ಮಾಹಿತಿ ವೇದಿಕೆ competitive exams @competitiveexams Channel on Telegram

ಮಾಹಿತಿ ವೇದಿಕೆ competitive exams

@competitiveexams


*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ನೋಟ್ಸ್ ಗಳು, ಡೈಲಿ ನ್ಯೂಸ್ ಪೇಪರ್, ಪ್ರತಿದಿನ ಮಿನಿ ಪತ್ರಿಕೆಗಳು, ಜಾಬ್ ನೋಟಿಫಿಕೇಶನ್ ಗಳು ಮತ್ತು ಪ್ರಚಲಿತ ಮಾಹಿತಿಯನ್ನೊಳಗೊಂಡ ಎಲ್ಲ ಮಾಹಿತಿ ಒಂದೇ ವೇದಿಕೆಯಲ್ಲಿ.
KAS, psi, SDA, FDA, rrb, banking exams.

ಮಾಹಿತಿ ವೇದಿಕೆ competitive exams (Kannada)

ಕನಸುಗಳ ಆಸಕ್ತಿಯಿದ್ದರೆ, 'ಮಾಹಿತಿ ವೇದಿಕೆ competitive exams' ಟೆಲಿಗ್ರಾಮ್ ಚಾನೆಲ್ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಿಪೇರೇಷನ್ ನಲ್ಲಿ ಸಹಾಯ ಸಿಗುತ್ತದೆ. ಇಲ್ಲಿ ನೀವು ಕೇಎಎಸ್, ಪಿಎಸ್ಐ, ಎಸ್ಡಿಎ, ಎಫ್ಡಿಎ, ಆರ್ಆರ್ಬಿ, ಬ್ಯಾಂಕಿಂಗ್ ಪರೀಕ್ಷೆಗಳಿಗೆ ಸಂಬಂಧಪಟ್ಟ ನೋಟ್ಸ್, ಡೈಲಿ ನ್ಯೂಸ್ ಪೇಪರ್, ಪ್ರತಿದಿನ ಮಿನಿ ಪತ್ರಿಕೆಗಳು, ಜಾಬ್ ನೋಟಿಫಿಕೇಶನ್ ಗಳು ಮತ್ತು ಪ್ರಚಲಿತ ಮಾಹಿತಿಯನ್ನೊಳಗೊಂಡ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಇದು ನಿಜವಾದ ಸ್ಥಳವು ನಿಜವಾಗಿ ಸಹಾಯ ಮಾಡುವ ಮಾಹಿತಿ ಹೇಗಿದೆ ಎಂಬುದನ್ನು ನೀವು ನಿರೀಕ್ಷಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಮೀರಿ ಹೋಯಿತೇ ಇಲ್ಲ, ಇದು ನಿಜವಾಗಿಯೂ ನೇರವಾಗಿ ನಿಮ್ಮ ಕರ್ಡ್ ಪರೀಕ್ಷೆಗೆ ಅನುಕೂಲ ತರುವುದು.

ಮಾಹಿತಿ ವೇದಿಕೆ competitive exams

12 Nov, 11:13


Follow this link to join my WhatsApp community: https://chat.whatsapp.com/F0X4FW4xYWI05ncob5aQfe

ಮಾಹಿತಿ ವೇದಿಕೆ competitive exams

10 Oct, 05:33


https://t.me/+nvvdkw4p5TE0MGQ1

ಮಾಹಿತಿ ವೇದಿಕೆ competitive exams

20 May, 17:28


ಕೆನಡಾ ಪಾರ್ಲಿಮೆಂಟ್​ನಲ್ಲಿ ಕಸ್ತೂರಿ ಕನ್ನಡ! ಇದು ಭಾವುಕ ಕ್ಷಣ

ಸಿರಿವಂತರ ಮಹಲುಗಳಲ್ಲಿ
ಬಡವರಿರುವ ಗುಡಿಸಲಲ್ಲಿ
ಬೇಸಾಯದ ಕಾಯಕದಲ್ಲಿ
ಕಾರ್ಖಾನೆ ಯಂತ್ರಗಳಲ್ಲಿ
ಕೇಳಲಿ, ಮತ್ತೊಮ್ಮೆ ಕೇಳಲಿ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ....
ಕೆನಡಾದ ಸಂಸತ್ತಿನಲ್ಲಿ ಕನ್ನಡದ ಮಾತು ಕೇಳಿಬಂದಿದೆ.ನಾನು ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಮಾತು ಪ್ರಾರಂಭಿಸಿದ ಚಂದ್ರ ಆರ್ಯ ಅವರು ಕೆನಡಾ ಪಾರ್ಲಿಮೆಂಟ್​ನಲ್ಲಿ ಇದೇ ಮೊದಲ ಬಾರಿ ಕನ್ನಡ ಮಾತನಾಡಿದ್ದಾರೆ. ಕೆನಡಾ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಚಂದ್ರ ಆರ್ಯ ಹೆಮ್ಮೆಯಿಂದ ಕನ್ನಡದಲ್ಲಿ ಮಾತನಾಡಿರುವುದು ಈಗ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.💛❤️

