ನಮ್ಮ ದೇಶದ ಸಾರ್ವಜನಿಕ ಹಣಕಾಸು ನಿಯಂತ್ರಣದಲ್ಲಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಪಾತ್ರ ಅತ್ಯಂತ ಮಹತ್ವಪೂರ್ಣದ್ದಾಗಿದೆ.
* 2-G ಸೆಕ್ಟ್ರಮ್, ಕಾಮನ್ ವೆಲ್ತ್ ಗೇಮ್ಸ್ ಮತ್ತು ಕೋಲ್ ಗೇಟ್ ದಂಥ ಪ್ರಮುಖ ಅವ್ಯವಹಾರದ ಹಗರಣಗಳು ಬೆಳಕಿಗೆ ಬಂದಿದ್ದು ಮಹಾಲೆಕ್ಕ ಪರಿಶೋಧಕರಿಂದಲೇ.
* CAG ಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ( PAC - Public Account Committee ) ಯೊಂದಿಗೆ ಜೋಡಿಸಲಾಗಿತ್ತು.
* ಇದನ್ನು PAC ಯಿಂದ ಪ್ರತ್ಯೇಕಿಸಿ ಸ್ವತಂತ್ರವಾಗಿಸಿದವರು 2006 ರಿಂದ 2013 ರವರೆಗೆ CAG ಆಗಿದ್ದ ವಿನೋದ್ ರಾಯ್ ರವರು.
ಪ್ರಸ್ತುತ CAG ಗಿರೀಶ್ ಚಂದ್ರ ಮುರ್ಮು
ಮುಂದಿನ CAG K ಸಂಜಯ್ ಮೂರ್ತಿ
ಮುಖ್ಯಾಂಶಗಳು
ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರನ್ನು ರಾಷ್ಟ್ರಪತಿಯವರು ನೇಮಿಸುತ್ತಾರೆ.
ಸಂವಿಧಾನದ 148 ನೇ ಅನುಚ್ಛೇದದ ಪ್ರಕಾರ ಭಾರತಕ್ಕೆ ಒಬ್ಬ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ಇರುತ್ತಾರೆ.
ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರಾಗಿ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಧಿಕಾರವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಷ್ಟ್ರಪತಿಯ ಮುಂದೆ ಅಥವಾ ರಾಷ್ಟ್ರಪತಿಯು ಆ ಬಗ್ಗೆ ನೇಮಕ ಮಾಡಿದ ಒಬ್ಬ ವ್ಯಕ್ತಿಯ ಮುಂದೆ ಸಂವಿಧಾನದ 3 ನೇ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಗೆ ಅನುಸಾರವಾಗಿ ಪ್ರಮಾಣ ವಚನವನ್ನು ಸ್ವಿಕರಿಸತಕ್ಕದ್ದಾಗಿದೆ.
ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ವೇತನ ಮತ್ತು ಸೇವೆಯ ಕರ್ತವ್ಯಗಳು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾಗಿದ್ದು, ಅವುಗಳನ್ನು ಸಂವಿಧಾನದ 2 ನೇ ಅನುಸೂಚಿಯಲ್ಲಿ ತಿಳಿಸಲಾಗಿದೆ.
ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಅಧಿಕಾರಾವಧಿ 6 ವರ್ಷಗಳು ಅಥವಾ 65 ವರ್ಷ ಪೂರ್ಣಗೊಳ್ಳುವವರೆಗೆ ಸೇವೆ ಸಲ್ಲಿಸತಕ್ಕದ್ದು.
* ಇವರ ವೇತನ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ವೇತನಕ್ಕೆ ಸಮನಾಗಿರುತ್ತದೆ ಹಾಗೂ ಇವರ ವೇತನ ಮತ್ತು ಇತರ ಸೇವಾ ನಿಯಮಗಳು ಸಂಸತ್ತಿನ ಕಾಯ್ದೆಯ ಪ್ರಕಾರ ಇರುತ್ತದೆ.
ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ರಾಜ್ಯ ಮತ್ತು ಕೇಂದ್ರಕ್ಕೆ ಸಂಬಂಧಿಸಿದ ಅಕೌಂಟನ್ನು ಪರಿಶೀಲಿಸಿ ರಾಷ್ಟ್ರಪತಿಗಳಿಗೆ ವರದಿಯನ್ನು ಒಪ್ಪಿಸುತ್ತಾರೆ.
ರಾಷ್ಟ್ರಪತಿಯವರು ಸಂಸತ್ತಿನ ಮುಂದಿಡುತ್ತಾರೆ.
ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (CAG) ಕೇಂದ್ರ ಮತ್ತು ರಾಜ್ಯಗಳ ಹಾಗೂ ಸಂಸತ್ತಿನ ಕಾಯ್ದೆಯನ್ವಯ ಸ್ಥಾಪಿತವಾದ ಇತರ ಯಾವುದೇ ಪ್ರಾಧಿಕಾರದ ಅಥವಾ ಮಂಡಳಿಯ, ಸರ್ಕಾರಿ ಕಂಪನಿಗಳ ಲೆಕ್ಕ ಖಾತೆಯನ್ನು ಸಹ ಆಡಿಟ್ ಮಾಡುತ್ತಾರೆ.
(CAG) ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರನ್ನು ಪದವಿಯಿಂದ ತೆಗೆದುಹಾಕಬೇಕಾದರೆ ಸಂಸತ್ತಿನ ತೀರ್ಮಾನದ ಮೇಲೆ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬಹುದು.
* ಪ್ರಧಾನಮಂತ್ರಿ ಮತ್ತು ಕೇಂದ್ರ ಕಾರ್ಯಾಂಗಕ್ಕೆ ಇವರನ್ನು ತೆಗೆಯುವ ಅಧಿಕಾರ ಇರುವುದಿಲ್ಲ. ಮಹಾಭಿಯೋಗದ ಮೂಲಕ ಮಾತ್ರ ತೆಗೆಯಬಹುದು.
ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ನಿವೃ ತ್ತಿ ಹೊಂದಿದ ಮೇಲೆ ಭಾರತ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಿರುವ ಯಾವುದೇ ಹುದ್ದೆಗೆ ಅರ್ಹರಾಗಿರುವುದಿಲ್ಲ.