Target PSI 😌

@gk2ndpucarts


ONLY .PSI .KAS .PC . KPSC. KARNATAKA POLICE TARGET 🎯

Target PSI 😌

11 Sep, 01:23


Channel name was changed to «Target PSI 😌»

Target PSI 😌

31 Jul, 16:57


Channel name was changed to «Future Karnataka»

Target PSI 😌

29 Jul, 16:46


ಸಾಮಾನ್ಯ ಜ್ಞಾನ

🎓ಖಜುರಾಹೊ ದೇವಾಲಯಗಳು ಎಲ್ಲಿವೆ?

ಉತ್ತರ:- ಮಧ್ಯಪ್ರದೇಶ

🎓ಅಮರಾವತಿ ಬೌದ್ಧ ಸ್ತೂಪ ಎಲ್ಲಿದೆ
ಉತ್ತರ :-

ಆಂಧ್ರಪ್ರದೇಶ

🎓ಸಲ್ಹಾರ್ ಯುದ್ಧ ಯಾವಾಗ ನಡೆಯಿತು?

ಉತ್ತರ:- 1672 ಕ್ರಿ.ಶ

🎓ಔರಂಗಜೇಬನ ಆಳ್ವಿಕೆಯಲ್ಲಿ ಬಂಗಾಳದ ನವಾಬ್ ಯಾರು?

ಉತ್ತರ:-ಮುರ್ಷಿದ್ ಕುಲಿ ಖಾನ್

🎓ಮಾನವ ದೇಹದಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಂಡುಬರುವ ಅಂಶ ಯಾವುದು?

ಉತ್ತರ:- ಆಮ್ಲಜನಕ

🎓ಬಟ್ಟೆಗಳಿಂದ ತುಕ್ಕು ಕಲೆಗಳನ್ನು ತೆಗೆದುಹಾಕಲು ಏನು ಬಳಸಲಾಗುತ್ತದೆ?

ಉತ್ತರ:- ಆಕ್ಸಾಲಿಕ್ ಆಮ್ಲ

🎓ಯಾವ ಅನಿಲವು ಸಾಮಾನ್ಯವಾಗಿ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟಕ್ಕೆ ಕಾರಣವಾಗುತ್ತದೆ?

ಉತ್ತರ:- ಮೀಥೇನ್

🎓ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಯಾವ ಸಚಿವಾಲಯವು ನೀಡುತ್ತದೆ?

ಉತ್ತರ:- ಮಾಹಿತಿ ಮತ್ತು ಪ್ರಸಾರ ಸಚಿವಾಲಯ

🎓ಇಕ್ತಾ ಬದಲಿಗೆ ಸೈನಿಕರಿಗೆ ಸಂಬಳ ನೀಡಲು ಪ್ರಾರಂಭಿಸಿದ ಮೊದಲ ಸುಲ್ತಾನ್ ಯಾರು?

ಉತ್ತರ:- ಅಲ್ಲಾವುದ್ದೀನ್ ಖಿಲ್ಜಿ

Target PSI 😌

10 Feb, 15:43


Hii all

Target PSI 😌

20 Aug, 09:32


SSC GD 2023 ರ Highest Cut off

CISF GM -90 Marks (ಅಂದ್ರೆ 56.26% =90×100/160)

Lowest Cut off
CISF in service - 36.26 marks (22.6%)....


ಬೇರೆ ಉತ್ತರದ ರಾಜ್ಯಗಳಲ್ಲಿ ಇದು 70-80% cut off ಇದೆ....


ಆಯ್ಕೆಯಾದ 1400+ ಕನ್ನಡಗರಿಗೆ ಅಭಿನಂದನೆಗಳು

Target PSI 😌

31 Jul, 18:10


Channel name was changed to «Kannada quize 🥰»

Target PSI 😌

30 Jul, 13:29


Channel name was changed to «Target psi»