ಮಾಹಿತಿ ವೇದಿಕೆ competitive exams

22 Apr, 17:08


☘️ ವಿಶ್ವ ಭೂ ದಿನ

☘️ ಆಚರಣೆ ಹಿನ್ನೆಲೆ:- 1969 ರ ಏಪ್ರಿಲ್ 22 ರಂದು
''ಜಾನ್ ಮ್ಯಾಕ್ ಕೊನೆಲ್ ''ಅವರು ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಜರುಗಿದ ಯುನೆಸ್ಕೊ ಸಮ್ಮೇಳನದಲ್ಲಿ ವಿಶ್ವ ಭೂ ದಿನವನ್ನು ಆಚರಿಸುವ ಪ್ರಸ್ತಾಪ ಮಾಡಿದ್ದರು.
☘️ ಆದರೆ 1970 ಎಪ್ರಿಲ್ 22 ರಂದು ವಿಶ್ವದಾದ್ಯಂತ ಮೊದಲ ಬಾರಿ ಆಚರಿಸಲಾಯಿತು.
☘️ ವಿಶ್ವ ಭೂದಿನ ನೆಟ್ವರ್ಕ್ (ಜಗತ್ತಿನ ಅತಿದೊಡ್ಡ ಪರಿಸರ ಹೋರಾಟ ಸಂಬಂಧಿಸಿದ ಸಂಸ್ಥೆಯಲ್ಲಿ ಒಂದು) ವತಿಯಿಂದ ಪ್ರತಿವರ್ಷ ಭೂ ದಿನವನ್ನು ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಆಚರಿಸುತ್ತೇವೆ.
☘️ 2009 ರ ಎಪ್ರಿಲ್ 22ರಂದು ಸಾಮಾನ್ಯ ಸಭೆಯು ಅಂತಾರಾಷ್ಟ್ರೀಯ ಮಾತೃಭೂಮಿ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.
☘️ ಕೋಪ್ ಸಮ್ಮೇಳನ:- ಭೂಮಿಯ ಮೇಲಿನ ತಾಪಮಾನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿವಿಧ ರಾಷ್ಟ್ರಗಳ ನಡುವೆ 1995 ರಿಂದ ನಡೆಯುವ ಸಭೆಯನ್ನು ಕೋಪ ಸಮ್ಮೇಳನಗಳು ಎನ್ನುವರು.

☘️ ಭೂಮಿ ಗೀತೆ:- ಭಾರತದ ಕುಮಾರ್' ಅವರು ಬರೆದ "ಭೂ ಗೀತೆ" ಎಂಬುದು 50 ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡಿದೆ.

☘️ ಪ್ರಮುಖ ಗುರಿ:- 2016 - 2030 ರ ಅವಧಿಯ ಸುಸ್ಥಿರ ಅಭಿವೃದ್ಧಿ ಗುರುಗಳಲ್ಲಿ 13ನೇ ಗುರಿಯು ಹವಾಮಾನ ಬದಲಾವಣೆ ನಿಯಂತ್ರಣ ಹಾಗೂ 14ನೇ ಗುರಿಯು ಸುಸ್ಥಿರ ಜಲ ಸಂಪನ್ಮೂಲ ರಕ್ಷಣೆ 15ನೇ ಗುರಿಯು ಭೌಗೋಳಿಕ ಪರಿಸರ ವ್ಯವಸ್ಥೆಯ ರಕ್ಷಣೆ ಮತ್ತು ಜೈವಿಕ ವೈವಿಧ್ಯತೆಯ ನಷ್ಟವನ್ನು ತಡೆಯುವುದಕ್ಕೆ ಸಂಬಂಧಿಸಿದೆ.

☘️ ಭೂ ಶೃಂಗ ಸಭೆಗಳು:-
> 1992 - ಬ್ರೆಜಿಲ್ನ ರಿಯೊ ಡಿ ಜನೈರೊ
> ರಿಯೋ ಒಪ್ಪಂದ(UNFCCC)
> United Nations Framework Convention on Climate Change

> 2002 - ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್
> ರಿಯೋ +10( UNCSD)
>United Nation's Conference on Sustainable Development

> 2012- ಬ್ರೆಜಿಲ್ನ ರಿಯೊ ಡಿ ಜನೈರೊ
>ರಿಯೋ +20(UNCSD)

ಮಾಹಿತಿ ವೇದಿಕೆ competitive exams

22 Apr, 16:56


ವಿಶ್ವ ಭೂ ದಿನ ಎಪ್ರೀಲ್ 22

ಈ ವರ್ಷದ ಥೀಮ್ - ಭೂಮಿಯಲ್ಲಿ ವಿನಿಯೋಗಿಸೋಣ

ಮಾಹಿತಿ ವೇದಿಕೆ competitive exams

16 Apr, 10:22


🔰ಕೆಂಪು ಸಮುದ್ರದ (Red Sea) ಜೊತೆಗೆ ಗಡಿ ಹಂಚಿಕೊಂಡಿರುವ 06 ದೇಶಗಳು:-

🔹 ಸುಡಾನ್ (Sudan)
🔹 ಯೆಮೆನ್ (Yeman)
🔹 ಸೌದಿ ಅರೇಬಿಯಾ (Soudi Arebia)
🔹 ಈಜಿಪ್ಟ್ (Egypt)
🔹 ಎರಿಟ್ರಿಮಾ (Eritiria)
🔹 ಜಿಬೌಟಿ (Djibouti)

=========================

⚫️ ಕಪ್ಪು ಸಮುದ್ರದ (Balck Sea) ಜೊತೆಗೆ ಗಡಿ ಹಂಚಿಕೊಂಡಿರುವ 06 ದೇಶಗಳು:-

🔹 ಉಕ್ರೇನ್ (Ukraine)
🔹 ರಷ್ಯಾ (Russia)
🔹 ಟರ್ಕಿ (Turkey)
🔹 ಬಲ್ಗೇರಿಯಾ (Bulgaria)
🔹 ರೋಮನಿಮಾ (Romania)
🔹 ಜಾರ್ಜಿಯಾ (Georgia)

=========================

🟢 ಕ್ಯಾಸ್ಪಿಯನ್ ಸಮುದ್ರದ (Caspian Sea) ಜೊತೆಗೆ ಗಡಿ ಹಂಚಿಕೊಂಡಿರುವ 05 ದೇಶಗಳು:-

🔹 ರಷ್ಯಾ (Russia)
🔹 ಇರಾನ್ (Iran)
🔹 ಅಜೆರ್ಬೈಜಾನ್ (Azerbaijan)
🔹 ಕಝಾಕಸ್ತಾನ್ (Kazakhstan)
🔹 ತುರ್ಕಮೆನಿಸ್ತಾನ್ (Turkmenistan)
🔰🔰🔰🔰🔰🔰🔰🔰🔰🔰🔰

