷಯದ ಬಗ್ಗೆ ಕೇಳಿದ ಪ್ರಶ್ನೆಗೂ ಅಂಬೇಡ್ಕರ್ ಅವರು ನೇರವಾದ ಉತ್ತರವನ್ನೇ ಕೊಡುತ್ತಾರೆ:

ಸಂಪಾದಕರು: ಕಾಶ್ಮೀರ ಸಮಸ್ಯೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಅಂಬೇಡ್ಕರ್: ಪ್ರಾಯಶಃ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಬಹುದಾದ ಜನಮತಗಣನೆ ಭಾರತಕ್ಕೆ ವ್ಯತಿರಿಕ್ತವಾಗಿ ಬರಬಹುದು ಎನಿಸುತ್ತದೆ. ಜಮ್ಮು ಮತ್ತು ಲಡಾಖ್ ಪ್ರಾಂತ್ಯದ ಹಿಂದೂ ಮತ್ತು ಬೌದ್ಧರು ಪಾಕಿಸ್ತಾನಕ್ಕೆ ಹೋಗದಂತಾಗಬೇಕೆಂದರೆ ಜಮ್ಮು, ಲಡಾಖ್ ಮತ್ತು ಕಾಶ್ಮೀರಗಳಲ್ಲಿ ವಲಯವಾರು ಜನಮತಗಣನೆಯಾಗಬೇಕು*

(DR. BABASAHEB AMBEDKAR : WRITINGS AND SPEECHES VOL. 17-2, p.381)

-ನಂತರ 1952ರಲ್ಲಿ ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ (ಎಸ್.ಸಿ.ಎಫ್) ನ ಚುನಾವಣಾ ಪ್ರಣಾಳಿಕೆಯಲ್ಲಿ ಕಾಶ್ಮೀರ ಸಮಸ್ಯೆಗೆ ಏಕೆ ಮತ್ತು ಹೇಗೆ ಜನಮತಗಣನೆಯೇ ಪರಿಹಾರವೆಂದು ವಿವರಿಸುತ್ತಾರೆ :

"ಕಾಶ್ಮೀರದ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರವು ಅಳವಡಿಸಿಕೊಂಡಿರುವ ನೀತಿಯು ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ನಿಗೆ ಸಮ್ಮತವಿಲ್ಲ. ಈ ನೀತಿಯು ಹೀಗೆ ಮುಂದುವರೆದಲ್ಲಿ ಅದು ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಶ್ವತ ವೈರತ್ವವನ್ನು ಹುಟ್ಟುಹಾಕುತ್ತದೆ ಮತ್ತು ಎರಡೂ ದೇಶಗಳ ನಡುವೆ ಯುದ್ಧ ನಡೆಯುವ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ. ಎರಡೂ ದೇಶಗಳು ಒಳ್ಳೆಯ ಮತ್ತು ಸ್ನೇಹಪೂರ್ವಕ ನೆರೆಹೊರೆಯವರಾಗಿ ಮುಂದುವರೆಯುವುದು ಎರಡೂ ದೇಶಗಳಿಗೂ ಒಳ್ಳಯದು ಮತ್ತು ಅತ್ಯಗತ್ಯವಾದದ್ದು. ಈ ಉದ್ದೇಶವನ್ನು ಸಾಧ್ಯಗೊಳಿಸಲು ಪಾಕಿಸ್ತಾನದ ಬಗ್ಗೆ ನಾವು ಅನುಸರಿಸುವ ನೀತಿಯು ಎರಡು ಮುಖ್ಯ ವಿಷಯಗಳನ್ನು ಪರಿಗಣಿಸಬೇಕು:

1.ಈಗಾಗಲೇ ಆಗಿರುವ ದೇಶ ವಿಭಜನೆಯನ್ನು ರದ್ದುಗೊಳಿಸುವ ಮಾತುಗಳನ್ನು ಯಾರೂ ಆಡಬಾರದು. ದೇಶ ವಿಭಜನೆ ಆಗಿರುವುದನ್ನು ಎರಡೂ ದೇಶಗಳು ವಾಸ್ತವವೆಂದು ಒಪ್ಪಿಕೊಳ್ಳಬೇಕು ಮತ್ತು ಎರಡೂ ದೇಶಗಳು ಎರಡು ಭಿನ್ನ ಸಾರ್ವಭೌಮಿ ದೇಶಗಳಾಗಿ ಮುಂದುವರೆಯಬೇಕು.