Target PSI 😌

23 Jul, 03:24


ಬೌದ್ಧ ಧರ್ಮ

🌷ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ

🌷 ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ದ

🌷 ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್ಥ

🌷 ಗೌತಮ ಬುದ್ಧನ ತಂದೆಯ ಹೆಸರು -- ಶುದ್ಧೋದನ

🌷 ಶುದ್ಧೋದನ ಈ ಕುಲಕ್ಕೆ ಸೇರಿದ ಅರಸ - - ಶಾಕ್ಯ ಕುಲ

🌷 ಶುದ್ಧೋದನ ರಾಜ್ಯವಾಳುತ್ತಿದ್ದ ಪ್ರದೇಶ - - ಕಪಿಲವಸ್ತು

🌷 ಬುದ್ಧನ ತಾಯಿಯ ಹೆಸರು - - ಮಾಯಾದೇವಿ

🌷 ಮಾಯಾದೇವಿಯ ತವರು ಮನೆ - - ದೇವದಾಹ ಎಂಬ ನಗರ

🌷 ಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಪ್ರದೇಶ -- ಲುಂಬಿಣಿ ವನ

🌷 ಲುಂಬಿಣಿವನ ಪ್ರಸ್ತುತ ಈ ಪ್ರದೇಶದಲ್ಲಿದೆ -- ನೇಪಾಳದ ಗಡಿ ಪ್ರದೇಶ

🌷 ಬುದ್ಧನ ಮಲತಾಯಿಯ ಹೆಸರು - - ಮಹಾ ಪ್ರಜಾಪತಿ

🌷 ಜಿಂಕೆಯ ವನ ಎಂದು ಕರೆಯಲ್ಪಡುವ ಪ್ರದೇಶ - ಸಾರಾನಾಥ

🌷 ಬುದ್ದನ ಕುರಿತಾದ ತಮಿಳು ಕೃತಿ - - ಮಣಿಮೇಖಲೈ

🌷 ಬುದ್ದನ ಬಾಲ್ಯದಲ್ಲಿ ಭವಿಷ್ಯ ನುಡಿದ ಸನ್ಯಾಸಿ - ಅನಿತ

🌷 ಬುದ್ದನ ಪತ್ನಿಯ ಹೆಸರು - ಯಶೋಧರಾ

🌷 ಬುದ್ಧನ ಮುಗುವಿನ ಹೆಸರು - ರಾಹುಲ

🌷 ಬುದ್ಧ ಸನ್ಯಾಸತ್ವ ಪಡೆಯಲು ಕಾರಣವಾದ ಅಂಶ - ವೃದ್ದ
ಕುಷ್ಠರೋಗಿ , ಶವ ಹಾಗೂ ಸನ್ಯಾಸಿ

🌷 ಸತ್ಯಾನ್ವೇಷಣಿ
ಬುದ್ಧನು ಲೌಕಿಕ ಪ್ರಪಂಚದಿಂದ ದೂರ ಸರಿಯಲು ಪ್ರಯತ್ನಿಸಿದ್ದು - 21 ನೇ ವಯಸ್ಸಿನಲ್ಲಿ

🌷 ಬುದ್ಧನು ಸತ್ಯಾನ್ವೇಷಣಿಗೆ ಹೊರಟ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾಪರಿತ್ಯಾಗ