ಮಾಹಿತಿ ವೇದಿಕೆ competitive exams

16 Apr, 10:17


🎲 Quiz '🌟ಜ್ಞಾನ ಸಂಗಮ - 27🌟👇👇 🔅@jnanasangam🔅'
🖊 55 questions · 30 sec

ಮಾಹಿತಿ ವೇದಿಕೆ competitive exams

02 Apr, 05:05


😌 ಯುಗಾದಿ😌. ******* 🙏ವರುಷಕ್ಕೊಮ್ಮೆ ಬರುವೆ ಯುಗಾದಿ ನೀನು;ನವ ಸಂವತ್ಸರಕ್ಕೆ ಬುನಾದಿ. ನೀನು.ಹೊಸಬಟ್ಟೆಗಳ ತೊಟ್ಟು ಸಂಭ್ರಮಿಸುವೆವು ನಾವು ; ದೇವತೆಗಳ ಪೂಜಿಸಿ ಸೇವಿಸುವೆವು ಬೆಲ್ಲ ಮಿಶ್ರಿತ ಬೇವು.ಸುಖ ದು:ಖಗಳನ್ನು ಸಮನಾಗಿ ಸ್ವೀಕರಿಸುವೆವು ನಾವು; ಧನಾತ್ಮಕ ಚಿಂತನೆಯೊಂದಿಗೆ ನಡೆಯುವೆವು ನಾವು.ಮಾವಿನ ಸಿಹಿ ಬೇವಿನ ಕಹಿ ಸವಿಯುವೆವು ನಾವು;ನವ ವಸಂತದ ಆಗಮನಕ್ಕೆ ಸ್ವಾಗತಿಸುವೆವು ನಾವು:-
🌻🌻🌻🌻🌻 ಯುಗಾದಿ ಹಬ್ಬದ ಶುಭಾಶಯಗಳು 🌻

ಮಾಹಿತಿ ವೇದಿಕೆ competitive exams

21 Mar, 15:04


👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Teacher's Recrtment Notifction Out:
✍🏻🍁✍🏻🍁✍🏻🍁✍🏻🍁✍🏻🍁✍🏻🍁✍🏻

★ 6-8th GPT 15,000 ಶಿಕ್ಷಕರ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!

★ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭ: 23-03-2022 ರಿಂದ 22-04-2022ರ ವರೆಗೆ

★ CET ಲಿಖಿತ ಪರೀಕ್ಷೆಯ ದಿನಾಂಕ: 2022 ಮೇ 21 & 22

★ ಇಂದು (21-03-2022 ರಂದು) ರಾಜ್ಯಪತ್ರ ಪ್ರಕಟಗೊಂಡಿದೆ.!!

★ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಬಂಧಿಸಿದ ಶಿಕ್ಷಕರ ನೇಮಕಾತಿ ಅಧಿಸೂಚನೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://erajyapatra.karnataka.gov.in/(S(kwzea2krmghtz1z1lubwlon5))/default.aspx?AcceptsCookies=yes
✍🏻🍁✍🏻🍁✍🏻🍁✍🏻🍁✍🏻🍁✍🏻🍁✍🏻
Join more update telegram channel


https://t.me/competitiveExams

ಮಾಹಿತಿ ವೇದಿಕೆ competitive exams

11 Mar, 16:06


🎲 Quiz 'ಕ್ವಿಜ್'
📘ಭಾರತ ಸಂವಿಧಾನದ ಬಗ್ಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಕೇಳಿರುವ ಕ್ವಿಜ್🌷ಚಂದು ರಾಜನಾಳ....
🖊 16 questions · 30 sec

ಮಾಹಿತಿ ವೇದಿಕೆ competitive exams

11 Mar, 15:07


❤️ ಪ್ರಸಿದ್ಧ ಕ್ರೀಡಾಪಟುಗಳ ಆತ್ಮಕಥೆಗಳು

🔷 ಅಭಿನವ್ ಬಿಂದ್ರಾ: ಇತಿಹಾಸದ ಒಂದು ಹೊಡೆತ

🔷 ಕಪಿಲ್ ದೇವ್: ನೇರವಾಗಿ ಹೃದಯದಿಂದ

🔷 ಮೇರಿ ಕೋಮ್: ಮುರಿಯಲಾಗದ

🔷 ಮಿಲ್ಕಾ ಸಿಂಗ್: ದಿ ರೇಸ್ ಆಫ್ ಮೈ ಲೈಫ್

🔷 ಪಿ.ಟಿ ಉಷಾ : ಬಂಗಾರದ ಹುಡುಗಿ

🔷 ಸಚಿನ್ ತೆಂಡೂಲ್ಕರ್: ಪ್ಲೇಯಿಂಗ್ ಇಟ್ ಮೈ ವೇ

🔷 ಸೈನಾ ನೆಹ್ವಾಲ್: ಗೆಲ್ಲಲು ಆಡುತ್ತಿದ್ದೇನೆ

🔷 ಯುವರಾಜ್ ಸಿಂಗ್: ನನ್ನ ಜೀವನದ ಪರೀಕ್ಷೆ

🔷 ಸಾನಿಯಾ ಮಿರ್ಜಾ: ಆಡ್ಸ್ ವಿರುದ್ಧ ಏಸ್

🔷 ಸುನಿಲ್ ಗವಾಸ್ಕರ್ : ಸನ್ನಿ ಡೇಸ್

🔷 ಸಂಜಯ್ ಮಂಜ್ರೇಕರ್: ಅಪೂರ್ಣ

🔷 ಮುಹಮ್ಮದ್ ಅಲಿ: ದಿ ಗ್ರೇಟೆಸ್ಟ್ ಮೈ ಓನ್ ಸ್ಟೋರಿ

🔷 ರಿಕಿ ಪಾಂಟಿಂಗ್: ಆಟದ ಮುಕ್ತಾಯದಲ್ಲಿ

🔷 ಶೇನ್ ವಾರ್ನ್: ಸ್ಪಿನ್ ಇಲ್ಲ

🔷 ವಿವಿಎಸ್ ಲಕ್ಷ್ಮಣ್ : 281 ಮತ್ತು ಬಿಯಾಂಡ್

🔷 ಶಾಹಿದ್ ಅಫ್ರಿದಿ : ಗೇಮ್ ಚೇಂಜರ್

🔷 ವಿಶ್ವನಂತನ್ ಆನಂದ್ : ಮೈಂಡ್ ಮಾಸ್ಟರ್: ಚಾಂಪಿಯನ್ಸ್ ಲೈಫ್‌ನಿಂದ ಗೆಲ್ಲುವ ಪಾಠಗಳು
🔶 ಸಹ-ಬರಹದವರು - ಸುಸಾನ್ ನಿನನ್