2.ಹಾಗೂ ಕಾಶ್ಮೀರವನ್ನು ವಿಭಜಿಸಬೇಕು. ಕಾಶ್ಮೀರದ ಮುಸ್ಲಿಂ ಬಾಹುಳ್ಯದ ಪ್ರಾಂತ್ಯವು, ಕಾಶ್ಮೀರ ಕಣಿವೆಯಲ್ಲಿರುವ ಮುಸ್ಲಿಮರು ಇಚ್ಚೆ ಪಟ್ಟಲ್ಲಿ, ಪಾಕಿಸ್ತಾನಕ್ಕೆ ಹೋಗಬೇಕು. ಮತ್ತು ಮುಸ್ಲಿಮೇತರರು ವಾಸಿಸುವ ಜಮ್ಮು ಮತ್ತು ಲಡಾಖ್ ಪ್ರಾಂತ್ಯವು ಭಾರತಕ್ಕೆ ಸೇರಬೇಕು"

(DR. BABASAHEB AMBEDKAR : WRITINGS AND SPEECHES VOL. 17-1, p. 396)

🇮🇳 ಮುಕ್ತ - ಸಂವಾದ 🇮🇳

12 Nov, 02:32


-1952ರಲ್ಲಿ ಸಂಸತ್ತಿನಲ್ಲಿ ನಡೆದ ಭಾರತದ ವಿದೇಶಾಂಗ ನೀತಿ ಹಾಗೂ ರಕ್ಷಣಾ ವೆಚ್ಚಗಳ ಬಗೆಗಿನ ಚರ್ಚೆಯಲ್ಲಿ ಭಾಗವಹಿಸುತ್ತಾ ಅಂಬೇಡ್ಕರ್ ಅವರು ಮತ್ತೊಮ್ಮೆ ಕಾಶ್ಮೀರ ವಿವಾದದ ಬಗ್ಗೆ ತಮ್ಮ ನಿಲುವನ್ನು ಒತ್ತಿಹೇಳುತ್ತಾರೆ:

"ಕಾಶ್ಮೀರದಂತ ವಿವಾದಾಸ್ಪದ ವಿಷಯಗಳನ್ನು ಬಗೆಹರಿಸಲು ಜನಮತಗಣನೆಯೆಂಬ ಸಾಧನವನ್ನು ಬಳಸಬೇಕೆ ಎಂಬುದನ್ನು ಅರಿಯಲು ತೀರಾ ಹಳೆಯ ಪುರಾವೆಗಳನ್ನು ಹುಡುಕುವ ಅಗತ್ಯವೇನೂ ಇಲ್ಲ. ಎರಡನೇ ಮಹಾಯುದ್ಧದ ನಂತರ, ನನಗೆ ನೆನಪಿರುವ ಹಾಗೆ, ಎರಡು ಪ್ರಕರಣಗಳನ್ನು ಜನಮತಗಣನೆಯ ಮೂಲಕ ಬಗೆಹರಿಸಬೇಕಾಯಿತು. ಒಂದು (ಆಗ ಪೋಲೆಂಡಿನ ಭಾಗವಾಗಿದ್ದು ಜರ್ಮನಿ ಮತ್ತು ಪೋಲೆಂಡಿನ ನಡುವೆ ತಗಾದೆಗೊಳಗಾಗಿದ್ದ-ಲೇ) ಉತ್ತರ ಸಿಲೇಸಿಯಾ ಮತ್ತೊಂದು (ಈ ಹಿಂದೆ ಜರ್ಮನರು ಫ್ರೆಂಚರಿಂದ ವಶಪಡಿಸಿಕೊಂಡಿದ್ದ-ಲೇ) ಅಲ್ಸೇಸ್-ಲೋರೈನ್ ಪ್ರಾಂತ್ಯ. ಈ ಎರಡೂ ವಿವಾದಗಳನ್ನು ಜನಮತಗಣನೆಯ ಮೂಲಕ ಅಲ್ಲಿನ ನಿವಾಸಿಗಳ ಮತಾಭಿಪ್ರಾಯಗಳ ಆಧಾರದ ಮೇಲೆ ತೀರ್ಮಾನಿಸಲಾಯಿತು. ಪ್ರಬುದ್ಧರು ಮತ್ತು ಮೇಧಾವಿಗಳು ಮತ್ತು ನನ್ನ ಗೌರವಾನ್ವಿತ ಸ್ನೇಹಿತರೂ ಆಗಿರುವ ಗೋಪಾಲಸ್ವಾಮಿ ಅಯ್ಯಂಗಾರ್ ಅವರಿಗೆ ಈ ವಿಷಯವು ತಿಳಿದಿರುತ್ತದೆ ಎಂದೇ ನಾನು ಭಾವಿಸುತ್ತೇನೆ. ಉತ್ತರ ಸಿಲೇಸಿಯಾ ಮತ್ತು ಅಲ್ಸೇವ್-ಲೋರೈನ್ ಪ್ರಾಂತ್ಯದ ವಿವಾದಗಳನ್ನು ಬಗೆಹರಿಸಲು ಅಂದಿನ ಲೀಗ್ ಆಫ್ ನೇಷನ್ಸ್ ಅನುಸರಿಸಿದ ಮಾದರಿಯ ನ್ನೇ ಕಾಶ್ಮೀರದಲ್ಲಿ ಅಳವಡಿಸುವ ಮೂಲಕ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿ, ಈ ವಿವಾದವು ರಕ್ಷಣಾ ಬಜೆಟ್ಟಿನಲ್ಲಿ ನುಂಗಿಹಾಕುತ್ತಿರುವ ೫೦ ಕೋಟಿ ರೂ. ಹಣವನ್ನು ನಮ್ಮ ಜನರ ಅಗತ್ಯಗಳಿಗೆ ಬಳಸಿಕೊಳ್ಳಲಾಗದೇ?"