🌷 ರಾಜ್ಯ ತೊರೆದು ಹೊರಟ ಬುದ್ಧನು ತಲುಪಿದ ಮೊದಲ ಪ್ರದೇಶ - ಗಯಾ

🌷 ಬುದ್ಧನಿಗೆ ಜ್ಞಾನೇದಯವಾದದ್ದು - ಬೋದಿ ವೃಕ್ಷದ ಕೆಳಗೆ

🌷 ತಥಾಗತ ಎಂದರೇ - ಸತ್ಯವನ್ನು ಕಂಡವನು ಎಂದರ್ಥ

🌷 ಬುದ್ದನು ನಿರ್ವಾಣ ಹೊಂದಿದ ಪ್ರದೇಶ - ನೇಪಾಳದ ಕುಶೀನಗರ

ಬುದ್ದನ ತತ್ವಗಳು

👉�ನಾಲ್ಕು ಮೂಲ ತತ್ವಗಳು

👉�ನಾಲ್ಕು ಮಹಾನ್ ಸತ್ಯಗಳು

👉�ಅಷ್ಟಾಂಗ ಮಾರ್ಗ

ನಾಲ್ಕು ಮೂಲ ತತ್ವಗಳು

👉�ಅಹಿಂಸೆ
👉�ಸತ್ಯ ನುಡಿಯುವಿಕೆ
👉�ಕಳ್ಳತನ ಮಾಡದಿರುವುದು
👉�ಪಾವಿತ್ರತೆ

ನಾಲ್ಕು ಮಹಾನ್ ಸತ್ಯಗಳು
     

👉�ದುಃಖ
👉�ದುಃಖಕ್ಕೆ ಕಾರಣ
👉�ದುಃಖದ ನಿವಾರಣಿ
👉�ದುಃಖದ ನಿವಾರಣಿಗೆ ಮಾರ್ಗ

ಅಷ್ಟಾಂಗ ಮಾರ್ಗ

👉�ಒಳ್ಳೆಯ ನಂಬಿಕೆ
👉�ಒಳ್ಳೆಯ ಆಲೋಚನೆ
👉�ಒಳ್ಳೆಯ ಮಾತು
👉�ಉತ್ತಮ ನಡತೆ
👉�ಉತ್ತಮ ಜೀವನ
👉�ಒಳ್ಳೆಯ ಪ್ರಯತ್ನ
👉�ಉತ್ತಮ ವಿಚಾರಗಳ ನೆನಪು
👉�ಯೋಗ್ಯ ರೀತಿಯ ಧ್ಯಾನ

🌷 ಅಹಿಂಸೆಯೆ ದುಃಖಕ್ಕೆ ಮೂಲ ಕಾರಣ ಎಂಬ ಹೇಳಿಕೆ ನೀಡಿದವರು - ಬುದ್ದ

🌷 ಬುದ್ಧನ ಪ್ರಕಾರ ಮುಕ್ತಿಗೆ ಕೊಂಡೊಯ್ಯಲಿರುವ ದಾರಿ - ಅಷ್ಟಾಂಗ ಮಾರ್ಗ

🌷 ಅಷ್ಟಾಂಗ ಮಾರ್ಗವನ್ನು ಈ ಹೆಸರಿನಿಂದಲೂ ಕರೆಯುವರು - - ಮಾಧ್ಯಮಿಕ ಮಾರ್ಗ

🌷 ವ್ಯಕ್ತಿಯ ಮೋಕ್ಷ ಸಾಧನೆಗೆ ಸೂಕ್ತ ದಾರಿ ಕಲ್ಪಿಸುವ ಮಾರ್ಗ - ಅಷ್ಟಾಂಗ ಮಾರ್ಗ

🌷 ಬುದ್ಧನ ಉಪದೇಶಗಲನ್ನು ಒಳಗೊಂಡಿರುವ ಬೌದ್ಧ ಸಾಹಿತ್ಯ - ತ್ರಿಪಿಟಕ

ಬೌದ್ಧ ಧರ್ಮದ ಪ್ರಸಾರ

🌷 ಬುದ್ಧನ ಉಪದೇಶ ಈ ಭಾಷೆಯಲ್ಲಿ ಪ್ರಸಾರವಾಯಿತು - ಪಾಳಿ ಭಾಷೆ

🌷 ಬೌದ್ಧ ಧರ್ಮದ ಎರಡು ಪಂಗಡಗಳು - ಹೀನಾಯಾನ ಮತ್ತು ಮಹಾಯಾನ

🌷 ಬೌದ್ಧ ಮಹಾ ಸಭೆಗಳು
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ರಾಜಗೃಹದಲ್ಲಿ ಜರುಗಿತು.

🌷 ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ವ್ಯವಸ್ಥೆಗೊಳಿಸಿದವರು - ಅಜಾತಶತೃ

🌷 ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಇದರ ಅಧ್ಯಕ್ಷತೆ ವಹಿಸಿದವರು - ಮಹಾಕಶ್ಯಪಾ

🌷 ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಈ ಸಭೆಯಲ್ಲಿ ತ್ರಿಪಿಟಕ ಎಂಬ ಗ್ರಂಥವನ್ನು ರಚಿಸಲಾಯಿತು

🌷 ಎರಡನೇ ಸಭೆ - ಕ್ರಿ.ಪೂ. 387 ರಲ್ಲಿ - ವೈಶಾಲಿಯಲ್ಲಿ ಜರುಗಿತು

🌷 ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಪಾಟಲಿಪುತ್ರದಲ್ಲಿ ನಡೆಯಿತು

🌷 ಮೂರನೇ ಸಭೆ - ಕ್ರಿ.ಪೂ. 237 ರ ಸಭೆ - ಅಶೋಕನಿಂದ ಸಮಾವೇಶಗೊಂಡಿತು

🌷 ಮೂರನೇ ಸಭೆ - ಕ್ರಿ.ಪೂ. 237 ರ ಅಧ್ಯಕ್ಷತೆಯೆಯನ್ನು - ಮುಗ್ಗಲಿಪುತ್ರ ವಹಿಸಿದ್ದನ್ನು

🌷 ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಕಥಾ ವಸ್ತು ಎಂಬ ಗ್ರಂಥವನ್ನು ರಚಿಸಲಾಯಿತು

🌷 ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಶ್ರೀನಗರದಲ್ಲಿ ನಡೆಯಿತು.