🔷 ಪಿ.ವಿ ಶಿಂದು : “Shuttle to the top: The Story of P.V. ಸಿಂಧು”
🔶 ಲೇಖಕರು - ವಿ. ಕೃಷ್ಣಸ್ವಾಮಿ

==========================

❤️ FAMOUS SPORTSPERSON AUTOBIOGRAPHIES

🔷 Abhinav Bindra : A Shot at History

🔷 Kapil Dev : Straight from the Heart

🔷 Mary Kom : Unbreakable

🔷 Milka Singh :The Race of My Life

🔷 P.T Usha : Golden Girl

🔷 Sachin Tendulkar : Playing it My Way

🔷 Saina Nehwal : Playing to win

🔷 Yuvraj Singh : The Test of My Life

🔷 Sania Mirza : Ace against Odds

🔷 Sunil Gawaskar : Sunny Days

🔷 Sanjay Manjrekar : Imperfect

🔷 Muhammad Ali : The Greatest My Own Story

🔷 Ricky Ponting : At the Close of Play

🔷 Shane Warne : No spin

🔷 VVS Laxman : 281 and Beyond

🔷 Shahid Afridi : Game Changer

🔷 Viswananthan Anand : Mind Master: Winning Lessons from a Champion's Life
🔶 Co-written by - Susan Ninan

🔷 PV Shindu : “Shuttling to the Top: The Story of P.V. Sindhu”
🔶 Authored By - V. Krishnaswamy

ಮಾಹಿತಿ ವೇದಿಕೆ competitive exams

14 Feb, 11:14


🎲 Quiz 'ಕ್ವಿಜ್'
📘ಭಾರತ ಸಂವಿಧಾನದ ಬಗ್ಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಕೇಳಿರುವ ಕ್ವಿಜ್🌷ಚಂದು ರಾಜನಾಳ....
🖊 16 questions · 30 sec

ಮಾಹಿತಿ ವೇದಿಕೆ competitive exams

07 Feb, 00:12


ಮರಳಿ ಬಾರದ ಲೋಕಕ್ಕೆ ಹಾರಿತು ಸಪ್ತಸ್ವರಗಳ ಗಾನಕೋಗಿಲೆ ,
" ಏಯ್ ಮೇರೆ ವತನ್ ಕೆ ಲೋಗೋಂ ಜರಾ ಆಂಖ ಮೇ ಭರಲೋ ಪಾನಿ '' ಲತಾ ಮಂಗೇಶ್ಕರ್ ಅವರ ಈ ದೇಶ ಭಕ್ತಿ ಗೀತೆ ಕೇಳಿದ ಪ್ರಧಾನಿ ನೆಹರೂ, " ಬೇಟಿ ತೂನೆ ಮುಝೆ ರುಲಾದಿಯಾ '' ಎಂದು ಗದ್ಗಗಧಿತರಾಗಿದ್ದರಂತೆ.

ಹೌದು ಆರೇಳು ದಶಕಗಳ ಕಾಲ ನಿರಂತರವಾಗಿ ಹಾಡಿ ದಣಿದ ಭಾರತದ ಕೋಗಿಲೆ ಇಂದು ಶಾಶ್ವತವಾಗಿ ಮೌನವಾಯಿತು, "

ಲತಾ ದೀದಿ ಅಗಲಿಕೆಯಿಂದ ಭಾರತೀಯ ಚಿತ್ರರಂಗ4 Full stop ಭಕ್ತಿಸಂಗೀತ ಹಾಗೂ ಗಝಲ್ ಕ್ಷೇತ್ರ ಇಂದು ನಿಜಕ್ಕೂ ಬಡವಾಯಿತು. ಸಪ್ತಸ್ವರಗಳ ಸಾಮ್ರಾಜ್ಞೆ ಲತಾಮಂಗೇಶ್ಕರ್ ಇನ್ನಿಲ್ಲ ಎಂದು ಹೇಳಲು4 Full stop ಕೇಳಲು ಆಗುವ ನೋವು ಅಷ್ಟಿಷ್ಟಲ್ಲ. ಆದರೆ 92 ರ ವಯೋಮಾನದ ಮಹಾನ್ ಚೇತನದ ಅಗಲಿಕೆ, ವಾಸ್ತವಿಕ ಕಟು ಸತ್ಯ.

ಸೆಪ್ಟೆಂಬರ್ 28, 1929 ರಂದು ಇಂದೋರನ ಮರಾಠಿ ಕುಟುಂಬದಲ್ಲಿ ಜನಿಸಿದ ಹೇಮಾ ಎಂಬ ಬಾಲೆ ಐದು ವಷಗಳ ನಂತರ ಲತಾ ಮಂಗೇಶ್ಕರ ಆದರು. ಬಡತನದ ಕಾರಣ ಶಾಲೆ ಮೆಟ್ಟಿಲು ಹತ್ತಲಾಗಲಿಲ್ಲ. ಫೀ ಕೊಡದ ಕಾರಣಕ್ಕೆ ಸಹೋದರಿ ಆಶಾಳನ್ನು ಶಾಲೆಯಿಂದ ಹೊರಗೆ ಹಾಕಲಾಗಿತ್ತು.ಅದೇ ದಿನ " ನಾನೆಂದೂ ಶಾಲೆ ಮೆಟ್ಟಿಲು ತುಳಿಯುವದಿಲ್ಲ'' ಎಂದು ಶಪಥ ಮಾಡಿದರು.