(DR. BABASAHEB AMBEDKAR : WRITINGS AND SPEECHES VOL. 15, p. 849))

ಹೀಗೆ ಅಂಬೇಡ್ಕರ್ ಅವರು ಅತ್ಯಂತ ಸ್ಪಷ್ಟವಾಗಿ ಭಾರತ ಮತ್ತು ಪಾಕಿಸ್ತಾನದ ಸ್ನೇಹಯುತ ಸಂಬಂಧದ ಪರವಾಗಿದ್ದರು.

ಮತ್ತು

ಕಾಶ್ಮೀರದಲ್ಲಿ ಕಡ್ಡಾಯವಾಗಿ ಜನಮತಗಣನೆ ನಡೆದು ಅಲ್ಲಿನ ಜನರ ಅಭಿಪ್ರಾಯಕ್ಕೆ ತಕ್ಕಂತೆ ನಡೆದುಕೊಳ್ಳಲು ಅವಕಾಶ ಮಾಡಿಕೊಡುವುದರ ಪರವಾಗಿದ್ದರು.

ಅದರಿಂದ ಮಾತ್ರ ಭಾರತಕ್ಕೂ, ಪಾಕಿಸ್ತಾನಕ್ಕೂ ಹಾಗು ಎಲ್ಲಕ್ಕಿಂತ ಮುಖ್ಯವಾಗಿ ಕಾಶ್ಮೀರದ ಜನತೆಗೂ ಒಳಿತಾಗುತ್ತದೆ ಎಂಬ ಸ್ಪಷ್ಟ ಅಭಿಪ್ರಾಯವನ್ನು ಹೊಂದಿದ್ದರು.

ಅಂಬೇಡ್ಕರ್ ಅವರು ಮೋದಿ-ಶಾ ಸರ್ಕಾರ ಆರ್ಟಿಕಲ್ 370 ರದ್ಧತಿ ಇತ್ಯಾದಿಗಳ ಮೂಲಕ ಕಾಶ್ಮಿರಿಗಳ ಮೇಲೆ ಮಾಡುತ್ತಿರುವ ಈ ದಾಳಿಗಳನ್ನು ಎಂದಿಗೂ ಒಪ್ಪುತ್ತಿರಲಿಲ್ಲ.


-ಶಿವಸುಂದರ್.