🌷 ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಕಾನಿಷ್ಕನ ಆಶ್ರಯದಲ್ಲಿ ನಡೆಯಿತು

🌷 ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಬೌದ್ಧ ಧರ್ಮ ಮಹಾಯಾನ ಹಾಗೂ ಹೀನಾಯಾನ ಎಂಬ ಎರಡು ಪಂಗಡಗಳಾಗಿ ವಿಭಜನೆಗೊಂಡಿತು .

ಬೌದ್ಧ ಧರ್ಮದ ಅವನತಿಗೆ ಕಾರಣ

1⃣ಹೀನಾಯಾನ ಮಹಾಯಾನ ಪಂಗಡಗಳ ಉಗಮ

2⃣ಬೌದ್ಧ ಭಿಕ್ಷು ಹಾಗೂ ಭಿಕ್ಷುಣಿಯರು ಕಾರ್ಯದಲ್ಲಿ ಉತ್ಸಾಹ ಹೀನಾರಾಗಿದ್ದರು

3⃣ಬೌದ್ಧ ಸಂಗಾರಾಗಳು ಸಂಪತ್ತಿನ ಕೇಂದ್ರವಾಗಿದ್ದು

4⃣ಭಿಕ್ಷುಗಳ ಅಶ್ಲೀಲ ನಡತೆ

5⃣ಗುಪ್ತ ಸಾಮ್ರಾಜ್ಯದ ಉಗಮ

6⃣ಶಂಕರಾಚಾರ್ಯರ ವಾಸ

7⃣ಮುಸಲ್ಮಾನರ ದಾಳಿ

🔴Extra Tips

🌷 ತ್ರಿಪಿಟಕಗಳು - ಸುತ್ತ ಪಿಟಕ ,ವಿನಯ ಪಿಟಕ ಹಾಗೂ ಅಭಿಧಮ್ಮ ಪಿಟಕ

🌷 ಶಾಕ್ಯಮುನಿ ಎಂದು ಕರೆಸಿಕೊಂಡವರು - ಬುದ್ದ

🌷 ಬುದ್ಧನು ಜನಿಸಿದ ದಿನ - ವೈಶಾಖ ಶುದ್ಧ ಪೂರ್ಣಿಮೆಯ ದಿನ

🌷 ಬುದ್ಧನ ಮಲತಾಯಿಯ ಹೆಸರು - ಮಹಾಪ್ರಜಾಪತಿ ಗೌತಮಿ

🌷 ರಾಜಗೃಹದಲ್ಲಿ ಬುದ್ಧನು ಭೇಟಿಮಾಡಿದ ಸನ್ಯಾಸಿಗಳು - ಉದ್ರಕ ,ರಾಮಪುತ್ರ ,ಆರಾಢಕಾಲ

🌷 ಬುದ್ಧ ಪದದ ಅರ್ಥ - ಜ್ಞಾನೋದಯ ಪಡೆದವನು

🌷 ಬುದ್ಧನಿಗೆ ಜ್ಞಾನೋದಯವಾದ ದಿನ - ವೈಶಾಖ ಶುದ್ದ ಪೂರ್ಣಿಮೆಯಂದು

🌷 ಜ್ಞಾನೋದಯದ ನಂತರ ಅರಳಿ ಮರ - ಭೋದಿ ವೃಕ್ಷವಾಯಿತು

🌷 ತಥಾಗತ ಎಂಬುವುದಾಗಿ ಪ್ರಖ್ಯಾತಿ ಪಡೆದವನು - ಬುದ್ಧ

🌷 ತಥಾಗತ ಎಂದರೆ - ಸತ್ಯವನ್ನು ಕಂಡವನು

🌷 ಬುದ್ಧ ನಿರ್ವಾಣ ಹೊಂದಿದ್ಧು ಈ ವಯಸ್ಸಿನಲ್ಲಿ - 80

🌷 ಬುದ್ಧನು ಪ್ರಥಮ ಭಾರಿಗೆ ಭೋಧನೆ ಆರಂಬಿಸಿದ್ದು ಈ ಪ್ರದೇಶದಲ್ಲಿ - ಸಾರಾನಾಥದ ಜಿಂಕೆ ಉದ್ಯಾನ

🌷 ಬುದ್ಧನಿಗಿದ್ದ ಪ್ರಾಥಮಿಕ ಶಿಷ್ಯರು - 5 ಮಂದಿ

🌷 ಬುದ್ಧನ ಬ್ರಾಹ್ಮಣ ಶಿಷ್ಯರು - ಆನಂದ ,ಸಾರಿಪುತ್ರ ,ಮಾದ್ಗಲ್ಯಾಯನ್ .ಅಶ್ರಜಿತು ,ಉರವೇಲ