ಶಾಲೆ ಮೆಟ್ಟಿಲು ತುಳಿಯ ಈ ಸ್ವರಸಾಮ್ರಾಜ್ಞೆಗೆ ನ್ಯೂಯಾಕ್ ಸೇರಿದಂತೆ 6 ವಿಶ್ವವಿದ್ಯಾಲಯಗಳು ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದ್ದು ಒಂದು ಇತಿಹಾಸವೆ.

ಇಂದು ಉದಯೋನ್ಮುಖ ಗಾಯಕರ ಆರಾಧ್ಯ ದೈವವಾಗಿದ್ದ ಲತಾಜಿ ಅವರಿಗೆ ಬಂದ ಪ್ರಶಸ್ತಿಗಳು ಅಗಣಿತ. 1942 ರಲ್ಲಿ ಲತಾಜಿ ಅವರು ಹಿನ್ನೆಲೆ ಗಾನಯಾನ ಆರಂಭವಾಯಿತು. ಆಗ ಖ್ಯಾತಿಯ ಉತ್ತುಂಗದಲ್ಲಿದ್ದ ಗಾಯಕಿ ನೂರ್ ಜಹಾನ್ ಜೊತೆ ಇವರ ಧ್ವನಿ ಹೋಲಿಸಿ, ಲತಾಜಿ ಧ್ವನಿ ತುಂಬಾ ತೆಳುವಾಗಿದೆ ಎಂದು ಅನೇಕ ಸಂಗೀತ ನಿರ್ದೇಶಕರು ಅವಕಾಶ ನೀಡಿರಲಿಲ್ಲ.

ಆದರೆ ಅದೆ ತೆಳುವಾದ ಧ್ವನಿ, ಮುಂದೆ " ಭಾರತ ರತ್ನ''ವಾಗಿ ಪ್ರತಿಧ್ವನಿಸಿತು. 1969 ರಲ್ಲಿ ಪದ್ಮಭೂಷಣ, 1999 ರಲ್ಲಿ ಪದ್ಮವಿಭೂಷಣ ಹಾಗೂ 2001 ರಲ್ಲಿ ಭಾರತ ರತ್ಮ ಪ್ರಶಸ್ತಿಗೆ ಭಾಜನರಾಗಿದ್ದರು. ದಾದಾಸಾಹೇಬ್ ಫಾಲ್ಕೆ, ಫಿಲ್ಮಫೇರ್ ದಂತ ಸಾಲು ಸಾಲು ಪ್ರಶಸ್ತಿಗಳು ಇವರ ಮುಡಿಗೇರಿ ತಮ್ಮ ಗೌರವ ಹೆಚ್ಚಿಸಿಕೊಂಡಿದ್ದವು.

ಲತಾಜಿ ಅವರ ಕನ್ನಡದ '' ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ '' ಚಿತ್ರದ " ಬೆಳ್ಳನ ಬೆಳಗಾಯಿತು '' ಇಂದಿಗೂ ಅಷ್ಟೇ ಪ್ರಸಿದ್ಧ. ದೇಶದ 20 ಭಾಷೆಯಗಳಲ್ಲಿ ಒಟ್ಟು 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಖ್ಯಾತಿ ಇವರಿಗಿದೆ. ಅದರಲ್ಲಿ 20 ಸಾವಿರ ಸೋಲೊ, 30 ಸಾವಿರ ಯುಗಳ ಗೀತೆಗಳಾಗಿವೆ.

ಸೋಲೋಗಳಲ್ಲಿ " ಮೊಗಲ್ ಎ ಆಜಮ್ '' ಚಿತ್ರದ " ಪ್ಯಾರ ಕಿಯಾ ತೋ ಡರ್ನಾ ಕ್ಯಾ4 Full stop'' ಓ ಕೌನ್ ಥಿ '' ಚಿತ್ರದ3 Full stop " ಲಗಜಾ ಗಲೆ ಏ ಹಸಿ ರಾತ್ '' 5 Full stop" ಸತ್ಯಂ ಶಿವಂ ಸುಂದರಂ '' ಟೈಟಲ್ ಸಾಂಗ್5 Full stopರಫಿ ಜೊತೆಗಿನ " ಪಾರಸ್ ಮಣಿ'' ಚಿತ್ರದ " ವೊ ಜಬ್ ಯಾದ್ ಆಯೆ '' ಗೀತ್ ಚಿತ್ರದ " ಆಜಾ ತುಝ ಕೊ ಪುಕಾರೆ '' ಹಾಡುಗಳು ಇಂದಿಗೂ ಜನಪ್ರಿಯ.

ಎಸ್ ಪಿ ಬಾಲಸುಬ್ರಮಣ್ಯಂ ಜೊತೆಗಿನ '' ಏಕ್ ದೂಜೆ ಕೇ ಲಿಯೇ " ಚಿತ್ರದ " ತೇರೆ ಮೇರೆ ಬೀಚ ಮೇ ''4 Full stop '' ಮೈನೆ ಪ್ಯಾರ್ ಕಿಯಾ '' ಚಿತ್ರದ '' ದಿಲ್ ದೀವಾನಾ ದಿಲ್ ಸಜನಾಕೆ ''3 Full stop " ಹಮ್ ಆಪ್ ಹೈ ಕೌನ್ '' ಚಿತ್ರದ '' ದೀದಿ ತೇರಾ ದೇವರ್ ದಿವಾನಾ '' ಹಾಡುಗಳಂತೂ ಯುವ ಪ್ರೇಮಿಗಳನ್ನು ಹುಚ್ಚಾಗಿಸಿದ್ದವು.

"ರಾಮ್ ತೇರಿ ಗಂಗಾ ಮೈಲಿ'' ಹಾಡುಗಳಂತೂ ಇತಿಹಾಸ ಸೃಷ್ಟಿಸಿದ್ದವು. ಲತಾಜಿ ಹಾಡುಗಳನ್ನು ಬರಹದಲ್ಲಿ ವರ್ಣಿಸಲಸಾಧ್ಯ. ಅವುಗಳನ್ನು ಕೇಳಿಯೇ ಆನಂದಿಸಬೇಕು

ಕಿಶೋರ್ ಕುಮಾರ್ ಜೊತೆಗಿನ ''ಆರಾಧನಾ'' ಚಿತ್ರದ " ಕೋರಾ ಕಾಗಝ ಥಾ ಯೇ ಮನ ಮೇರಾ''4 Full stop ಮುಕೇಶ್ ಜೊತೆಗಿನ " ಮಿಲನ್'' ಚಿತ್ರದ4 Full stop '' ಸಾವನ್ ಕಾ ಮಹೀನಾ ಪವನ್ ಕರೆ ಸೋರ್ '' ಹಾಗೂ " ಶೋರ್ '' ಚಿತ್ರದ " ಇಕ್ ಪ್ಯಾರ್ ಕಾ ನಗಮಾ '' ಗೀತೆಗಳು ಅಜರಾಮರ.