🇮🇳 ಮುಕ್ತ - ಸಂವಾದ 🇮🇳

25 Oct, 16:40


*ಒಳಮೀಸಲಾತಿ ಬಗ್ಗೆ ತುಂಬಾ ಹಾಳವಾಗಿ ಚಿಂತಿಸುತ್ತಿರುವ ಹೋರಾಟಕ್ಕೆ ಯೋಜನೆ ರೂಪಿತ್ತಿರುವ ಮಹಾನ್ ಧೀಮಂತ ನಾಯಕರೆ ಒಳ ಮೀಸಲಾತಿಯ ಒಳ ಮರ್ಮಗಳನ್ನ ದಯಮಾಡಿ ದಯಮಾಡಿ ಈಗಲಾದರೂ ಅರ್ಥ ಮಾಡಿಕೊಳ್ಳಿ..*
*ಇನ್ನೂ ಕೆಲವೇ ಕೆಲವು ವರ್ಷಗಳಲ್ಲಿ ಒಳ ಮೀಸಲಾತಿ ಬಗ್ಗೆ ಹೋರಾಟ ಮಾಡೋದಲ್ಲ ತಮ್ಮ ತಮ್ಮ ಒಳ ಚಟ್ಟಿನ ಆಕಿಕೊಳ್ಳಬೇಕು ಅಂದ್ರು ಈ ದೇಶದಲ್ಲಿನ ಮನುವಾಗಳ ಅನುಮತಿ ಪಡೆದುಕೊಳ್ಳಲು ಈ ಕ್ಷಣದಿಂದಲೇ ಮನಸ್ಥಿತಿಯನ್ನ ಸಿದ್ಧತೆ ಮಾಡಿಕೊಳ್ಳಿ..!*


-Chowdesh..
+919632655013

🇮🇳 ಮುಕ್ತ - ಸಂವಾದ 🇮🇳

28 Sep, 03:29


🌹🌹 *ಬುದ್ಧ ಪ್ರಜ್ಞೆ* 🌹🌹

*ನೋಡುವವುರ ಕಣ್ಣಿಗೆ ಕೆಟ್ಟವನಂತೆ ಕಂಡರೂ ಪರವಾಗಿಲ್ಲ ನಿನ್ನ ಭಾವನೆ ಮಾತ್ರ ಶುದ್ಧವಾಗಿರಲಿ..!*

🇮🇳 ಮುಕ್ತ - ಸಂವಾದ 🇮🇳

02 Jul, 06:47


👊🏻 *ಸ್ವಾಭಿಮಾನ ಸ್ವಾಭಿಮಾನಿಗಳ ಹೆಜ್ಜೆ ಎಂದರೆ ಹೀಗಿರಬೇಕು ಇದುವೆ ಬಾಬಾ ಸಾಹೇಬರ ದಿಟ್ಟ ನಿಲುವಾಗಿತ್ತು* ✊🏻

-ಚೌಡೇಶ್ ಮಂಡ್ಯ.

ಈ ಲೇಖನ ಭಾಸ್ಕರ್ ವಿಟ್ಲ ಅಧಿಕೃತ ಬರಹ ಪೂರ್ತಿ ಓದಿ..!

ಪ್ರಿಯ ಬಂಧುಗಳೇ,
ಒಂದು ವಿಚಾರವನ್ನು ಈ ಮೂಲಕ ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.‌