🌷 ಬುದ್ಧನ ಶೂದ್ರ ಶಿಷ್ಯರು - ಉಪಾಲಿ ಮತ್ತು ಸುನಿತ

🌷 ಬುದ್ಧನ ವೈಶ್ಯ ಶಿಷ್ಯ - ಅನಿರುದ್ಧ

🌷 ಬುದ್ಧನ ಮಹಿಳಾ ಶಿಷ್ಯೆಯರು - ಆಮ್ರ ಪಾಲಿ , ಸುಜಾತ ,ಕಿಸಾಗೋತಮಿ ಕ್ಷೇಮ

🌷 ಬುದ್ಧನ ಹಿಂದಿನ ಜನ್ಮ ಕಥೆಗಳು - ಜಾತಕ ಕಥೆಗಳು

Target PSI 😌

11 Apr, 05:29


Hii

Target PSI 😌

19 Mar, 04:41


*ದ್ವಿತೀಯ ಪಿಯುಸಿ ಇತಿಹಾಸ ವಿಷಯ:*
▪️▪️▪️▪️▪️▪️▪️▪️▪️▪️▪️▪️▪️▪️
*ಐದು ಅಂಕದ ಪ್ರಶ್ನೆಗಳು*


1. ಭಾರತ ಇತಿಹಾಸದ ವಿಶಿಷ್ಟ ಲಕ್ಷಣಗಳನ್ನು ವಿವರಿಸಿರಿ.

2. ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವವನ್ನು ಸಂಕ್ಷಿಪ್ತವಾಗಿ ವಿವರಿಸಿರಿ

3. ಭಾರತದ ಇತಿಹಾಸದ ರಚನೆಗೆ ಪ್ರಾಕ್ತನಾಧಾರಗಳ ಮಹತ್ವ ಕುರಿತು ಬರೆಯಿರಿ.

4. ಮಹಾವೀರನ ಜೀವನ ಮತ್ತು ಬೋಧನೆಗಳನ್ನು ಚರ್ಚಿಸಿರಿ.

5. ಆರ್ಯರ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸ್ಥಿತಿಗತಿಗಳನ್ನು ವಿವರಿಸಿರಿ.

6. ಗಂಧಾರ ಕಲಾ ಶೈಲಿಯ ಪ್ರಮುಖ ಲಕ್ಷಣಗಳನ್ನು ವಿವರಿಸಿರಿ.

7. ಸಮುದ್ರಗುಪ್ತನ ದಿಗ್ವಿಜಯಗಳನ್ನು ವಿವರಿಸಿರಿ.

8. ಚೋಳರ ಗ್ರಾಮಾ ಡಳಿತವನ್ನು ವಿವರಿಸಿರಿ.

9. ಹೊಯ್ಸಳರ ವಾಸ್ತು ಶೈಲಿಯ ಪ್ರಮುಖ ಲಕ್ಷಣಗಳನ್ನು ವಿವರಿಸಿರಿ

10. ಹರ್ಷವರ್ಧನನ ಸಾಧನೆಗಳನ್ನು ವಿವರಿಸಿರಿ.

11. ಅಲ್ಲಾವುದ್ದೀನ್ ಖಿಲ್ಜಿಯ ಸುಧಾರಣೆಗಳನ್ನು ವಿವರಿಸಿರಿ.

12. ಅಕ್ಬರನ ಆಡಳಿತವನ್ನು ವಿವರಿಸಿರಿ

13. ಶಿವಾಜಿಯ ಆಡಳಿತ ಪದ್ಧತಿಯನ್ನು ಬರೆಯಿರಿ

14. ತಾಳಿಕೋಟೆಯ ಕದನಕ್ಕೆ ಕಾರಣ ಮತ್ತು ಪರಿಣಾಮಗಳು ಯಾವುವು ವಿವರಿಸಿರಿ

15. ಶಂಕರಾಚಾರ್ಯರ, ರಾಮಾನುಜಾಚಾರ್ಯರ, ಮದ್ವಾಚಾರ್ಯರ, ಬಸವಣ್ಣನವರ ಜೀವನ ಮತ್ತು ಸಾಮಾಜಿಕ ಸುಧಾರಣೆಗಳನ್ನು ವಿವರಿಸಿರಿ

16. ಮಹಮ್ಮದ್ ಗವಾನನ ಸಾಧನೆಗಳನ್ನು ವಿವರಿಸಿರಿ.