.ಅತ್ಯಂತ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ 1974 ರಲ್ಲಿ ಗಿನ್ನೀಸ್ ಬುಕ್ ಆಫ್ ರಿಕಾರ್ಡ್ ಸೇರಿತು. ಇವರ ದೈವಭಕ್ತಿ ಎಷ್ಟಿತ್ತೆಂದರೆ ರಿಕಾರ್ಡಿಂಗ್ ಸ್ಟುಡಿಯೋ ಪ್ರವೇಶಿಸುವಾಗ ತಮ್ಮ ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಬರುತ್ತಿದ್ದರಂತೆ.

ಸಾಧನೆಗಳ ಮೇರು ಪರ್ವತಾಗಿದ್ದರೂ ವಿವಾದಗಳಿಂದ ದೂರವಾಗಲು ಸಾಧ್ಯವಾಗಲಿಲ್ಲ ಈ ಗಾನಕೋಗಿಲೆಗೆ. ಅದೇ ಕಾಲಘಟ್ಟದಲ್ಲಿ ಹಿನ್ನೆಲೆ ಗಾಯಕರಾಗಿ ಬರಲು ಯತ್ನಿಸುತ್ತಿದ್ದ ಹೇಮಲತಾ, ಸುಮನ್ ಕಲ್ಯಾಣಪುರ ಅವರನ್ನು ಲತಾಜಿ ತುಳಿದರು ಎಂಬ ಅಪವಾದವೂ ಇದೆ. ಸಣ್ಣ ಕಾರಣಕ್ಕಾಗಿ ರಫಿ ಜೊತೆ ಮಾತು ಬಿಟ್ಟಿದ್ದರಂತೆ. ಆದರೆ ಈಗ ಎಲ್ಲವೂ ನಗಣ್ಯ.

ಲತಾಜಿ ಇಂಪಾದ ಕಂಠವೆ " ಸತ್ಯಂ'
ಭಕ್ತಿಗೀತಗಳೇ " ಶಿವಂ'' 4 Full stop
ಪ್ರೇಮಾರಾಧನೆ ಹಾಡುಗಳೇ " ಸುಂದರಂ'' 5 Full stop

ದೇಶ ವಿದೇಶಗಳ ಚಿತ್ರ ಪ್ರೇಮಿಗಳ ಪರವಾಗಿ ಇದೋ ನಿಮಗೆ ಅಶ್ರುತರ್ಪಣ, ಕೋಟಿ ಕೋಟಿ ನಮನ.

ಮಾಹಿತಿ ವೇದಿಕೆ competitive exams
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ನೋಟ್ಸ್ ಗಳು, ಡೈಲಿ ನ್ಯೂಸ್ ಪೇಪರ್, ಪ್ರತಿದಿನ ಮಿನಿ ಪತ್ರಿಕೆಗಳು, ಜಾಬ್ ನೋಟಿಫಿಕೇಶನ್ ಗಳು ಮತ್ತು ಪ್ರಚಲಿತ ಮಾಹಿತಿಯನ್ನೊಳಗೊಂಡ ಎಲ್ಲ ಮಾಹಿತಿ ಒಂದೇ ವೇದಿಕೆಯಲ್ಲಿ.
KAS, psi, SDA, FDA, rrb, banking exams.
https://t.me/competitiveExams

ಮಾಹಿತಿ ವೇದಿಕೆ competitive exams

06 Feb, 10:58


★ BWSSB: FINAL LISTS:~ ★
✍🏻🗒️✍🏻🗒️✍🏻🗒️✍🏻🗒️✍🏻✍🏻

♣️ ಬೆಂಗಳೂರು ನೀರು ಸರಬರಾಜು & ಒಳಚರಂಡಿ ಮಂಡಳಿ (BWSSB) ಯ ನೇರ ನೇಮಕಾತಿ ಅಧಿಸೂಚನೆ:24-08-2018ಕ್ಕೆ ಸಂಬಂಧಿಸಿದಂತೆ ವಿವಿಧ ವೃಂದದ ಹುದ್ದೆಗಳ ಅಂತಿಮ & ಕ್ರೋಡೀಕೃತ ಆಯ್ಕೆಪಟ್ಟಿಗಳನ್ನು ಇದೀಗ ಪ್ರಕಟಿಸಲಾಗಿದೆ.!!

♣️ ಅಂತಿಮ & ಕ್ರೋಡೀಕೃತ ಆಯ್ಕೆಪಟ್ಟಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
https://bwssb.karnataka.gov.in/info-2/Recruitment%20Notification/2018%20Recruitment%20-%20Final%20and%20consolidated%20list/kn
ಮಾಹಿತಿ ವೇದಿಕೆ competitive exams
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ನೋಟ್ಸ್ ಗಳು, ಡೈಲಿ ನ್ಯೂಸ್ ಪೇಪರ್, ಪ್ರತಿದಿನ ಮಿನಿ ಪತ್ರಿಕೆಗಳು, ಜಾಬ್ ನೋಟಿಫಿಕೇಶನ್ ಗಳು ಮತ್ತು ಪ್ರಚಲಿತ ಮಾಹಿತಿಯನ್ನೊಳಗೊಂಡ ಎಲ್ಲ ಮಾಹಿತಿ ಒಂದೇ ವೇದಿಕೆಯಲ್ಲಿ.
KAS, psi, SDA, FDA, rrb, banking exams.
https://t.me/competitiveExams
🌳🪴🌳🪴🌳🪴🌳🪴🌳🪴

ಮಾಹಿತಿ ವೇದಿಕೆ competitive exams

06 Feb, 06:37


🌺 ಚಿತ್ರರಂಗದ ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ನಿಧನರಾಗಿದ್ದಾರೆ.

ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಜನಪ್ರಿಯ ಗಾಯಕಿ ಲಯಾ ಮಂಗೇಶ್ಕರ್. ಅವರನ್ನು ‘ನೈಟಿಂಗೇಲ್ ಆಫ್ ಇಂಡಿಯಾ’ ಅಂತಲೇ ಪ್ರೀತಿ ಗೌರವದಿಂದ ಕರೆಯಲಾಗುತ್ತಿತ್ತು. ಸಾವಿರಕ್ಕೂ ಅಧಿಕ ಹಿಂದಿ ಸಿನಿಮಾಗಳಲ್ಲಿ ಹಾಡಿರುವ ಖ್ಯಾತಿ ಲತಾ ಮಂಗೇಶ್ಕರ್ ಅವರದ್ದು. ಹಿಂದಿ, ಮರಾಠಿ ಸೇರಿದಂತೆ 36ಕ್ಕೂ ಅಧಿಕ ಭಾಷೆಗಳಲ್ಲಿ 30 ಸಾವಿರಕ್ಕೂ ಅಧಿಕ ಹಾಡುಗಳಲ್ಲಿ ಲತಾ ಮಂಗೇಶ್ಕರ್ ಗಾನಸುಧೆ ಹರಿಸಿದ್ದರು. 13ನೇ ವಯಸ್ಸಿಗೆ.. ಅಂದ್ರೆ 1942ನೇ ಇಸವಿಯಿಂದ ಸಿನಿಮಾದ ಹಾಡುಗಳಿಗೆ ಲತಾ ಮಂಗೇಶ್ಕರ್ ದನಿಯಾಗುತ್ತಾ ಬಂದಿದ್ದರು.

🌸ಲತಾ ಮಂಗೇಶ್ಕರ್
ಶಾಸ್ತ್ರೀಯ-ಸಂಗೀತಕಾರ ಮತ್ತು ರಂಗ-ನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿ, ಲತಾ ಮಧ್ಯಪ್ರದೇಶದ ಇಂದೋರಿನಲ್ಲಿ ಜನಿಸಿದರು
- ಲತಾ ಅವರ ಮೊದಲ ಹೆಸರು "ಹೇಮಾ"
🍀 ಜನನ :- 28 September 1929 (age 92)
🍀 ನಿಧನ :- 6 ಫೆಬ್ರವರಿ 2022

🌼ಲತಾ ಮಂಗೇಶ್ಕರ್
ಅವರಿಗೆ ಇದ್ದ ಬಿರುದುಗಳು.

🪴"ನೈಟಿಂಗೇಲ್ ಆಫ್ ಇಂಡಿಯಾ"
🪴"ಬಾಲಿವುಡ್ ನೈಟಿಂಗೇಲ್"
🪴"ಕ್ವೀನ್ ಆಫ್ ದಿ ಮೆಲೋಡಿ’"
🪴'‘ವಾಯ್ಸ್ ಆಫ್ ದಿ ನೇಷನ್’'
🪴'‘ವಾಯ್ಸ್ ಆಫ್ ದಿ ಮಿಲೇನಿಯಮ್"

🌸ಪ್ರಶಸ್ತಿಗಳು

🍀ಭಾರತ ಸರ್ಕಾರ ಇವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ :- 1989
🍀 ಪದ್ಮಭೂಷಣ ಪ್ರಶಸ್ತಿ :- 1969
🍀ಪದ್ಮ ವಿಭೂಷಣ :- 1999
🍀ಭಾರತ ರತ್ನ :- 2001
🍀ಫ್ರಾನ್ಸ್ ಸರ್ಕಾರವು 2007 ರಲ್ಲಿ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು (ಆಫೀಸರ್ ಆಫ್ ದಿ ಲೀಜನ್ ಆಫ್ ಆನರ್) ನೀಡಿ ಗೌರವಿಸಿತ್ತು.

🍁ಮೂರು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ
🍁15 ಬೆಂಗಾಲ್‌ ಫಿಲ್ಮ್‌ ಅಸೋಶಿಯೇಶನ್‌ ಪ್ರಶಸ್ತಿ
🍁ನಾಲ್ಕು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
🍁ಎರಡು ಫಿಲಂಫೇರ್‌ ಸ್ಪೆಷಲ್ ಅವಾರ್ಡ್
🍁ಲಂಡನ್‌ (London) ನ 1974 ರಾಯಲ್‌ ಆಲ್ಬರ್ಟ್ ಹಾಲ್‌ನಲ್ಲಿ ಹಾಡುವ ಮೂಲಕ ಅಲ್ಲಿ ಹಾಡಿದ  ಮೊದಲ ಭಾರತೀಯ ಗಾಯಕಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.

🍀ಲತಾರವರ ಆತ್ಮಚರಿತ್ರೆ :-
"ಪುಲೆ ವೇಚಿತಾ"
🍀'ಲತಾ ಮಂಗೇಶ್ಕರ್ ರವರ ಜೀವನ ಚರಿತ್ರೆ'-
"ಹಾಡುಹಕ್ಕಿಯ ಹೃದಯಗೀತೆ"
ಈ ಪುಸ್ತಕವನ್ನು 'ವಿಶ್ವವಾಣಿ' ಸುದ್ದಿಸಂಪಾದಕ 'ವಸಂತ ನಾಡಿಗೇರ್' ರಚಿಸಿದ್ದಾರೆ. 'ಸುಮುಖ ಪ್ರಕಾಶನ' ಪ್ರಕಟಿಸಿರುವ ಈ ಪುಸ್ತಕವು 28 ಅಕ್ಟೋಬರ್ 2009ರಂದು ಬೆಂಗಳೂರಲ್ಲಿ ಲೋಕಾರ್ಪಣೆಗೊಂಡಿತ್ತು.