ದಕ್ಷಿಣ ಕನ್ನಡ ಜಿಲ್ಲೆಯ ದೇವಪ್ಪ ಕಾರೆಕ್ಕಾಡ್ ಎಂಬ ಬದ್ಧತೆಯುಳ್ಳ ಬೌದ್ಧ ಉಪಾಸಕರಿಗೆ ಇಬ್ಬರು ಹೆಣ್ಣು ಮಕ್ಕಳು, ಇವರಿಬ್ಬರೂ ಬೌದ್ಧ ಧರ್ಮ, ಬೌದ್ಧ ಜಾತಿ ಹೆಸರಿನಲ್ಲಿ ಈಗಾಗಲೇ ಕೆಟಗರಿ II(A) ಪಡೆದುಕೊಂಡಿದ್ದಾರೆ‌. ಇದೊಂದು ಐತಿಹಾಸಿಕ ಸಾಧನೆ ಮಾತ್ರವಲ್ಲದೆ ಚಳುವಳಿಯ ದೃಷ್ಟಿಯಲ್ಲಿ ಅತ್ಯಂತ ಪ್ರಮುಖವಾದದ್ದು ಕೂಡಾ. ಈ ಇಬ್ಬರು ಮಕ್ಕಳಲ್ಲಿ ದೊಡ್ಡವಳು ಗಾನಶ್ರೀ. ಈಗಾಗಲೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬೌದ್ಧ ಧರ್ಮದ, ಬೌದ್ಧ ಜಾತಿಯ (ಕೆಟಗರಿ-2A) ವಿದ್ಯಾರ್ಥಿನಿಯೊಬ್ಬಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ತೇರ್ಗಡೆ ಹೊಂದಿದ ದಾಖಲೆ ಹೊಂದಿದ್ದಾಳೆ‌. ಆ ನಂತರ ಪಿಯಿಸಿ ಶಿಕ್ಷಣ ಮುಗಿಸಿದ್ದಾಳೆ‌. ಪಿಯು ಎಜುಕೇಶನ್ ಮುಗಿಸಿದ ನಂತರ ಉನ್ನತ ಶಿಕ್ಷಣಕ್ಕಾಗೊ ಟಿಸಿ ಪಡೆಯುವಾಗ ಉದ್ದೇಶಪೂರ್ವಕವಾಗಿಯೋ ಅಥವಾ ತಪ್ಪಿಯೋ ಗೊತ್ತಿಲ್ಲ ಆ ಕಾಲೇಜಿನವರು ಧರ್ಮ-ಹಿಂದೂ; ಜಾತಿ- ಬೌದ್ಧ ಎಂದು ತಪ್ಪಾಗಿ ನಮೂದಿಸಿದ್ದರು. ತಕ್ಷಣ ಎಚ್ಚರವಹಿಸಿದ ಅವಳ ತಂದೆ ಅದನ್ನು ಕಾಲೇಜಿನ ಕಛೇರಿ ಗಮನಕ್ಕೆ ತಂದು ಅವರ ಎಲ್ಲಾ ಬಗೆಯ ಪ್ರಶ್ನೆಗಳಿಗೂ ಉತ್ತರಿಸಿ ಮತ್ತೆ ಟಿಸಿಯನ್ನು ಬೌದ್ಧ ಧರ್ಮ ಹಾಗೂ ಬೌದ್ಧ ಜಾತಿ ಎಂದು ಪಡೆಯಲು ಯಶಸ್ವಿಯಾಗಿದ್ದಾರೆ (ಎಷ್ಟರ‌ ಮಟ್ಟಿಗೆ ಬೌದ್ಧ ಧರ್ಮ ಹಾಗೂ ಬೌದ್ಧ ಜಾತಿ ಅವರಿಗೆ ಡಿಸ್ಟರ್ಬ್ ಮಾಡುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೆ).
ದೊಡ್ಡದಾದ ಜಾತಿ ಕೊಚ್ಚೆಯ‌ ಪ್ರವಾಹದ ವಿರುದ್ಧ ಈಜುವ ಏಕೈಕ ಹೆಣ್ಣುಮಗಳನ್ನು ಎದುರಿಸಲಾರದಷ್ಟು ಈ ವ್ಯವಸ್ಥೆ ಬಲಹೀನವಾಗಿದೆಯೆಂದರೆ ಅದರ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿಕೊಳ್ಳಿ.

ಇರಲಿ, ಆ ನಂತರ ಇಂದು ನಮ್ಮ ಗಾನಶ್ರಿಯ ಎಡ್ಮಿಷನ್ ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಮಂಗಳೂರಿನ ಎಸ್‌ಡಿಎಂ ಲಾ ಕಾಲೇಜಿನಲ್ಲಿ ಆಗಿದೆ‌. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮೊಟ್ಟ ಮೊದಲ ಬೌದ್ಧ ಹೆಣ್ಣುಮಗಳು ಲಾ ಮಾಡಲು ಮುನ್ನುಡಿ ಬರೆದಿದ್ದಾಳೆ ಎನ್ನುವ ಸಂತಸ ನಮ್ಮದು.
ಇಂದಿನ ಅಡ್ಮಿಷನ್ ಪ್ರಕ್ರಿಯೆ ನಡೆಯುವಾಗ ಸಂಸ್ಥೆಯ ಪ್ರಾಂಶುಪಾಲರು (ಜೈನರು) ಹುಡುಗಿಯ ಕೆಟಗರಿ ನೋಡಿ ಆಶ್ಚರ್ಯ ಹಾಗೂ ಅತೀವ ಸಂತಸ ವ್ಯಕ್ತಪಡಿಸಿದ್ದು ನಮಗಚ್ಚರಿಯಾಯಿತು‌. ಓ ಬೌದ್ಧರೇ? ಎಂದರು. ಹೌದು ಎಂದಾಗ ನಮ್ಮ‌ ಕಾಲೇಜಿನ ಇತಿಹಾಸದಲ್ಲಿಯೇ ಈ ಮೊಟ್ಟ ಮೊದಲ ಬೌದ್ಧ ವಿದ್ಯಾರ್ಥಿ ಎಂದು ಸಂತೋಶದಿಂದಲೇ ಪ್ರಶಂಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿಸಿದ ಅವರು ಜೈನ ಹಾಗೂ ಬೌದ್ಧ ಧರ್ಮ ವ್ಯತ್ಯಾಸ ಕೇಳಿದರು, ನಮ್ಮ ಗಾನ ಅದಕ್ಕೆ ಸಮರ್ಪಕ ಉತ್ತರ ನೀಡಿದಳು. ನಂತರ ಪುತ್ತೂರಿನಲ್ಲಿಯೂ ಬೌದ್ಧರಿದ್ದಾರೆ ಎಂದಾಗ ನಾವು ಒಂದು ಇಪ್ಪತ್ತು ಕುಟುಂಬಗಳಿದ್ದೇವೆ ಎಂದು ಹೆಮ್ಮೆಯಿಂದಲೇ ಉತ್ತರಿಸಿದರು. ಅವರಿಗೋ ಆಶ್ಚರ್ಯವೋ ಆಶ್ಚರ್ಯ.
ನೀವು ಹೇಗೆ ಬೌದ್ಧರು ಎಂದಾಗ, ನಮ್ಮ ಅಪ್ಪ ಬೌದ್ಧರು ಹಾಗೆ ನಾವೂ ಎನ್ನುವುದು ನಮ್ಮ ಉತ್ತರ. ನಮ್ಮಪ್ಪ ಬಾಬಾ ಸಾಹೇಬರು‌ ಎನ್ನುವುದು ನಮ್ಮ ಉತ್ತರದ ತಾತ್ಪರ್ಯ. ಅವರು ಮರುಮಾತನಾಡದೆ ಬಹಳಷ್ಟು ಪ್ರಶಂಸಿದರು. ಮುಂದಿನ ಭವಿಷ್ಯಕ್ಕಾಗಿ ಹರಸಿದ ಪ್ರಾಂಶುಪಾಲರು ಎಸ್‌ಡಿ‌ಎಂ‌ ಲಾ ಕಾಲೇಜಿನ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬೌದ್ಧ ವಿದ್ಯಾರ್ಥಿಯೊಬ್ಬರಿಗೆ ಅಡ್ಮಿಷನ್ ನೀಡಿದರು. ಅವರಿಗೂ ಹೆಮ್ಮೆ ನಮಗೂ ಹೆಮ್ಮ.

ನಮ್ಮ ದೇವಪ್ಪರು ಪ್ರೈವೇಟ್ ಶಾಲೆಯೊಂದರಲ್ಲಿ ಕಂಪ್ಯೂಟರ್ ಮೈಂಟೆನೆನ್ಸ್ ಕೆಲಸ ನಿರ್ವಹಿಸುವವರು‌, ಆದರೆ ಅವರಲ್ಲಿರುವ ಬದ್ಧತೆ ಕ್ಲಾಸ್-1 ಆಫೀಸರ್‌ಗಳಿಗಿಂತಲೂ ಹೆಚ್ಚಿನದ್ದು.

ಈ ಅಡ್ಮಿಷನ್ ಪ್ರಕ್ರಿಯೆಯಲ್ಲಿ ಪ್ರೋತ್ಸಾಹ ನೀಡಿ‌ ಸಹಕಾರ ನೀಡಿದ ನಮ್ಮ ನಾಗಸಿದ್ಧಾರ್ಥ ಸಾರ್, ರವಿಪ್ರಸಾದ ಸಾರಥಿ ಸಾರ್, ನಟಶೇಖರಮೂರ್ತಿ ಸಾರ್ ಇವರಿಗೆ ನಮ್ಮ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಕೃತಜ್ಞತಾಪೂರ್ವಕ ವಂದನೆಗಳು.

ಈಗ ನಮ್ಮ ಜಿಲ್ಲೆಯಲ್ಲಿ ಅವರ ಇನ್ನೊಬ್ಬ ಮಗಳು ಗ್ರೀಶ್ಮ, ನನ್ನ ಮಗ ಆದಿತ್ಯ ಸಿದ್ಧಾರ್ಥ ಬೌದ್ಧ್ ಹಾಗೂ ಮಗಳು ಆರಾಧ್ಯ ಸಿದ್ಧಾರ್ಥ ಬೌದ್ಧ್ ಒಂದೇ ಶಾಲೆಯಲ್ಲಿ ಕ್ರಮವಾಗಿ ಎಂಟು, ಐದು ಹಾಗೂ ಎರಡನೇ ತರಗತಿಯಲ್ಲಿ ಬೌದ್ಧ ಧರ್ಮ ಹಾಗೂ ಬೌದ್ಧ ಜಾತಿ ಐಡೆಂಟಿಟಿಯಲ್ಲಿ ಓದುತ್ತಿದ್ದಾರೆ.
ಒಂದು ಈಗ ಮೂರಾಗಿದೆ ಅದು ನೂರಾಗಲಿ ಎನ್ನುವುದು ನಮ್ಮ ಆಶಯ.‌

ಜೈ ಭೀಮ್.
ನಮೋ‌ ಬುದ್ಧಾಯ. 🙏🏻


ನಿಮ್ಮ ಪ್ರೀತಿಯ
-ಭಾಸ್ಕರ್ ವಿಟ್ಲ.

🇮🇳 ಮುಕ್ತ - ಸಂವಾದ 🇮🇳

28 Jun, 08:18


ಹೀಗೊಂದು ಅಭಿಪ್ರಾಯ...!

ಬಾಬಾ ಸಾಹೇಬರು ಹಿಂದೂ ಕೋಡ್ ಬಿಲ್ ಜಾರಿ ಆಗದಿದ್ದ ಒಂದೆ ಕಾರಣಕ್ಕೆ ತನ್ನ ಮಾತಿಗೆ ಬೆಲೆ ಇರದ ತನ್ನ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಜೊತೆಗೆ ಹಿಂದೂ ಧರ್ಮವನ್ನ ಕಾಲಿನಿಂದ ಹೊದ್ದು ಆಚೆ ಬಂದು ಸ್ವಾಭಿಮಾನ ಸ್ವಾಭಿಮಾನಿ ಅಂದರೆ ಹೇಗಿರುತ್ತಾರೆ ಎಂದು ಜಗತ್ತಿಗೆ ತೋರಿಸಿಕೊಟ್ಟರು..
ಆದರೆ..
ಈಗಿನ ಸರ್ಕಾರಿ ನೌಕರರು ( ಕೆಲವರು ) ಕೇವಲ ಬೌದ್ಧಧಮ್ಮ ಪ್ರಮಾಣ ಪತ್ರಕ್ಕೋಸ್ಕರ ನಾವು ಸರ್ಕಾರಿ ಉದ್ಯೋಗವನ್ನ ಬಿಡಬೇಕೆ? ನಮಗೆ ಸ್ವಾಭಿಮಾನ ಇಲ್ಲವೆ? ಹೀಗೆ ಮಾಡಿದರೆ ನಮ್ಮ ಮಕ್ಕಳ ಉದ್ಯೋಗ ಭವಿಷ್ಯಕ್ಕೆ ಮೀಸಲಾತಿ ಸಿಗುವುದಿಲ್ಲವಲ್ಲ ಎನ್ನುವ ಸ್ವಾರ್ಥವಾದವನ್ನ ಮುಂದೆ ಇಡುತ್ತಿದ್ದಾರೆ.

ಇಂಥವರಿಗೆ ನನ್ನದೊಂದು ಪ್ರಶ್ನೆ.!
ಬಾಬಾ ಸಾಹೇಬರು ಮೀಸಲಾತಿ ಎಂಬ ಸರ್ಕಾರಿ ಉದ್ಯೋಗದಲ್ಲೆ ಜೀವನ ಪೂರ್ತಿ ಬದುಕಿದರೆ.?
ಬೌದ್ಧ ಧಮ್ಮದ ಪ್ರಕಾರ ಸರ್ಕಾರಿ ಮೀಸಲಾತಿ ಸಿಗುವುದಿಲ್ಲವೇ.?
ನಾವು ಬೌದ್ಧರಲ್ಲದೆ ಪಡೆದುಕೊಳ್ಳುವ ಸರ್ಕಾರಿ ಮೀಸಲಾತಿ ಹೆಂಜಲು ಎಲೆಯ ಮೇಲೆ ಬಿದ್ದಿರುವ ಅನ್ನದ ಅಗುಳಿನಂತೆ ಬೆಲೆ ಅಥವಾ ಸ್ವಾಭಿಮಾನ ಇಲ್ಲವೇ ಇಲ್ಲದ್ದು ಎಂದು ಏಕೆ ಅರ್ಥ ಆಗುತ್ತಿಲ್ಲ.?

-Chowdesh mandya.
+919632655013

🇮🇳 ಮುಕ್ತ - ಸಂವಾದ 🇮🇳

28 Jun, 00:14


*ಸರ್ಕಾರಿ ಅಧಿಕೃತ ಬೌದ್ಧ ಧಮ್ಮದ ಪ್ರಮಾಣ ಪತ್ರ ಹೊಂದದ ಹೊರತು ನಾವು ಸ್ವಾಭಿಮಾನ ಮತ್ತು ಬೌದ್ಧ ಧಮ್ಮದ ಕುರಿತು ಮಾತನಾಡುವ ಯಾವುದೇ ನೈತಿಕ ಅರ್ಹತೆ ಇಲ್ಲದವರೇ ಆಗಿರುತ್ತೇವೆ,*
*ಹಿಂದೂ ಧರ್ಮದ ಗುಲಾಮ ಗಿರಿಯಲ್ಲಿ ಗಿಟ್ಟಿಸಿಕೊಳ್ಳುವ ಸರ್ಕಾರಿ ನೌಕರಿ ಗಿಂತ ಸರ್ಕಾರದಿಂದಲೇ ಪಡೆದ ಬೌದ್ಧ ಧಮ್ಮದ ಪ್ರಮಾಣ ಪತ್ರದ ಮುಖಾಂತರ ಲಭಿಸುವ ಸ್ವಯಂ ಅಥವಾ ಸರ್ಕಾರಿ ಉದ್ಯೋಗವೆ, ಉನ್ನತ ಮಟ್ಟದ್ದಾಗಿರುತ್ತದೆ.*


-Chowdesh mandya.
+919632655013

🇮🇳 ಮುಕ್ತ - ಸಂವಾದ 🇮🇳

27 Jun, 16:36


🪷 *ಸರ್ಕಾರಿ ನೋಂದಯಿತ ಬೌದ್ಧರು* 🪷
*[ Government Certified Buddhist ]*

👉🏻 *Follow this link to join my WhatsApp group:
https://chat.whatsapp.com/BFKocOgcjFOJmLeEwpmjLr* 👇
*ಸರ್ಕಾರದಿಂದ ಅಧಿಕೃತ ಬೌದ್ಧ ಪ್ರಮಾಣ ಪತ್ರ ಪಡೆದಿರುವ ಬೌದ್ಧರಿಗೆ ಮಾತ್ರ ಈ ವೇದಿಕೆ ರಚಿತವಾಗಿದೆ.*🤝

🇮🇳 ಮುಕ್ತ - ಸಂವಾದ 🇮🇳

21 Apr, 16:39


Live stream finished (1 hour)

🇮🇳 ಮುಕ್ತ - ಸಂವಾದ 🇮🇳

21 Apr, 15:00


Join