17. ರಾಜಾರಾಮ್ ಮೋಹನ್ ರಾಯ್ ,ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದರ ಜೀವನ ಮತ್ತು ಧಾರ್ಮಿಕ ಚಳುವಳಿಯಲ್ಲಿ ಪಾತ್ರದ ಬಗ್ಗೆ ಚರ್ಚಿಸಿರಿ

18. ಕಲ್ಯಾಣಿ ಚಾಲುಕ್ಯರ ಸಾಂಸ್ಕೃತಿಕ ಕೊಡುಗೆಗಳನ್ನು ವಿವರಿಸಿರಿ

19. ಭಾರತದ ರಾಷ್ಟ್ರೀಯತೆಯ ಬೆಳವಣಿಗೆಗೆ ಕಾರಣವಾದ ಪ್ರಮುಖ ಅಂಶಗಳು ಯಾವವು ವಿವರಿಸಿರಿ.

20. ಕರ್ನಾಟಕ ಏಕೀಕರಣ ಚಳುವಳಿಯನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

Target PSI 😌

19 Mar, 04:40


▪️▪️▪️▪️▪️▪️▪️▪️▪️▪️▪️▪️▪️▪️
*ಹತ್ತು ಅಂಕದ ಪ್ರಶ್ನೆಗಳು*
▪️▪️▪️▪️▪️▪️▪️▪️▪️▪️▪️▪️▪️▪️

1. ಸಿಂಧೂ ನಾಗರಿಕತೆಯ ಲಕ್ಷಣಗಳನ್ನು ವಿವರಿಸಿರಿ

2. ಬುದ್ಧನ ಜೀವನ ಮತ್ತು ಬೋಧನೆಗಳನ್ನು ವಿವರಿಸಿರಿ

3. ಗುಪ್ತರ ಕಾಲವನ್ನು ಭಾರತದ ಇತಿಹಾಸದಲ್ಲಿ ಸುವರ್ಣ ಯುಗ ಎಂದು ಏಕೆ ಕರೆಯುತ್ತಾರೆ.

4. ರಾಷ್ಟ್ರಕೂಟರ ಸಂಸ್ಕೃತಿಕ ಕೊಡುಗೆಗಳನ್ನು ವಿವರಿಸಿರಿ

5. ಅಲ್ಲಾವುದ್ದೀನ್ ಖಿಲ್ಜಿಯ ಸಾಧನೆಗಳನ್ನು ವಿವರಿಸಿರಿ.

6. ಮಹಮ್ಮದ್ ಬಿನ್ ತೊಗೂಲಕನ ಆಡಳಿತದ ಪ್ರಯೋಗಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿರಿ

7. ಕೃಷ್ಣದೇವರಾಯರ ಸಾಧನೆಗಳ ಬಗ್ಗೆ ಒಂದು ವಿವರಣೆಯನ್ನು ಬರೆಯಿರಿ

8. ಅಕ್ಬರನ ಸಾಧನೆಗಳನ್ನು ವಿವರಿಸಿರಿ

9. ಕರ್ನಾಟಿಕ್ ಯುದ್ಧಗಳನ್ನು ಸಂಕ್ಷಿಪ್ತವಾಗಿ ಉತ್ತರಿಸಿರಿ

10. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣಗಳನ್ನು ಮತ್ತು ಪರಿಣಾಮಗಳನ್ನು ವಿವರಿಸಿರಿ

11. ಸರ್ ಎಂ ವಿಶ್ವೇಶ್ವರಯ್ಯ ನವರನ್ನು ಆಧುನಿಕ ಮೈಸೂರಿನ ನಿರ್ಮಾತೃ ಎಂದು ಕರೆಯಲಾಗಿದೆ ವಿವರಿಸಿರಿ

12. ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಗಾಂಧೀಜಿಯವರ ಪಾತ್ರ ವಿವರಿಸಿರಿ

Target PSI 😌

17 Mar, 14:58


Frds share and help your frd

2,679

subscribers

75

photos

4

videos