🍀🍁🍀🍁🍀🍁🍀🍁🍀🍁
Join more update telegram channel


https://t.me/competitiveExams

ಮಾಹಿತಿ ವೇದಿಕೆ competitive exams

05 Feb, 07:52


🎲 Quiz '☀️ ರಾಷ್ಟ್ರೀಯ ಉದ್ಯಾನವನಗಳು..🌟ಜ್ಞಾನ ಸಂಗಮ ಗ್ರೂಪ್ ವತಿಯಿಂದ - 156 By : ಕದಂಬ (shashi)''
🖊 51 questions · 30 sec

ಮಾಹಿತಿ ವೇದಿಕೆ competitive exams

05 Feb, 07:47


*ನಿತ್ಯೋತ್ಸವ ಕವಿ ಪ್ರೊ ಕೆ ಎಸ್ ನಿಸಾರ್ ಅಹಮದ್ ಅವರ ಜನ್ಮ ದಿನ*
ಪ್ರೊ.ಕೆ.ಎಸ್.ನಿಸಾರ್ ಅಹಮದ್(5 ಫೆಬ್ರುವರಿ 1936 - 3 ಮೇ 2020) ಕನ್ನಡದ ಪ್ರಮುಖ ಸಾಹಿತಿಗಳಾಗಿದ್ದರು. ಅವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್. ಅವರು ಬರೆದ 'ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ' ಎಂಬ ಪದ್ಯವು ಬಹಳ ಜನಪ್ರಿಯವಾಗಿ ಅವರು ನಿತ್ಯೋತ್ಸವ ಕವಿಯೆಂದೂ ಕರೆಯಲ್ಪಡುತ್ತಿದ್ದರು.
*ಜನನ*
೫ ಫೆಬ್ರವರಿ ೧೯೩೬
ದೇವನಹಳ್ಳಿ, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ
ಮರಣ
3 ಮೇ 2020 (ವರ್ಷ 84)
ಬೆಂಗಳೂರು
*ವೃತ್ತಿ*
ಸಾಹಿತಿ, ಪ್ರಾಧ್ಯಾಪಕ
ಮನಸು ಗಾಂಧಿ ಬಜಾರು(1960)
ನಿತ್ಯೋತ್ಸವ
ಪ್ರಮುಖ ಪ್ರಶಸ್ತಿ(ಗಳು)
ಪದ್ಮಶ್ರೀ (೨೦೦೮), ರಾಜ್ಯೋತ್ಸವ (೧೯೮೧)
*ಪ್ರಭಾವಗಳು*
ಜಿ. ಪಿ. ರಾಜರತ್ನಂ, ಎಂ.ಸಿ.ಸೀತಾರಾಮಯ್ಯ, ಎಲ್. ಗುಂಡಪ್ಪ
*ಜೀವನ*
ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.
*ಸಾಹಿತ್ಯ*
ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.

ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.
೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ (೨೦೧೮) ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ.
ಕುರಿಗಳು ಸಾರ್‍ ಕುರಿಗಳು, ರಾಜಕೀಯ ವಿಡಂಬನೆ ಕವನ
ಭಾರತವು ನಮ್ಮ ದೇಶ (ಸರ್‍ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ)
ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.
*ಕೃತಿಗಳು*
*ಕವನ ಸಂಕಲನಗಳು*
ಮನಸು ಗಾಂಧಿ ಬಜಾರು (೧೯೬೦)
ನೆನೆದವರ ಮನದಲ್ಲಿ (೧೯೬೪)
ಸುಮಹೂರ್ತ (೧೯೬೭)
ಸಂಜೆ ಐದರ ಮಳೆ (೧೯೭೦)
ನಾನೆಂಬ ಪರಕೀಯ (೧೯
ನಿತ್ಯೋತ್ಸವ (೧೯೭೬)
ಸ್ವಯಂ ಸೇವೆಯ ಗಿಳಿಗಳು (೧೯೭೭)
ಅನಾಮಿಕ ಆಂಗ್ಲರು(೧೯೮೨),
ಬರಿರಂತರ (೧೯೯೦)
ಸಮಗ್ರ ಕವಿತೆಗಳು (೧೯೯೧)
ನವೋಲ್ಲಾಸ (೧೯೯೪)
ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮)
ಅರವತ್ತೈದರ ಐಸಿರಿ(೨೦೦೧)
ಸಮಗ್ರ ಭಾವಗೀತೆಗಳು(೨೦೦೧)
ಪ್ರಾತಿನಿಧಿಕ ಕವನಗಳು(೨೦೦೨)
ನಿತ್ಯೋತ್ಸವ ಕವಿತೆ
*ಗದ್ಯ ಸಾಹಿತ್ಯ*
ಅಚ್ಚುಮೆಚ್ಚು
ಇದು ಬರಿ ಬೆಡಗಲ್ಲೊ ಅಣ್ಣ
ಷೇಕ್ಸ್ ಪಿಯರನ ಒಥೆಲ್ಲೊದ ಕನ್ನಡಾನುವಾದ
ಅಮ್ಮ ಆಚಾರ ಮತ್ತು ನಾನು' (ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯ ಕನ್ನಡಾನುವಾದ)
*ಪ್ರಶಸ್ತಿ ಪುರಸ್ಕಾರಗಳು*
೨೦೦೬ರ ಮಾಸ್ತಿ ಪ್ರಶಸ್ತಿ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಗೊರೂರು ಪ್ರಶಸ್ತಿ
ಅನಕೃ ಪ್ರಶಸ್ತಿ
ಕೆಂಪೇಗೌಡ ಪ್ರಶಸ್ತಿ
ಪಂಪ ಪ್ರಶಸ್ತಿ
೧೯೮೧ರ ರಾಜ್ಯೋತ್ಸವ ಪ್ರಶಸ್ತಿ
೨೦೦೩ರ ನಾಡೋಜ ಪ್ರಶಸ್ತಿ
೨೦೦೬ರ ಅರಸು ಪ್ರಶಸ್ತಿ
೨೦೦೬ ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
*ಮಾಹಿತಿ ಕೃಪೆ: ಅಂತರ್ಜಾಲ*
*ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ*